ಮೈಸೂರು ರಾಜ್ಯದಲ್ಲಿ ಬತ್ತದ ಸಾಗುವಳಿ ಒಟ್ಟು ವಿಸ್ತೀರ್ಣವು ೧೧.೬ ಹೆಕ್ಟೇರು ಇದ್ದು, ೨೨.೫ ಟನ್ ಬತ್ತದ ಉತ್ಪಾದನೆಯಾಗುತ್ತಿದೆ. ಈ ಕಕ್ಷೆಯಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಬತ್ತದ ಸಾಗುವಳಿ ಕ್ಷೇತ್ರವು ೨,೭೨,೦೦೦ ಹೆಕ್ಟೇರು ಇದ್ದು, ೩.೫೦ ಲಕ್ಷ ಟನ್ ಉತ್ಪನ್ನವನ್ನು ಕೊಡುತ್ತದೆ.

ಈ ಜಿಲ್ಲೆಗಳ ಪ್ರದೇಶವನ್ನು ಭೌಗೋಳಿಕವಾಗಿ ಸಹ್ಯಾದ್ರಿ ಪರ್ವತದ ಕೆಳಗಿನ ಸಮುದ್ರ ತೀರದ ಕರಾವಳಿ ಪ್ರದೇಶ ಹಾಗೂ ಸಾವಿರ ಅಡಿಗಿಂತಲೂ ಹೆಚ್ಚಿನ ಎತ್ತರದಲ್ಲಿರುವ ಘಟ್ಟದ ಮೇಲಿನ ಪ್ರದೇಶವೆಂದು ವಿಂಗಡಿಸಬಹುದು. ಈ ಪ್ರದೇಶದ ಸರಾಸರಿ ಉಷ್ಣತಾಮಾನ ಹಾಗೂ ಮಳೆಯ ವಿವರಗಳು ಈ ಕೆಳಗಿನಂತಿವೆ.

ಕರಾವಳಿ ಪ್ರದೇಶ ಸರಾಸರಿ
ಮಳೆ
ಘಟ್ಟದ ಮೇಲಿನ ಪ್ರದೇಶ ಸರಾಸರಿ
ಮಳೆ
ತಿಂಗಳು ಉಷ್ಣತಾಮಾನ ತಿಂಗಳು ಉಷ್ಣತಾಮಾನ
ಅಧಿಕ ಕನಿಷ್ಠ ಅಧಿಕ ಕನಿಷ್ಠ
ಜನವರಿ ೮೬ ೬೯ ೩೦೦೦
ಮಿ.ಮಿ
ಜನವರಿ ೭೮ ೫೮ ೨೫೦೦
ಮಿಮಿ
ಫೆಬ್ರವರಿ ೬೦ ೭೦ ಫೆಬ್ರುವರಿ ೭೮ ೫೮
ಮಾರ್ಚ ೮೯ ೭೩ ಮಾರ್ಚ ೮೩ ೬೨
ಏಪ್ರಿಲ್ ೮೯ ೭೭ ಏಪ್ರಿಲ್ ೮೫ ೬೯
ಮೇ ೮೭ ೭೭ ಮೇ ೮೪ ೭೨
ಜೂನ್ ೮೪ ೭೫ ಜೂನ್ ೭೭ ೬೯
ಜುಲೈ ೮೧ ೭೪ ಜುಲೈ ೭೪ ೬೯
ಆಗಸ್ಟ್ ೮೧ ೭೪ ಆಗಸ್ಟ್ ೭೩ ೬೮
ಸೆಪ್ಟೆಂಬರ್ ೮೨ ೭೩ ಸೆಪ್ಟೆಂಬರ್ ೭೫ ೬೭
ಅಕ್ಟೋಬರ್ ೮೩ ೭೬ ಅಕ್ಟೋಬರ್ ೭೭ ೬೮
ನವೆಂಬರ್ ೮೩ ೭೨ ನವೆಂಬರ್ ೭೫ ೬೦
ಡಿಸೆಂಬರ್ ೮೫ ೬೯ ಡಿಸೆಂಬರ್ ೭೨ ೫೬

ಮಣ್ಣು:

