Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಜೆ. ಜಿ. ದೇವಧರ

ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗಳಲ್ಲಿ ಹೊಸ ಸಾಧನೆ ಮಾಡಿದವರು ಹಾವೇರಿಯ ದೇವಧರ ಆಸ್ಪತ್ರೆಯ ಡಾ. ಜೆ. ಜಿ. ದೇವಧರ ಅವರು.
ವೈದ್ಯಕೀಯ ಸ್ನಾತಕೋತ್ತರ ಪದವೀಧರರಾದ ಡಾ. ದೇವಧರ ಅವರು ಮೊದಲಿಗೆ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವ ಉದ್ದೇಶದೊಡನೆ ಕುಟುಂಬದ ಡಾ. ಜಿ.ಎಸ್. ದೇವಧರ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಸೇವೆಗೆ ಇಳಿದವರು.
ಇಂಗ್ಲೆಂಡಿನ ಬೇರೆ ಬೇರೆ ಆಸ್ಪತ್ರೆಗಳಲ್ಲಿ ದುಡಿದು, ಸಿಂಗಪುರ, ಜರ್ಮನಿ, ಫ್ರಾನ್ಸ್‌ಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಂಡ ಡಾ. ದೇವಿಧರ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಬಳ್ಳಾರಿ, ಹಾವೇರಿ, ಶಿವಮೊಗ್ಗ ಹಾಗೂ ಗದಗ ಜಿಲ್ಲೆಗಳ ೨೫ಕ್ಕೂ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಿರುವ ಸಂತಾನಹರಣ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಸುಮಾರು ೨ ಲಕ್ಷ.
ಲ್ಯಾಪ್ರೋಸ್ಕೋಪಿಕ್ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ಕರ್ನಾಟಕ ಸರ್ಕಾರ, ಭಾರತೀಯ ವೈದ್ಯಕೀಯ ಸಂಸ್ಥೆ ಮೊದಲಾದವುಗಳಿಂದ ಪ್ರಶಸ್ತಿ ಪುರಸ್ಕಾರ ಗಳಿಸಿರುವ ಡಾ. ದೇವಧರ ‘ಪರಿಸರ’ ಸಂರಕ್ಷಣೆಯಲ್ಲೂ ಸಕ್ರಿಯರು.