೧೯೭೧ಕ್ಕೆ ಮುಂಚೆ, ಕರ್ನಾಟಕದಲ್ಲಿ ಯಾವ ಬತ್ತದ ತಳಿಯನ್ನಾದರೂ ಸಂಶೋಧನೆ ಮತ್ತು ಜಿಲ್ಲಾ ಪ್ರಯೋಗ ಫಲಿತಾಂಶಗಳನ್ನು ಆಧರಿಸಿ ಬಿಡುಗಡೆ ಮಾಡಲಾಗುತ್ತಿತ್ತು. ಹಾಗೆ ಬಿಡುಗಡೆಯಾದ ತಳಿಗಳು ಮಹತ್ವದ ವಿಸ್ತೀರ್ಣವನ್ನು ವ್ಯಾಪಿಸಲು ೪ ರಿಂದ ೬ ಋತುಮಾನಗಳು ಹಿಡಿಯುತ್ತಿತ್ತು. ೧೯೭೧ರ ಖಾರಿಫ್ ಋತುವಿನಲ್ಲಿ ಜಾರಿಗೆ ಬಂದ ಮಿನಿಕಿಟ್ ಪ್ರಯೋಗದ ಸಿದ್ಧಾಂತದ ನಂತರ, ತಳಿಗಳ ಬಿಡುಗಡೆಯ ಆಧಾರದಲ್ಲಿ ಬದಲಾವಣೆಗಳಾಗಿದ್ದು ಮತ್ತು ಬಿಡುಗಡೆಯಾದ ತಳಿಗಳು ಹರಡುವುದರಲ್ಲೂ ಬದಲಾವಣೆಯಾಗಿದೆ. ಕೃಷಿ ವಿಜ್ಞಾನದ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿಭಾಗದವರು ಅಭಿವೃದ್ಧಿ ಪಡಿಸಿದ ತಳಿಗಳನ್ನು ಪರಿಕ್ಷೀಸುವುದಕ್ಕೂ ಈ ಸಿದ್ಧಾಂತವನ್ನು ಅನುಸರಿಸಲಾಗುತ್ತಿದೆ.

ಮಿನಿಕಿಟ್ ಪ್ರಯೋಗಗಳ ಯೋಜನೆಯನ್ನು ನಾಲ್ಕು ಸಂಸ್ಥೆಗಳು ಜಂಟಿಯಾಗಿ ಸೇರಿ ಮಾಡಿದ್ದಾರೆ. ಅವುಗಳು ರಾಜ್ಯದ ವ್ಯವಸಾಯ ಇಲಾಖೆ, ಭಾರತ ಸರ್ಕಾರದ ಬತ್ತದ ಅಭಿವೃದ್ಧಿ ನಿರ್ದೇಶನಾಲಯ, ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಹೈದರಾಬಾದಿನ ಅಖಿಲ ಭಾರತ ಸಮನ್ವಯ ಬತ್ತದ ಸುಧಾರಣೆ ಪ್ರಾಜೆಕ್ಟ್, ಈ ಯೋಜನೆಯನ್ನು ಅಖಿಲ ಭಾರತ ಸಮನ್ವಯ ಬತ್ತದ ಸುಧಾರಣೆ ಪ್ರಾಜೆಕ್ಟ್‌ನ ಬತ್ತ ಸಂಶೋಧನಾ ಕಾರ್ಯಗಾರದ ವಾರ್ಷಿಕ ಸಭೆಗಳಲ್ಲಿ ತೀರ್ಮಾನವಾದ ತಾತ್ಕಾಲಿಕ ನಿರ್ಧಾರಗಳ ಹಿನ್ನಲೆಯಲ್ಲಿ ರೂಪಿಸಲಾಗಿದೆ. ಜೊತೆಗೆ ರಾಜ್ಯದಲ್ಲಿ ಲಭ್ಯವಿರುವ ಸಂಶೋಧನಾ ಫಲಿತಾಂಶಗಳನ್ನು ಆಧರಿಸಿ ನಿರ್ದಿಷ್ಟಿತ ಪರಿಸ್ಥಿತಿಗಳಿಗೆ / ಸ್ಥಳಗಳಿಗೆ ತಳಿಗಳನ್ನು ಆಯ್ಕೆ ಮಾಡುವುದಲ್ಲದೆ, ಪ್ರತಿ ಪರಿಸ್ಥಿತಿಗಳಿಗೂ ಸೂಕ್ತ ನಿಯಂತ್ರಣವನ್ನು ಹೊಂದಿಸಲಾಗುವುದು. ಮೊದಲು ಸಂಬಂಧಿತ ಜಿಲ್ಲೆಗಳಿಗೆ ಭಾರಿ ಸಂಖ್ಯೆಯಲ್ಲಿ ಪ್ರಯೋಗಗಳನ್ನು ಹಂಚಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ದಕ್ಷತೆಯನ್ನು ಸುಧಾರಿಸಲು, ಕಿಟ್‌ಗಳ ಸಂಖ್ಯೆಯನ್ನು ೫೦೦ ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಸಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಪಡಿಸಿದ ತಳಿಗಳನ್ನೂ, ಮಿನಿಕಿಟ್‌ಗಳಲ್ಲಿ ಸೇರಿಸಲು ಅವಕಾಶ ನೀಡಲಾಗಿದೆ.