ಅತಿ ಕಡಿಮೆ ಪ್ರಮಾಣದಲ್ಲಿ ಸುಣ್ಣ, ಮೆಂಗನೀಸ್ ಮೂಲವಸ್ತುಗಳನ್ನು ಮತ್ತು ಕಡಿಮೆ ಅಂಶವಾಗಿ ಜೇಡಿ ಮರಳುಗಳನ್ನು ಹೊಂದಿರುತ್ತದೆ. ಹೆಚ್ಚಾಗಿ ಮಳೆ ಬೀಳುವ ಕಣಿವೆಗಳಲ್ಲಿ ಬತ್ತವನ್ನು ಇಳಿಜಾರು ಪ್ರದೇಶಗಳಲ್ಲಿ ದೀರ್ಘಾವಧಿ ಬೆಳೆಗಳನ್ನು ಬೆಳೆಯುತ್ತಾರೆ. ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶಗಳಿಗೆ ಮಳೆಗಾಲವು, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಿಗೆ ಸೀಮಿತವಾಗಿದ್ದು, ಸರ್ವೆ ಸಾಮಾನ್ಯವಾಗಿ ಬತ್ತವನ್ನು ಮುಂಗಾರಿ ಬೆಳೆಯಾಗಿ ಬೆಳೆಯುತ್ತಾರೆ. ಈ ಬತ್ತ ಬೆಳೆಯುವ ಜಮೀನನ್ನು ಎತ್ತರದ ಮಟ್ಟಕ್ಕೆ ಅನುಗುಣವಾಗಿ ಮಕ್ಕಿ (High Lying) ಅರೆಮಕ್ಕಿ (semi low lying) ಹಾಗೂ ಹೊಂಡದ (low lying) ಜಮೀನೆಂದು ವರ್ಗೀಕರಿಸಬಹುದು. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಪ್ರದೇಶದಲ್ಲಿ ಮಕ್ಕಿ ಜಮೀನಿಗೆ ೧೨೦-೧೨೫, ಅರೆಮಕ್ಕಿ ಜಮೀನಿಗೆ ೧೩೦-೧೩೫ ಹಾಗೂ ಹೊಂಡದ ಜಮೀನಿಗೆ ೧೪೦-೧೪೫ ದಿನಗಳಲ್ಲಿ ಮಾಗುವ ಶಕ್ತಿ ಇರುವ ಬತ್ತದ ಜಾತಿಗಳನ್ನು ಬೆಳೆಯುವುದನ್ನು, ಘಟ್ಟದ ಮೇಲಿನ ಮಕ್ಕಿ ಜಮೀನಿಗೆ ೧೪೫-೧೫೫, ಅರೆಮಕ್ಕಿಗೆ ೧೫೫-೧೬೫ ದಿನಗಳ ಅವಧಿಯಲ್ಲಿ ಬರುವ ಬತ್ತದ ಜಾತಿಯನ್ನು ಬೆಳೆಯುವ ರೂಢಿಯನ್ನು ಕಾಣಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಬತ್ತ ಬೆಳೆಯುವ ಒಟ್ಟು ಕ್ಷೇತ್ರವು ೯೦,೦೦೦ ಹೆಕ್ಟೇರು ಇದ್ದು, ಶೇ. ೮೫ರಲ್ಲಿ ನಾಟಿ ವಿಧಾನವು ಪ್ರಚಲಿತವಿದ್ದು, ಶೇ. ೧೫೦ ರಷ್ಟು ಕ್ಷೇತ್ರದಲ್ಲಿ ಬಿತ್ತನೆಯ ರೂಢಿಯನ್ನು ಕಾಣಬಹುದು.

