ಪ್ರಾಣವೇ ಪ್ರಮುಖವಾಗಿದ್ದ ಚೇತನವು ಪ್ರಾಣಿಯೆನಿಸುವಂತೆ, ಮನಸ್ಸೇ ಮುಖ್ಯವಾಗಿದ್ದ ಚೇತನವು ಮನುಷ್ಯನೆನಿಸುತ್ತದೆ. ಪ್ರಾಣಿಗೆ ಪ್ರಾಣವೇ ಮುಖ್ಯವಾಗಿದ್ದರೂ ಪ್ರಾಣದಾಚೆಗಿರುವ ಮನಸ್ಸಿನ ಸುಳುಹುಹೊಳಹುಗಳಂತಿರುವ ತಿಳಿವಳಿಕೆಯು ಸಂಗಳಿಸುವ ಹಾಗೆ, ಮನಸ್ಸೇ ಮುಖ್ಯವಾಗಿದ್ದರೂ ಮನುಷ್ಯನು ಬುದ್ಧಿವಂತಿಕೆ ಮಾತ್ರ ಗಳಿಸದೆ, ಅದರಾಚೆಗನ ತಿಳಿವಳಿಕೆಯನ್ನು ಕೈಗೂಡಿಸಿಕೊಳ್ಳಬಲ್ಲನು, ಮನಸ್ತರದಲ್ಲಿ ನಿಂತ ಮನುಷ್ಯ ಚೇತನವು ಮಲಿನ ಸ್ತರಗಳಾದ ಉಚ್ಚ ಸಂಬೋಧಿ, ಪ್ರಕಾಶಮಯ ಮನೆಗಳ ವಾತಾವರಣದಲ್ಲಿ ವಿಹರಿಸಬಲ್ಲನು.

“ತಿಳಕೊಳ್ಳುವುದು ತೀರುತ್ತಲೆ ತಿಳಿಳುವಳಿಕೆ ಉಂಟಾಗುವುದು” ಎಂದು ಶ್ರೀ ಅರವಿಂದರು ಹೇಳುತ್ತಾರೆ. “ತಿಳುವಳಿಕೆಯಂಥ ತಿಳಿಗೇಡಿತನವಿನ್ನಿಲ್ಲ ಎನ್ನುವುದು ದಿ. ಬೇಂದ್ರೆಯವರ ಅನುಭಾವ, ಇವೆರಡರಲ್ಲಿ ಸಮನ್ವಯವನ್ನು ಉಂಟು ಮಾಡುವುದು ಹೇಗೆ? ಬರೆ ತಿಳುವಳಿಕೆಯ ಬಾಲಹಿಡಿದು ಸಾಗುವುದು ತಿಳಿಗೇಡಿತನವೇ ಅಹುದು. ತಿಳಿಕೊಳ್ಳುವುದನ್ನ ಸ್ಥಗಿತಗೊಳಿಸಿದರೆ, ಅಲ್ಲಿ ತಿಳುವಳಿಕೆ ಉದಿಸತೊಡಗುತ್ತದೆ. ಅದೇ ಉಚ್ಚಮನದ ಸೀಮೆಯೆಂದು ಹೇಳಬಹುದು. ಆ ಸೀಮೆಯಲ್ಲಿ ತಿಳುವಳಿಕೆಗೆ ಮೀರಿದ, ಅಂತರಂಗದ ಅನಿಸಿಕೆಗಳನ್ನು ಬೀರಲಾಗುತ್ತದೆಂದು ತೋರುತ್ತದೆ. ಅದು ನಮ್ಮ ನಿಮ್ಮೆಲ್ಲರ ಅನುಭವಕ್ಕೂ ಬಂದಿರಬಹುದಾಗಿದೆ. ಅದು ಉಚ್ಚ ಮನದ ಬದುಕೆಂದು ಎದೆತಟ್ಟಿ ಹೇಳಲು ಅಸಮರ್ಥರಾಗಿದ್ದೇವೆ; ಅಷ್ಟೇ.”

