ಮಹಾ ವಹೋಪಾಧ್ಯಾಯ ಡಾ.ರಾ. ಸತ್ಯನಾರಾಯಣ “ಭಾರತೀಯ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಅಂತರ ರಾಷ್ಟ್ರೀಯ ಕೀರ್ತಿಗೆ ಪಾತ್ರರಾದವರು. ಭೌತವಿಜ್ಞಾನ ಮತ್ತು ಪುರಾತತ್ವ ಶಾಸ್ತ್ರಗಳ ಲ್ಲಿ ಆಳವಾದ ಪ್ರಥಮ ದರ್ಜೆಯ ಪಾಂಡಿತ್ಯ ಇವರದು. ಸಂಗೀತ ಮತ್ತು ನೃತ್ಯ ಕ್ಷೇತ್ರದ ಸಂಶೋಧನಾ ವಿಧಿ-ವಿಧಾನಗಳಲ್ಲಿ ಮತ್ತು ಅಂತರಶಾಸ್ತ್ರೀಯ ಅಧ್ಯಯನಗಳಲ್ಲಿ ತಮ್ಮ ಅಪಾರ ಪರಿಶ್ರಮದಿಂದ ಬಹುದೊಡ್ಡ ಹೆಸರನ್ನು ಪಡೆದಿದ್ದಾರೆ. ಈ ವಿವಿಧ ಕ್ಷೇತ್ರಗಳಲ್ಲಿ ಇವರು ಪಡೆದಿರುವ ಪ್ರಶಸ್ತಿ-ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಗಾಯನ, ಸಂಶೋಧನ, ಅಧ್ಯಾಪನ, ಪ್ರಯೋಗ ಪ್ರಕ್ರಿಯೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ರಾ. ಸತ್ಯನಾರಾಯಣ ಅವರು ಕರ್ನಾಟಕ ಹೆಮ್ಮ ಪಡುವ ಮಹಾ ವಿದ್ವಾಂಸರಲ್ಲಿ ಒಬ್ಬರು. ಇವರ ಅಸಾಧಾರಣ ಪಾಂಡಿತ್ಯ, ನಿರೂಪಣಾವೈಶಿಷ್ಟ್ಯ, ಸಂಶೋಧನಾ ವಿದಗ್ಧತೆ, ವೈಚಾರಿಕ ಒಳನೋಟಗಳು, ಪರಂಪರೆಯ ಅಪಾರ ಅರಿವಿನೊಡನೆ ಬೆರೆತಿರುವ ಪ್ರಯೋಗಶೀಲ ವೈಜ್ಞಾನಿಕ ಮನೋಧರ್ಮ, ದಣಿವರಿಯದ ದುಡಿಮೆ, ಸದಾ ಹೊಸದನ್ನು ಅನ್ವೇಷಿಸುವ ವಿಶಿಷ್ಟ ಪ್ರವೃತ್ತಿ, ಸಂಗೀತದ ಮೇಲೆ ಎಂತೋ ಭಾಷೆಯ ಮೇಲೂ ಅಂತೆಯೇ ಪಡೆದಿರುವ ಅಸಾಧಾರಣ ಪ್ರಭುತ್ವ, ಸಂಗೀತಶಾಸ್ತ್ರದಂಥ ಕ್ಲಿಷ್ಟ ವಿಷಯವನ್ನು ಸರಳವಾಗಿ, ಆಕರ್ಷಕವಾಗಿ, ಚೇತೋಹಾರಿಯಾಗಿ ನಮ್ಮೆದುರು ಕಡೆದು ನಿಲ್ಲಿಸುವ ಪ್ರಸನ್ನಮಧುರಶೈಲಿ….”

ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾಗಿರುವ ಡಾ.ಎಚ್‌.ಜೆ. ಲಕ್ಕಪ್ಪ ಗೌಡರು ಡಾ. ರಾ. ಸ.ರವರ ಕರ್ನಾಟಕ ಸಂಗೀತವಾಹಿನಿಯ ಮುನ್ನುಡಿಯಲ್ಲಿ ಬರೆದಿರುವ ನುಡಿ ಮುತ್ತುಗಳು. ಸಂಗೀತ ಕುಟುಂಬದಿಂದ ಬಂದವರಾಗಿ ಸಂಗೀತ ಅವರಿಗೆ ರಕ್ತಗತವಾದ ಬಳುವಳಿಯಾದರೂ ಹತ್ತು ಹಲವು ರಂಗಗಳಲ್ಲಿ ಅವರು ಮಾಡಿರುವ ಸಾಧನೆಗಳಲ್ಲಿನ ಹಲ ಕೆಲವನ್ನಷ್ಟೇ ಇಲ್ಲಿ ಉಲ್ಲೇಖಿಸಲಾಗಿದೆ. ಏಕೆಂದರೆ ಎಪ್ಪತ್ತಾರು ವರ್ಷಗಳಿಂದ ನಿರಂತರ ಸಾಧನೆಯಲ್ಲಿರುವ ಆ ಸಾಧಕರ ‘ಮರ್ತ್ಸಲೀಲೆ’ಯಲ್ಲಿ ಏನನ್ನ ಹೇಳಲು ಸಾಧ್ಯ?

