‘ಶಾಂತಿ ನಿಕೇತನ’, ಕಲ್ಯಾಣ ನಗರ, ೫ನೇ ಅಡ್ಡರಸ್ತೆ,
ಧಾರವಾಡ-೫೮೦ ೦೦೭
ಮೊಬೈಲ್ : ೯೪೪೮೩ ೨೫೯೬೦

ಧಾರವಾಡ ಜಿಲ್ಲೆಯ ಕುಂದಗೋಳು ತಾಲೂಕಿನ ಹಿರೇನರ್ತಿ ಗ್ರಾಮ (೧೯೪೬)ರಲ್ಲಿ ಜನಿಸಿದ ಡಾ|| ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ ಉಪನ್ಯಾಸಕ ವೃತ್ತಿಯಿಂದಲೇ ಜಾನಪದ ಅಧ್ಯಯನ, ಸಂಶೋಧನೆಗೆ ಒತ್ತು ನೀಡಿದವರು.

ಸುಮಾರು ೨೫ಕ್ಕೂ ಅಧಿಕ ಜಾನಪದ ಕೃತಿಗಳ ಕೊಡುಗೆ ನೀಡಿರುವ ಡಾ|| ಶಿವಾನಂದ ಗುಬ್ಬಣ್ಣವರ ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲ ರಾಗಿದ್ದಾರೆ. ಸಂಗೀತ ಮತ್ತು ನೃತ್ಯ ಅಕಾಡೆಮಿಗೂ ಅವರ ಸೇವೆ ಸಂದಿದೆ. ಚಲುವಾದಿ ಜನಾಂಗದ ವಿಶೇಷ ಅಧ್ಯಯನ, ಅನುಭಾವಿ ಚಂದಪ್ಪನ ಕೃತಿ ಸಂಗ್ರಹ, ಜಾನಪದ ಕಲೆಗಳ ಸಂಶೋಧನೆ ಕೂಡ ಅವರ ಆಸಕ್ತಿಯಾಗಿದೆ.

ಮಹಿಳಾ ಜಾನಪದ ಸಾಹಿತ್ಯದಲ್ಲೂ ಅವರು ಅನೇಕ ಸಂಗ್ರಹಗಳನ್ನು ನಾಡಿಗೆ ನೀಡಿದ್ದಾರೆ. ಸಾಹಿತ್ಯ ಜಾನಪದ ಯಕ್ಷಗಾನ ಅಕಾಡೆಮಿ, ಹಲವಾರು ಸಂಘ ಸಂಸ್ಥೆಗಳು ಡಾ|| ಶಿವಾನಂದ ಗುಬ್ಬಣ್ಣವರನ್ನು ಗೌರವಿಸಿವೆ.

ಈ ಬೆಳ್ಳಿ ಹಬ್ಬದ ಪ್ರಯುಕ್ತ ಅವರಿಗೆ ಅಭಿನಂದನೆ ಸಲ್ಲುತ್ತದೆ.