‘ಪಾರಿಜಾತ’ ಗಾಂಧಿನಗರ,
ಬೀಳಗಿ, ಬಾಗಲಕೋಟೆ ಜಿಲ್ಲೆ.
ದೂರವಾಣಿ : ೦೮೪೨೫-೨೭೫೫೬೭
ಮೊಬೈಲ್ : ೯೮೮೬೬೧೯೯೬೦

ಬೆಳಗಾವಿ ಜಿಲ್ಲೆಯ ಯಾದವಾಡದವರಾದ ಡಾ|| ಶ್ರೀರಾಮ ಇಟ್ಟಣ್ಣವರ ಅರವತ್ತರಲ್ಲೂ ತಮ್ಮ ಜಾನಪದ ಕಲಾಸಕ್ತಿಯನ್ನು ಉಳಿಸಿ ಬೆಳೆಸಿಕೊಳ್ಳುತ್ತಿದ್ದಾರೆ.

ಬಾಲ್ಯದಿಂದಲೇ ಗ್ರಾಮೀಣ ಸಂಸ್ಕೃತಿಗೆ, ಜಾನಪದ ಕಲೆಗಳಿಗೆ ಮಾರುಹೋಗಿ ತಮ್ಮ ಶಿಕ್ಷಣ ಹಾಗೂ ಉದ್ಯೋಗಗಳಲ್ಲೂ ಅದರ ಛಾಪು ಮೂಡಿಸಿದ್ದಾರೆ.

ಸಾಹಿತ್ಯಾಸಕ್ತರೂ ಆಗಿರುವ ಡಾ|| ಶ್ರೀರಾಮ ಇಟ್ಟಣ್ಣವರ ಇಪ್ಪತ್ತಕ್ಕೂ ಅಧಿಕ ಕೃತಿಗಳ ರಚನೆಗೆ ತಮ್ಮ ಸೇವೆಯನ್ನೂ ಧಾರೆ ಎರೆದಿದ್ದಾರೆ. ಹಲವಾರು ಲೇಖನಗಳಿಗೆ ತಮ್ಮದೇ ಆದ ಸಹಭಾಗಿತ್ವ ನೀಡಿದ್ದಾರೆ.

ನಾಟಕ ಕಲೆ, ಕಾವ್ಯ, ಜಾನಪದ ಕ್ಷೇತ್ರಗಳಲ್ಲಿ ಪುರಸ್ಕೃತರಾಗಿ ಪ್ರಶಸ್ತಿಯ ಗರಿ ಮೂಡಿಸಿಕೊಂಡಿದ್ದಾರೆ.

ಸದ್ಯ ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ನಿಮಿತ್ತ ಅವರನ್ನು ಸನ್ಮಾನಿಸಿದೆ.