೧೯೫೨. ಬೆಂಗಳೂರಿನಲ್ಲಿ ರವಿಶಂಕರ, ಅಲಿ ಅಕಬರಖಾನರ ಸಿತಾರ, ಸರೋದವಾದನ ಜುಗಲಬಂದಿ. ಆಲಿಸಲು ಮೈಸೂರಿನಿಂದ ಬಂದಿದ್ದನೊಬ್ಬ ಯುವ ಪ್ರಾಧ್ಯಾಪಕ. ಅವನೊ ರವಿಶಂಕರರ ಪರಮ ಭಕ್ತ. ‘ಅದಾರೊ ಖಾನರು ರವಿಶಂಕರರ ಜೊತೆ ಸರೋದ ನುಡಿಸುತ್ತಾರಂತೆ. ನುಡಿಸಲಿ, ನನ್ನ ಪಾಡಿಗೆ ನಾನು ರವಿಶಂಕರ ಸಿತಾರ ಕೇಳಿದರಾಯಿತು’. ಪೂರಿಯಾ ಕಲ್ಯಾಣ ರಾಗದ ಪ್ರಸ್ತುತಿ. ತಬಲಾ ಸಾಥಿ ಚತುರಲಾಲ. ರವಿಶಂಕರ ಮುಗುಳ್ನಗುತ್ತ ಅಲಿ ಅಕಬರ ಖಾನರಿಗೆ ನುಡಿಸಲು ಬಿಟ್ಟುಕೊಡುತ್ತಿದ್ದರು. ಕಚೇರಿ ಮುಗಿಯಿತು. ಆದುದೇ ಬೇರೆ. ಆಕ್ಷಣ ನಾನು ಸರೋದಿಯಾ ಆಗಿಬಿಟ್ಟೆ. ರಭಸದಿಂದ ಮಳೆ ಸುರಿದು ನಿಂತಂತಾಯಿತು. ಆಮೇಲೆ ಮರದ ಹನಿಯಂತೆ ಟಪ್‌, ಟಪ್‌, ಟಪ್‌ ಅಂತ ಮನಸ್ಸಿನಾಳದಲ್ಲಿ ಅಲಿ ಅಕಬರಖಾನರ ಸರೋದವಾದನ ಇಳಿಯತೊಡಗಿತು. ಅದರದೇ ಧ್ಯಾನ, ಯುವ ಪ್ರಾಧ್ಯಾಪಕ ನೌಕರಿಗೆ ಶರಣು ಹೊಡೆದು ಅಲಿ ಅಕಬರಖಾನರ ಬೆನ್ನುಹತ್ತಿದರು. ಆ ಯುವ ಪ್ರಾಧ್ಯಾಪಕನೇ ಇವತ್ತಿನ ವಿಖ್ಯಾತ ಸರೋದ ಕಲಾವಿದ ರಾಜೀವ ತಾರಾನಾಥ. ದಕ್ಷಿಣ ಭಾರತದ ಏಕೈಕ ಸರೋದಿಯಾ.

ಅಕ್ಟೋಬರ್ ೧೭, ೧೯೩೨ರಂದು ರಾಜೀವ ತಾರಾನಾಥರ ಜನನ. ವೈಭವಯುತ ಬಾಲ್ಯಕ್ಕೆ ಸಂಗೀತದ ನೆಲೆಗಟ್ಟು. ತಂದೆ ಪಂಡಿತ ತಾರಾನಾಥ, ತಾಯಿ ಸುಮತಿ. ಇಬ್ಬರೂ ಮೇಧಾವಿಗಳು. ಪಂಡಿತ ತಾರಾನಾಥ ಪ್ರಚಂಡರು. ವೈದ್ಯ, ಸಾಹಿತಿ, ವಾಗ್ಮಿ, ಸಂಗೀತಾರಾಧಕ, ಯೋಗನಿರತ, ಶಿಕ್ಷಣ ಪ್ರಸಾರಕ, ಕ್ರಾಂತಿಕಾರಿ, ಸ್ವಾತಂತ್ಯ್ರ ಹೋರಾಟಗಾರ, ಸಿಡಿಲು! ಅವರ ಮಿತ್ರವರ್ಗದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಇಂಡೋ- ಆಂಗ್ಲ ಸಾಹಿತಿ ರಾಜಾರಾವ್‌, ಬಳ್ಳಾರಿ ರಾಘವ, ಕೈಲಾಸಂ ಮುಂತಾದವರು ಪ್ರಮುಖರು. ತಾರಾನಾಥರ ವಿಚಾರಧಾರೆ, ಶೈಲಿಗಳ ಪ್ರಭಾವ ಶ್ರೀರಂಗ, ಅನಕೃ, ತರಾಸು ಮೇಲೆ ಸಾಕಷ್ಟು ಬೀರಿತ್ತು.

ರಾಯಚೂರು ಬಳಿ ತುಂಗಭದ್ರೆಯ ತಟದಲ್ಲಿ ತಂದೆಯ ಆಶ್ರಮ ಪ್ರೇಮಾಯತನದಲ್ಲಿ ರಾಜೀವನ ಬಾಲ್ಯ. ತಂದೆಗೆ ಮಗನ ಮೇಲೆ ಎಲ್ಲಿಲ್ಲದ ಪ್ರೀತಿ. ಪುಟ್ಟಾ, ಪುಟ್ಟಾ, ಎಂದು ಮುದ್ದು ಮಾಡುತ್ತ ಹೆಗಲ ಮೇಲೆ ಹೊತ್ತು ತಿರುಗುತ್ತಿದ್ದ ತಂದೆಯೆ ರಾಜೀವನ ಒಡನಾಡಿ, ಶಿಕ್ಷಕ, ಮಾರ್ಗದರ್ಶಕ. ಮನೆಯಲ್ಲಿಯೆ ತಂದೆ ತಾಯಿಯರಿಂದ ವಿದ್ಯಾಭ್ಯಾಸ. ನೇರವಾಗಿ ಏಜಿಸ್‌ ಆಗೋ, ಚಿಲ್ಡ್ರನ್ಸ್ ಎನ್‌ಸೈಕ್ಲೋಪೀಡಿಯಾ ಓದಲಾರಂಭಿಸಿದ. ಗಾಂಧೀಜಿ, ವಿವೇಕಾನಂದ, ಬೈಬಲ್‌, ಶೇಕ್ಸಪಿಯರ್, ಚಾರ್ಲ್ಸ್ ಡಿಕನ್ಸ್‌, ವಾಲ್ಟರ್ ಸ್ಕಾಟ್‌, ಬರ್ಟ್‌ರ‍್ಯಾಂಡ್‌ ರಸೆಲ್‌ ಓದುವಿಕೆ. ಹಾಗೆಯೆ, ಮಹಾಭಾರತ, ಭಗವದ್ಗೀತೆ, ಅಮರಕೋಶ, ತೀನಂಶ್ರೀ ಅವರ ವ್ಯಾಕರಣ.