ಅನುಷ್ಠಾನ: ಕಿಟ್‌ನ ಖರ್ಚನ್ನು ಅಭಿವೃದ್ಧಿ ನಿರ್ದೇಶನಾಲಯದವರು ನಿಭಾಯಿಸುವರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಬೀಜದ ಮುಖ್ಯ ಮೂಲಸ್ಥಾನ. ಅಗತ್ಯ ಬಿದ್ದಾಗ ಅಖಿಲ ಭಾರತ ಸಮನ್ವಯ ಬತ್ತದ ಸುಧಾರಣೆ ಪ್ರಾಜೆಕ್ಟ್ ಮತ್ತು ಆಂಧ್ರ ಪ್ರದೇಶ ಕೃಷಿ ವಿಶ್ವವಿದ್ಯಾಲಯದಿಂದ ಪಡೆದ ಬೀಜವು ಇದಕ್ಕೆ ಪೂರಕವಾಗಿರುತ್ತದೆ. ಅವಶ್ಯವಿದ್ದತೆ ಬೀಜದ ಬೆಳೆಗಾರರಿಂದಲೂ ಉತ್ತಮ ಬೀಜವನ್ನು ಪಡೆಯಬಹುದು. ಕಳೆದ ೩-೪ ಋತುಮಾನಗಳಲ್ಲಿ ಕರ್ನಾಟಕ ಆಗ್ರೋ ಸೀಡ್ಸ್ ಕಾರ್ಫೋರೇಷನ್ ರಾಜ್ಯಗಳಿಗೆ ಬೀಜಗಳನ್ನು ಕೊಂಡು ಒದಗಿಸುವುದರಲ್ಲಿ ನೆರವು ನೀಡಿದ್ದಾರೆ. ಕರ್ನಾಟಕ ರಾಜ್ಯದ ವ್ಯವಸಾಯ ಇಲಾಖೆಯವರು ರಾಜ್ಯದಲ್ಲಿರುವ ತಮ್ಮ ಸಿಬ್ಬಂದಿಯ ಮೂಲಕ ಪ್ರಯೋಗಗಳ ಮೇಲ್ವಿಚಾರಣೆ ನೋಡಿಕೊಳ್ಳುವರು. ವಿಸ್ತರಣಾ ನಿರ್ದೇಶನಾಲಯದ ಮತ್ತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ನೌಕರರೂ ಸಹ ಸಣ್ಣ ಸಂಖ್ಯೆಯಲ್ಲಿ ಪ್ರಯೋಗಗಳನ್ನು ನಡೆಸುವರು. ತಳಿಗಳಿಗೆ ಸಂಬಂಧಿಸಿದ ವ್ಯವಸಾಯ ಇಲಾಖೆಯ ಸಹಾಯಕ ನಿರ್ದೇಶಕರುಗಳು, ಡೆಪ್ಯುಟಿ ಡೈರೆಕ್ಟರ್‌ಗಳು ಮತ್ತು ಜಾಯಿಂಟ್ ಡೈರೆಕ್ಟರ್‌ಗಳು ಮಿನಿಕಿಟ್ ಪ್ರಯೋಗಗಳ ಕಾರ್ಯಚರಣೆಯನ್ನು ಗಮನಿಸುವರು. ಪ್ರತಿ ಋತುಮಾನದಲ್ಲೂ, ಕೆಲವು ಆಯ್ದ ಮಿನಿಕಿಟ್ ಪ್ರಯೋಗದ ಸ್ಥಳಗಳನ್ನು ಪ್ರಾಜೆಕ್ಟ್ ಕೋ ಆರ್ಡಿನೇಟರ್ ಮತ್ತು ಜಾಯಿಂಟ್ ಕೋ ಆರ್ಡಿನೇಟರ್, ಅಖಿಲ ಭಾರತ ಬತ್ತದ ಸುಧಾರಣೆ ಪ್ರಾಜೆಕ್ಟ್, ಸಸ್ಯ ವಿಜ್ಞಾನಿ (ಬತ್ತ) ಕೃಷಿ ವಿಶ್ವವಿದ್ಯಾನಿಲಯ, ವ್ಯವಸಾಯದ ಜಾಯಿಂಟ್ ಡೈರೆಕ್ಟರ್‌ಗಳು ಮತ್ತು ಡೆಪ್ಯುಟಿ ಡೈರೆಕ್ಟರ್‌ಗಳು (ಕ್ರಾಪ್ ಬಾಟನಿ) ಭೇಟಿ ಮಾಡಿ ತಳಿಗಳ ಬಗ್ಗೆ ಪರಿಸರದ ಒತ್ತಡಗಳಾದ ಶೀತ, ಕೀಟ ಮತ್ತು ರೋಗಗಳ ಪ್ರತಿಕ್ರಿಯೆ ಬಗ್ಗೆ ಮತ್ತು ಇತರ ಪರಿಸರ ಅನುಕೂಲತೆಗಳ ಬಗ್ಗೆ ಟಿಪ್ಪಣಿ ಬರೆದುಕೊಳ್ಳುವರು. ಸಾಧ್ಯವಿದ್ದರೆ, ರೈತರುಗಳನ್ನು ಸಂದರ್ಶಿಸಿ ಅಭಿಪ್ರಾಯಗಳನ್ನು ತಿಳಿದುಕೊಳ್ಳುವರು.

