ಪ್ರವಾಚಕರು,
ಕನ್ನಡ ಅಧ್ಯಯನ ಸಂಸ್ಥೆ
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ – ೫೮೦ ೦೦೬.

ಜಾನಪದ ವಿದ್ವಾಂಸ ಡಾ|| ಬಸವರಾಜ ಪೊಲೀಸ್ ಪಾಟೀಲ ಗುಲ್ಬರ್ಗಾ ಜಿಲ್ಲೆ ಅಫಜಲಪುರ ತಾಲೂಕಿನ ಡಿಕ್ಸಂಗಾ (ಬಿ) ಗ್ರಾಮದವರು.

ಬಾಲ್ಯದಿಂದಲೂ ಗ್ರಾಮೀಣ ಸಂಸ್ಕೃತಿಯ ಅಧ್ಯಯನಕ್ಕೆ ಹಾಗೂ ಜಾನಪದ ಸಂಶೋಧನೆಗಳಿಗೆ ಆಕರ್ಷಿತರಾಗಿ ಅದರಲ್ಲೇ ತಮ್ಮ ವೃತ್ತಿ-ಪ್ರವೃತ್ತಿಗಳನ್ನು ಬೆಳೆಸಿಕೊಂಡರು.

ಅಮರ ಪ್ರಕಾಶದಲ್ಲಿ ಸುಮಾರು ೨೫ ಕೃತಿಗಳನ್ನು ಪ್ರಕಟಿಸಿ ತಮ್ಮ ಸಾಹಿತ್ಯಾಸಕ್ತಿಯನ್ನು ಮೆರೆದಿದ್ದಾರೆ. ಅಧ್ಯಾಪನ ಹಾಗೂ ಅಧ್ಯಯನದಿಂದಾಗಿ ಅವರ ಜಾನಪದ ಲೋಕದ ಕಾರ‍್ಯ ವಿಸ್ತಾರಗೊಂಡಿದೆ.

ಜಿಲ್ಲೆಯ ಜಾನಪದ ಮೇಳಗಳ ಸಮ್ಮೇಳನಾಧ್ಯಕ್ಷತೆ, ವಿವಿಧ ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದಾರೆ.

ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಇವರನ್ನು ಸನ್ಮಾನಿಸಲು ಮುಂದಾಗಿದೆ.