ವಿದ್ಯಾಭ್ಯಾಸದ ಜೊತೆಜೊತೆಗೆ ಸಂಗೀತಾಭ್ಯಾಸ. ತದೇಕ ಗಮನ. ಒಂದು ದೊಡ್ಡ ಗ್ರಾಮೊಪೋನು. ಅದನ್ನಿಡಲೊಂದು ಕಟ್ಟಿಗೆ ಪೆಟ್ಟಿಗೆ. ಸುಮಾರು ಅರವತ್ತು ಅತ್ಯುತ್ತಮ ಧ್ವನಿಮುದ್ರಿಕೆಗಳು. ಇಂದಿಗೂ ರಾಝೀವರ ಮನಃ ಪಟಲದ ಮೇಲೆ ಅವುಗಳ ಸ್ಮರಣೆ ಅಚ್ಚೊತ್ತಿದೆ. ಅಬ್ದುಲ್‌ ಕರೀಮಖಾನರ ಭೈರವಿ (ಜಮುನಾ ಕೆ ತೀರ), ಝಿಂಝೋಟಿ,(ಪಿ೮ಯಾ ಬಿನಂ ನಹಿ ಆವತ ಚೈನ), ಬಸಂತ, (ಫಗವಾ ಬ್ರಿಜ ದೇಖನ ಕೋ), ಜೋಹರಾಬಾಯಿ ಅಂಬಾಲೆವಾಲಿ ಅವಳ ಜೋಗಿಯಾ, (ಪ್ರಿಯಾ ಮಿಲನ ಕೆ ಆಸ), ಇನ್ನೊಂದು ಬದಿ ಬಸಂತ, ಐಂಡಿ ಐಂಡಿ ಗಲೀ ಗಲೀ, ಅವಳ ಹಾಡುಗಳಲ್ಲಿ ಅರ್ದ್ರತೆ. ಫೈಯಾಜಖಾನರ ಪೂರಿಯಾ, (ಮೋರೆ ಮೌಂದರ ಅಬ ಲೋ), ತಂದೆಯ ಪರಿಚಿತಳಾಗಿದ್ದ ಮೆಹಬೂಬಜಾನ ಸೊಲಾಪುರವಾಲಿ ಅವಳ ಒಂದು ಗೋಹರಜಾನಳವು ಮತ್ತು ಪ್ಯಾರೆಲಾಲರವು ಕೆಲವು. ಒಂದೆರಡು ಸರೋದ ಧ್ವನಿಮುದ್ರಿಕೆಗಳು. ಸರೋದ ಸೇರುತ್ತಿರಲಿಲ್ಲ. ಅವುಗಳನ್ನು ಹಾಕಬೇಡಿರಿ, ನನ್ನ ಎದೆ ಒಡೆಯುತ್ತದೆ. ಎನ್ನುತ್ತಿದ್ದ ರಾಜೀವನಿಗಿನ್ನೂ ೫ ವರ್ಷ.

ಒಂದು ದಿನ ಅಬ್ದುಲ್‌ ಕರೀಮಖಾನರ ಧ್ವನಿಮುದ್ರಿಕೆಯೊಂದು ಅಂಚೆ ಸಾಗಣೆಯಲ್ಲಿ ಒಡೆದು ಬಂತು. ಮರುದಿನ ಪತ್ರಿಕೆಯಲ್ಲಿ ಅವರ ಮರಣ ವಾರ್ತೆ. ಕರೀಮಖಾನರನ್ನು ನೋಡಲಾಗಲಿಲ್ಲವಲ್ಲ ಎಂಬ ಕೊರಗು ತಂದೆಗೆ. ಕೊನೆಯವರೆಗೂ. ತಂದೆ ಧ್ವನಿಮುದ್ರಿಕೆಗೆ ಟೇಪ್‌ ಹಚ್ಚಿ ಒಂದು ಬದಿ ಕೇಳಲು ಬರುವಂತೆ ಮಾಡಿದರು. ಭಜನ-ಗೋಪಾಲ ಮೇರಾ ಕರುಣಾ ಕ್ಯೂಂ ನಾ ಆವೆ. ಇನ್ನೊಂದು ಬದಿ ಏನಿತ್ತೊ ಗೊತ್ತಿಲ್ಲ. ರಾಜೀವನಿಗೆ ಲೇಬಲ್‌ ಓದಲು ಕೂಡ ಬಾರದ ವಯಸ್ಸು.

ತಂದೆಯ ಧ್ವನಿ ಬಲು ಇಂಪು. ಮಾತನಾಡುವಾಗಲೂ ಸಂಗೀತಮಯ. ಸ್ವಲ್ಪ ಸ್ವಲಪ್ ಹಾಡುತ್ತಿದ್ದರು. ಮಗನ ಹಾಡಿನೊಂದಿಗೆ ತಬಲಾ ನುಡಿಸುತ್ತಿದ್ದರು. ಪಂಡಿತ ತಾರಾನಾಥರ ಆರೋಗ್ಯ ಕೆಟ್ಟು ಬೆಂಗಳೂರಿಗೆ ಬಂದವರು ಕೊನೆಯ ಕೆಲವು ವರ್ಷ ಅಲ್ಲಿಯೆ ಕಳೆದರು. ಮಗನಿಗೆ ಗುರುಮುಖೇನ ಸಂಗೀತ ಕಲಿಸುವ ಏರ್ಪಾಡು ಮಾಡಿದರು. ಬಳ್ಳಾರಿ ರಾಘವರ ಮನೆಯಲ್ಲಿ ಸಂಗೀತ ಕಲಿಸುತ್ತಿದ್ದ ಸವಣೂರು ಕೃಷ್ಣಾಚಾರ್ಯರನ್ನು ಕರೆಸಿದರು. ಶಾಸ್ತ್ರೋಕ್ತ ಪಾಠ ಶುರುವಾಯಿತು. ಬುನಾದಿ ನಿರ್ಮಾಣಗೊಂಡಿತು. ಯಮನ್‌, ಭೂಪ, ಮಾರವಾ, ಅಸಾವರಿ, ಪೂರಿಯಾ ರಾಗಗಳ ಅಭ್ಯಾಸ. ಕೃಷ್ಣಾಚಾರ್ಯರು ಬಾಲಕ ರಾಜೀವನ ಒಡನಾಡಿ ಕೂಡ ಆಗಿದ್ದರು. ಅವರ ಚಂಡಿಕೆಗೆ ಗಂಟು ಹಾಕುವುದು, ಮಸಿ ಗುಳಿಗೆ ಕದಿಯುವುದು ಮುಂತಾದ ತುಂಟಾಟ. ಕೃಷ್ಣಾಚಾರ್ಯರಲ್ಲಿ ಕಥೆಗಳ ಸಂಗ್ರಹ ದೊಡ್ಡದು. ಮೂರು ಕತೆ ಹೇಳಿದರೆ ನಾನು ರಾಧಾಕೃಷ್ಣ ಬೋಲ ಹಾಡುವೆ ಎಂಬ ಷರತ್ತು. ಬಲು ಸಂತೋಷಮಯ ದಿನಗಳವು. ಸವಾಯಿ ಗಂಧರ್ವರ ಶಿಷ್ಯ ವೆಂಕಟರಾವ ರಾಮದುರ್ಗರಿಗೆ ಮೂಲವ್ಯಾಧಿ. ಪಂಡಿತ ತಾರಾನಾಥರಲ್ಲಿ ಚಿಕಿತ್ಸೆಗಾಗಿ ಕೆಲ ದಿನ ಇದ್ದರು. ರಾಜೀವನಿಗೆ ಭೈರವ ರಾಗ ಕಲಿಸಿದರು. ಅವರಿಗಾಗಿ ಔಷಧಿ ತಯಾರಿಸಲು ರಾಜೀವ ತಂದೆಗೆ ನೆರವಾಗುತ್ತಿದ್ದ. ವೆಂಕಟರಾಯರ ಕಿರಾಣ ಗಾಯನ ಶೈಲಿ ರಾಜೀವನನ್ನು ಮುಗ್ಧಗೊಳಿಸಿತ್ತು. ರಾಝೀವ ಉಡುಉಡು ಚೀಜ ಅಂದುಬಿಡುತ್ತಿದ್ದ. ವೆಂಕಟರಾವ ‘ಹಾಂಗ ಹೋಗಬಾರದು. ಹೀಂಗ ತುಂಬಿಸಬೇಕು’ ಎಂದು ಧೀಮಾ ಏಕತಾಲದಲ್ಲಿ ಹಾಡಿ ತೋರಿಸುತ್ತಿದ್ದರು. ರಾಜೀವನ ಮೇಲೆ ಕಿರಾಣ ಬಡತದ ಗಾಢ ಪ್ರಭಾವ. ಪ್ರಥಮ ಬಾರಿಗೆ ರಾಗದ ಸಂಕೀರ್ಣತೆಯ ಅರಿವು. ವೆಂಕಟರಾವ ಹೊರಟುಹೋದಾಗ ರಾಜೀವನಿಗೆ ಬಲು ದುಃಖ.

