Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಬಿ.ಟಿ. ಚಿದಾನಂದಮೂರ್ತಿ

ಪ್ರಕೃತಿ ಮತ್ತು ಯೋಗ ಚಿಕಿತ್ಸಕರಾಗಿ ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಡಾ. ಬಿ.ಟಿ ಚಿದಾನಂದ ಮೂರ್ತಿಯವರು ತುಮಕೂರು ಜಿಲ್ಲೆ ಬೈತರ ಹೊಸಹಳ್ಳಿಯವರು.
ಕರ್ನಾಟಕದ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರ, ಉಜಿರೆಯ ಪ್ರಕೃತಿ ಚಿಕಿತ್ಸಾ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವ ಡಾ. ಬಿ.ಟಿ ಚಿದಾನಂದಮೂರ್ತಿ ಪ್ರಸ್ತುತ ನವದೆಹಲಿಯ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ನಿರ್ದೆಶಕರು.
ಪ್ರತಿಷ್ಟಿತ ಪುಣೆಯ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕರಾಗಿ, ಹುಬ್ಬಳ್ಳಿಯ ಪ್ರಕೃತಿ ಚಿಕಿತ್ಸಾಲಯದ ಸಂಸ್ಥಾಪಕ ನಿರ್ದೆಶಕರಾಗಿ ಸೇವೆ ಸಲ್ಲಿಸಿರುವ ಡಾ. ಬಿ.ಟಿ ಚಿದಾನಂದ ಮೂರ್ತಿ ಯವರು ರಾಜಸ್ಥಾನ, ಹರಿಯಾಣ, ದೆಹಲಿಗಳಲ್ಲಿ ಕೆಲಸ ಮಾಡಿರುವುದಲ್ಲದೆ ಅನೇಕ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಮ್ಮೇಳನ, ಶಿಬಿರಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಅನೇಕ ಕಾಯಿಲೆ ಕುರಿತು ಸಂಶೋಧನೆ ನಡೆಸಿ ಪ್ರಕೃತಿ ಹಾಗೂ ಯೋಗ ಚಿಕಿತ್ಸೆಯಿಂದ ಅವುಗಳನ್ನು ಹೇಗೆ ಗುಣಪಡಿಸಬಹುದೆಂದು ಸೂಚಿಸಿರುವ ಡಾ. ಬಿ.ಟಿ ಚಿದಾನಂದಮೂರ್ತಿ ಅವರು ಜನಸಾಮಾನ್ಯರಿಗೆ ಪ್ರಕೃತಿ ಮತ್ತು ಯೋಗ ಚಿಕಿತ್ಸೆ ಬಗ್ಗೆ ಸರಳವಾದ ಸಲಹೆಗಳನ್ನು ನೀಡುತ್ತಿದ್ದಾರೆ.