ಸಮಸ್ಯೆಗಳು: ಬತ್ತದ ಬೆಳೆಯೇ ಪ್ರಾಮುಖ್ಯವಾದ ಈ ಪ್ರದೇಶಗಳಲ್ಲಿ ಸಂಶೋಧನೆಯ ಪರಿಣಾಮಗಳ ಪರಿಹಾರವು ಈ ಕೆಳಗಿನ ಬಹಳಷ್ಟು ಸಮಸ್ಯೆಗಳಿಗೆ ಇನ್ನೂ ಅಪರಿಪೂರ್ಣವಾಗಿದೆ.

i) ಈ ಹವಾಗುಣಕ್ಕೆ ಹೊಂದುವ ಅಧಿಕ ಇಳುವರಿ ತಳಿಗಳು:

(ಇನ್ನೂ ಬಿಡುಗಡೆಯಾಗಿಲ್ಲ)

ಈ ಹವಾಗುಣಕ್ಕೆ ಹೊಂದಿ ಅಧಿಕ ಇಳುವರಿ ತಳಿಗಳಾದ ಜಯ, ಎಂ.ಆರ್. ೮ ಇವುಗಳನ್ನು ಶಿಫಾರಸ್ಸು ಮಾಡಿದಲ್ಲೂ ಕೆಲವೊಂದು ಸಮಸ್ಯೆಗಳ ಮೂಲಕ ಎಲ್ಲಾ ತರಹದ ವಿವಿಧ ಪ್ರದೇಶಗಳಿಗೆ ಪರಿಪೂರ್ಣವಾಗಿ ಇವು ಒಗ್ಗಿರುವುದಿಲ್ಲ. ಈ ದೃಷ್ಟಿಯಿಂದ ಈ ಭಾಗಕ್ಕೆ ಸಮರ್ಪಕವಾದ ಅಧಿಕ ಇಳುವರಿ ತಳಿಯ ಅವಶ್ಯಕತೆಯುಂಟು.

ii) ಫಲವತ್ತತೆ ಕಾಯ್ದುಕೊಳ್ಳುವ ವಿಧಾನ:

ಈ ಭಾಗದಲ್ಲಿರುವ ಹೆಚ್ಚಿನ ಮಳೆಯ ಮೂಲಕ ಫಲವತ್ತಾದ ಮಣ್ಣಿನ ಕಣಗಳು ನೀರಿನೊಡನೆ ಕೊಚ್ಚಿಕೊಂಡು ಹೋಗಿ ಫಲವತ್ತತೆಯನ್ನು ಕ್ಷೀಣಿಸುವುದನ್ನು ತಡೆಹಿಡಿಯಲು ಪ್ರವಾಹದ ವೇಗವನ್ನು ಕಡಿಮೆ ಮಾಡಲು ವಿಧಾನಗಳನ್ನು ಕಲ್ಪಿಸಬೇಕು. ಈ ದೃಷ್ಟಿಯಲ್ಲಿ ಮಳೆಗಾಲದ ಹೆಚ್ಚಿನ ನೀರನ್ನು ಕೃತಕ ರೀತಿಯಿಂದ ಪರ್ವತದ ಕಣಿವೆಯಲ್ಲಿ ಸಂಗ್ರಹಿಸಿ, ನದಿಗಳಿಗೆ ಹಂತ ಹಂತದಲ್ಲಿ ಒಡ್ಡುಗಳನ್ನು ಕಟ್ಟಿನಲ್ಲಿ ಈ ದಿಸೆಯಲ್ಲಿ ಪ್ರಯೋಜನಕಾರಿಯಾಗಬಹುದು.

iii) ವಿವಿಧ ಅವಧಿಯ ತಳಿಯ ಅವಶ್ಯಕತೆ: ಇಲ್ಲಿಯ ಹವಾಮಾನ ಹಾಗೂ ತಳಿಯ ವೈವಿಧ್ಯತೆಗೆ ಅನುಗುಣವಾಗಿ ೧೨೦-೧೨೫ ದಿನದ ಅವಧಿಯ ತಳಿಯಿಂದ ೧೬೫-೧೮೦ ದಿನದ ಅವಧಿಯ ತಳಿಗಳ ಬೇಡಿಕೆಯನ್ನು ಸ್ಪಷ್ಟೀಕರಿಸುತ್ತದೆ.

