೧೧೮, ಸೌರಭ, ೧ನೇ ಮುಖ್ಯರಸ್ತೆ,
೨-ಬಿ ಕ್ರಾಸ್, ಶ್ರೀನಗರ, ಧಾರವಾಡ-೩.
ದೂರವಾಣಿ : ೦೮೩೬-೨೭೭೮೨೩೩
ಮೊಬೈಲ್ : ೯೮೪೫೮೦೯೭೪೬
ಐವತ್ತೇಳರ ಡಾ|| ಶಾಲಿನಿ ರಘುನಾಥ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕಿಲಾರ ಗ್ರಾಮದವರು.
ಬಾಲ್ಯದಲ್ಲೇ ಜಾನಪದ ಸಾಂಸ್ಕೃತಿಕ ಲೋಕದ ಗೀಳು ಹಚ್ಚಿಕೊಂಡ ಡಾ|| ಶಾಲಿನಿ ರಘುನಾಥ, ಅಧ್ಯಾಪಕ ವೃತ್ತಿಯಿದ್ದರೂ ಸಂಶೋಧನೆ ಹಾಗೂ ಸಾಹಿತ್ಯದತ್ತ ಸಾಧನೆಯ ಗೆರೆ ಎಳೆದವರು.
ಜಾನಪದ ಅಧ್ಯಯನ ವಿಭಾಗದಲ್ಲಿ ವಿದ್ಯಾರ್ಥಿಗಳ ಸ್ಫೂರ್ತಿಯ ಸೆಲೆಯಾಗಿರುವ ಡಾ|| ಶಾಲಿನಿ ರಘುನಾಥ ಮಾದರಿ ಶಿಕ್ಷಕರಾಗಿಯೂ ರೂಪು ಗೊಂಡಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅವರು ಹವ್ಯಕರ ಭಾಷೆ, ಸಂಸ್ಕೃತಿ, ಆಚರಣೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ.
ಕ್ರೀಡಾಪಟುವೂ ಆಗಿರುವ ಅವರಿಗೆ ಹಲವಾರು ಪುರಸ್ಕಾರಗಳೂ ಸಂದಿವೆ.
ಇದೀಗ ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಅವರನ್ನು ಪುರಸ್ಕರಿಸಿದೆ.
Leave A Comment