ಇಂದು ನನ್ನಂಗಳ ಶ್ರೀಗಂಧನಾತಾವ
ಬಂದಿದಾನೇನ ಶ್ರೀ ಹರಿ | ನನ ಮನೆಗೆ
ಗಂಧದ ಮಡುವ ತುಳಕೂತ ||

ಈ ತ್ರಿಪದಿಯೊಳಗಿನ ಮೊದಲಸಾಲು ಕೇಳಿದ ಕೂಡಲೇ ಮೀಸೆ ಹೊತ್ತ ಗಂಡಸರು ಬೆಚ್ಚಿ ಬೀಳುತ್ತಾರೆ; ರೊಚ್ಚಿಗೇಳುತ್ತಾರೆ. “ನಾಯಿಗೆ ಬೊಗಳಳು ಕಲಿಸುವುದಿಲ್ಲ. ಹೆಂಗಸಿಗೆ ಹಾಡಲು ಕಲಿಸುವುದಿಲ್ಲ” ಎಂದು ನುಡಿದು ನಾಯಿ ನಾರಿಯರನ್ನು ಒಂದೇ ದಾರದಲ್ಲಿ ಪವಣಿಸಿ ನಿಲ್ಲುತ್ತಾರೆ. ಇಂದಿನ ವೈಜ್ಞಾನಿಕಯುಗದಲ್ಲಿ ಇಂಥ ಮಾತುಗಳು ನಗೆಗೆಡೆ ಯಾಗುವುದರಲ್ಲಿ ಸಂದೇಹವೇ ಇಲ್ಲ. ಅಂಗಳವು ಶ್ರೀಗಂಧನಾರುವುದುಂಟೇ? ಎಂದು ಮೂಗು ಮುರಿಯುವ ಇಂದಿನ ಸುಶಿಕ್ಷಿತರಿಗೆ, ಕಿವಿಹಿಂಡಿ ಹೇಳಬಲ್ಲಂಥ ಮಹಾಮಹಿಮರು ೧೯-೨೦ನೇ ಶತಮಾನದಲ್ಲಿ ಹುಟ್ಟಿಬಂದು ಹೇಳಿದ್ದೂ ಉಂಟು. ಏನೆಂದರೆ “ಭೌತಿಕ ವಿeಜಾನವೇ ಇಷ್ಟೊಂದು ಆಶ್ಚರ್ಯಕರವಾಗಿರುವಾಗ, ಆತ್ಮಿಕ ವಿಜ್ಞಾನವು ಇನ್ನಷ್ಟು ಆಶ್ಚರ್ಯಕರವಾಗಿರಬೇಡ ಆ ಮಾತಿಗೆ ಸ್ಪಷ್ಟವಾದ ಉದಾಹರಣೆ ಹೇಳಬಹುದಾಗಿದೆ.”

ಅಧರಸೇನ ಎಂಬು ಸ,ಹಾಯಕ ಜಿಲ್ಲಾಧಿಕಾರಿಗಳು, ದಕ್ಷಿಣೇಶ್ವರದಲ್ಲಿದ್ದ ಶ್ರೀ ರಾಮಕೃಷ್ಣ ಪರಮಹಂಸರೊಂದಿಗೆ ನಿಕಟಸಂಬಂಧವಿರಿಸಿಕೊಂಡಿದ್ದರು. ಅವರನ್ನು ಆಗಾಗ ತಮ್ಮ ಮನೆಗೆ ಬರಮಾಡಿಕೊಂಡು, ಮನೆಯ ಮಂಡಲಿಗೆಲ್ಲ ಅವರ ಸಂಪರ್ಕವನ್ನು ಒದಗಿಸಿಕೊಡುತ್ತಿದ್ದರು. ಆ ಕಾಲಕ್ಕೆ ನಡೆಯುವ ಪೂಜೆ ಪ್ರಾರ್ಥನೆ ಪ್ರಸಾದವಿತರಣೆಗಳು ಸುರವಾಂಛಿತ ಸುಸಂಧಿಯನ್ನು ಒದಗಿಸುತ್ತಿದ್ದವು. ಆದರೆ ಅಧರಸೇನರು ಅದಾವುದೋ ಸರ್ಕಾರಿ ಕಾರ್ಯಬಾಹುಲ್ಯದಲ್ಲಿ ತೊಡಗಿ ಅಂಥ ಶ್ರೇಷ್ಠ ಪ್ರಸಂಗಗಳನ್ನು ಆರುತಿಂಗಳು ತಪ್ಪಿಸಿಕೊಂಡಿದ್ದರು. ಕೆಲಸದ ಒತ್ತಡವು ತುಸು ತಮ್ಮಣಿಗೊಳ್ಳುತ್ತಲೆ, ದಕ್ಷಿಣೇಶ್ವರದಿಂದ ಪರಮಹಂಸರನ್ನು ಮನೆಗೆ ಬರಮಾಡಿಕೊಂಡರು. ಅವರ ದರ್ಶನಾರ್ಶೀವಾದಗಳಿಗಾಗಿ ಮನೆಯ ಮಂಡಲಿ ಆಪ್ತೇಷ್ಟರೆಲ್ಲ ಶುಚಿರ್ಭೂತರಾಗಿ ಬರತೊಡಗಿದರು. ಗುರುಗಳನ್ನು ಸತ್ಕರಿಸುವ ಸಿದ್ಧತೆ ನಡೆಸಿದ ಅವಸರದಲ್ಲಿಯೂ ಅಧರಸೇನರು ನುಡಿದರು –