iv) ಕೀಟಗಳ ಬಾಧೆ: ಮುಖ್ಯತಃ ಬತ್ತಕ್ಕೆ ಎಲೆ ಸುರಳಿ ಮಾಡುವ ಹುಳು ಕಾಂಡ ಕೊರೆಯುವ ಹುಳ ಕಣೆ (Gallgly), (Blue Beetle) ನೀಲಿ ಕೀಟ ಮುಂತಾದ ಕೀಟಗಳು ಕಂಡುಬರುತ್ತಿದ್ದು, ಕೀಟನಾಶಕ ಔಷಧಗಳನ್ನು ಸಿಂಪಡಿಸುವ ಪರಿಣಾಮದಲ್ಲಿ ಬೀಳುವ ಮಳೆಯ ಪಾತ್ರವು ಮಹತ್ವದಾಗಿದೆ. ಮಣ್ಣಿನ ಮೂಲಕ ಕೀಟ ನಾಶಕ ಔಷಧಗಳನ್ನು ಪೂರೈಸಿದಲ್ಲಿ ಚೆನ್ನಾದ ಪರಿಣಾಮವು ಹೆಚ್ಚಿನ ಮಳೆಯ ಪ್ರದೇಶದಲ್ಲಿ ಸಿಗುವುದೆಂದು ಸಂಶೋಧನೆಯ ಪರಿಣಾಮವು ಸೂಚಿಸುತ್ತದೆ. ಆದರೂ ಇನ್ನೂ ಸಂಗೋಪನೆ ಸಲಹೆ ಕೊಡುವ ಮಟ್ಟಕ್ಕೆ ಬಂದಿಲ್ಲವೆನ್ನಬಹುದು.

v) ರೋಗ ರುಜಿನಗಳು: ಕಾಡಿಗೆ ರೋಗ, ಬೆಂಕಿಯ ರೋಗ, ಕಾಳು ಬಣ್ಣ ಕೊಡುವುದು, ಕಂದು ಮಚ್ಚಿ ರೋಗಗಳು ಬತ್ತದ ಬೆಳೆಯ ಮೇಲೆ ಬರುವುದನ್ನು ಸರ್ವ ಸಾಮಾನ್ಯವಾಗಿ ಕಾಣಬಹುದು. ಇವುಗಳ ಸಂಪೂರ್ಣ ನಿವಾರಣೆಗೆ ಹೆಚ್ಚಿನ ಸಂಶೋಧನೆಯು ಅವಶ್ಯಕವಾಗಿದೆ.

vi) ಕರಾವಳಿಯ ಕ್ಷಾರ (ಗಜನೀ) ಭೂಮಿ:

ಇವು ಸಮುದ್ರ ತೀರದಲ್ಲಿ ನದಿಯ ಮುಖಗಳಲ್ಲಿದ್ದು, ಲವಣಾಂಶವು ಹೆಚ್ಚಾಗಿರುವುದರಿಂದ ಈ ಉಪ್ಪಿನ ಅಂಶವನ್ನು ತಡೆದುಕೊಳ್ಳುವ ಕಗ್ಗಾತಳಿಗಳೇ ಗಜನೇ (ಕ್ಷಾರ) ಭೂಮಿಗೆ ಸೀಮಿತವಾಗಿದೆ. ಸೈಸರ್ಗಿಕವಾಗಿ ಫಲವತ್ತತೆಯ ಸಂಗ್ರಹವಾಗುವ ಈ ಭೂಮಿಯಲ್ಲಿ (Nacl) ಲವಣಾಂಶವನ್ನು ತಡೆದುಕೊಳ್ಳುವ ಅಧಿಕ ಇಳುವರಿ ತಳಿಗಳಿಗೆ ರೈತರ ಬೇಡಿಕೆಯಿರುವುದು ಸಹಜ.

