ಸುಮಾರು ೧೧.೬ ಲಕ್ಷ ಹೆಕ್ಟೇರುಗಳಲ್ಲಿ ಬತ್ತ ಬೆಳೆಯಲ್ಪಡುತ್ತಿದ್ದು, ೨೩ ಲಕ್ಷ ಟನ್ ಉತ್ಪಾದನೆಗೆ ನೆರವಾದ ಕರ್ನಾಟಕ ಮತ್ತು ಭಾರತದ ಬತ್ತದ ಬೆಳೆಯ ಪ್ರಮುಖವಾದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಇತ್ತೀಚಿನ ಹೆಚ್ಚು ಉತ್ಪಾದನೆಯಲ್ಲಿ ಅಧಿಕ ಇಳುವರಿ ತಳಿಗಳು ಸಾಕಷ್ಟು ಪಾಲ್ಗೊಂಡಿವೆ. ೧೯೬೮ ರಲ್ಲಿ ಕೇವಲ ಶೇ. ೯.೦ ರಷ್ಟು ಪ್ರದೇಶ ಮಾತ್ರ ಅಧಿಕ ಇಳುವರಿ ತಳಿಗಳು ನಮ್ಮ ರಾಜ್ಯದಲ್ಲಿ ಪ್ರಚಾರದಲ್ಲಿದ್ದವು. ಆಗಿಂದಾಗ್ಗೆ ದೊರೆತ ಹೊಸ ತಳಿಗಳು, ನುರಿತ ಬೇಸಾಯ ಇತ್ಯಾದಿ ಆಧುನಿಕ ಬೇಸಾಯದ ಅನುಕರಣೆಯಿಂದ ಇಂದು, ಅಂದರೆ ೧೯೭೩ನೇ ಸಾಲಿನಲ್ಲಿ ಕರ್ನಾಟಕ ಶೇ, ೨೩.೯ ರಷ್ಟು ಬತ್ತ ಬೆಳೆಯುವ ಪ್ರದೇಶದ ಅಧಿಕ ಇಳುವರಿ ತಳಿಗಳು ಶೋಭಿಸಿ, ಹೆಚ್ಚು ಉತ್ಪಾದನೆಗೆ ನೆರವಾಗಿದೆ. ಆದಾಗ್ಯೂ ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳ ಇವುಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅಧಿಕ ಇಳುವರಿ ತಳಿಗಳ ಬೇಸಾಯಕ್ಕೊಳಪಟ್ಟ ಪ್ರದೇಶ ಕಡಿಮೆ ಪ್ರಮಾಣದ್ದಾಗಿದೆ. ಇದಕ್ಕೆ ಕಾರಣಗಳಿಲ್ಲದಿಲ್ಲ. ಕರ್ನಾಟಕದಲ್ಲಿ ಹವಾಗುಣದ ವೈಪರೀತ್ಯ ಇನ್ನಿತರ ರಾಷ್ಟ್ರಗಳಿಗಿಂತ ಬಹಳ ಹೆಚ್ಚೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಮುದ್ರಮಟ್ಟದ ಭೂಮಿಯಲ್ಲಿ, ಮಲೆನಾಡಿನ ಬೆಟ್ಟದ ದಿಣ್ಣೆ ಮತ್ತು ಕಣಿವೆ ಪ್ರದೇಶಗಳಲ್ಲಿ, ಮೈದಾನ ಪ್ರದೇಶದಲ್ಲಿ ಅಲ್ಲದೆ ಕಲ್ಲು, ಮರಳು, ಮೆಕ್ಕಲು ಮತ್ತು ಚೌಳು ಪ್ರದೇಶದಲ್ಲಿ ಅಲ್ಲದೆ, ಮಳೆ ಚಳಿ ಬೇಸಿಗೆ ಎಲ್ಲಾ ಕಾಲದಲ್ಲಿಯೂ ಬತ್ತ ಬೆಳೆಯುವುದು ಈ ಕೇಂದ್ರ ಪೊನ್ನಂಪೇಟೆ ಕೊಡಗು ಜಿಲ್ಲೆ ಇಲ್ಲಿ ಹಾಕಿದ ಒಂದು ಯೋಜನೆಯ ಫಲಿತಾಂಶವಾಗಿ ಇಂದು ಇಂಟಾನ್ ಮತ್ತು ಎಂ.ಆರ್. ೮೧ ಎಂಬ ಎರಡು ಹೊಸ ತಳಿಗಳು ಹೊರ ಬಂದಿದೆ. ಇಂಟಾನ್ ತಳಿಯು ಇಂಡೋನೇಷಿಯಾದಿಂದ ಅಂತರ ರಾಷ್ಟ್ರೀಯ ಬತ್ತದ ಸಂಶೋಧನಾ ಕೇಂದ್ರ ಫಿಲಿಪೈನ್ಸ್ ಈ ಮೂಲಕ ತರಿಸಿ, ಕರ್ನಾಟಕದಲ್ಲಿ ೧೯೬೦ನೇ ಇಸವಿಯಿಂದ ಪ್ರಯೋಗದಲ್ಲಿದೆ. ಅದೇ ವರ್ಷ ಪೊನ್ನಂಪೇಟೆಯಲ್ಲಿ ನಡೆಸಿದ ಪ್ರಯೋಗದಿಂದ ಈ ತಳಿಯು ಬೆಂಕಿರೋಗ ನಿರೋಧಕ ಶಕ್ತಿ ಹೊಂದಿದೆ ಎಂದು ಖಚಿತವಾಯಿತು. ಅಂದರೆ ಉಳಿದ ಎಲ್ಲಾ ತಳಿಗಳೂ ಬೆಂಕಿ ರೋಗದಿಂದ ನರಳಿದ ವಾತಾವರಣದಲ್ಲಿ ಈ ತಳಿಯು ರೋಗ ರಹಿತ ಫಸಲಾಗಿ ಬೆಳೆದು ತೃಪ್ತಿಕರವಾದ ಇಳುವರಿ ನೀಡಿತು.

