ಮುಖ್ಯಸ್ಥರು, ಕನ್ನಡ ವಿಭಾಗ,
ಶ್ರೀ ವಿ.ಮ. ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ
ಇಲಕಲ್ಲ – ೫೮೭ ೧೨೫, ಬಾಗಲಕೋಟೆ ಜಿಲ್ಲೆ
ದೂರವಾಣಿ : ೦೮೩೫೧-೨೭೦೨೬೦

ಐವತ್ತಾರರ ಹರೆಯದ ಶಂಭು ಬಳಿಗಾರ್ ಅವರು ಗದಗ್ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿಯಲ್ಲಿ ಜನಿಸಿದವರು.

ಕನ್ನಡ ಉಪಾಧ್ಯಾಯರಾಗಿ ಕೆಲಸ ನಿರ್ವಹಿಸಿದರೂ ಕೂಡ ಜಾನಪದ ಲೋಕಕ್ಕೆ ಅಪಾರ ಕಾಣಿಕೆ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಜೀವನ ಚರಿತ್ರೆ, ಸಮಗ್ರ ಅಧ್ಯಯನ ಕೃತಿ, ಸಂಪಾದಿತ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದವರು.

ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಅವರ ಧ್ವನಿ ಸುರುಳಿಗಳು ಇಂದಿಗೂ ಮನೆ ಮಾತಾಗಿವೆ.

ಜಾನಪದ ಹಾಡುಗಾರಿಕೆಯಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ಡಾ|| ಶಂಭು ಬಳಿಗಾರ್ ನೆರೆ ರಾಜ್ಯಗಳಲ್ಲೂ ಸಾಹಿತ್ಯಾಸಕ್ತರನ್ನು ಆಕರ್ಷಿಸಿದವರು.

ಇಂತಹ ಮಹನೀಯರ ಪುರಸ್ಕಾರಕ್ಕೆ ಅಕಾಡೆಮಿ ಮುಂದಾಗಿ ಅಭಿನಂದಿಸಿದೆ.