ಹೊನ್ನಾರು ಜನಪದ ಗಾಯಕರು
ನಂ. ೯೬೮, ಮೈಸೂರು ನಿರ್ಮಿತಿ ಕೇಂದ್ರ ರಸ್ತೆ,
ಭೋಗಾದಿ ೩ನೇ ಹಂತ,
(ಉತ್ತರ) ಮೈಸೂರು-೫೭೦ ೦೨೬
ದೂರವಾಣಿ : ೦೮೨೧-೨೫೧೭೬೫೭
ಮೊಬೈಲ್ : ೯೪೪೮೯೩೮೫೬೩

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದವರಾದ ಡಾ|| ಪಿ.ಕೆ. ರಾಜಶೇಖರ್ ಕನ್ನಡ ಜಾನಪದ ಯುವ ವಿದ್ವಾಂಸರಲ್ಲೊಬ್ಬರು. ಅಧ್ಯಾಪಕ ವೃತ್ತಿಯಿಂದ ತಮ್ಮ ಅಧ್ಯಯನದ ಆಸಕ್ತಿ ಬೆಳೆಸಿಕೊಂಡಿರುವ ಅವರು ಅಪಾರ ಶಿಷ್ಯ ಬಳಗಕ್ಕೆ ಮಾರ್ಗದರ್ಶಕರು.

ದಕ್ಷಿಣ ಕರ್ನಾಟಕದ ಜಾನಪದ ಪುರಾಣಗಳು ಎಂಬ ಪ್ರಬಂಧಕ್ಕೆ ಪಿ.ಎಚ್.ಡಿ. ಪಡೆದಿರುವ ಡಾ|| ಪಿ.ಕೆ. ರಾಜಶೇಖರ್ ಹಲವಾರು ಕಲಾ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಹಲವೆಡೆ ಜಾನಪದ ಗೀತ ಗಾಯನಗಳ ಪ್ರದರ್ಶನಗಳನ್ನು ನೀಡಿದ್ದಾರೆ.

ಮಲೆಯ ಮಾದೇಶ್ವರ, ಹಾಡೋ ಮುತ್ತಿನರಗಿಣಿ ಮುಂತಾದ ಧ್ವನಿಸುರುಳಿಗಳು ಕೂಡ ಜನಪ್ರಿಯಗೊಂಡಿವೆ. ಜಾನಪದ ಕ್ಷೇತ್ರದ ಕೃಷಿಯಲ್ಲಿ ಅಪಾರ ಒಲವು ಹೊಂದಿರುವ ಡಾ|| ಪಿ.ಕೆ. ರಾಜಶೇಖರ್ ಕಲಾಸಕ್ತರೂ ಹೌದು ಮಾಗಡಿ ಕೆಂಪೇಗೌಡ, ಮಲೆಯ ಮಾದೇಶ್ವರ ಮುಂತಾದ ಕೃತಿಗಳ ಮೂಲಕ ಜಾನಪದ ಲೋಕದಲ್ಲೇ ಹೊಸ ಇತಿಹಾಸ ಸೃಷ್ಠಿಸಿದ್ದಾರೆ.

ಹೊನ್ನಾರು ಜನಪದ ಗಾಯಕರು ಎಂಬ ಅವರ ತಂಡ ಇಂದಿಗೂ ನಾಡಿನೆಲ್ಲೆಡೆ ಜನಮನ್ನಣೆ ಪಡೆದಿದೆ. ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಯ ಗರಿಗೂ ಅವರು ಭಾಜನರಾಗಿದ್ದಾರೆ.