೧೯೪೦ರಲ್ಲಿ ಪಂಚಾಕ್ಷರಿ ಗವಾಯಿಗಳು ಬೆಂಗಳೂರಿಗೆ ಬಂದಿದ್ದರು. ಆಗಾಗ ಪಂಡಿತ ತಾರಾನಾಥರಲ್ಲಿಗೆ ಬರುತ್ತಿದ್ದರು. ಶಿಷ್ಯ ಬಸವರಾಜ ರಾಜಗುರುನನ್ನು ಹಾಡಿಸಿದರು. ರಾಗ ಛಾಯಾನಟ. ರಾಜಗುರು ಬಾಯಲ್ಲೊಂದು ಮಚ್ಚೆ! ಬಾಯಿ ತೆರೆದಾಗ ರಾಜೀವನಿಗೆ ಅದನ್ನೇ ನೋಡುವ ತವಕ. ಪಂಡಿತ ತಾರಾನಾಥರು ರಾಜಗುರು ಧ್ವನಿ, ಗಾಯನ ಮೆಚ್ಚಿದರು. ತಮ್ಮ ಹುಡಗನಿಗೂ ಕಲಿಸಬೇಕೆಂದು ಪಂಚಾಕ್ಷರಿ ಗವಾಯಿಗಳನ್ನು ಉದ್ಗರಿಸಿದರು. ಮುಲ್ತಾನಿ ಜೋಗಿಯಾ ರಾಗಗಳನ್ನು ಕಲಿಸಿದರು.

ರಾಜೀವನಿಗಿನ್ನು ಒಂಬತ್ತು ವರ್ಷ, ಆದರೆ ವಯಸ್ಸಿಗೆ ಮೀರಿದ ಬುದ್ಧಿಮತ್ತೆ. ಬೆಂಗಳೂರಿನಲ್ಲಿ ಒಂದು ಗೃಹಪ್ರವೇಶ ಸಮಾರಂಭ. ಪಂಡಿತ ತಾರಾನಾಥ ಮುಖ್ಯ ಅತಿಥಿ. ರಾಝೀವನ ಗಾಯನ ಕಾರ್ಯಕ್ರಮ. ಪ್ರಥಮ ಕಚೇರಿ. ಬಾಗೇಶ್ರೀ ರಾಗವನ್ನು ಹಾಡಿದ. ಎಲ್ಲರ ಪ್ರಶಂಸೆ! ತಾಯಿಗೆ ಅಭಿಮಾನ. “ನೀವು ಗಾಡಿಯಲ್ಲಿ ಹೋಗಿರಿ. ನಾನು, ಪುಟ್ಟಾ ನಡಕೊಂಡು ಬರ್ತೀವಿ”. ಎಂದು ಮಗನ ಜೊತೆ ಹೊರಟರು. ತಾರಾನ ತರುತಾನ ಬರ್ತದಂತ ಸಿಕ್ಕಸಿಕ್ಕಲ್ಲೆ ಹೊಡೆಯೂದ? ಗಮಕ ಎಲ್ಲೆಲ್ಲೋ ಸೇರಿಸೊದ ಆರ್ಯನೆಂದರೆ ಪರಿಪೂರ್ಣತೆ. ನೀನು ಅನಾರ್ಯ. ದಾರಿಯುದ್ದಕ್ಕೂ ಕಠೋರ ವಿಶ್ಲೇಷಣೆ. ಎಲ್ಲರೂ ಮೆಚ್ಚಿಕೊಂಡಿರುವಾಗ ಅಪ್ಪ ಬೈತಾನಲ್ಲ ಎಂದು ರಾಜೀವನಿಗೆ ಅಳು.

೧೯೪೨ರಿಂದ ಇನ್ನೊಬ್ಬ ಶಿಕ್ಷಕ ಶಂಕರ ಜೋಶಿ ದೇವಗಿರಿ ಅವರಿಂದ ಆರೇಳು ವರ್ಷ ಕಲಿಕೆ. ಅಷ್ಟೊತ್ತಿಗಾಗಲೆ ರಾಜೀವನ ಮೇಲೆ ಭೀಮಸೇನ ಜೋಶಿ ಗಾಯನದ ಪ್ರಭಾವ. ಧ್ವನಿ ಒಡೆಯಿತು. ಗಾಯನದಲ್ಲಿ ಅನಾಸಕ್ತಿ. ಅನಾರೋಗ್ಯ ಬೇರೆ. ಗಾಯನಾಭ್ಯಾಸ ಸ್ಥಿಗಿತ. ೧೯೪ರಲ್ಲಿ ನೇರವಾಗಿ ಸೀನಿಯರ್ ಕೇಂಬ್ರಿಡ್ಜ್ ಪರೀಕ್ಷೆಗೆ ಕುಳಿತು. ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣತೆ. ಬೆಂಗಳೂರು ಸೆಂಟ್ರಲ್‌ ಕಾಲೇಜಿನಿಂದ ಇಂಗ್ಲೀಷ್‌ ಬಿ.ಎ.. ಆನರ್ಸ್. ಮೈಸೂರಿನ ಮಹಾರಾಜಾ ಕಾಲೇಜಿನಿಂದ ಎಂ.ಎ. ಪ್ರಥಮ ರ‍್ಯಾಂಕ್ ಪಡೆಯುವುದು ವಿದ್ಯಾಭ್ಯಾಸದುದ್ದಕ್ಕೂ ಮಾಮೂಲು. ಕಾಲೇಜಿನ ದಿನಗಳಲ್ಲಿ ಗಝಲ್‌ ಹಾಡಿ ಬಹುಮಾನ ಪಡೆಯುವುದು ಮಾಮೂಲಾಗಿ ಬಿಟ್ಟಿತ್ತು. ಬಾಬುಲ. ಮೊರಾ ಹಾಡೆಂದರೆ ಬಲು ಇಷ್ಟ. ರೇಡಿಯೊ ಕಲಾವಿದ ಕೂಡ. ಎಂ.ಎ. ಮುಗಿಸುತ್ತಲೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ ಅಧ್ಯಾಪಕನಾಗಿ ನೇಮಕ. ಏತನ್ಮಧ್ಯೆ ಹಾಡುವುದು ಬಿಟ್ಟಿದ್ದರಿಂದ ಸಂಗೀತನಿರ್ವಾತ ನಿರ್ಮಾಣ.