ಇಳುವರಿ: ಕೊಡಗಿನಲ್ಲಿ ಬೆಂಕಿ ರೋಗ ನಿರೋಧಕ ಪ್ರಯೋಗ

೧೯೭೦ನೇ ವರ್ಷ ಕೊಡಗಿನ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿರುವ ನಾಡ ತಳಿ ಗರುಡ ಗೆಂಬೂತಿ (ಎನ್ ೬೭) ಯ ಒಂದೇ ರೀತಿಯ ಬೇಸಾಯ ಕ್ರಮದಲ್ಲಿ ಹೋಲಿಸಿದಾಗ ಇಂಟಾನ್ ತಳಿಯು ಹೆಕ್ಟೇರಿಗೆ ೫೫.೮ ಕ್ವಿಂಟಾಲ್ ಇಳುವರಿಯನ್ನು ಗರುಡ ಗೆಂಬೂತಿಯು ಹೆಕ್ಟೇರಿಗೆ ೩೧.೭ ಕ್ವಿಂಟಾಲ್ ಇಳುವರಿಯನ್ನು ಕೊಟ್ಟವು. ಅಂದರೆ ಇದರ ಇಳುವರಿ ಶೇ. ೭೬ ರಷ್ಟು ಹೆಚ್ಚಾಗಿತ್ತು. ನಂತರ ೧೯೭೧, ೧೯೭೨ ಮತ್ತು ೧೯೭೩ನೇ ಇಸವಿಯಲ್ಲಿ ಅನೇಕ ಸಾಮೂಹಿಕ ಪ್ರಯೋಗಗಳಲ್ಲಿ ಮತ್ತು ವಿವಿಧೆಡೆ ನಡೆಸಿದ ವೀಕ್ಷಣೆಯಲ್ಲಿ ಕಂಡು ಬಂತು.

02_262_ML-KUH

ಎಲ್ಲಾ ಕಾಲದಲ್ಲಿಯೂ ಬತ್ತ ಬೆಳೆಯುವುದು ಕರ್ನಾಟಕದಲ್ಲಿ ಅನಾದಿ ಕಾಲದಿಂದಲೂ ಬಂದ ಸಂಪ್ರದಾಯ. ಈ ಹವಾಗುಣದ ವೈಪರೀತ್ಯದ ಪರಿಣಾಮವಾಗಿ ಬತ್ತದ ಬೆಳೆಯಲ್ಲಿ ಎದುರಿಸಬೇಕಾದ ಸಮಸ್ಯೆಗಳೂ ಅಷ್ಟೇ ವಿಪರೀತವಾಗಿದೆ. ೧೯೬೦ ರಿಂದ ಪ್ರಚಾರದಲ್ಲಿರುವ ವಿವಿಧ ಅಧಿಕ ಇಳುವರಿ ತಳಿಗಳು ಈ ಎಲ್ಲಾ ಹವಾಗುಣಗಳಿಗೂ ಮತ್ತು ರೋಗ, ಕೀಟ, ಚಳಿ ಮುಂತಾದ ಸಮಸ್ಯೆಗಳಿಗೆ ಬೇಕಾದ ನಿರೋಧಕ ಶಕ್ತಿಯನ್ನು ಹೊಂದಿಲ್ಲ. ಇಂತಹ ನ್ಯೂನತೆಗಳೇ ಹೊಸ ತಳಿಗಳು ಹೆಚ್ಚು ಹರಡಲು ಅಡಚಣೆಯಾಗಿದೆ.