ಸ್ತಂಭಗಳ ಮರೆಯಲ್ಲಿ: ಸದ್ಗುರು ತ್ಯಾಗರಾಜರ ನೇರ ಶಿಷ್ಯ ಪರಂಪರೆಗೆ ಸೇರಿದ ಮನೆತನಗಳಲ್ಲಿ ಪಲ್ಲವಿ ರಾಮಲಿಂಗಯ್ಯನವರ ಪರಂಪರೆಯೂ ಒಂದು. ರಾಮಲಿಂಗಯ್ಯನವರು ಮಾನಂಬುಚಾವಡಿ ವೆಂಕಟ ಸುಬ್ಬಯ್ಯನವರ ಶಿಷ್ಯರು. ಅವರ ಮಕ್ಕಳಾದ ರಾಮಯ್ಯನವರೂ ಸಂಗೀತಗಾರರು. ಅವರ ಪತ್ನಿ ಶ್ರೀಮತಿ ವರಲಕ್ಷ್ಮಮ್ಮನವರು ಆಸ್ಥಾನ ವಿದ್ವಾನ್‌ ವೀಣೆ ಸುಂದರ ಶಾಸ್ತ್ರಿಗಳ ಶಿಷ್ಯರು. ಇಂತಹ ಮನೆತನದಲ್ಲಿ ತಾ.೯.೫.೧೯೨೭ರಲ್ಲಿ ಜನಿಸಿದ ಸತ್ಯನಾರಾಯಣರಿಗೆ ಸಂಗೀತದ ಬಗ್ಗೆ ಒಲವು ಮೂಡಿರಬಹುದಾದ್ದು ಸಹಜವೇ. ಅಣ್ಣಂದಿರಾದ ವಿದ್ವಾನ್‌ ರಾ. ಚಂದ್ರಶೇಖರಯ್ಯನವರು ಹಾಗೂ ವಿದ್ವಾನ್‌ ರಾ. ಸೀತಾರಾಮ್‌ರವರು ಮೈಸೂರು ಸಹೋದರರೆಂದು ಗಾಯನದಲ್ಲಿ ಖ್ಯಾತರಾಗಿದ್ದವರು. ತಮ್ಮಂದಿರಾದ ವಿದ್ವಾನ್‌ ರಾ. ವಿಶ್ವೇಶ್ವರನ್‌, ವೀಣೆಯಲ್ಲಿ ಸುಪ್ರಸಿದ್ಧರಾದವರು. ಇಂತಹ ರಕ್ತದ ಬಲವೇ ಇರಬೇಕು, ಇಂದಿಗೂ ರಾ.ಸ.ರವರ ಕುಟುಂಬವರ್ಗದಲ್ಲಿ ಮಗ-ಗಾಯಕ, ಪತ್ನಿ-ಗಾಯಕಿ, ಸೊಸೆ-ನೃತ್ಯಗಾರ್ತಿ, ಮಗಳು-ಗಾಯಕಿ, ಅಳಿಯ-ಪಿಟೀಲುವಾದಕರು-ಮೊಮ್ಮಕ್ಕಳು-ಗಾಯಕಿಯರು, ಅಕ್ಕ, ಅಕ್ಕನ ಮಗ, ಅಣ್ಣ ತಮ್ಮಂದಿರ ಮಕ್ಕಳೆಲ್ಲರೂ ಸಂಗೀತವನ್ನು ಬಲ್ಲವರೇ. ಈ ದೃಷ್ಟಿಯಿಂದ ಅವರದ್ದು ಬಹು ಸ್ವಾರಸ್ಯಯುತವಾದ ಸಾರಸ್ವತ ಕುಟುಂಬ.

ಡಾ. ರಾ.ಸ. ರವರನ್ನು ಅವರ ಬಾಲ್ಯದ ಬಗ್ಗೆ ಕೇಳಿದಾಗ ದೊರೆತ ವಿವರಣೆಗಳಿಂದ ನಮಗೆ ಕಾಣಬರುವ ಬಾಲಕ, ಶಾಲೆಗೆ ಹೋಗಲು ಹಟಮಾಡುವ, ಅಕ್ಕ ಸುಬ್ಬಲಕ್ಷ್ಮಮ್ಮನ ಕೈಯಲ್ಲಿ ಏಟು ತಿಂದು, ಅವರಿಂದ ಎಳೆಸಿಕೊಂಡು ಸ್ಕೂಲಿಗೆ ಲೇಟಾಗಿ ಹೋಗುವ ‘ಚಿನ್ನು’. ಮೈಸೂರಿನ‘ಅಲ್ಲಿಖಾನ್‌ ಸ್ಕೂಲು’ ಟಿಪ್ಪುವಿನ ಮರಿಮಗನಾದ ಅಲ್ಲಿಖಾನನಿಂದ ಸ್ಥಾಪಿತವಾದದ್ದು. ಅಲ್ಲಿ ಹಿಂದೂಗಳಿಗೆ, ಮುಸ್ಲಿಮರಿಗೆ ಪ್ರತ್ಯೇಕ ವಿಭಾಗಗಳು. ಅದು ಕಂಬಗಳ ಶಾಲೆಯೆಂದೇ ಪ್ರಖ್ಯಾತವಾದಷ್ಟು ಕಂಬಗಳನ್ನು ಹೊಂದಿದಂಥದ್ದು. ಶಾಲೆಗೆ ಹೋಗಲು ಹಟಮಾಡಿ, ಆಸ್ತಂಭಗಳ ಮರೆಯಲ್ಲಿ ನಿಂತು ಬಚ್ಚಿಟ್ಟುಕೊಳ್ಳುವುದನ್ನು ಮಾಡುತ್ತಿದ್ದರೂ ವಿಧಿಯಿಲ್ಲದೆ ಹೋದ ತರಗತಿಯಲ್ಲಿ ತಾನೇ ಮೊದಲು. ಮೂರನೇ ಕ್ಲಾಸು ಬೇಡವೆಂದು ನಾಲ್ಕನೇ ಕ್ಲಾಸಿಗೆ ‘ಡಬಲ್‌ ಪ್ರಮೋಷನ್‌’ ಕೊಡುವಷ್ಟು ಮಟ್ಟಿಗಿನ ಓದಿನ ಜಾಣ್ಮೆ.

ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬನುಮಯ್ಯ ಶಾಲೆಯಲ್ಲಿ. ೧೯೪೦ ರಲ್ಲಿ ಎಲ್‌.ಎಸ್‌. ಪರೀಕ್ಷೆ ಕಟ್ಟಲು ಹಣವಿಲ್ಲದಷ್ಟು ಬಡತನ ಬೇರೆ. ನರಸಪ್ಪನವರೆಂಬ ಬಯಾಲಜಿ ಮೇಷ್ಟ್ರು ತಾವೇ ಇವರ ಪರವಾಗಿ ಐದು ರೂಪಾಯಿ ಫೀಜು ತುಂಬಿದರು. ಯಥಾಪ್ರಕಾರ ತರಗತಿಯಲ್ಲಿ ಮೊದಲ ರ‍್ಯಾಂಕ್. ಶಾಲೆಯ ಸ್ಥಾಪಕರ ದಿನಾಚರಣೆ ಯಂದು ಪ್ರತಿವರ್ಷವೂ ಒಂದಷ್ಟು ಬಹುಮಾನಗಳು ಕಟ್ಟಿಟ್ಟ ಬುತ್ತಿ. ಅರಮನೆಯ ಸ್ಕಾಲರ್ ಶಿಪ್‌, ಜನರಲ್‌ ಮೆರಿಟ್‌ ಸ್ಕಾಲರ್ ಶಿಪ್‌ಗಳಲ್ಲೇ ಶಾಲೆಯ ಶಿಕ್ಷಣ. ಪರೀಕ್ಷೆಯಲ್ಲಿ ಬರೆದ ಉತ್ತರಗಳಲ್ಲಿ ಎಲ್ಲರ ಉತ್ತರಗಳಿಗಿಂತ ಭಿನ್ನವಾದ ಪ್ರಯೋಗಗಳನ್ನು ಕಲಾವಿದರ ತಾದಾತ್ಮ್ಯ, ಅನುಭವ, ಜ್ಞಾನ ಇವು ಶ್ರೋತೃಗಳನ್ನು ಭಕ್ತಿ ಪರವಶರನ್ನಾಗಿಸಿ ಪರಮಾನಂದದ ಕಡಲಲ್ಲಿ ಮೀಯಿಸುತ್ತದೆ. ಗಮಕ ರಹಿತ ಸರಳಮಾದರಿಯ, ದ್ರುತ ಕಾಲದ ಆಕರ್ಷಣೆಯೊಂದಿಗೆ ಕೃತಕ ಮೀಟು ತಂತ್ರಗಳನ್ನು ಬಳಸಿ ಆ ವೈಖರಿಯಿಂದ ಶ್ರೋತೃಗಳ ಚಪ್ಪಾಳೆ ಗಿಟ್ಟಿಸುವ ವಾದನ ಇವರದಲ್ಲ. ಇವರದು ಅಪ್ಟಟ ಶಾಸ್ತ್ರೀಯ ಪರಂಪರೆಯ, ಸ್ವರ ಸೂಕ್ಷ್ಮತೆ, ಗಮಕ ಸೂಕ್ಷ್ಮತೆ, ಭಾವ ಸೂಕ್ಷ್ಮತೆಗಳುಳ್ಳ ರಸಾಭಿಜ್ಞರನ್ನು ಪರಂಪರಾಭಿಮಾನಿಗಳನ್ನು ಸೆಳೆಯುವ ತಣಿಸುವ ದಿವ್ಯವಾದ ಘನವಾದ ವೀಣಾವಾದನ ಶೈಲಿ.