ರಾಜ್ಯದಲ್ಲಿ ಮಿನಿಕಿಟ್‌ಗಳ ಪ್ರಯೋಗದಲ್ಲಿ ಬಳಸಲಾದ ಮೊದಲನೆಯ ತಳಿಗಳ ಸೆಟ್ ಎಂದರೆ ಐಇಟಿ ೧೯೯೧ ಮತ್ತು ಐಇಟಿ ೧೦೩೯. ಇವುಗಳನ್ನು ನಾಲೆ ಮತ್ತು ಕೆರೆ ಪ್ರದೇಶಗಳಲ್ಲಿನ ಇತರ ಸ್ಥಳೀಯ ತಳಿಗಳಾದ ಐ.ಆರ್. ೮ ಜಯ ತಳಿಗಳಿಗೆ ಮತ್ತು ಅದೇ ಸಮಯದಲ್ಲಿ ಗಾಲ್ ಮಿಡ್ಜ್ ನಿರೋಧಕ ತಳಿಗಳಾದ ಜಿ.ಎಂ.ಆರ್. ನಂ. ೨,೭,೧೭ ಮತ್ತು ೨೨ ತೀರ ಪ್ರದೇಶದ ತಳಿಗಳಿಗೆ ಹೋಲಿಸಬಹುದು. ಇವೆಲ್ಲಾ ರಾಷ್ಟ್ರೀಯ ಕಾರ್ಯಕ್ರಮವಾದಂತೆ, ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಉತ್ತಮ ಧಾನ್ಯ ನಮೂನೆಯಾದ ಎಂ.ಆರ್. ೧೩೪ ಮತ್ತು ಎಂ.ಆರ್. ೧೩೬ ಇವುಗಳಿಗೂ ಸಹ ಈ ಸಿದ್ಧಾಂತವನ್ನು ವಿಸ್ತರಿಸಲಾಯಿತು. ತದನಂತರ ಐಇಟಿ ಕಲ್ಚರ್ ೧೯೯೦, ೨೨೫೪ ಮತ್ತು ೨೨೯೫ ಗಳನ್ನು ಅಧಿಕ ಪ್ರಮಾಣದಲ್ಲಿ ಪ್ರಯೋಗಿಸಲಾಯಿತು. ಎಂ.ಆರ್. ೧೧೮ ಗಳನ್ನು ಮುಂಚಿತ ತಳಿಗಳಾಗಿ ಪರೀಕ್ಷಿಸಲಾಯಿತು. ಇದರ ಫಲಿತಾಂಶವಾಗಿ, ಅಧಿಕ ಪ್ರಮಾಣದ ಸಾಗುವಳಿಗಾಗಿ ಅನೇಕ ತಳಿಗಳನ್ನು ಬಿಡುಗಡೆ ಮಾಡಲಾಯಿತು. (ತಃಖ್ತೆ)