ಬೆಂಕಿರೋಗದಿಂದ ನಷ್ಟ – ಕೊಡಗಿನ ಮೇಲೇನು ಪರಿಣಾಮ?

ಇಂತಹ ಸಮಸ್ಯೆಗಳಲ್ಲಿ ಬೆಂಕಿ ರೋಗ (Blast disease) ಅತಿ ಪ್ರಬಲವಾದುದು. ಇದು ಪೈರಿಕಲೇರಿಯ ಒರೈಜೆ ಎಂಬ ದುಷ್ಟ ರೋಗಾಣುವಿನಿಂದ ಉದ್ಭವಿಸುತ್ತದೆ. ಮಳೆಗಾಲದಲ್ಲಿ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಮತ್ತು ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಮಲೆನಾಡು ಪ್ರದೇಶಗಳಲ್ಲಿ ಈ ರೋಗದಿಂದ ತಗುಲುವ ನಷ್ಟ ಅನೇಕ ವೇಳೆ ನೂರಕ್ಕೆ ನೂರರಷ್ಟು ಎಂದು ಹೇಳಿದರೆ ಉತ್ಪೇಕ್ಷೆಯಲ್ಲ. ಇದರಿಂದಾಗಿ ಈ ಪ್ರದೇಶದಲ್ಲಿ ಮೈದಾನ ಪ್ರದೇಶಕ್ಕಿಂತ ಬಹಳ ಕಡಿಮೆ ಪ್ರಮಾಣದಲ್ಲಿ ಅಧಿಕ ಇಳುವರಿ ತಳಿಗಳು ಬಳಕೆಯಲ್ಲಿದೆ. (ಕೊಡಗು ಶೇ. ೧.೬, ಚಿಕ್ಕಮಗಳೂರು ಶೇ. ೧೫.೧, ಉತ್ತರ ಕನ್ನಡ ೧೧.೫, ಹಾಸನ ಶೇ. ೧೭.೯ ರಾಜ್ಯದ ಸರಾಸರಿ ೨೩.೯)

ಸಂಶೋಧನೆಯಲ್ಲಿ ಪ್ರಗತಿ ಪೊನ್ನಂಪೇಟೆಯಲ್ಲಿ ಪ್ರಯೋಗ

೧೯೬೮ನೇ ಇಸವಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಬತ್ತದ ಸಂಶೋಧನೆಗೆ ಮುಖ್ಯ ಅಂಗಗಳಾದ ಪ್ರಾದೇಶಿಕ ಸಂಶೋಧನಾ ಕೇಂದ್ರ, ವಿ.ಸಿ. ಫಾರಂ ಮಂಡ್ಯ ಕೃಷಿ ಸಂಶೋಧನಾ ಕೇಂದ್ರ, ಪೊನ್ನಂಪೇಟೆಯಲ್ಲಿ ವಿವಿಧ ಮಟ್ಟದ ರಾಸಾಯನಿಕ ಗೊಬ್ಬರದ ಆಶ್ರಯದಲ್ಲಿ ಈ ತಳಿಯನ್ನು ಪರೀಕ್ಷಿಸಲಾಯಿತು. ಬೆಂಕಿ ರೋಗಕ್ಕೆ ತೌರು ಮನೆಯಾದ ಪೊನ್ನಂಪೇಟೆ ಕೃಷಿ ಸಂಶೋಧನಾ ಕೇಂದ್ರದಲ್ಲೇ ಹೆಚ್ಚು ಪ್ರಯೋಗಗಳನ್ನು ನಡೆಸಿದ್ದರೂ, ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿರುವ ಸಿರಸಿ, ಅಂಕೋಲ, ಮಂಡ್ಯ, ನಾಗೇನಹಳ್ಳಿ, ಮುಗಧ, ಮತ್ತಿತರ ಸಂಶೊಧನಾ ಕೇಂದ್ರಗಳಲ್ಲೂ ಇದು ಪ್ರಯೋಗಿಸಲ್ಪಟ್ಟಿದೆ.