೧೯೫೨ರಲ್ಲಿ ಮಹತ್ವದ ತಿರುವು. ಅಲಿ ಅಕಬರಖಾನರ ಸರೋದದ ಹುಚ್ಚು. ೧೯೫೫ರಲ್ಲಿ ಅವರನ್ನು ಕಂಡರು. ಆಗ ಅವರು ಮುಂಬಯಿಯಲ್ಲಿರುತ್ತಿದ್ದರು. ಅಲಿ ಅಕಬರ ಮಿತ ಭಾಷಿ. ನೋಡು, ಒಳ್ಳೆಯ ನೌಕರಿಯಲ್ಲಿರುವೆ. ಹೆಸರು ಗಳಿಸಿರುವೆ. ಅಲ್ಲದೆ ತಡವಾಗಿದೆ. ನಿನ್ನ ಬೆಟ್ಟು ಬಲಿತಿವೆ. ಸರೋದ ಕಠಣ ವಾದ್ಯ ಚಿಕ್ಕಂದಿನಲ್ಲಿಯೆ ಆರಂಭಿಸಬೇಕು. ಇನ್ನೊಮ್ಮೆ ಆಲೋಚಿಸು. ರಾಜೀವ ಆಳೋಚಿಸುವುದೇನೂ ಉಳಿದಿರಲಿಲ್ಲ. ಉಪನ್ಯಾಸಕ ಹುದ್ದೆಗೆ ತಿಲಾಂಜಲಿ ನೀಡಿಯಾಗಿತ್ತು. ಪಿ.ಇ./ಎನ್‌. ಪೊಯೆಟ್ಸ್, ಎಸೆಯಿಸ್ಟ್ಸ್ ಅಯಾಂಡ್‌ ನಾವೆಲಿಸ್ಟ್ಸ್ ಅಧ್ಯಕ್ಷೆ ಸೋಫಾಯಾ ವಾಡಿಯಾರನ್ನು ಕಂಡರು. ಅವರ ‘ಆರ್ಯನ್‌ ಪಾಥ್‌’ ಪತ್ರಿಕೆಯಲ್ಲಿ ಉಪಸಂಪಾದಕತ್ವ. ಚಿಕ್ಕ ಸಂಬಳ. ಸಾಕಾಗುತ್ತಿತ್ತು. ಮುಂದೆ ಗುರುಗಳೊಂದಿಗೆ ಕೊಲ್ಕತಾಗೆ ಪಯಣ. ಅದೇ ಅವರ ಕೇಂದ್ರ ಸ್ಥಾನ. ಮುಂಬಯಿಯಲ್ಲಿ ನೌಕರಿ ಇತ್ತು. ಕೋಲ್ಕತ್ತಾದಲ್ಲಿ ಮೊದಲೆರಡು ವರ್ಷ ಅದ ಊ ಇರಲಿಲ್ಲ. ಮೂರು ನಾಲ್ಕು ದಿನ ಬಸ್‌ ಶೆಲ್ಟರಿನಲ್ಲಿಯೆ ವಾಸ್ತವ್ಯ. ಅಲಿ ಅಕಬರ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಸೋಮೇಶ ಚಟರ್ಜಿ (ರಾಜಾರಾಮ ಮೋಹರಾಯರ ವಂಶಜ) ನೋಡಿದರು. ಏನು, ಇಲ್ಲಿ ಕೂತೀರಿ, ‘ಏನು ಮಾಡುವುದು ನಿಮ್ಮೂರಲ್ಲಿ ಶೆಕೆ ಜಾಸ್ತಿ. ಅದಕ ಇಲ್ಲಿ ಕೂತೀನಿ’. ಸೋಮೇಶರಿಗೆ ಕಾರಣ ಗೊತ್ತಿರದ್ದೇನಲ್ಲ.

ಸೋಮೇಶರು ಕರೆದೊಯ್ದು ತಮ್ಮ ಮನೆಯ ಪಕ್ಕದಲ್ಲಿದ್ದ ಪ್ರಭಾತ ಕುಮಾರದಾಸ ಎಂಬ ಸರಾಫರಲ್ಲಿದ ವಸತಿ ವ್ಯವಸ್ಥೆ ಮಾಡಿಕೊಟ್ಟರು. ಅವರು ಬಾಡಿಗೆ ತೆಗೆದುಕೊಳ್ಳಲೊಪ್ಪಲಿಲ್ಲ. ರಾಝೀವ ಹಯರೊಗೆ ಹೋದಾಗ ರೂಮು ಸ್ವಚ್ಛ ಮಾಡಿಡುತ್ತಿದ್ದರು. ಅನೇಕ ಸಲ ಒಪ್ಪತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತು. ಇಪ್ಪತ್ನಾಲ್ಕು ಗಂಟೆಯಲ್ಲಿ ಎರಡು ಕಪ್ ಚಹಾ, ಮಕ್ಕಳ ಪಾರ್ಕಿಗೆ ಹೋಗಿ ಎರಡು ಮೂಲಾಣೆ ಚೂರಮುರಿ ತಿಂದರಾಯಿತು. ಇದು ಪ್ರಭಾತ ಕುಮಾರದಾಸರಿಗೆ ಗೊತ್ತಾಯಿತು. ಒಂದು ಮಧ್ಯಾಹ್ನ ರಾಜೀವ ಬಂದಾಗ ರೂಮಿನಲ್ಲಿ ಮೂರು ತಾಟು ಇಟ್ಟು ಗಂಡ ಹೆಂಡತಿ ಕುಳಿತಿದ್ದರು. ರಾಜೀವರಿಗೆ ಸ್ವಾಭಿಮಾನ, ಸಂಕೋಚ. ಸಾಸಿವಿ ಎಣ್ಣೆ ಅಡಿಗೆ ನನಗೆ ಸೇರೊದಿಲ್ಲ. ನನಗೆ ವಾಂತಿ ಬರ್ತದ ಒಲ್ಲೆ. ವಾಂತೀ ಹೆದರಕಿ ತೋರತೀರಾ ವಾಂತಿ ಮಾಡಿಕೊಂಡ ಸರ್ತಿಗೊಮ್ಮೆ ಮತ್ತೊಂದು ತಾಟು ತಂದಿಡತೀವಿ. ಸಂಗೀತಕ್ಕಾಗಿ ಎಲ್ಲಾ ಬಿಟ್ಟು ಬಂದಿರುವ ನಿಮಗೆ ಈ ಭಿಡೆ ಯಾಕೆ. ನೀವು ಎಂದ ಊಟ ಮಾಡೊದಿಲ್ಲ ಅಂದ ನಮ್ಮಿಬ್ಬರಾಗ ಒಬ್ಬರು ಉಪವಾಸ ಇರತೀವಿ ಎಂದು ಆಣೆಯಿಟ್ಟರು. ಅಂದಿನಿಂದ ಊಟ, ತಿಂಡಿ ಅವರ ಮನೆಯಲ್ಲಿಯೇ, ಇಂದಿಗೂ ರಾಜೀವ ಬಂದರೆ ಆ ಮನೆಯಲ್ಲಿ ಸಂಭ್ರಮ.