 

ಮಿನಿಕಿಟ್ ಪ್ರಯೋಗದ ಫಲಿತಾಂಶಗಳ ನಂತರ ರಾಜ್ಯದಲ್ಲಿ ಬಿಡುಗಡೆಯಾದ ತಳಿಗಳು

ಬಿಡುಗಡೆಯಾದ ತಳಿ ಹೆಸರು  ಬಿಡುಗಡೆಯಾದ ವರ್ಷ ವ್ಯಾಪ್ತಿಗೊಂಡ ಸ್ಥಳ ೧೯೭೫  (ಹೆಕ್ಟೇರ್) ಅಧಿಕ  ಇಳುವರಿ ತಳಿಯಲ್ಲಿ ಸ್ಥಳದ %
ಮಧು ಎಂ.ಆರ್. ೧೩೬ ೧೯೭೨ ೬೨,೦೦೦ ೧೪.೦
ಸೋನಾ ಐಇಟಿ ೧೯೯೧ ೧೯೭೩ ೪೪,೦೦೦ ೧೦.೦
ವಿಕ್ರಂ ಜಿ.ಎಂ.ಆರ್. ೨ ೧೯೭೪ ೨,೦೦೦ ೦.೫
ಇಂಟಾನ್ ———– ೧೯೭೫ ೧,೫೦೦ ೦.೪
ಎಂ.ಆರ್. ೨೭೨ ———– ೧೯೭೫ ೬,೦೦೦ ೧.೭
ವಾಣಿ ಐಇಟಿ ೨೨೯೫ ೧೯೭೬ ೨,೭೦೦ ೦.೭

 

ಈ ರೀತಿಯ ಅನುಸರೆಣೆಯಿಂದ ಆಗುವ ಪ್ರಯೋಜನಗಳೆಂದರೆ

೧. ಸರಿ ಹೊಂದಾಣಿಕೆಯನ್ನು ಉತ್ತಮವಾಗಿ ತೀರ್ಮಾನಿಸಬಹುದು.

೨. ರೈತರು ತಮಗೆ ಬೇಕಾದ ತಳಿಯನ್ನು ಆಯ್ಕೆ ಮಾಡಲು ಅವಕಾಶವಿರುವುದು.

೩. ಪೂರ್ವ – ಬಿಡುಗಡೆ ಪ್ರಯೋಗದಿಂದ ಸಾಕಷ್ಟು ಬೀಡವು ಸೇರಿ, ತಳಿಯ ಶೀಘ್ರ ಹರಡಿಕೆಗೆ ನೆರವಾಗುವುದು.

೪. ಸಂಶೋಧನಾ ಫಲಿತಾಂಶಗಳು ವಿಳಂಬವಾದರೆ ಅಥವಾ ಲಭಿಸದಿದ್ದರೂ ಸಹ ಶಿಫಾರಸ್ಸುಗಳನ್ನು ಉತ್ತಮಪಡಿಸಬಹುದು.