ಅಧಿಕ ಇಳುವರಿ ತಳಿಗಳೆನಿಸಿದ ಜಯ, ಐ.ಆರ್. ೮, ಸೋನಾ, ಪಂಕಜ, ಮಷೊರಿ, ಮನೋಹರಸಾಲಿ, ಕೀರುಬೆಳೆಯ ಎಂಬ ತಳಿಗಳೊಡನೆ ಹೋಲಿಸಿ, ಬೆಂಕಿ ನಿರೋಧಕ ಶಕ್ತಿ ಮತ್ತು ಇಳುವರಿಯ ಬಗ್ಗೆ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸುಮಾರು ಶೇ. ೪ ರಿಂದ ೧೫೨ ರಷ್ಟು ಇಳುವರಿ ಕೊಡುವ ಶಕ್ತಿ ಈ ತಳಿಯಲ್ಲಿ ಅಡಕವಾಗಿದೆ ಎಂದು ತಿಳಿದು ಬಂದಿದೆ. ಇತರ ತಳಿಗಿಂತ ಸರಾಸರಿ ಶೇ. ೨೦ ರಷ್ಟು ಹೆಚ್ಚು ಇಳುವರಿ ಕೊಡಬಲ್ಲದಾಗಿದೆ ಎಂಬುದು ಸಂಶೋಧನೆಯ ಫಲಿತಾಂಶ.

ರೈತರ ಭೂಮಿಯಲ್ಲಿ ಪ್ರಯೋಗ

ಇದಲ್ಲದೆ ರೈತರ ಭೂಮಿಯಲ್ಲೂ ಸಹ ೧೯೭೩ನೇ ಮಳೆ ಬೆಳೆಯಲ್ಲಿ ಚಿಕ್ಕಮಗಳೂರು, (ಮೂಡಿಗೆರೆ) ಹಾಸನ, ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರಯೋಗಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಳೀಯ ತಳಿಗಿಂತ ಶೇ. ೭೦ ರಷ್ಟು ಮತ್ತು ಮೈದಾನ ಪ್ರದೇಶದಲ್ಲೂ ಸಹ ನಾಡ ತಳಿಗಿಂತ ಶೇ. ೪ ರಿಂದ ೩೭ ರಷ್ಟು ಇಳುವರಿ ವರದಿಯಾಗಿದೆ. ಹೆಕ್ಟೇರಿಗೆ ಸಾಮಾಗ್ರಿಗಳು ನಾಡತಳಿಯಷ್ಟೇ ಬಳಸಿದಾಗ ಇಷ್ಟು ಹೆಚ್ಚು ಇಳುವರಿ ಕೊಟ್ಟಿರುವುದು ಗಮನಾರ್ಹ.

ತಳಿಯ ಮಾಹಿತಿ

ಇನ್ನು ಈ ತಳಿಯ ಸಸ್ಯ ಸ್ವರೂಪ ಮತ್ತು ಇದರ ಬೆಳೆಗೆ ಯೋಗ್ಯವಾದ ಕಾಲ ಅಲ್ಲದೆ ಹವಾಗುಣದ ಬಗ್ಗೆ ಕೆಲವು ಮಾಹಿತಿಯನ್ನು ಇಲ್ಲಿ ನಮೂದಿಸಿರುವುದು ಸೂಕ್ತ.