“ಇವತ್ತು ನನ್ನ ಮನೆ, ನನ್ನ ಮಂದಿ ಎಲ್ಲಾ ಅವರೇ ಎಂದು ರಾಜೀವ ನೆನೆಯುತ್ತಾರೆ. ಕೆಲ ಸಮಾಯಾನಂತರ ಸೌಥ ಪಾಯಿಂಟ್‌ ಸ್ಕೂಲಿನಲ್ಲಿ ಶಿಕ್ಷಕ ನೌಕರಿ. ಕೊಂಚ ನೆಮ್ಮದಿ. ಮುಂದೆ ಚಲನಚಿತ್ರ ಪ್ರಸಿದ್ಧಿ ಪಡೆದ ಉತ್ಪಾಲ್‌ ದತ್‌ ಅಲ್ಲಿ ರಾಜೀವರ ಸಹೋದ್ಯೋಗಿ.

ಮೊದಮೊದಲು ಗುರುಗಳು ಏನನ್ನೂ ಕಲಿಸಲಿಲ್ಲ. ಶಿಷ್ಯ ಗಟ್ಟಿಯಾಗಿ ನಿಲ್ಲುವನೆಂಬ ಖಾತ್ರಿಯಾದ ಮೇಲೆ ಪಾಠ ಆರಂಭಿಸಿದರು. ದಿನಾಲು ೧೦ ರಿಂದ ೧೨ ತಾಸು ಪಲ್ಟಾ ಅಭ್ಯಾಸ. ಐದು ವರ್ಷ ಪರಿಶ್ರಮ. ಸರೋದ ತಂತ್ರ ಕರಗತ. ಪುನಃ ಅಧ್ಯಾಪಕ ವೃತ್ತಿ. ೧೯೬೦ರಲ್ಲಿ ಮೈಸೂರಿನ ಬನುಮಯ್ಯ ಕಾಲೇಜು, ೧೯೬೧ರಲ್ಲಿ ರಾಯಚೂರಿನ ಎಲ್‌.ವಿ.ಡಿ. ಕಾಲೇಜ್‌, ಯು.ಜಿ.ಸಿ. ಶಿಷ್ಯವೇತನ. ಇಮೇಜ್‌ ಇನ್‌ ದ ಪೊಯಿಟ್ರಿ ಆಫ್‌ ಟಿ.ಎಸ್‌.ಈಲಿಯಟ್‌. ಮಹಾ ಪ್ರಬಂಧಕ್ಕೆ ಪಿ.ಎಚ್‌ಡಿ ಪದವಿ. ೧೯೬೪ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿಗೆ ಸೇರ್ಪಡೆ. ಧಾರವಾಡದಲ್ಲಿದ್ದಾಗ ಒಂದು ಅವಿಸ್ಮರಣೀಯ ಪ್ರಸಂಗ. ಒಂದು ದಿನ ಮಲ್ಲಿಕಾರ್ಜುನ ಮನ್ಸೂರರು ಕರೆ ಕಳಿಸಿದರು. ಮನ್ಸೂರರಿಗೆ ಜ್ವರ. “ನನಗೆ ನಿಮ್ಮ ತಂದೆಯವರ ಮುಂದೆ ಹಾಡಬೇಕೆಂಬ ಹಂಬಲವಿತ್ತು. ಇದ್ದಕ್ಕಿದ್ದಂತೆ ಒಂದು ದಿನ ಅವರ ಮರಣ ವಾರ್ತೆ ಓದಿದೆ. ಅವರ ಮುಂದೆ ಹಾಡಲಾಗಲಿಲ್ಲವೆಂಬ ಕೊರಗು ಇಂದಿಗೂ ಉಳಿದಿದೆ. ನೀವು ಅವರ ಮಗ. ಸಂಗೀತಗಾರರೂ ಹೌದು. ಬರ್ರಿ‍ ನಿಮ್ಮ ಮುಂದೆಯ ಹಾಡಿ ಬಿಡತೀನಿ” ಎಂದು ಹಾಸಿಗೆ ಬಿಟ್ಟಿಳಿದು ಒಂದು ಗಂಟೆ ಸಂಗೀತಾನಂದದಲ್ಲಿ ಮುಳುಗಿಸಿದರು. ಧಾರವಾಡದ ನಂತರ ಮೈಸೂರಿನ ರೀಜನಲ್‌ ಕಾಲೇಜ್‌ ಆಫ್‌ ಎಜುಕೇಶನ್‌, ಹೈದರಾಬಾದಿನ ಸೆಂಠ್ರಲ್‌ ಇನ್ ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌. ಹೀಗೆ ಹಲವಾರು ಕಡೆ ವೃತ್ತಿನಿರತ ಕಳೆದ ೪೫ ವರ್ಷಗಳುದ್ದಕ್ಕೂ ದಿನಾಲು ತಾಸುಗಟ್ಟಲೆ ರಿಯಾಜ. ಜೊತೆಗೆ ವೃತ್ತಿಗಾಗಿ ಓದು. ಹೀಗಾಗಿ ,ಇಬ್ಬರು ಹೆಂಡಿರು. ಒಬ್ಬಳತ್ತ ಲಕ್ಷ್ಯವಿತ್ತರೆ ಇನ್ನೊಬ್ಬಳಿಗೆ ಅನ್ಯಾಯ. ೧೯೮೬ರಲ್ಲಿ ನೌಕರಿ ಬಿಟ್ಟು ಸರೋದವಾದನವನ್ನೆ ವೃತ್ತಿಯಾಗಿಸಿಕೊಂಡರು. ಸರೋದ ಎಂದೆಂದೂ ಅವರ ಪ್ರಥಮ ಪ್ರೇಮ.