ಪ್ರಾಧ್ಯಾಪಕರಾಗಿ: ವಿಶ್ವೇಶ್ವರನ್‌ ಅವರದು ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಸಂಗೀತ ಶಾಸ್ತ್ರ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅಸಾಧಾರಣ ಅನುಭವ. ಈ ಲೇಖನದ ಲೇಖಕಿಗೂ ಪ್ರಾಪ್ತವಾದದ್ದು ಇವರಿಂದ ನಾಲ್ಕು ವರ್ಷಗಳ ಕಾಲ ಸಂಗೀತ ಶಾಸ್ತ್ರ (Musicololgy) ಪಾಠವನ್ನು ಕಲಿಯುವ ಅವಿಸ್ಮರಣೀಯ ಸುಸಂದರ್ಭ. ರಾ.ವಿ. ಅವರದು ಅತ್ಯಂತ ವ್ಯಾಪ್ತಿಯುಳ್ಳ ಜ್ಞಾನ ಭಂಡಾರ. ಒಂದು ವಿಷಯವನ್ನು ತೆಗೆದು ಕೊಂಡರೆ ಅದರ ಹಿಂದಿನ ಆಳವಾದ ವಿಸ್ತಾರವಾದ ಪರಂಪರೆಯಿಂದ ಹಿಡಿದು ಇಂದಿನ ತಂತ್ರಜ್ಞಾನದವರೆಗೆ, ಪ್ರಸ್ತುತ ಸನ್ನಿವೇಶದವರೆಗಿನ ಎಲ್ಲ ವಿಚಾರಗಳನ್ನೂ, ಆಗು ಹೋಗುಗಳನ್ನು, ನಡೆದ ಘಟನಾವಳಿಗಳನ್ನು, ಆಗಿರುವ ಹೊಸ ಸಂಶೋಧನೆಗಳನ್ನು ಇತ್ಯಾತ್ಮಕವಾಗಿ ಆ ವಿಷಯದ ಅಮೂಲಾಗ್ರ ಅಧ್ಯಯನದಿಂದ ಯಾವುದೊಂದನ್ನೂ ಬಿಡದೆ ತಿಳಿಸಿ ವಿದ್ಯಾರ್ಥಿಗಳ ಜ್ಞಾನ ಭಂಡಾರ ವರ್ಧಿಸುತ್ತಿದ್ದ ಬಗೆ ಅಪೂರ್ವ. ಇವರು ಅತ್ಯುತ್ತಮ ವಾಗ್ಮಿಗಳೂ, ಗಾಯಕರು, ವೀಣಾವಾದಕರೂ, ಸಂಗೀತ ಶಾಸ್ತ್ರಜ್ಞರೂ, ಆಗಿದ್ದ ಕಾರಣದಿಂದಾಗಿ ಸಂಗೀತಶಾಸ್ತ್ರ ಪಾಠವೂ ಲಕ್ಷ್ಯ ಲಕ್ಷಣಗಳೆರಡರ ಸಹಯೋಗದಿಂದ ಅತ್ಯಂತ ಯಶಸ್ವಿಯಾಗಿ ಪೂರಕವಾಗಿ ಬಳಕೆಗೊಳ್ಳುತ್ತಿತ್ತು. ಆನಂದಭೈರವಿ, ದರ್ಬಾರ್, ಅಸಾವೇರಿ, ಬೇಗಡೆ, ವರಾಳಿ ಇತ್ಯಾದಿ ಹಲವಾರು ರಾಗಗಳ ರಾಗ ಲಕ್ಷಣವನ್ನು ಇವರು ಕೈಗೊಳ್ಳುತ್ತಿದ್ದ ರೀತಿಯೇ ವಿಭಿನ್ನ. ಒಂದು ರಾಗಕ್ಕೆ ೨,೩ ತರಗತಿಗಳು ಬೇಕು ಇವರಿಗೆ, ಅಷ್ಟು ವ್ಯಾಪಕವಾದ ವಿಚಾರ ಸಂಪತ್ತು ಇವರದು. ಆ ರಾಗದ ಗಮಕ ಪ್ರಕ್ರಿಯೆ, ಸಾಮಾನ್ಯ ಸಂಚಾರ, ವಿಶೇಷ ಸಂಚಾರ, ರಾಗದ ಗ್ರಹ, ಅಂಶ, ನ್ಯಾಸಗಳು, ಆ ರಾಗದ ವಿವಧ ರಚನೆಗಳು, ಆ ರಚನೆಗಳಲ್ಲಿನ ವೈಶಿಷ್ಟ್ಯ, ವಿವಿಧ ಬಾನಿಯಲ್ಲಿ ಆ ರಾಗಗಳ ಬಳಕೆ ಹೀಗೆ ಇವೆಲ್ಲವನ್ನೂ ವಿಷದವಾಗಿ ತಿಳಿಸಿ ಕೊಡುವ ಅಪೂರ್ವ ವೈಖರಿ, ಅಪೂರ್ವ ವಾಕ್‌ಝರಿ ಇವರದು. ಸೌಮ್ಯ, ಹಸಿತ, ಸುಂದರ ಮುಖ ಸ್ವಭಾವವುಳ್ಳ ಇವರು ವಿದ್ಯಾರ್ಥಿಗಳಿಗೆ ಹೇಳಿರುವ ಮನೆಪಾಠಗಳನ್ನು (Homework) ಮುಂದಿನ ತರಗತಿಯಲ್ಲಿ ಮರೆಯದೆ ಕೇಳುವರು, ವಿದ್ಯಾರ್ಥಿಗಳು ಶ್ಲೋಕವನ್ನು ತಪ್ಪಿದಲ್ಲಿ ಅಥವಾ ತಪ್ಪು ಉಚ್ಚರಿಸಿದಲ್ಲಿ ರಾ.ವಿ. ಅವರ ಮುಖಭಾವವೇ ಮತ್ತು ಮೌನವೇ ಅಥವಾ ವ್ಯಂಘ್ಯ ನಗುವೇ ವಿದ್ಯಾರ್ಥಿಗಳನ್ನು ಸರಿಯಾಗಿ ಅಧ್ಯಯನ ಮಾಡಬೇಕೆಂದು ಮನವರಿಕೆಕ ಮಾಡಿಸಿಕೊಡುವಷ್ಟು ಪ್ರಖರವಾಗಿರುತ್ತಿತ್ತು. ಹಾಗೆಯೇ ಉತ್ತಮವಾಗಿ ಉತ್ತರಿಸಿದವರಿಗೆ ಶಹಭಾಷ್‌ ಎಂಬ ಪ್ರತಿಕ್ರಿಯೆಯೂ ಬರುತ್ತಿದ್ದುದುಂಟು. ಸಾಕಷ್ಟು ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟುಮಾಡಿಸದೆ ಬಿಡರು ಈ ನಮ್ಮ ಮೇಷ್ಟ್ರು. ಇವರ ಕನ್ನಡ, ಇಂಗ್ಲಿಷ್‌ ಭಾಷೆಗಳ ಅಸ್ಖಲಿತ ಓಘ, ಪ್ರೌಢಿಮೆ, ಭಾಷೆಯಲ್ಲಿನಕ ಹಿಡಿತ ಇವು ಎಂಥವನ್ನೂ ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಇದು ದಿಟ, ಇದಕ್ಕೆ ನಾನೇ ಸಾಕ್ಷಿ. ಹಲವಾರು ಸಂಗೀತ ವಿದ್ಯಾರ್ಥಿಗಳು ಸಂಗೀತ ಶಾಸ್ತ್ರವನ್ನು ಆಳವಾಗಿ ಅಭ್ಯಸಿಸಲು, ಸಂಶೋಧನಾ ಕಾರ್ಯ ಕೈಗೊಳ್ಳಲು ಇವರ ಪಾಠ ಪ್ರವಚನಗಳು ಬಹುವಾಗಿ ಕಾರಣವಾಗಿರುವುದು ನಿಸ್ಸಂಶಯ. ಇಂತಹ ಗುರುವರ್ಯರ ಅತ್ಯುತ್ತಮ ಪಾಠದಿಂದ ಸಂತೋಷಗೊಂಡ ನಾವು ವಿದ್ಯಾರ್ಥಿನಿಯರು ಯಾವ ಜನ್ಮದ ಸುಕೃತವೋ ಇಂತಹ ಮೇಧಾವಿ ಗುರುಗಳಿಂದ ಪಾಠ ಕಲಿಯುತ್ತಿದ್ದೇವೆ ಎಂದು ನೆನೆದ ದಿವಸಗಳೆಷ್ಟೋ. ಒಟ್ಟಿನಲ್ಲಿ ಹೇಳುವುದಾದರೆ ಶಿಕ್ಷಣ ಲೋಕದಲ್ಲಿ ರಾ.ವಿ. ಅವರು ಅವಿಸ್ಮರಣೀಯ ಗುರು. ಜ್ಞಾನ ಸುಧೆ ಹರಿಸಿದ ಗುರು, ಜೀವನಮಾರ್ಗ ದರ್ಶನ ನೀಢಿದ ಮಾರ್ಗದರ್ಶಕರು, ಮುಂದಿನ ಪೀಳಿಗೆಗೆ ಆದರ್ಶಪ್ರಾಯರು. ೩೦ ವರ್ಷಗಳ ಸುದೀರ್ಘ ಸೇವೆಯನಂತರ ಪ್ರಸ್ತುತ ಇವರು ವಿಶ್ರಾಂತ ಪ್ರಾಧ್ಯಾಪಕರಾಗಿದ್ದು ಸಂಗೀತ ಸರಸ್ವತಿಯ ಸೇವೆಯನ್ನು ಅವಿರತ ಮಾಡುತ್ತಿದ್ದಾರೆ.