ಈ ಸಮಸ್ಯೆಯ ದೃಷ್ಟಿಯಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ತುಲನೆ ಮಾಡಿದಾಗ ಉತ್ತರ ದಕ್ಷಿಣ ಜಿಲ್ಲೆಯ ಘಟ್ಟವು ಕೆಳಗಡೆಯ ಪ್ರದೇಶವು ಅತಿ ಕಿರಿದಾದ ಕರಾವಳಿ ಪಟ್ಟಿಯನ್ನು ಹೊಂದಿ ಅದು ಸಹ್ಯಾದ್ರಿ ಪರ್ವತವು ತಲೆದೋರಿದೊಡನೆ ಅಂತ್ಯವಾಗುತ್ತದೆ. ಈ ಸಹ್ಯಾದ್ರಿ ಪರ್ವತದ ಸಮೀಪದಿಂದ ಅರಬೀ ಸಮುದ್ರದ ಏರಿಳಿತಗಳ ಮಟ್ಟಗಳು ಉಪ್ಪು ನೀರಿನ ಹೆಚ್ಚಿನ ಪ್ರಭಾವವನ್ನು ಕರಾವಳಿ ಕಿರಿ ಪಟ್ಟಿಯ ಸಾಗುವಳಿ ಕ್ಷೇತ್ರದ ತನಕ ಬೀರುವುದರಿಂದ ಮುಂಗಾರಿನ ಬೆಳೆಯ ನಂತರ ದಿನಗಳ ನೀರನ್ನು ದಕ್ಷಿಣ ಕನ್ನಡ ಜಿಲ್ಲೆಯು ನೀರಿನಂತೆ ಸಾಗುವಳಿಗೆ ಉಪಯೋಗಿಸುವುದು ಅಸಾಧ್ಯವಾಗಿದೆ. ಈ ದಿಸೆಯಲ್ಲಿ ನದಿಗಳ ಹೆಚ್ಚಿನ ಏರಿಳಿತಗಳ ಮಟ್ಟವನ್ನು ಕೃತಕ ರೀತಿಯಿಂದ ಕನಿಷ್ಟ ಮಟ್ಟಕ್ಕೆ ನಿಯಂತ್ರಿಸಿದಲ್ಲಿ ಹಿಂಗಾರಿ ಹಾಗೂ ಬೇಸಿಗೆಯಲ್ಲಿ ನದಿ ನೀರಿನ ಉಪಯೋಗವನ್ನು ಕಿರಿ ಪಟ್ಟಿಯ ಸಾಗುವಳಿ ಕ್ಷೇತ್ರಕ್ಕೆ ಪಡೆದುಕೊಳ್ಳುವುದು ಸಾಧ್ಯವಾಗಬಹುದು.

ಸಂಶೋಧನೆಯಲ್ಲಿ ಪ್ರಗತಿ – (ಹಿಂದೆ)

