ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಮೊಬೈಲ್ : ೯೪೪೮೫ ೬೬೯೨೮

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೀರಾಸಾಬಿ ಹಳ್ಳಿಯಲ್ಲಿ ಜನಿಸಿದ ಡಾ|| ಪಿ.ಬಿ. ಶಿವಣ್ಣ ಅಧ್ಯಾಪಕ ವೃತ್ತಿಯಿಂದಲೇ ಜಾನಪದ ಸಾಹಿತ್ಯ ಲೋಕಕ್ಕೆ ತಮ್ಮ ಸೇವೆ ಸಲ್ಲಿಸುವ ಪರಿಪಾಠ ಬೆಳೆಸಿಕೊಂಡರು.

ಗ್ರಾಮೀಣರ ಸೊಗಡು-ಸೊಗಸನ್ನು ರಸವತ್ತಾಗಿ ತಮ್ಮ ಸಂಶೋಧನೆ, ಬರಹ, ಲೇಖನಗಳಲ್ಲಿ ಹಿಡಿದಿಡುವ ಸಾಮರ್ಥ್ಯ ಅವರಿಗಿದೆ. ನೂರಾರು ಲೇಖನಗಳು ಈ ನಿಟ್ಟಿನಲ್ಲಿ ಬೆಳಕು ಕಂಡಿವೆ.

ಐವತ್ತಾರರ ಡಾ|| ಪಿ.ಬಿ. ಶಿವಣ್ಣ ಇಂದಿಗೂ ಗ್ರಾಮೀಣ ಬದುಕಿಗೆ ಚೈತನ್ಯ ತುಂಬುವ ಹವಣಿಕೆಯಲ್ಲಿದ್ದಾರೆ. ಒಗಟುಗಳು ಒಡಪುಗಳು, ಕಂಡು ಕೇಳಿದ ಕಥೆಗಳು, ದುರುಗ ಜಾನಪದ, ಗೊಲ್ಲರ ಕಡಗ, ಹೀಗೆ ಹಲವಾರು ಪ್ರಕಟಣೆಗಳು ಅವರ ಕೊಡುಗೆಯಾಗಿವೆ. ಅಧ್ಯಯನ ಆಸಕ್ತಿ, ಸಾಂಸ್ಕೃತಿಕ ಕುತೂಹಲಕ್ಕೆ ಬೆರಗಾಗುವ ಡಾ|| ಪಿ.ಬಿ. ಶಿವಣ್ಣ, ಕಲಾಸಕ್ತರಿಗೆ ಮಾರ್ಗದರ್ಶಕ.

ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಅವರಿಗೆ ಗೌರವಿಸಿದೆ.