ಕಚೇರಿ ಸಾಧನೆ: ಕಳೆದ ಸುಮಾರು ೫೦, ೫೫ ವರ್ಷಗಳಿಂದ ವಿದ್ವಾನ್‌ ರಾ. ವಿಶ್ವೇಶ್ವರನ್‌ ಅವರು ಸ್ವದೇಶ-ವಿದೇಶಗಳಲ್ಲಿ ಅಸಂಖ್ಯಾತ ವೀಣಾವಾದನ ಗಾಯನ ಕಚೇರಿಗಳನ್ನು ನೀಡಿ ಸಂಗೀತ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ. ನಾಡಿನ, ದೇಶದ, ವಿದೇಶಗಳ ಪ್ರತಿಷ್ಠಿತ ಸಭೆ, ಸಂಗೀತೋತ್ಸವ ಸಮಾರಂಭಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಸರ್ಕಾರದಕ ಅಕಾಡೆಮಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಇವರು ತಮ್ಮ ಅಪೂರ್ವ ವೀಣಾವಾದನದಿಂದ ಜನಮನ ಸೂರೆಗೊಂಡಿದ್ದಾರೆ. ದೇಶದಾದ್ಯಂತ ವಿಶೇಷ ಶೈಲಿಯ ವೀಣಾವಾದಕರೆಂದು ಸುವಿಖ್ಯಾತರಾಗಿದ್ದಾರೆ. ಬೆಂಗಳೂರು ವಿಶೇಷ ಶೈಲಿಯ ವೀಣಾವಾದಕರೆಂದು ಸುವಿಖ್ಯಾತರಾಗಿದ್ದಾರೆ. ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್ತು, ಶ್ರೀ ಕೃಷ್ಣ ಸಂಗೀತ ಸಭಾ, ಶ್ರೀ ತ್ಯಾಗರಾಜ ಗಾನ ಸಭಾ ಮುಂತಾದ ನೂರಾರು ಸಭೆ, ಸಂಘ ಸಂಸ್ಥೆಗಳು ಇವರನ್ನು ಆಗಾಗ್ಗೆ ಆಹ್ವಾನಿಸಿ ಇವರ ವೀಣಾವಾದನದ ಮೂಲಕ ಕಲೆಗೂ, ಕಲೆಗಾರರಿಗೂ ಗೌರವ ಸಲ್ಲಿಸುತ್ತಿವೆ. ಇವರು ಲಂಡನ್‌ನಲ್ಲಿ ನಡೆದ ಅಂತರ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲೂ, ಆಕ್ಸ್‌ಪರ್ಡ್, ಕೇಂಬ್ರಿಡ್ಜ್, ಅಬರ್ಡೀನ್‌, ಎಡಿನ್‌ಬರೋ, ಡಬ್ಲಿನ್‌ ನಗರಗಳ ಹಾಗೂ ಬೆಲ್‌ ಫಾಸ್ಟ್‌ ನಗರದ ರಾಣಿಯ ಅಂತರರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡು ದೇಶದ ಗೌರವಕ್ಕೆ ಕಾರಣೀಭೂತರಾಗಿದ್ದಾರೆ.