“ನೋಡಿರಿ! ಆರುತಿಂಗಳಿಂದ ಬಿಕೋರಿ ಅನ್ನುತ್ತಿದ್ದ ಮನೆ ಇಂದು ಸುಗಂಧಮಯವಾಗಿದೆ. ಗುರುಗಳ ಸಾನ್ನಿಧ್ಯದಿಂದ”

ಸತ್ಪುರುಷರ ಹಾಗೂ ಮಹತ್ಪುರುಷರ ಸಮಾಗಮವು ಮನಸ್ಸಿನ ಹೀನ ವಾಸನೆಗಳನ್ನು ಸುಟ್ಟುಹಾಕ ಸುವಾಸನೆಯನ್ನು ತಂದೆರುಚ್ಚುತ್ತವೆಂದು ಹೇಳಬಹುದಾಗಿದೆ.

ಧಾರವಾಡ ತಪೋವನದ ತಪಸ್ವಿಗಳಾದ ಶ್ರೀಕುಮಾರ ಸ್ವಾಮಿಗಳು ಒಂದೆರಡು ದಿವಸ ಚಡಚಣದ ಬಳಿಯಲ್ಲಿರುವ ಲೋಣಿ ಗ್ರಾಮದಲ್ಲಿ ವಾಡಿಕೆಯಂತೆ ಬೀಡುಬಿಟ್ಟಿದ್ದರು. ಆ ಕಾಲಕ್ಕೆಸುತ್ತಲಿನ ಹಳ್ಳಿಗಳಿಂದ, ಹತ್ತಿರದ ನಗರಗಳಿಂದ, ಅದೆಷ್ಟೋ ಜನ ಭಕ್ತರು ದರ್ಶನಾಕಾಂಕ್ಷಿಗಳಾಗಿ ಬಂದು, ವಂದಿಸಿ, ಆಶೀರ್ವಾದ ಪಡೆದುಕೊಂಡು ತೆರಳುತ್ತಿದ್ದರು. ಸೊಲ್ಲಾಪೂರದಿಂದ ಮಾರವಾಡಿ ದಂಪತಿಗಳು, ಸ್ವಾಮಿಗಳ ಮುಂದೆ ಫಲ ಪುಷ್ಪಗಳನ್ನಿರಿಸಿ, ಎರಗಿಕೇಳಿಕೊಂಡುರ –

ಅಪ್ಪಗಳೇ, ನೀವು ಸೊಲ್ಲಾಪುರದಲ್ಲಿ ಬೀಡು ಬಿಟ್ಟಾಗ ನಿಮಗಾಗಿ ಕಾದಿರಿಸಿದ್ದ ಕೋಣೆಯನ್ನು ನಾವು ಯಾವುದಕ್ಕೂ ಉಪಯೋಗಿಸದೆ ಕೀಲಿ ಹಾಕಿಸಿದ್ದೇವೆ. ಆಗಾಗ ಕಸಗೂಡಿಸಿ, ಧೂಳು ಜಾಡಿಸುವುದಕ್ಕಾಗಿ ಕೋಣೆ ತದೆರೆದರೆ, ಸುಗಂಧಮಯ ವಾತಾವರಣ ಅಲ್ಲಿ ತುಂಬಿ ಸುಸಾಡುತ್ತಿರುವುದು ಕಂಡು ಬರುತ್ತದೆ. ತಮ್ಮದೇ ಆದ ಆ ಕೋಣೆಯಲ್ಲಿ ತಾವು ಇನ್ನೊಮ್ಮೆ ಬಂದು, ತಿಂಗಳೊಪ್ಪತ್ತು ನಿಂತು ಪುನೀತಗೊಳಿಸಬೇಕೆಂದು ಪ್ರಾರ್ಥಿಸುತ್ತೇವೆ.