ನೌಕರಿ ಬಿಟ್ಟು ಸರೋದದ ಮೇಲೆ ಗಮನ ಕೇಂದ್ರೀಕರಿಸುವಂತೆ ರವಿಶಂಕರರ ಒತ್ತಾಸೆಯೂ ಇತ್ತು. ೧೯೮೧ರಲ್ಲಿ ರಾಝೀವ ಹೈದರಾಬಾದಿನಲ್ಲಿದ್ದಾಗ ಅಲ್ಲಿಗೆ ಬಂದಿದ್ದ ರವಿ ಶಂಕರನ್ನು ಹೋಟೆಲ್‌ ಸರೋವರದಲ್ಲಿ ಕಂಡರು. ರವಿಶಂಕರರಿಗೆ ರಾಜೀವ ತಾರಾನಾಥರ ಬಗೆಗೆ ಪ್ರೀತಿ ಕಳಕಳಿ. ಇಂಗ್ಲಿಷ್‌ ಯಾಕೆ ಕಲಿಸ್ತೀಯ ಅದನ್ನು ಮಾಡಲು ಸಾಕಷ್ಟು ಜನರಿದ್ದಾರೆ. ನಿನ್ನಂತೆ ಸರೋದ ನುಡಿಸುವವರು ಕೆಲವರು ಮಾತ್ರ. ನೌಕರಿ ಬಿಡು. ಗುರುಗಳ ಬಳಿಗೆ ಹೋಗ ಎಂದಿದ್ದರು. ಮತ್ತೊಮ್ಮೆ ಬೆಂಗಳೂರಿಗೆ ಬಂದಾಗ ತಮ್ಮ ಮುಂದೆ ಸರೋದ ನುಡಿಸಲು ಹೇಳಿಕಳಿಸಿದರು. “ನನ್ನ ಮನಸ್ಥಿತಿ ಸರಿಯಿಲ್ಲ, ನುಡಿಸುವ ಮೂಡ್‌ ಇಲ್ಲ”. ಎಂದಾಗ “ಅದೆಲ್ಲ ಬಿಡು. ಮೂಡ್‌ ಇಲ್ಲದಿರುವುದು ಕಲಾವಿದರಿಗಲ್ಲದೆ ಇನ್ನಾರಿಗೆ ನಾನು ಹಾಡಿದಂತೆ ನುಡಿಸುತ್ತ ಹೋಗು” ರವಿಶಂಕರ ವಸಂತರಾಗ ಹಾಡುತ್ತ ಸಾಗಿದರು. ಅಂದಂತೆ ಅದು ವಸಂತ ಪಂಚಮಿ ದಿನವೂ ಆಗಿತ್ತು. ರಾಜೀವರಿಗೆ ರಾಗತ ಹೊಸದು. ಮೊದಲ ಮೀಂಟಿನಲ್ಲಿಯೇ ಸ್ವರ ಜಾರಿತು. ಪುನಃ ಸರಿಯಾಗಿ ನುಡಿಸಿದರು. ರವಿಶಂಕರ ವಾಹ್‌ ಎಂದರು. ನಲವತ್ತು ನಿಮಿಷ ರವಿಶಂಕರ ಹಾಡುವುದನ್ನು ರಾಜೀವ ಕಣ್ಣು ಮುಚ್ಚಿಕೊಂಡು ಸರೋದದಲ್ಲಿ ಅನುಸರಿಸಿದರು. “ಸಾಕು ಇವತ್ತು. ನೀನು ಕೋಲ್ಕತ್ತಾಗೆ ಬಾ, ಸಪಾಟ ತಾನಗಳನ್ನು ಕಲಿಸುವೆ. ಏಕೆ, ಬೆಂಗಳೂರಿನ ಮರಗಳು ನಿನ್ನನ್ನು ಬಿಡುತ್ತಿಲ್ಲವೇನು”?, ಅಂದಿನಿಂದ ರಾಝೀವ ಸಪಾಟ ತಾನಗಳನ್ನು ಕರಗತ ಮಾಡಿಕೊಂಡರು. ಅಲಿ ಅಕಬರ ಖಾನರ ತಂಗಿ ಅನ್ನಪೂರ್ಣಾ ಅವರಿಂದಲೂ ರಾಜೀವ ಮಾರ್ಗದರ್ಶನ ಪಡೆಯುತ್ತಿದರು. ಅವರ ಪಾಲಿಗೆ ಅಲಿ ಅಕಬರ ಖಾನ, ರವಿಶಂಕರ, ಅನ್ನಪೂರ್ಣ ಸಂಗೀತದ ತ್ರಿಮೂರ್ತಿಗಳು. ಅವರ ಆಶೀರ್ವಾದದ ದಿವ್ಯಕಾಂತಿಯಲ್ಲಿ ಸಾಧನೆಗೈಯುತ್ತಿರುವುದು ತಮ್ಮ ಸೌಭಾಗ್ಯವೆಂದೇ ರಾಜೀವರ ಭಾವನೆ.

ರಾಜೀವ ತಾರಾನಾಥ ದೇಶಾದ್ಯಂತ ಕಚೇರಿಗಳನ್ನು ನೀಡಿದ್ದಾರೆ. ಕೋಲ್ಕತಾದ ಅಖಿಲ ಭಾರತ ಸಂಗೀತೋತ್ಸವ, ಮುಂಬಯಿಯ ಭಾತಖಂಡೆ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವ, ಗ್ವಾಲಿಯರದ ತಾನಸೇನ ಸಮಾರೋಹ ಮೊದಲಾದೆಡೆ ಸರೋದ ನುಡಿಸಿ ಸೈ ಎನಿಸಿಕೊಂಡಿರುವರು.

ಅಪ್ರತಿಮ ಅಲಿ ಅಕಬರ ಖಾನರ ಚಳಕವನ್ನು ತನ್ನ ಪ್ರತಿಯೊಂದು ಮೀಂಟು, ಸೂಕ್ಷ್ಮಾಂಶ, ನಾದ ಮತ್ತು ತಂತ್ರಗಳಲ್ಲಿ ಅಭಿವ್ಯಕ್ತಿಸಬಲ್ಲ ಕಲಾಭಿಜ್ಞತೆ ಆಲಿ ಅಕಬರ ಖಾನರ ಪಡಿಯಚ್ಚು ಎಂದೇ ಪರಿಗಣಿಸಲ್ಪಡುವರು. ರಾಜೀವ ತಾರಾನಾಥರು ಅಲಿ ಅಕಬರ ಖಾನರ ಮಕ್ಕಳಾದ ಆಶಿಶ ಅಥವಾ ಧ್ಯಾನೇಶರಿಗಿಂತ ಹೆಚ್ಚಾಗಿಯೆ ಗುರುವಿನ ವರ್ಣಿಸಲಸದಳ ಮಾಂತ್ರಿಕತೆಯನ್ನು ಸೆರೆಹಿಡಿಯಬಲ್ಲವರೆಂಬುದು ಖಚಿತ.

