“ಚಿತ್ತಾರ”, ೧೨ನೆಯ ಅಡ್ಡರಸ್ತೆ
ನಿರ್ಮಲನಗರ, ಧಾರವಾಡ.
ದೂರವಾಣಿ : ೦೮೩೬-೨೪೪೪೨೩೭

(ಚಿತ್ರ ೪)

ಧಾರವಾಡ ಜಿಲ್ಲೆಯ ಡಾ|| ಸೋಮಶೇಖರ ಇಮ್ರಾಪುರ, ಹಿರಿಯ ಜಾನಪದ ವಿದ್ವಾಂಸರು. ಬಾಲ್ಯದಿಂದಲೇ ಗ್ರಾಮೀಣ ಸಂಸ್ಕೃತಿಗೆ ಮಾರು ಹೋಗಿ ಜಾನಪದ ಕಲೆ ಹಾಗೂ ಅಧ್ಯಯನಗಳ ಆಸಕ್ತಿ ಬೆಳೆಸಿಕೊಂಡರು.

ಅಧ್ಯಾಪನ ವೃತ್ತಿಯೊಂದಿಗೇ ನಾಡಿನ ಜಾನಪದ ಲೋಕದ ಒಳ-ಹೊರಗನ್ನು ಸಂಶೋಧಿಸಿ, ಅಧ್ಯಯನಾಸಕ್ತರಿಗೆ ನೀರೆರೆದು ಪೋಷಿಸಿದವರು. ಜನಪದ ಮಹಾಭಾರತ, ಜಾನಪದ ವಿeನ, ಜಾನಪದ ವ್ಯಾಸಂಗ, ಸಮೀಕ್ಷೆ, ಹಾಡುಗಳ ಬಗ್ಗೆ ವಿಶಿಷ್ಟ ಕೃತಿಗಳನ್ನು ನಾಡಿಗೆ ಕೊಟ್ಟು ತಮ್ಮ ಕಲಾಸೇವೆಯನ್ನು ಸಾರ್ಥಕಪಡಿಸಿಕೊಂಡವರು.

ಜಾನಪದ ಒಗಟುಗಳು, ಗಂಡ-ಹೆಂಡಿರ ಜಗಳ ಗಂಧ ತೀಡಿದ್ಹಾಂಗ (ಕಾವ್ಯ), ಬಿರುಗಾಳಿ (ಕಾವ್ಯ) ಇತ್ಯಾದಿಗಳಿಗೆ ಪ್ರಶಸ್ತಿಯ ಗರಿ ಮೂಡಿಸಿಕೊಂಡವರು ಡಾ|| ಸೋಮಶೇಖರ ಇಮ್ರಾಪುರ ಸಾಹಿತ್ಯ, ಕಾವ್ಯಾಸಕ್ತರೂ ಹೌದು.

ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಅವರನ್ನು ಗೌರವಿಸಿದೆ.