ಮಂಗಳೂರು ಸಿರಸಿ, ಕುಮಟಾ ಮತ್ತು ಅಂಕೋಲಾಗಳಲ್ಲಿರುವ ನಾಲ್ಕು ಸಂಶೋಧನಾಲಯಗಳು ಕರಾವಳಿ ಪ್ರದೇಶಗಳಿಗೆ ಹೊಂದಿಕೊಳ್ಳುವ ತಳಿಗಳನ್ನು ಉತ್ಪತ್ತಿ ಮಾಡಿದವು. ಮಂಗಳೂರಿನಲ್ಲಿ ಸ್ಥಳೀಯ ತಳಿಗಳಿಂದ ಶುದ್ಧ ಸಾಲಿನ ಆಯ್ಕೆಯಿಂದ ಉತ್ಪತ್ತಿ ಮಾಡಿದ ತಳಿಗಳನ್ನು ಎಂ.ಜಿ.ಎಲ್. (m.g.l.) ತಳಿಗಳೆಂದು ಕರೆಯಲಾಗಿದೆ. ೧೯೫೦ ರಲ್ಲಿ ಸ್ಥಾಪಿತವಾದ ಸಿರಸಿ ಸಂಶೋಧನಾಲಯವು ಸ್ಥಳೀಯ ತಳಿಗಳಿಗಿಂತ ಮೊಟ್ಹಳಗಾ ೨೦-೪ ಮತ್ತು ಹೊನ್ನೆಕಟ್ಟು ೧೫-೪ ತಳಿಗಳನ್ನು ಆಯ್ಕೆ ಮಾಡಿಕೊಂಡುದುದಲ್ಲದೆ ಮುಗದದಲ್ಲಿ ತಳೀಕರಿಸಿದ ವೈ-೪ ಮತ್ತು ಎಂ-೧೬೦ ಹಾಗೂ ಓರಿಸ್ಸಾದ ಟಿ-೧೪೦ ತಳಿಗಳನ್ನು ಫಲಪ್ರದವಾಗಿ ಸ್ಥಾಪಿಸಿತು. ಮಸ್ಕತಿ ೧೩೧೫, ಸಣ್ಣ ಮಲ್ಲಿಗಾ ೨೯, ಜಡ್ಡು ೧೦೬೧ ಮತ್ತು ಕೆಂಪುಹಳ್ಗಾ ೨೪೪, ಕುಮಠೆಯಲ್ಲಿ ಕೈಗೊಳ್ಳಲಾದ ಸಂಶೋಧನೆಯ ಫಲಗಳು. ೧೯೬೦ಕ್ಕಿಂತ ಮುಂಚೆ ಕಣೆ (Gall Fly) ನಿರೋಧಕ ತಳಿಯಾದ ಪಿ.ಟಿ.ಬಿ. ೯ ತಳಿಯನ್ನು ಉತ್ತರ ಕನ್ನಡ ಜಿಲ್ಲೆಯ ಪೂರ್ವ ಭಾಗಗಳಿಗೆ ಬಿಡುಗಡೆ ಮಾಡಿತು. ಅರಬಿ ಸಮುದ್ರಕ್ಕೆ ಹೊಂದಿರುವ ಬತ್ತ ಬೆಳೆಯುವ ಗಜನೀ (ಕ್ಷಾರಯುಕ್ತ) ಪ್ರದೇಶಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ಆಯ್ಕೆಗೆ ಗುರಿಪಡಿಸಿ ಅವುಗಳಿಗಿಂತ ಶೇ. ೧೦ ರಷ್ಟು ಹೆಚ್ಚು ಇಳುವರಿ ಕೊಡುವ ಆರ್ಯಾ – ೨೨, ಬಿಳೆ ಕಗ್ಗಾ – ೧೪೬ ಹಾಗೂ ಕರೆಕಗ್ಗಾ – ೧೨ ತಳಿಗಳನ್ನು ಕ್ಷಾರ, ಮಧ್ಯಮ ಕ್ಷಾರ, ಅಧಿಕ ಕ್ಷಾರಯುಕ್ತ ಭೂಮಿಗಳಲ್ಲಿ ಬೆಳೆಯಲು ನೀಡಲಾಯಿತು. ಮುಗಧ ಸಂಶೋಧನಾಲಯವು ಬಿತ್ತಿಗೆಯ ಪ್ರದೇಶಗಳಲ್ಲಿ ಬೆಳೆಸಲು ೧೦ ತಳಿಗಳನ್ನು ಶುದ್ಧ ಸಾಲಿನ ಆಯ್ಕೆಯ ವಿಧಾನದಿಂದಲೂ ಮತ್ತು ೫ ತಳಿಗಳನ್ನು ಸಂಕರಣದ ವಿಧಾನದಿಂದಲೂ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿತು.

ಈ ತಳಿಯ ವಿವರಗಳು ಈ ಕೆಳಗಿನಂತಿವೆ:

ಮಕ್ಕಿ (High land) ಭೂಮಿ: – ಡಿ೬, -೨.೨ ವಾನರ -೧, ಏ ೬೭, ಏ ೧೬೧ ಅರೆಮಕ್ಕಿ (Semi Lowlying): – ಏ೯೦, ಎಂ.೮೧, ಎಂ ೨೪೬, ಕೆ ೪೪, ೧ ಪರ್ಪಲ್ ೨೫೬ ಮತ್ತು ೨೫೮-೧೦

ಇವುಗಳು ಸ್ಥಳೀಯ ತಳಿಗಳಿಗಿಂತ ಶೇ. ೬ ರಿಂದ ೨೨ರವರೆಗೂ ಅಧಿಕ ಇಳುವರಿ ನೀಡುತ್ತವೆ. ಕಾಡು ಬತ್ತದ ಹಾವಳಿಯನ್ನು ನಿರ್ಮೂಲ ಮಾಡಲು ಗಿಡದ ಎಲ್ಲಾ ಭಾಗಗಳಲ್ಲೂ ನೇರಳೇ ಬಣ್ಣವಿರುವ ಪರ್ಪಲ್ ೨೫೬ ತಳಿಗಳನ್ನು ವಿಶೇಷವಾಗಿ ತಳೀಕರಿಸಲಾಯಿತು. ಕಾಡು ಬತ್ತ ಪೂರ್ಣ ಹಸಿರು ಅಥವಾ ಸ್ವಲ್ಪ ವರ್ಣರಂಜಿತವಾಗಿರುವುದರಿಂದ ಸುಲಭವಾಗಿ ತೆಗೆದು ನಾಶಮಾಡಿ ನಂತರ ನಮಗೆ ಬೇಕಾದ ತಳಿಯನ್ನು ಬೆಳೆಯಬಹುದು.