ಒಬ್ಬ ಯುವ ಸರೋದ ನಿಪುಣ ಎಲ್ಲಕ್ಕೂ ಮಿಗಿಲಾಗಿ ಆಲಿ ಅಕಬರ ಖಾನರ ಶೈಲಿಯಲ್ಲಿ ನುಡಿಸುವುದು ಕಡಿಮೆ ಮಹತ್ವದ ಮಾತೇನಲ್ಲ. ಏಕೆಂದರೆ, ಅಲಿ ಅಕಬರಖಾನರ ನಿಗೂಢ, ತೀವ್ರ ಕಲ್ಪಕತೆ ಮತ್ತು ಅದು ನಿರ್ಮಿಸುವ ಅಲೌಕಿಕ ಸ್ವರ ವಿನ್ಯಾಸವನ್ನು ಯಾರು ತಾನೆ ಸರಿಗಟ್ಟಿಯಾರು”. ಅವರ ಸಂಗೀತದೆಳೆಗಳು ಸರಳವಾಗಿರದೆ ಪ್ರತಿಯೊಂದು ಅಂಗವನ್ನು ಹುರಿಗೊಳಿಸುತ್ತವೆ. ಒಬ್ಬ ಯುವಕ ಅವುಗಳ ಆಳವನ್ನು ತನ್ನ ಸಂಗೀತದಲ್ಲಿ ಅಳವಡಿಸುವುದು, ನನಗೆನಿಸಿದಂತೆ, ಅವನ ಕೈಯೊಳಗಿನ ಬುದ್ಧಿ ಮನಸ್ಸುಗಳ ಅಗ್ಗಳಿಕೆ. ಪ್ರಸ್ತುತ ಕಲಾವಿದನು ಅಲಿ ಅಕಬರ ಖಾನರ ಅದ್ಭುತ ಸೃಷ್ಟಿಯಾದ ಚಂದ್ರನಂದನ ರಾಗದಲ್ಲಿಯ ಗಾಂಧಾರ ಸ್ವರದ ಪುರುಷ ಮತ್ತು ಸ್ತ್ರೀ ರೂಪಗಳ ಮಧ್ಯೆ ತುಯ್ದಾಡುವ ರೋಮಾಂಚಕತೆಯನ್ನು ಬೀರುವಲ್ಲಿ ರಾಜೀವ ಯಶಸ್ಸು ಕಂಡರು. ನೆಲವನ್ನಪ್ಪಿಕೊಳ್ಳುವ ಮಗ ಸಂಗತಿಯಂತೂ ಅಲಿ ಅಕಬರ ಖಾನರ ವಾದನದಲ್ಲಿರುವಂತೆಯೇ ಉದ್ದೀಪಕವಾಗಿತ್ತು. ಪ್ರಸ್ತುತಿಯ ಮಟ್ಟವನ್ನು ಉನ್ನತಿಸಿದ್ದು ರಾಜೀವರ ಜಾಣ್ಮೆ ಮಾತ್ರವಾಗಿರದೆ ಸಂಸ್ಕಾರದಲ್ಲದ್ದಿ ತೆಗೆದ ಕಾಲಭಿರುಚಿಯ ಮಾರ್ಗವೆಂದೇ ಹೇಳಬೇಕು. ಎಂದು ಇಕನಾಮಿಕ್‌ ಟೈಮ್ಸ್‌, ಅಕ್ಟೋಬರ್ ೮, ೧೯೮೯ರ ಸಂಚಿಕೆಯಲ್ಲಿ ರಾಜೀವರ ಸರೋದ ವಾದನ ಕುರಿತು ಬರೆದಿದೆ.

ಯಾವುದನ್ನೂ ಸುಲಭವಾಗಿ ಮೆಚ್ಚದ ವಿಮರ್ಶಕನಿಂದ ಸಂದ ಇದು ನಿಜಕ್ಕೂ ದೊಡ್ಡ ಶ್ಲಾಘನೆ. ಇಂಥದೇ ಶ್ಲಾಘನೆ ತಬಲಾ ಮಾಂತ್ರಿಕ ಉಸ್ತಾದ ಝಾಕಿರ್ ಹುಸೇನರಿಂದ. “ತಮ್ಮ ಉಸ್ತಾದರ ಕಲಾತ್ಮಕತೆಗೆ ರಾಜೀವ ತಾರಾನಾಥರದು ಅತ್ಯಂತ ನಿಕಟವಾದುದೆಂದು ನಾನು ಹೇಳಬಯಸುವೆ.” ಅಗದಿ ಅಲಿ ಅಕಬರಿಯಂತಿರುವ ಎರಡು ಸಂಗತಿಗಳು ರಾಜೀವರ ಶೈಲಿಯಲ್ಲಿ ಎದ್ದು ಕಾಣುತ್ತವೆ. ಒಂದು ಅವರ ಕಲಾತ್ಮಕ ದೃಷ್ಟಿ, ಇನ್ನೊಂದು ಬೌದ್ಧಿಕ ಕುಶಲತೆ. ರೇಡಿಯೋದಿಂದ ಸರೋದ ನುಡಿಯುತ್ತಿದ್ದರೆ ಇಬ್ಬರಲ್ಲಿ ಯಾರು ನುಡಿಸುತ್ತಿದ್ದಾರೆಂದು-ಉಸ್ತಾದ ಅಲಿ ಅಕಬರ ಖಾನರೊ ಯಾ ರಾಜೀವ ತಾರಾನಾಥರೊ-ಹೇಳುವುದು ಕಷ್ಟಕರ.

ಇದು ಸಂಡೆ ಹೆರಾಲ್ಡ್‌, ಪತ್ರಿಕೆಯಲ್ಲಿನ ಬರಹ!(೧೯೮೬)

೧೯೭೪ರಲ್ಲಿ ಆಸ್ಟ್ರೇಲಿಯಾ ಪ್ರವಾಸ, ಸಿಡ್ನಿ, ಮೆಲ್ಬೋರ್ನ್, ಅಡಿಲೇಡ್‌, ಕ್ಯಾನ್ ಬೆರಾಗಳಲ್ಲಿ ಕಚೇರಿ, ಸಿಡ್ನಿಯಾ ಅಪೆರಾ ಹೌಸ್‌ನಲ್ಲಿ ಶಾಸ್ತ್ರೀಯ ಸಂಗೀತ ಕಚೇರಿ ನೀಡಿದ ಪ್ರಥಮ ಭಾರತೀಯ. ಅದು ವರ್ಷಾನುಗಟ್ಟಲೆ ಮುಂಚಿತವಾಗಿ ಬುಕ್‌ ಆಗಿರುತ್ತದೆ. ರಾಝೀವ ತಾರಾನಾಥರ ಆ ಕಚೇರಿಯನ್ನು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್‌ ಕಂಪನಿ ಕೊಂಡುಕೊಂಡಿತು. ೧೯೮೨ರಲ್ಲಿ ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಹುದ್ದೆ.