ಪ್ರಾತ್ಯಕ್ಷಿಕೆ, ಉಪನ್ಯಾಸ: ವಿದ್ವಾನ್‌ ರಾ. ವಿಶ್ವೇಶ್ವರನ್‌ ಅವರು ಕಳೆದ ೪೫-೫೦ ವರ್ಷಗಳಿಂದ ದೇಶ ವಿದೇಶಗಳ ಅತ್ಯುನ್ನತ ಕಾರ್ಯಕ್ರಮಗಳಲ್ಲಿ ಹಾಗೂ ವಿಚಾರ ಸಂಕಿರಣಗಳಲ್ಲಿ ತಮ್ಮ ಅಧ್ಯಯನ ಶೀಲತೆಯಿಂದ ಲಭ್ಯವಾದ ಜ್ಞಾನ ಕಿರಣಗಳ ವಿಚಾರ ಧಾರೆಯನ್ನು ತಮ್ಮ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳ ಮೂಲಕ ವಿದ್ವಜ್ಜನರಿಗೆ, ಕಲಾವಿದರಿಗೆ, ಜನತೆಗೆ ನೀಡಿದ್ದಾರೆ. ಜ್ಞಾನವೃದ್ಧರಾದ ಇವರ ಇಂತಹ ನೂರಾರು ಕಾರ್ಯಕ್ರಮಗಳನ್ನು ಸಂಗೀತ ಸಭೆಗಳು ವಿಶ್ವವಿದ್ಯಾನಿಲಯಗಳು, ಕರ್ನಾಟಕ ಸರ್ಕಾರ, ಅಕಾಡೆಮಿ ಮುಂತಾದುವು ಏರ್ಪಡಿಸಿ ಇವರ ಜ್ಞಾನ ಪ್ರಸಾರಕ್ಕೆ ಆಸ್ಪದಮಾಡಿಕೊಟ್ಟಿವೆ. ಮಧ್ಯ ಪ್ರದೇಶದ ಭೂಪಾಲಿನಲ್ಲಿ ನಡೆದ ಪ್ರಥಮ ರಾಷ್ಟ್ರೀಯ ವೀಣಾಸಮಾರೋಹದಲ್ಲಿ ದಕ್ಷಿಣ ಭಾರತದ ಸರಸ್ವತೀ ವೀಣೆಯನ್ನು ವಾದನದಿಂದಲೂ ಪ್ರತಿನಿಧಿಸಿದ್ದಾರೆ. ಮುಂಬೈನಗರದ ಶ್ರೀ ಷಣ್ಮುಖಾನಂದ ಸಭೆಯ ರಾಷ್ಟ್ರೀಯ ಸಂಗೀತ ವಿಚಾರ ಸಂಕಿರಣದಲ್ಲಿ ಕರ್ನಾಟಕದಿಂದ ಏಕೈಕರಾಗಿ ಪಾಲ್ಗೊಳ್ಳಲು ಇವರಿಗೆ ಬಂದ ಆಹ್ವಾನಗಳು ಸಂಗೀತ ಗಾಯನ, ವಾದನ ಕ್ಷೇತ್ರಗಳೆರಡರಲ್ಲೂ ವಿಶ್ವೇಶ್ವರನ್‌ ಅವರಿಗಿರುವ ಅತ್ಯುಚ್ಚ ಗೌರವಾದರಗಳಿಗೆ ಸಾಕ್ಷಿಯಾಗಿವೆ.

ವಾಗ್ಗೇಯಕಾರರು: ರಾ.ವಿ. ಅವರು ಉತ್ತಮ ವಾಗ್ಗೇಯಕಾರರು, ಇವರಿಂದ ಸುಮಾರು ೧೦೮ ಕೃತಿಗಳು ರಚಿತಗೊಂಡಿದ್ದು  ಈ ಎಲ್ಲವೂ ಅಪೂರ್ವ ರಾಗಗಳಲ್ಲಿ, ಅಪೂರ್ವ ಮೇಳಗಳಲ್ಲಿವೆ. ಕೆಲವು ಹಿಂದುಸ್ತಾನಿ ರಾಗಗಳಲ್ಲಿವೆ. ಅವುಗಳೆಂದರೆ ಮಾರ್ವ, ಜೋಗ್‌, ಶುದ್ಧ ಕಲ್ಯಾಣ್‌, ಗೋರಖ್ ಕಲ್ಯಾಣ್‌, ಮಿಯಾಮಲ್ಹಾರ್, ಪಹಾಡಿ, ಸಿಂಧುಭೈರವಿ, ರೋಹಿಣಿ, ಮಧು ಕೌನ್ಸ್, ಚಂದ್ರ ಕೌನ್ಸ್‌, ಪೀಲು, ಶಿವರಂಜನಿ ಇತ್ಯಾದಿ. ಇವರು ದೇವಿ ರಾಜರಾಜೇಶ್ವರಿಯ ಅನನ್ಯ ಭಕ್ತರು. ಹೀಗಾಗಿ ಹೆಚ್ಚಿನ ರಚನೆಗಳು ದೇವಿಯನ್ನು ಕುರಿತವಾಗಿವೆ. ರಾ.ವಿ. ಮತ್ತು ಅವರ ಶಿಷ್ಯರು ಇವರ ಅಪೂರ್ವ ಕೃತಿಗಳನ್ನು ಸಂಗೀತ ಕಚೇರಿಗಳಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಇವು ವಿದ್ವಜ್ಜನರ ಮೆಚ್ಚುಗೆ ಗಳಿಸಿವೆ. ಮೂರ್ಛನಾಕಾರಕ ಮೇಳಗಳು ಗ್ರಂಥಗಳಲ್ಲಿ ಮಾತ್ರವೇ ಉಳಿದ ಕಾಲದಲ್ಲಿ ಇವರು ತಮ್ಮ ರಚನೆಗಳನ್ನು ಅಂತಹ ರಾಗಗಳಲ್ಲಿ ರಚಿಸಿ ಆ ರಾಗಗಳು ಶಾಶ್ವತವಾಗಿ ಉಳಿಯುವಂತೆ ಆಗುಮಾಡಿದ್ದಾರೆ. ರಾ.ವಿ. ಅವರಿಂದ ಕೃತಿ, ತಿಲ್ಲಾನ, ಪದ, ವರ್ಣ, ಲಘು ಶಾಸ್ತ್ರೀಯ ರಚನೆಗಳು, ತತ್ವೋಪದೇಶಗಳಿರುವಂತಹ ರಚನೆಗಳು ರಚಿತಗೊಂಡಿವೆ. ಇವು ಸಂಸ್ಕೃತ, ತೆಲುಗು, ಕನ್ನಡ ಭಾಷೆಗಳಲ್ಲಿದ್ದು ಮೇಳರಾಗ, ಜನ್ಮರಾಗಗಳಲ್ಲಿ ರಚಿತಗೊಂಡಿವೆ. ಏಣಾಕ್ಷಿ, ಅಂತರ ಕೈಶಿಕಿ, ಸ್ಮೃತಿ, ರಾಜರಾಜೇಶ್ವರಿ ಮುಂತಾದ ರಾಗಗಳು ಸ್ವಂತ ಕೊಡುಗೆಯಾಗಿವೆ, ಅವರ ತಿಲ್ಲಾನಗಳು ಅದರಲ್ಲಿನ ಉತ್ತಮ ಸಾಹಿತ್ಯ ಹಾಗೂ ಲಯ ಜೋಡಣೆಗಳಿಂದ ಜನ ಮನ್ನಣೆ ಗಳಿಸಿವೆ. ರಚನೆಗಳು ವಿಶೇಷವಾದ ಪ್ರಾಸ, ಅನುಪ್ರಾಸ, ಯಮಕಾದಿ ಶಬ್ದಾಲಂಕಾರ, ಸ್ವರಾಕ್ಷರಗಳಿಂದ ಸಮೃದ್ಧವಾಗಿದ್ದು ಅನು ಲೋಮ, ವಿಲೋಮ ಚಿಟ್ಟೇಸ್ವರ, ಗ್ರಹಸ್ವರಗಳನ್ನು, ಅಲಂಕಾರಿಕ ಅಂಶಗಳನ್ನು ಒಳಗೊಂಡು ಜನಮನವನ್ನಾಕರ್ಷಿಸಿದೆ.

