‘ಜ್ಞಾನಗಂಗಾ’, ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ – ೫೮೫ ೧೦೫
ಮೊಬೈಲ್ : ೯೪೪೮೨ ೫೧೮೨೦

ಕರ್ನಾಟಕದ ಪ್ರಮುಖ ಜಾನಪದ ವಿದ್ವಾಂಸರಲ್ಲಿ ಒಬ್ಬರಾದ ಡಾ|| ಪಿ.ಕೆ. ಖಂಡೋಬಾ ಜಾನಪದ ಅಧ್ಯಯನ, ಸಂಶೋಧನೆ ಹಾಗೂ ಬೋಧನೆಯಲ್ಲಿ ಹೆಸರು ಮಾಡಿದವರು.

ಬುಡಕಟ್ಟು ಜನಾಂಗದ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಬೇರುಗಳಿಗೆ ನೀರೆರೆದು ಪೋಷಿಸುವಲ್ಲಿ ಹೆಚ್ಚಿನ ಶ್ರಮ ಹಾಗೂ ಆಸಕ್ತಿಯನ್ನು ಬೆಳೆಸಿ ಕೊಂಡವರು.

೧೯೮೫ರಲ್ಲಿ ಜಾನಪದ ಕುರಿತಾದ ಸಂಶೋಧನೆ ಹಾಗೂ ಅಧ್ಯಯನ ಪೂರ್ಣಗೊಳಿಸಿದ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ತಳಗವಾಡಿ ಸ್ಮಾರಕ ಸುವರ್ಣ ಪದಕ ಪಡೆದ ಕೀರ್ತಿಗೂ ಪಾತ್ರರಾಗಿದ್ದಾರೆ. ‘ಲಂಬಾಣಿ ಸಂಸ್ಕೃತಿ’ ಕೃತಿಗೆ  ಗುಲ್ಬರ್ಗಾ ವಿಶ್ವವಿದ್ಯಾಲಯ ಅವರಿಗೆ ಲೇಖಕ ಪುರಸ್ಕಾರ ನೀಡಿ ಗೌರವಿಸಿದೆ. ಕರ್ನಾಟಕ ಮತ್ತು ಯಕ್ಷಗಾನ ಅಕಾಡೆಮಿಯು ೧೯೯೭ರಲ್ಲಿ ‘ಜಾನಪದ ತಜ್ಞ’ ಎಂಬ ಪ್ರಶಸ್ತಿಯನ್ನೂ ನೀಡಿದೆ.

ಲಂಬಾಣಿ ಒಗಟುಗಳು, ತಾಂಡಾ ಸಂಸ್ಕೃತಿ, ಸುಡಗಾಡು ಸಿದ್ಧರು, ಜಾನಪದ ಕಥನ ಗೀತೆಗಳು ಹೀಗೆ ಹಲವಾರು ಕೃತಿಗಳ ಪ್ರಕಟಣೆಗೆ ಕಾರಣಕರ್ತರಾದ ಡಾ|| ಪಿ.ಕೆ. ಬಂಡೋಬಾ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.

ಬೆಳ್ಳಿ ಹಬ್ಬದ ಪ್ರಯುಕ್ತ ಈ ಅಭಿನಂದನೆ.