ಸಂಶೋಧನೆಯ ಪ್ರಗತಿ (ಈಗ):

ಮೇಲ್ಕಂಡ ತಳಿಗಳಲ್ಲಿ ಕಂಡು ಬರುವ ಮುಖ್ಯ ದೋಷವೆಂದರೆ ಹೆಚ್ಚು ಮರಿಯೊಡೆಯುವ ಶಕ್ತಿ ಇಲ್ಲದಿರುವುದು, ಹೆಚ್ಚಾದ ಫಲವತ್ತಿನಲ್ಲಿ ಬೆಳೆದಾಗ ಕಾಳು ಕಟ್ಟುವ ಮುನ್ನ ಅಡ್ಡ ಬೀಳುವುದು, ಹೆಚ್ಚು ರೋಗಕ್ಕೆ ತುತ್ತಾಗುವುದು ಹಾಗೂ ಇಳುವರಿ ಮಟ್ಟ ಅಧಿಕ ಇಳುವರಿ ತಳಿಗಳಿಗಿಂತ ಶೇ. ೫೦ ರಂತೆ ಕಡಿಮೆ ಇರುವುದು. ೧೯೬೫ ರಿಂದ ಈಚೆಗೆ ಗಿಡ್ಡ ತಳಿಗಳು ಪ್ರಚಾರ‍ಕ್ಕೆ ಬಂದು ಹೆಚ್ಚಿನ ಗೊಬ್ಬರ ಪೂರೈಕೆ ಹಾಗೂ ಸೂರ್ಯ ಪ್ರಕಾಶಕ್ಕೆ ಪ್ರತಿ ಕ್ರಿಯೆ ತೋರಿಸಿ, ಇಳುವರಿ ಇಮ್ಮಡಿ ಕೊಡಲು ನೆರವಾಯಿತೆಂದರೆ ಅತಿಶಯೋಕ್ತಿಯೆನಲ್ಲ.

ಕೇಂದ್ರ ತಳಿ ಬಿಡುಗಡೆ ಮಂಡಲಿಯಿಂದ ಸ್ವೀಕೃತವಾಗಿರುವ ಮತ್ತು ಹೊರ ರಾಜ್ಯಗಳಿಗಿಂತ ಇತ್ತೀಚೆಗೆ ತರಿಸಿದ್ದ ಗಿಡ್ಡ ತಳಿಗಳಲ್ಲಿ ಹೆಚ್ಚು ತಳಿಗಳು ಈ ಹವಾಗುಣಕ್ಕೆ ಹೊಂದುವುದಿಲ್ಲ. ಅಂಕೋಲಾ ಕುಮಟಾ, ಶಿರಸಿ ಸಂಶೋಧನಾ ಕೇಂದ್ರಗಳ ಪರಿಣಾಮಗಳ ಫಲಿತಾಂಶದಂತೆ ಕೆಲವಷ್ಟೇ ಪ್ರದೇಶಕ್ಕೆ ಸೀಮಿತವಾಗಿ ಜಯ, ಐ.ಆರ್. ೮ ತಳಿಗಳು ಬೆಳೆಯಲ್ಪಡುತ್ತದೆ. ಅಧಿಕ ಇಳುವರಿಗಳ ತಳಿಗಳ ಸಂಶೋಧನೆಯು ಅಂಕೋಲಾ, ಸಿರಸಿ ಕೇಂದ್ರಗಳಲ್ಲಿ ತ್ವರಿತಗತಿಯಿಂದ ಸಾಗುತ್ತಿದೆ. ಮಂಗಳೂರಿನ ಕಂಕನಾಡಿ ಬತ್ತದ ಸಂಶೋಧನಾ ಕ್ಷೇತ್ರದಲ್ಲಿ ಕೈಗೊಂಡಿರುವ ಪಿಟಿಬಿ ೧೦ ಮತ್ತು ಟಿ ಎಸ್ ೧ ಹಾಗೂ ಎಂ.ಟಿ. ಯು ೧೦ ಮತ್ತು ಟಿ ಎಸ್ ೧ ಸ್ಥಳಿಕ ಹಾಗೂ ಅಧಿಕ ಇಳುವರಿ ತಳಿ ಸಂಕಿರಣ ಯೋಜನೆಯು ಈ ಪ್ರದೇಶಕ್ಕೆ ಕೆಲ ಮಟ್ಟಿಗೆ ನೆರವಾಗಬಹುದು. ಅಂಕೋಲಾ, ಸಿರಸಿ ಸಂಶೋಧನಾ ಕೇಂದ್ರಗಳ ಸದ್ಯದ ಪರಿಣಾಮಗಳ ಫಲಿತಾಂಶದಿಂದ ಬಂದ ಹೆಚ್ಚಿನ ಇಳುವರಿ ನೀಡಿದ ತಳಿಗಳ ಪ್ರಗತಿಯ ವಿವರವನ್ನು ಈ ಕೆಳಗೆ ಕೊಡಲಾಗಿದೆ.

