“ಸುಹಾಸ’’, ಉದಯಗಿರಿ
ಎಸ್.ಡಿ.ಎಂ. ಕಾಲೇಜಿನ ಹತ್ತಿರ
ಹೊನ್ನಾವರ – ೫೮೧ ೩೩೪
ಉತ್ತರ ಕನ್ನಡ.
ದೂರವಾಣಿ : ೯೫೮೩೮-೭೨೦೪೨೪

(ಚಿತ್ರ ೧೦)

 

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ಜನಿಸಿರುವ ಡಾ|| ಎನ್.ಆರ್. ನಾಯಕ್, ವಿದ್ಯಾರ್ಥಿ ದೆಸೆಯಿಂದಲೂ ಜಾನಪದ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡವರು.

ತಮ್ಮ ಜಿಲ್ಲೆಯ ಬುಡಕಟ್ಟು ಜನಾಂಗದ ಸಮೃದ್ಧ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಸಫಲರಾಗಿರುವ ಡಾ|| ಎನ್.ಆರ್. ನಾಯಕ್ ಜಾನಪದ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಬೋಧನಾ ವೃತ್ತಿಯಿಂದಲೂ ಅಪಾರ ಶಿಷ್ಯ ವರ್ಗವನ್ನು ಪ್ರಭಾವಿಸಿದ ಅವರಿಗೆ ಜಾನಪದ ವಸ್ತು-ವಿಷಯಗಳ ಪ್ರಕಟಣೆಯಲ್ಲಿ ಅಮಿತವಾದ ಸಾಮರ್ಥ್ಯವಿದೆ. ಜಾನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ೨೦ಕ್ಕೂ ಅಧಿಕ ಕೃತಿ ರಚನೆಯ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ಜಾನಪದ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿರುವ ಅವರಿಗೆ ಜಾನಪದ ಸಾಹಿತ್ಯದ ಕೃತಿಗಳಿಗೆ ಹೆಚ್ಚು ಒತ್ತು ನೀಡುವ ಅವಕಾಶ ದೊರಕಿದೆ.

ರಾಜ್ಯಮಟ್ಟದ, ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ತಮ್ಮ ಜಾನಪದ ಕಲಾಸಕ್ತಿಯನ್ನು ಪ್ರಸ್ತುತಪಡಿಸಿದ್ದಾರೆ.

ನಮ್ಮ ನಾಡಿನ ಹೆಮ್ಮೆಯ ಜಾನಪದ ಸಂಗ್ರಾಹಕರಲ್ಲಿ ಡಾ|| ಎನ್.ಆರ್. ನಾಯಕ್ ಅವರೂ ಒಬ್ಬರಾಗಿದ್ದಾರೆ.