ಇದೆಲ್ಲಕ್ಕೂ ಕಳಸವಿಟ್ಟಂತೆ ಸ್ವತಃ ಗುರುಗಳಿಂದಲೆ ಪ್ರಶಂಸೆ. ೧೯೮೨ರಲ್ಲಿ ಪೆನ್‌ಸಿಲ್ವೇನಿಯಾ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋದಾಗ ನ್ಯೂಯಾರ್ಕ್‌,ಚಿಕಾಗೋ, ಮ್ಯಾಡಿಸನ್‌, ಬ್ಯಾಲ್ಟಿಮೋರ್ ಗಳಲ್ಲಿ ಕಚೇರಿ. ಅಲಿ ಅಕಬರ ಅಕಾಡೆಮಿಯಲ್ಲಿ ಗುರುಗಳ ದರ್ಶನ. ಗುರುಗಳು ಶಿಷ್ಯನ ಟೇಪ್‌ ಆಲಿಸಿದ್ದರು. ಅತ್ಯಂತ ಸಂತಸ. ಈಗ ನೀನು ನನ್ನಂಗ ಬಾರಿಸತೀ. ಭಾರತದಲ್ಲಿ ನನ್ನೊಂದಿಗೆ ಬಾರಿಸುವಿಯಂತೆ. ೧೯೮೩ರಲ್ಲಿ ಬೆಂಗಳೂರು ಮತ್ತು ಮಂಗಳೂರುಗಳಲ್ಲಿ ಗುರುಗಳೊಂದಿಗೆ ಸಹವಾದನ. “ಅಚ್ಛಾ ಬಜಾ ರಹಾ ಹೈ. ಉನ ಕಾ ಮೈಕ್‌ ಔರ್ ಬಢಾವೊ”, ಗುರುಗಳ ಮೆಚ್ಚಿಕೆ. ಗುರುಗಳೊಂದಿಗೆ ಬಾರಿಸಿದ ಪ್ರಥಮ ಶಿಷ್ಯ ಎಂಬ ವಿಕ್ರಮ. ಹೊಸ ಸಂಪ್ರದಾಯ, ಸ್ವತಃ ಗುರುಪುತ್ರರಿಗೂ ದೊರೆಯದ ಭಾಗ್ಯ. ೧೯೮೦ರಲ್ಲಿ ಏಡನ್‌(ಅರೇಬಿಯಾ), ಟೆಲಿವಿಜನ್‌ ಸಂಸ್ಥೆ ರಾಜೀವ ತಾರಾನಾಥರ ಕುರಿತು ಫಿನಾನ್‌ ಮಿನ್‌ ಅಲ್‌ ಹಿಂದ್‌ (ಭಾರತದ ಕಲಾವಿದ) ಎಂಬ ಸಾಕ್ಷ್ಯಚಿತ್ರ ತಯಾರಿಸಿತು. ಏತನ್ಮಧ್ಯೆ ಪುಣೆಯ ಫಿಲ್ಮ್‌ ಇನ್ ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷ ಸಂಗೀತ ಪ್ರಾಧ್ಯಾಪಕ. ಈಗಲೂ ಸಂದರ್ಶಕ ಪ್ರಾಧ್ಯಾಪಕ. ಹಲವಾರು ವರ್ಷಗಳಿಂದ ಅಮೆರಿಕೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂಗೀತ ಪ್ರಾಧ್ಯಾಪಕರಾಗಿರುವರು.

ರಾಜೀವ ತಾರಾನಾಥರದು ಚಲನಚಿತ್ರ ಸಂಗೀತ ನಿರ್ದೇಶನದಲ್ಲೂ ಗಣನೀಯ ಸಾಧನೆ. ಕೆಲವು ಬಪಂಗಾಲಿ ಚಲನಚಿತ್ರಗಳ ಸಂಗೀತ ನಿರ್ದೇಶನದಲ್ಲಿ ಗುರುಗಳಿಗೆ ನೆರವು. ಸಾರ್ಥಕ ಅನುಭವ. ೧೯೭೦ರಲ್ಲಿ ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯಾಧಾರಿತ ಅದೇ ಹೆಸರಿನ ಕನ್ನಡ ಚಲನಚಿತ್ರಕ್ಕೆ ರಾಜೀವ ತಾರಾನಾಥ ಸಂಗೀತ ನಿರ್ದೇಶಿಸಿದರು. ಅದು ಫಿಲ್ಮ್ ಸಂಗೀತದ ಹೊಸ ಶೈಲಿಗೆ ನಾಂದಿಯಾಯಿತು. ೧೯೭೧ರಲ್ಲಿ ಲಂಕೇಶರ ಪಲ್ಲವಿ ಚಿತ್ರದ ಸಂಗೀತ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ. ೧೯೭೮ರಲ್‌ಇ ಮಲಯಾಳಿ ಕಾಂಚನಸೀತಾ ಚಿತ್ರದ ಸಂಗೀತದ ನಿರ್ದೇಶನ. ೧೯೮೨ರಲ್ಲಿ ಇಂಗ್ಲಿಷ್‌ ಮತ್ತು ಕನ್ನಡ ಎರಡರಲ್ಲೂ ಹೊರಬಂದ ಪೇಪರ್ ಬೋಟ್ಸ್‌ ಚಿತ್ರದ ಸಂಗೀತ ನಿರ್ದೇಶನಕ್ಕೆ ಕರ್ನಾಟಕ ರಾಜ್ಯ ಬಹುಮಾನ. ಸುರೇಶ್‌ ಹೆಬ್ಳೀಕರರ ಬಂತಿದೊ ಶೃಂಗಾರ ಮಾಸ ಕನ್ನಡ ಚಿತ್ರದ ಸಂಗೀತ ನಿರ್ದೇಶನ. ಶೀರ್ಷಿಕೆ ಗೀತೆ ಸ್ವತಃ ಹಾಡಿದರು. ಅದಕ್ಕೆ “ಅತ್ಯುತ್ತಮ ಹಾಡು” ಪ್ರಶಸ್ತಿ ಬಂತು. ೧೯೯೧ರಲ್ಲಿ ಎಂ.ಟಿ. ವಾಸುದೇವನ್‌ ನಾಯರ್ ನಿರ್ಮಿಸಿದ ಕಡವು ಮಲಯಾಳಿ ಚಿತ್ರದ ಸಂಗೀತ ನಿರ್ದೇಶನ. ಸಿಂಗಾಪುರದಲ್ಲಿ ಜರುಗಿದ ಏಶಿಯಾ ಚಲನಚಿತ್ರೋತ್ಸವದಲ್ಲಿ ಅದಕ್ಕೆ ಶ್ರೇಷ್ಠ ಸಂಗೀತ ನಿರ್ದೇಶನ ಪ್ರಶಸ್ತಿ.

ರಾಜೀವ ತಾರಾನಾಥರ ಸಂಗೀತ ಸಾಧನೆಗೆ ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ ಪ್ರಶಸ್ತಿ, ೧೯೯೧. ವಾದ್ಯ ಸಂಗೀತಕ್ಕೆ ರಾಷ್ಟ್ರ ಮಟ್ಟದ ಟಿ. ಚೌಡಯ್ಯ ಪ್ರಶಸ್ತಿ ೧೯೯೮ ಇತ್ಯಾದಿ.