ತಪಸ್ವಿಗಳು ವಾಸಮಾಡಿದ ಕೋಣೆ ಸುಗಂಧಮಯ ವಾತಾವರಣವನ್ನು ಕಾಯ್ದುಕೊಂಡಿದ್ದು ಇಲ್ಲಿ ಮುಖ್ಯವಲ್ಲವೇ? ಮಹತ್ಪುರುಷರ ಉಸಿರು ಮೈಬೆವರು ಉಜ್ವಲವಾದ ಸುಗಂಧ ಬೀರುತ್ತವೆಂದು, ಅಂಥ ದಿವ್ಯಸಂಪರ್ಕದಲ್ಲಿದ್ದವರು ಹೇಳುವುದನ್ನು ಕೇಳಿದ್ದೇವೆ. ಹೀಗಿರುವಾಗ ನಮ್ಮ ಗರತಿ ಹಾಡಿದ ಇಂದು ನನ್ನಂಗಳ ಶ್ರೀಗಂಧನಾತವ ಎಂದು ಮೊದಲಾಗುವ ಹಾಡು, ವಾಸ್ತವಿಕತೆಯನ್ನು ಕಳಕೊಂಡಿಲ್ಲವೆಂದೇ ಹೇಳಬೇಕು. ಶ್ರೀ ಹರಿಯಾಗಲಿ, ಶ್ರೀಹರಿಯ ಪ್ರತಿನಿಧಿಯಾಗಲಿ ಬರುವುದು ತುಳುಕು ಗಂಧದ ಮಡುವನ್ನು ಮುಂದೆ ಮಾಡಿಕೊಂಡು ಎಂಬ ಮನವರಿಕೆ ಆಕೆಗೆ ಆಗಿರಲೇಬೇಕು, ಅನುಭವಕ್ಕೆ ಬಂದಿರಲೇಬೇಕು. ಆಕೆಯ ಆ ಅನುಭವವು ಅನುಭವ ಮಾತ್ರವಾಗಿರದೆ ಮಹಾನುಭವವೂ ಆಗಿದೆಯೆಂದು ಎದೆತಟ್ಟಿ ಹೇಳಬಹುದಾಗಿದೆ. ಅದು ಮನಸ್ತರದ ಆಚೆಗಿರುವ ಉಚಮನದಸಂಪರ್ಕ ಪಡೆದ ಮಹಾನುಭವವೇ ಆಗಿದೆ. ಉಚ್ಚಮನವೆಂದರೆ ಅತಿಮಾನಸದ ಕೆಳಗಿರುವ ೩ನೇ ನೆಲಮನೆಯೇ ಆಗಿದೆಯಂತೆ.

ವಿವೇಕಾನಂದ ಸ್ವಾಮಿಗಳಿಗೆ ಉಚ್ಚಮನದ ಸ್ತರವು ನೆಲೆಯಾಗಿತ್ತೆಂದೂ ಅರ ಗುರು ಪರಮಹಂಸರಿಗೆ, ಅದಕ್ಕೂ ಮೇಲಿನ ಸಂಬೋಧಿಮನಸ್ತರವು ನೆಲೆಯಾಗಿತ್ತೆಂದೂ ಹೇಳುತ್ತಾರೆ. “ಸಂಸಾರವೇದ”ವನ್ನು ಉಸಿರಬಲ್ಲ ಗರತಿಗೆ ಉಚ್ಚಮನಸ್ತರವು. ವಾಸ್ತವ್ಯದ ಮೇಲ್ಮಾಳಿಗೆಯೇ ಆಗಿರುವದೆಂದು ತೋರುತ್ತದೆ.

ಬಿತ್ತೀದ ಹೊಲದಾಗ ಒತ್ತಿ ಹಾಯಕಿಯಾರ
ಮುತ್ತಿನುಡಿಯಾಕಿ ಬನದಮ್ಮ | ಹಾಯ್ದರ |
ಬಿಚ್ಚಿಬಿದ್ದಾವ ಬಿಳಿಜೋಳ ||