ಧ್ವನಿಸುರುಳಿಗಳು: ರಾ.ವಿ. ಅವರ ವೀಣಾವಾದನದ ಸುಮಾರು ೮-೧೦ ಧ್ವನಿಸುರುಳಿಗಳು ಚಹಾಗೂ ಸಿ.ಡಿ.ಗಳನ್ನು ದೇಶದ, ಹೊರದೇಶದ ಪ್ರತಿಷ್ಠಿತ ಕಂಪನಿಗಳು ಹೊರತಂದಿವೆ. ಇವು ವಿಶೇಷ ಜ್ಞಾನಾಸಕ್ತರಿಗೆ, ಸಂಗೀತ ರಸಿಕರಿಗೆ ಅಪಾರ ಸಂತೋಷವನ್ನುಂಟುಮಾಡಿದೆ.

ಸಂಗೀತ ರೂಪಕ ಹಾಗೂ ವಿಶೇಷ ಅಧ್ಯಯನ: ೧೯೯೧ರಲ್ಲಿ ವಿಶ್ವಸಂಗೀತ ದಿನಾಚರಣೆಗಾಗಿ ತಯಾರಿಸಿ ಪ್ರಸ್ತುತಪಡಿಸಿದ ಸಂಗೀತ ರೂಪಕ್ಕಾಗಿ ಆಕಾಶವಾಣಿ ರಾಷ್ಟ್ರೀಯ ಪುರಸ್ಕಾರವು ಸಂದಿದೆ. ನಾನಾ ಸಂಗೀತ ರೂಪಕಗಳನ್ನು ರಚಿಸಿ, ನಿರ್ದೇಶಿಸಿ, ರಾಗ ಸಂಯೋಜಿಸಿ ಪ್ರಸ್ತುತಪಡಿಸಿದ್ದಾರೆ.

ರಾ.ವಿ. ಅವರು ದೀಕ್ಷಿತರ ಕೃತಿಗಳಲ್ಲಿ ಸೂಚಿತಗೊಂಡಿರುವ ರಾಗಗಳ  ಬಗೆಗೆ ವಿಶೇಷವಾದ ಸಂಶೋಧನಾತ್ಮಕ ಅಧ್ಯಯನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರ ಯುತವಗಿ ಮಾತನಾಡುವ ಜ್ಞಾನಗಳನ್ನು ಇವರು ಗಳಿಸಿಕೊಂಡಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿನ ವಿಶಿಷ್ಟತೆಗೆ ಪ್ರತಿಕ್ರಿಯೆ: ರಾ.ವಿ. ಅವರು ಶ್ರೇಷ್ಠ ವೈಣಿಕರಂತೆ ಸಮಾನ ಪ್ರತಿಭೆಯ ಗಾಯಕರೂ ಹೌದು. ಗುಣ ಮೌಲ್ಯಪೂರ್ಣ ಸಂಪ್ರದಾಯದ ಹಾಗೂ ಕಲೆಯ ಅತ್ಯುಚ್ಚಮೌಲ್ಯಗಳನ್ನು ಅತಿ ಮಡಿಯಿಂದ ಶುದ್ಧವಾಗಿ ಕಾಪಾಡಿಕೊಂಡು ಇಡೀ ದೇಶದ ಎಲ್ಲ ವಿಮರ್ಶಕರ ಮೆಚ್ಚುಗೆಯನ್ನು, ಗೌರವವನ್ನು ಪಡೆದಿದ್ದಾರೆ. ಉತ್ತಮ ಗಾಯಕ-ವಾದಕ-ವಾಗ್ಗೇಯಕಾರ-ಶಾಸ್ತ್ರಜ್ಞ-ವಾಗ್ಮಿಯಾಗಿ ವಿದ್ವಾಂಸರ ಗೌರವಕ್ಕೆ ಪಾತ್ರರಾಗಿರುವ ಇವರನ್ನು “Vishweshwaran -A 4 in 1 Phenomenon” ಎಂಬ ಶೀರ್ಷಿಕೆಯಲ್ಲಿ ಅಂತರರಾಷ್ಟ್ರೀಯ ವ್ಯಾಪ್ತಿಯ ಶ್ರುತಿ ಮಾಸ ಪತ್ರಿಕೆಯು ಮೆಚ್ಚುಗೆ ಸೂಚಿಸಿದೆ. ಆಂಧ್ರ ಪ್ರದೇಶ್‌ ಪತ್ರಿಕೆ ಎಂಬ ತೆಲುಗು ಮಾಸ ಪತ್ರಿಕೆಯ ಇವರನ್ನು ವೀಣೆಯಲ್ಲಿ ಹಿಮಾಲಯ ಶಿಖರ ಎಂದು ವರ್ಣಿಸಿದೆ. ಹಿಮಾಲಯೋತ್ತುಂಗ ಶಿಖರಂ ವೀಣಾಪಾಣಿ ವಿಶ್ವೇಶ್ವರನ್‌ ಎಂಬ ಕಿರುಗ್ರಂಥವು ಪ್ರೊ. ಮುದಿಗೊಂಡ ವೀರಭದ್ರಯ್ಯ ಅವರಿಂದ ರಚಿತಗೊಂಡು ರಾ.ವಿ. ಅವರನ್ನು ಪುರುಷರೂಪದ ಸರಸ್ವತಿ ಎಂದು ಕೊಂಡಾಡಿದೆ.

