Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಡಾ. ಡಿ.ಎನ್. ಶಂಕರಭಟ್

ಅಂತರರಾಷ್ಟ್ರೀಯ ಖ್ಯಾತಿಯ ಭಾಷಾ ವಿಜ್ಞಾನಿ, ಬಹುಭಾಷಾ ತಜ್ಞರು ಹಾಗೂ ಕನ್ನಡದ ಮಹತ್ವದ ಲೇಖಕರು ಡಾ. ಡಿ. ಎನ್. ಶಂಕರಭಟ್ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನನ. ೧೯೩೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಸಂಸ್ಕೃತ ಸಾಹಿತ್ಯದಲ್ಲಿ ಎಂ.ಎ. ಪದವಿ; ಪುಣಿ ವಿಶ್ವವಿದ್ಯಾಲಯದಿಂದ ಭಾಷಾ ವಿಜ್ಞಾನದಲ್ಲಿ ಪಿಹೆಚ್ಡಿ ಪದವಿ ಗಳಿಕೆ, ಬ್ರಿಟಿಷ್ ಕೌನ್ಸಿಲ್ದ ಫೆಲೋ ಆಗಿ ಇಂಗ್ಲೆಂಡಿನಲ್ಲಿ ಉಪಭಾಷೆಗಳ ಅಧ್ಯಯನ, ಪುಣೆ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಭಾಷಾ ವಿಜ್ಞಾನದ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭ, ತ್ರಿವೇಂಡ್ರಮ್, ಇಂಫಾಲ, ಮೈಸೂರುಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ. ಇಂಗ್ಲಿಷಿನಲ್ಲಿ ಬರೆದ ಮಣಿಪುಲ ಗ್ರಾಮರ್, ಐ ಕೊರಗು ಲ್ಯಾಂಡೇಜ್, ಔಟ್ಲೈನ್ ಗ್ರಾಮ ಆಫ್ ಹವ್ಯಕಾ, ಬೋರೋ ಗ್ರಾಮರ್ ಡಿಸ್ಕ್ರಿಪ್ಟಿವ್ ಅನಾಲಿಸಿಸ್ ಆಫ್ ತುಳು, ಇತ್ಯಾದಿ ಕೃತಿಗಳು ಅವರ ಬಹುಭಾಷಾ ಪಾಂಡಿತ್ಯಕ್ಕೆ ನಿದರ್ಶನ.
ಭಾಷಾವಿಜ್ಞಾನದ ಮಹತ್ವದ ವಿದ್ವಾಂಸರಾದ ಡಾ. ಡಿ.ಎನ್. ಶಂಕರಭಟ್ಟ ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಸಾಧಾರಣ. ಕನ್ನಡ ಶಬ್ದರಚನೆ, ಕನ್ನಡ ವಾಕ್ಯಗಳು, ಕನ್ನಡದ ಬಗೆಗೆ ನೀವೇನು ಬಲ್ಲಲ ? ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಕನ್ನಡ ಭಾಷೆಯ ಕಲ್ಪತ ಚಲತ್ರೆ, ನಿಜಕ್ಕೂ ಹಳಗನ್ನಡ ವ್ಯಾಕರಣ ಎಂಥಹದು? ಕನ್ನಡ ಬರಹವನ್ನು ಸಲಪಡಿಸೋಣ ಇತ್ಯಾದಿ ಗ್ರಂಥಗಳು ಅವರ ವಿಶಿಷ್ಟ ಕೊಡುಗೆ.
ಭಾಷಾವಿಜ್ಞಾನಕ್ಕೆ ಸಂಬಂಧಪಟ್ಟಂತೆ ನೂರೈವತ್ತಕ್ಕೂ ಹೆಚ್ಚು ಲೇಖನಗಳನ್ನು ಅಂತರರಾಷ್ಟ್ರೀಯ ನಿಯತಕಾಅಕೆಗಆಗೆ ಬರೆದಿರುವ ಹೆಗ್ಗಆಕೆಗೆ ಪಾತ್ರರು ೨೦೦೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕನ್ನಡದ ಗಣ್ಯ ಲೇಖಕರು, ಭಾಷೆ ಹಾಗೂ ವ್ಯಾಕರಣ ತಜ್ಞರು ಡಾ. ಡಿ. ಎನ್. ಶಂಕರಭಟ್ಟಅವರು.