ನಿನ್ನೆ ಸಾಯಂಕಾಲದ ಹೊತ್ತಿಗೆ ಹೂ ಚಿಕ್ಕಾರುವ ಜೋಳದ ತೆನೆಯಲ್ಲಿ ಬೆಳಗಾಗುವುದರಲ್ಲಿ ಮುತ್ತಿನಂಥ ಜೋಳದ ಕಾಳುಗಳು ಕಂಗೊಳಿಸಬೇಕಾದರೆ, ಅಲ್ಲಿ ಬನದಮ್ಮದೇವಿ ಸುಳಿದಿರಲೇಬೇಕಲ್ಲವೇ? ಮುತ್ತಿನುಡಿಯಿಂದ ಒಂದೊಂದು ಮುಷ್ಟಿ ಮುತ್ತುಗಳನ್ನು ಪ್ರತಿಯೊಂದು ಜೋಳದ ದಂಟಿನ ತುದಿಯಲ್ಲಿರುವ ಹೂ ಬಿಟ್ಟ ತೆನೆಯಲ್ಲಿ ಹಾಕಿ ಹೋಗಿದ್ದಾಳೆಂದೇ ಬೆಳಗಾಗುವುದರಲ್ಲಿ ಅದ್ಭುತ ಮಾರ್ಪಾಡು ಕಂಡುಬರುವುದಲ್ಲವೇ? ಜೋಳದ ಬೆಳೆಯಲ್ಲಿ ಹಾದು ಹೋಗುವಾಗ ಮುತ್ತಿನುಡಿಯಾಕೆಯಾಗಿದ್ದ ಬನದಮ್ಮ ಗೋದಿಯ ಬೆಳೆಯಲ್ಲಿ ಹಾದು ಹೋಗುವಾಗ ಹವಳದ ಉಡಿಯಾಕೆ ಆಗುತ್ತಿರುವಳೇನೋ.

ಭಕ್ತಿಯ ದಾರಿಯಲ್ಲಿ ಸಾಗುವುದೆಂದರೆ ಹಾವಸೆಗಲ್ಲಿನ ಮೇಲೆ ಹಾದು ಹೋದಹಾಗೆ ಎಂದು ಶರಣರು ಹೇಳುತ್ತಾರೆ. ಸಾಧಕಾವಸ್ಥೆಯಲ್ಲಿ ಹಾಗೆ ಅನಿಸುವುದು ವಾಸ್ತವಿಕವೇ ಆಗಿದೆ. ಆದರೆ ಸಿದ್ಧಪುರುಷನಿಗೆ ಅದು ರಾಜಮಾರ್ಗವೇ ಆಗಿರುತ್ತದೆ.

ಹಾಸಗಲ್ಲಿನ ಮ್ಯಾಲ ಹಾದು ಹೋಗವನ್ಯಾರ
ಪಾದ ಮೂಡ್ಯಾವ ಪರಿಪರಿ | ಬಲಭೀಮ |
ಹಾದ ಹೋಗ್ಯಾನ ಜಳಕಾಕ ||

ಸಿದ್ಧಿಪಡೆಯ ವ್ಯಕ್ತಿ ಹೆಣ್ಣಿರಲಿ ಗಂಡಿರಲಿ ಬಲಭೀಮನೇ ಸರಿ ಆಕೆಯದು ಭೀಮಬಲವೇ ಸರಿ.

ಸಾಧಕಾವಸ್ಥೆಯಲ್ಲಿ “ಎನಗಿಂತ ಕಿರಿಯರಿಲ್ಲ” ಎಂದು ವಿನಯಿಸಿದ ಬಸವಣ್ಣ ಸಿದ್ಧಾವಸ್ಥೆಯಲ್ಲಿ ತನ್ನ ಉಪಾಸ್ಯ ದೈವತ್ವವನ್ನು ಕುರಿತು – “ಜಗಕೆ ಬಲ್ಲಿದ ನೀನು. ನಿನಗೆ ಬಲ್ಲಿದ ನಾನು” ಎಂದೂ, “ಜಗವ ಸುತ್ತಿಪ್ಪುದು ನಿನ್ನ ಮಾಯೆ, ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ” ಎಂದೂ ಹೇಳಬಲ್ಲವನಾಗಲಿಲ್ಲವೆ?

ಈ ವಿಧದಲ್ಲಿ ಗರತಿಗೆ ಮನಸ್ತರವನ್ನು ಮೀರಿದ ನಿಲುಮೆ ನೆರೆಮನೆಯಂತೆ ಹತ್ತಿರದ್ದೇ ಆಗಿತ್ತೆಂದು ಅನುಮಾನವಿಲ್ಲದೆ ಹೇಳಬಹುದಾಗಿದೆ.