ಆಕಾಶವಾಣಿ, ದೂರದರ್ಶನ ಮತ್ತು ಸಾಕ್ಷ್ಯಚಿತ್ರ: ಕಳೆದ ಸುಮಾರು ೫೫ ವರ್ಷಗಳಿಂದಲೂ ಆಕಾಶವಾಣಿಯಿಂದ ತಮ್ಮ ವೀಣಾವಾದನವನ್ನೂ ಮತ್ತು ಗಾಯನವನ್ನೂ ಬಿತ್ತರಿಸುತ್ತಿರುವ ಇವರು ಆಕಾಶವಾಣಿ ಮತ್ತು ದೂರದರ್ಶನ ಸಂಸ್ಥೆಗಳ ಎಲ್ಲ ರೀತಿಯ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲೂ ತಮ್ಮ ವೀಣಾವಾದನದಿಂದ ಸಂಗೀತ ರಸಿಕರ ಮನಸ್ಸನ್ನು ಸೂರೆಗೊಂಡಿದ್ದಾರೆ. ನಾಡಿನ ಕೆಲವೇ ಮಂದಿ ಅತ್ಯುನ್ನತ ಶ್ರೇಣಿಯ ವೈಣಿಕರಲ್ಲಿ ಇವರು ಹಿರಿಯರು. ಇವರ ವೀಣಾವಾದನ, ಗಾಯನ ಕಾರ್ಯಕ್ರಮಗಳು ದೂರದರ್ಶನ ಹಾಗೂ ಖಾಸಗಿಯ ನಾನಾ ಚಾನಲ್‌ಗಳಲ್ಲಿ ಬಿತ್ತರಗೊಳ್ಳುತ್ತಿವೆ. ಬಿ.ಬಿ.ಸಿ. ಬಾನುಲಿ ಮತ್ತು ಟೆಲಿವಿಷನ್‌, ಇಂಡಿಪೆಂಡೆಂಟ್‌ ಟೆಲಿವಿಷನ್‌ ಮುಂತಾದ ಪ್ರಸಿದ್ಧ ಪ್ರಪಂಚ ಸಂಪರ್ಕ ಮಾಧ್ಯಮಗಳು ರಾ.ವಿ. ಅವರನ್ನು ಶ್ರೇಷ್ಠ ಕಲಾವಿದರ ಸಂದರ್ಶನಗಳಲ್ಲಿ ಸಂದರ್ಶಿಸಿ ಪ್ರಸ್ತುತಪಡಿಸಿವೆ. ಅಮೇರಿಕದ ಥಿಯೋದೋರ್ ಥಾಮಸ್‌ ಅವರು ವಿಶ್ವೇಶ್ವರನ್‌ ಅವರನ್ನು ಕುರಿತ ಸಾಕ್ಷ್ಯಚಿತ್ರವೊಂದನ್ನು ತೆಗೆದು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.

ಶಿಷ್ಯವರ್ಗ: ರಾ.ವಿ. ಅವರ ಶಿಷ್ಯರು ದೇಶದಲ್ಲಿ ಅಲ್ಲದೆ ವಿದೇಶಗಳಲ್ಲಿಯೂ ಇದ್ದಾರೆ. ಇವರಿಂದ ಗಾಯನ, ವಾದನ ಹಾಗೂ ಸಂಗೀತಶಾಸ್ತ್ರ ವಿಭಾಗಗಳಲ್ಲಿ ಮಾರ್ಗದರ್ಶನ ಪಡೆದ ಶಿಷ್ಯವರ್ಗ ಸಾಕಷ್ಟಿದೆ. ಇವರಲ್ಲಿ ಮದ್ರಾಸ್‌ ಜಯರಾಂ, ಸುಭದ್ರಾ ನಾಗರಾಜ್‌, ಸುಧಾವಾದಿರಾಜ್‌, ಡಾ. ವರದರಂಗನ್‌, ಪ್ರೊ. ವೀರಭದ್ರಯ್ಯ, ಸುಭಾಷಿಣಿ ಶಾಸ್ತ್ರಿ, ಆಂದ್ರ ಗೋಮಂಡೂರಿ ಶೇಷಾದ್ರಿ, ಮೋಹನ ಚಂದ್ರನಾಯರ್, ನಾಗಮಣಿ ಶ್ರೀನಾಥ್‌, ಉಷಾ ವಿಶ್ವೇಶ್ವರನ್‌, ವೀಣಾ ಜಯಂತ್‌, ವಿದ್ಯಾನಟರಾಜ್‌, ಡಾ. ಸರ್ವಮಂಗಳಾ ಶಂಕರ್ ಮುಂತಾದವರನ್ನು ಹೆಸರಿಸಬಹುದು.

ಪ್ರಕಟಣೆ: ರಾ.ವಿ. ಅವರು ಹಲವಾರು ವರ್ಷಗಳಿಂದ ತಮ್ಮನ್ನು ಲೇಖನ ಬರವಣಿಗೆ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿದ್ದು, ಇವರ ಸುಮಾರು ೫೦ಕ್ಕೂ ಹೆಚ್ಚು ಲೇಖನಗಳು ನಾನಾ ಗ್ರಂಥಗಳಲ್ಲಿ ಪ್ರಕಟಗೊಂಡಿವೆ.

