೨೮೭, ಪಶ್ಚಿಮ ಕಾರ್ಡ್ ರಸ್ತೆ,
ಬೆಂಗಳೂರು – ೫೬೦ ೦೮೬.
ಮೊಬೈಲ್ : ೯೯೮೦೦ ೬೬೦೭೦

ಹಾಸನ ಜಿಲ್ಲೆಯ ಹೊಸಹಳ್ಳಿಯವರಾದ ಡಾ|| ರಾಜೇಗೌಡ ಜಾನಪದದ ವಿದ್ವಾಂಸರು. ಸಂಶೋಧನೆಯ ಆಸಕ್ತಿ ಬೆಳೆಸಿಕೊಂಡು ಜಂಗಮವಾಗಿ ತಿರುಗಿದವರು.

ಸರ್ಕಾರಿ ಉದ್ಯೋಗದಲ್ಲಿದ್ದರೂ ಪ್ರವೃತ್ತಿಯನ್ನು ತಿದ್ದಿ-ತೀಡಿ ಜಾನಪದ ಸಾಹಿತ್ಯಕ್ಕೆ ಕೊಡುಗೆ ನೀಡಿದವರು. ಸತ್ಯಭೋಜರಾಜ ಎಂಬ ಕಥನ ಗೀತೆ, ‘ಮಗನ ತಿಂದ ಮಾರಾಯನ ದುರ್ಗ’ ಲೇಖನಗಳ ಸಂಪುಟ, ‘ಕೋಳಿ ಮತ್ತು ತುಳಸಿಕಟ್ಟೆ’ ಸಣ್ಣ ಕಥೆಗಳ ಗುಚ್ಛ ಅವರ ಸಾಹಿತ್ಯ ಸೃಷ್ಟಿಯ ಮೈಲಿಗಲ್ಲುಗಳಾಗಿವೆ.

ಜಾನಪದ ವೈಚಾರಿಕ ಲೇಖನಗಳು, ಮಹಾಪ್ರಬಂಧ ಜೊತೆಗೆ ಕಾನೂನು ಪುಸ್ತಕವನ್ನೂ ನೀಡಿ ತಮ್ಮ ವೃತ್ತಿ ಬದುಕಿನ ಸಾಹಸವನ್ನು ಜನಸಾಮಾನ್ಯರಿಗೆ ಒದಗಿಸಿದ್ದಾರೆ.

ಇಂತಹ ಅಪರೂಪದ ವ್ಯಕ್ತಿತ್ವಕ್ಕೆ ಅಕಾಡೆಮಿ ತನ್ನ ಪುರಸ್ಕಾರ-ಅಭಿನಂದನೆ ತೋರಿದೆ.