ಹಾಗೂ ಅರೆಮಕ್ಕಿ (semi lowlying) ಭೂಮಿ ಎಂ.ಆರ್. ೧೪೨

ಘಟ್ಟದ ಮೇಲಿನ ವಿಶೇಷತಃ ಎಂ.ಆರ್. ೭೦

ಬೆಂಕಿರೋಗ ಬರುವ ಪ್ರದೇಶಕ್ಕೆ ಇಂಟಾನ್

ಪ್ರಾಮುಖ್ಯವಾಗಿ (Nacl) ಲವಣವಿದ್ದ ಕರಾವಳಿ ಗಜನೀ ಭೂಮಿಗೆ ಕಗ್ಗಾ ಮತ್ತು ಎಂ.ಆರ್. ೮ ತಳಿ ಸಂಕಿರಣ ಯೋಜನೆಯ ೫೫ ಆಯ್ಕೆಗಳು ಪ್ರಯೋಗದಲ್ಲಿದೆ.

ಇದಲ್ಲದೆ ಅಂಕೋಲಾದ ಸಂಶೋಧನಾ ಕೇಂದ್ರದಲ್ಲಿ ಬತ್ತದ ಸಸಿಗಳನ್ನು ಪಾತಿಗಳಲ್ಲಿ ನೆಟ್ಟಿಗೆ ತಯಾರು ಮಾಡುವ ವಿಶಿಷ್ಟ ಡಿಪಾಗ ಪದ್ಧತಿಯು ಹೆಚ್ಚಿನ ಮಳೆಯ ಪ್ರದೇಶದಲ್ಲಿ ಹಂಗಾಮಿನಲ್ಲಿ ಯಾವಾಗಲು ಅನುಭವಿಸುವ ನೆಟ್ಟಿ ಸಸಿಯ ತುಟ್ರಾವತೆಯನ್ನು ನೀಗಿಸಲು ಬಹಳ ಸಹಕಾರಿಯಾಗಿದೆ.

ಮಂಗಳೂರಿನ ಸಂಶೋಧನಾ ಕೇಂದ್ರವು ಕೈಗೊಂಡ ದಪ್ಪ ಕಾಳಿನ ತಳಿಯ ಸುಧಾರಣೆಯ ಕಾರ್ಯವು ಈ ಜಿಲ್ಲೆಯ ಪ್ರದೇಶಗಳಿಗೆ ಅನ್ವಯಿಸಿದಲ್ಲಿ ಬತ್ತದ ಉತ್ಪಾದನೆಯು ಇಮ್ಮಡಿಯಾಗುವುದೆಂದು ಸಂಪೂರ್ಣ ಭರವಸೆ ಇದೆ.