ಪ್ರಶಸ್ತಿ-ಪುರಸ್ಕಾರ: ಮದ್ರಾಸಿನ ಶ್ರೀಕೃಷ್ಣಗಾನ ಸಭಾದ ಸಮಗೀತ ಚೂಡಾಮಣಿ ಬಿರುದು ಸಹಿತ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಕರ್ನಾಟಕದಿಂದ ಸ್ವೀಕರಿಸಿದ ಏಕೈಕ ವ್ಯಕ್ತಿ ರಾ. ವಿಶ್ವೇಶ್ವರನ್‌. ಕರ್ನಾಟಕ ರಾಜ್ಯ ಸಕಾðರದ ರಾಜ್ಯ ಸಂಗೀತ ವಿದ್ವಾನ್‌೨೦೦೨. ಕರ್ನಾಟಕ ಗಾನ ಕಲಾ ಪರಿಷತ್ತು ಸಂಗೀತ ವಿದ್ವಾಂಸರ ಬೆಳ್ಳಿಹಬ್ಬದ ಸಮ್ಮೇಳನದ ಅಧ್ಯಕ್ಷರಾಗಿ ಇವರನ್ನು ಆಯ್ಕೆಮಾಡಿ ಗಾನಕಲಾಭೂಷಣ ಬಿರುದು ನೀಡಿ ಗೌರವಿಸಿದೆ. ಶ್ರೀ ವ್ಯಾಸರಾಜ ಮಹಸಂಸ್ಥಾನದಿಂದ, ಸಂಗೀತ ಸಾರ್ವಭೌಮ ಎಂಬ ಬಿರುದು ಹಾಗೂ ಖಿಲ್ಲತ್ತು, ಬೆಂಗಳೂರು ನಾಗರತ್ನಮ್ಮ ಸ್ಮಾರಕ ಸಂಸ್ಥೆಯಿಂದ ತ್ಯಾಗರಾಜ ಪ್ರಶಸ್ತಿ ಇವರಿಗೆ ನೀಡಲ್ಪಟ್ಟಿದೆ. ಪಳನಿ ಸುಬ್ರಹ್ಮರ್ಣಯ ಪಿಳ್ಳೈ ಪ್ರಶಸ್ತಿ ಇವರಿಗೆ ನೀಡಲ್ಪಟ್ಟಿದೆ. ಪಳನಿ ಸುಬ್ರಹ್ಮಣ್ಯ ಪಿಳ್ಳೈ ಪ್ರಶಸ್ತಿ ಹಾಗೂ ಲಯಕಾಲ ನಿಪುಣ ಎಂಬ ಬಿರುದೂ ಕೂಡ ಲಭ್ಯವಾಗಿದೆ. ನಾದಜ್ಯೋತಿ ಶ್ರೀ ತ್ಯಾಗರಾಜ ಸ್ವಾಮಿ ಭಜನ ಸಭೆಯು ತನ್ನ ೩೯ನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಕಲಾಜ್ಯೋತಿ ಬಿರುದು ನೀಡಿ ಪುರಸ್ಕರಿಸಿದೆ. ಇಂಗ್ಲೆಂಡ್‌, ಐರ್ಲೆಂಡ್‌, ಸಿಂಗಪುರ್, ಮಲೇಷಿಯ, ದುಬೈ ಮುಂತಾದ ಹೊರ ರಾಷ್ಟ್ರಗಳಲ್ಲೂ ಇವರ ಬಹುಮುಖ ಸಂಗೀತ ಪ್ರತಿಭೆಗಾಗಿ ಇವರಿಗೆ ಅಸಂಖ್ಯಾತ ಗೌರವ, ಸನ್ಮಾನ, ಪ್ರಶಸ್ತಿಗಳು ಲಭ್ಯವಾಗಿವೆ.

ಕುಟುಂಬ: ರಾ.ವಿ. ಅವರದು ಚಿಕ್ಕ ಚೊಕ್ಕ ಕುಟುಂಬ. ಇವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು. ಮಗ ಉದ್ಯಮಿ ಹಾಗೂ ಸಂಗೀತ ಪ್ರೇಮಿ. ಹೆಣ್ಣು ಮಕ್ಕಳಲ್ಲಿ ವೀಣಾ ಜಯಂತ್‌ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ವೀಣಾ ವಾದಕಿ, ಮತ್ತೊಬ್ಬ ಮಗಳು ವಿದ್ಯಾ ನಟರಾಜ್‌ ಕೂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ. ಈ ಇಬ್ಬರೂ ಸಂಗೀತ ಕಚೇರಿಗಳನ್ನು ನೀಡುತ್ತಾ ಬಂದಿರುವ ಯುವ ಪ್ರತಿಭೆಗಳು. ಇವರ ಪತ್ನಿ ಉಷಾ ವಿಶ್ವೇಶ್ವರನ್‌ ಅವರು ವೀಣಾವಾದಕಿ ಹಾಗೂ ಚಿತ್ರಕಾರರು. ಇವರು ರಾ.ವಿ. ಅವರ ಸ್ವಂತ ರಚನೆಗಳೆಲ್ಲವನ್ನೂ ಚೆನ್ನಾಗಿ ಕರಗತಕ ಮಾಡಿಕೊಂಡಿರುವರು. ಸಂಗೀತ ಕಾರ್ಯಕ್ರಮಗಳಲ್ಲಿ ಈ ರಚನೆಗಳನ್ನು ಪ್ರಸ್ತುತ ಪಡಿಸುತ್ತಾ ಬಂದಿದ್ದಾರೆ. ಈ ಮೂವರೂ ರಾ.ವಿ. ಅವರ ಶಿಷ್ಯರೂ ಕೂಡ ಆಗಿದ್ದಾರೆಂಬುದು ಸಂತಸದ ಸುದ್ಧಿ.

ಹೀಗೆ ಸಂಗೀತ ಕಲಾಪರಂಪರೆಯ ಶುದ್ಧ ಸ್ವರೂಪವನ್ನು ಗ್ರಹಿಸಿ ಸಂಗೀತ ಜ್ಞಾನವನ್ನು ಸ್ವಯಂ ಆರ್ಜಿಸಿ, ಅಸದಳ ಸಾಧನೆಯಿಂದ ಸಂಗೀತ ಕಲಾ ಪ್ರಪಂಚಕ್ಕೆ ತಮ್ಮನ್ನೇ ಮುಡಿಪಾಗಿರಿಸಿ ಅತ್ಯುತ್ತಮ ಕೊಡುಗೆ ನೀಡಿರುವ ಮೇಧಾವಿ ವಿದ್ವಾನ್‌ ರಾ. ವಿಶ್ವೇಶ್ವರನ್‌ ಅವರು ಕಲಾವಿದರೆಲ್ಲರಿಗೂ ಮಾರ್ಗದರ್ಶಕರು. ಸದಾಕಾಲ ಜ್ಞಾನ ವೃದ್ಧರಾಗಿ ಮೆರೆದು ಕಂಗೊಳಿಸುತ್ತಿರುವ ಇವರ ಕಾರ್ಯ ಸ್ತುತ್ಯರ್ಹ ಹಾಗೂ ಅಜರಾಮರ.