ಪ್ರಾಚಾರ್ಯರು
ಸಂಶೋಧನಾ ಮಾರ್ಗದರ್ಶಕರು (ಕನ್ನಡ)
ಕೆ.ಎಸ್.ಎಸ್. ಮಹಾವಿದ್ಯಾಲಯ
ಗದಗ – ೫೮೨೧೦೧
ದೂರವಾಣಿ : (೦೮೩೭೨) ೨೩೬೨೯೦

ಐವತ್ತೆರಡು ವರ್ಷದ ಡಾ|| ಸಿದ್ದಪ್ಪ ಫಕೀರಪ್ಪ ಜಕಬಾಳ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬೆನಕಟ್ಟೆ ಗ್ರಾಮದವರು.

ಬಾಲ್ಯದಲ್ಲೇ ಮನೆಯಿಂದ ಜಾನಪದ ಶೈಲಿಯ ಹಾಡುಗಾರಿಕೆ, ಕಲೆಗಾರಿಕೆಯನ್ನು ಕರಗತ ಮಾಡಿಕೊಂಡ ಅವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಜಾನಪದ ಲೋಕಕ್ಕೆ ಉತ್ತಮ ಕೊಡುಗೆ ನೀಡಿದವರು.

ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಡಾ|| ಸಿದ್ದಣ್ಣ ಜಕಬಾಳ ಹಲವಾರು ಶಿಬಿರಗಳಲ್ಲಿ ಪಾಲ್ಗೊಂಡವರು ದೊಡ್ಡಾಟ ಸಂಗ್ರಹ, ಜಾನಪದ ಶೈಲಿ ಸಂರಕ್ಷಣೆ, ಸಂಬಂಧಪಟ್ಟ ಪ್ರಕಟಣೆಗಳು, ಕುರುಬರ ರಬ್ಬಮ ಶಾಸ್ತ್ರ, ಡೊಳ್ಳಿನ ಹಾಡುಗಳು ಹೀಗೆ ಅವರ ಕಲಾಸಕ್ತಿಗೆ ಮೇರೆಯೇ ಇಲ್ಲ.

ಇಂತಹ ಅಪರೂಪದ ಕಲಾವಿದರಿಗೆ ಅಕಾಡೆಮಿ ಪುರಸ್ಕರಿಸಿ ಅಭಿನಂದಿಸುತ್ತದೆ.