ಇದು ಬೇಸಿಗೆಯಲ್ಲಿ ಹೂ ಬಿಡುವುದಿಲ್ಲ. (photosensitive) ಮಲೆನಾಡಿನಲ್ಲಿ ಮಳೆಬೆಳೆಯಾಗಿ ಬೆಳೆದಾಗ ೧೬೦ ರಿಂದ ೧೭೦ ದಿವಸಗಳ ಅವಧಿಯಲ್ಲಿ ಕೊಯ್ಲಿಗೆ ಬರುತ್ತದೆ. ಈ ತಳಿಯು ಮಲೆನಾಡಿನಲ್ಲಿ ಅರೆಗಿಡ್ಡ (semidwarf) ಸಸ್ಯ ಸ್ವರೂಪದಾಗಿದ್ದು, ಸಾಧಾರಣ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಕಿದಾಗ್ಯೂ ಬೀಳುವುದಿಲ್ಲ. ಆದರೆ ಕರಾವಳಿ ಮತ್ತು ಮೈದಾನದ ಪ್ರದೇಶಗಳಲ್ಲಿ ನಾಡ ತಳಿಗಳಂತೆಯೇ ಅತಿ ಎತ್ತರವಾಗಿ ಬೆಳೆದು ಹೆಚ್ಚು ಗೊಬ್ಬರ ಹಾಕಿದಾಗ ಫಸಲು ಬಿದ್ದು, ನಷ್ಟ ಉಂಟುಮಾಡುತ್ತದೆ. ಈ ತಳಿಯ ಕಾಂಡ, ಎಲೆ ಮತ್ತು ಕಾಳಿನ ತುದಿಯಲ್ಲಿ ನೇರಳೆ ಬಣ್ಣವಿದೆ. ಇದರ ಕಾಳು ಸಣ್ಣಗಿದ್ದು, ಗಾತ್ರದಲ್ಲಿ ಮಧು, ಐ.ಆರ್. ೨೦ಕ್ಕೆ ಹೋಲಿಸಬಹುದು.

ಇಂಟಾನ್ ಅನ್ನ

ಇದರ ಬೆಣತಿ ಅಕ್ಕಿ (Raw rice) ಯಿಂದ ಮಾಡಿದ ಅನ್ನ ಗಂಜಿ ಕಟ್ಟುತ್ತದೆ ಮತ್ತು ಚೆನ್ನಾಗಿ ಉದುರಾಗಿರುವುದಿಲ್ಲ. ಆದರೆ ಕುಡುಬಲು (parboiled) ಅಕ್ಕಿ ಅನ್ನಕ್ಕೆ ಈಗಿರುವ ಎಲ್ಲಾ ತಳಿಗಿಂತ ಈ ತಳಿಯು ಉತ್ತಮವೆಂದೂ ಇದರ ಕುಸುಬಲು ಅಕ್ಕಿ ಅನ್ನವು ಬೆಣತಿ ಅಕ್ಕಿ ಅನ್ನದ ಅಭ್ಯಾಸವಿರುವವರಿಗೂ ರುಚಿಸುವ ಗುಣಗಳನ್ನು ಒಳಗೊಂಡಿದೆ ಎಂದೂ, ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯ(c.t.t.r.i. mysore)ದ ವರದಿಯಿಂದ ತಿಳಿದು ಬಂದಿದೆ.

ಮಲೆನಾಡಿನ ಕೆ. ಬಿ.ಎಂ.ಜಿ., ಬಿಕೆಬಿ, ಬಂಗಾರಕೋವಿ, ರತ್ನಬಾಡಿ, ಹನಗಾಲ ಬತ್ತಗಳ ಬದಲು ಇಂಟಾನ್ ಬತ್ತವನ್ನು ಬೆಳೆದಲ್ಲಿ ೧. ಬೆಂಕಿ ರೋಗ ನಿವಾರಣೆಯಾಗುತ್ತಲ್ಲದೆ ೨. ಹೆಚ್ಚು ಗೊಬ್ಬರದ ಅವಶ್ಯಕತೆಯೂ ಇಲ್ಲ ಮತ್ತು ೩. ಹೆಚ್ಚು ಹುಲ್ಲು ಸಹ ಲಭಿಸುತ್ತದೆ. ಮೈದಾನ ಪ್ರದೇಶದಲ್ಲೂ ಸಹ ಕುಸುಬಲು ಅಕ್ಕಿ ಉಪಯೋಗಿಸವವರು ಮತ್ತು ದೀರ್ಘಾವದಿ ತಳಿಗಳನ್ನು (ಎಸ್. ೧೦೯೨, ಎಸ್. ರಾಜಭೋಗ ಎಸ್. ೭೪೯) ಬೆಳೆಯುತ್ತಿದ್ದು, ರಾಸಾಯನಿಕ ಗೊಬ್ಬರ ಅಭಾವವಿರುವವರು ನಾಡ ತಳಿಗಳ ಬದಲು ಇದನ್ನು ಬೆಳೆಯುವುದರಿಂದ ಹೆಚ್ಚು ಲಾಭದಾಯಕವೆಂದು ತಿಳಿದು ಬಂದಿದೆ.