Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಹೆಚ್. ನಾಗರಾಜ್

ಹಳ್ಳಿಗಾಡಿನಿಂದ ನಗರಕ್ಕೆ ಬಂದು ವೈದ್ಯಕೀಯ ವ್ಯಾಸಂಗ ನಡೆಸಿ, ಗ್ರಾಮೀಣ ಭಾಗದ ಆರೋಗ್ಯ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಹಲವಾರು ಕಾರ್ಯಕ್ರಮಗಳನ್ನು
ಹಾಕಿಕೊಂಡ ವೈದ್ಯರು ಡಾ. ಹೆಚ್.ಕೆ. ನಾಗರಾಜು ಅವರು.
೧೯೪೫ರಲ್ಲಿ ಜನನ. ಬೆಂಗಳೂರು ವೈದ್ಯಕೀಯ ವಿದ್ಯಾಲಯದಿಂದ ಎಂಬಿಬಿಎಸ್ ಪದವಿ, ಎಂ.ಎಸ್ (ಜನರಲ್ ಸರ್ಜಲಿ), ಎಂ.ಸಿಹೆಚ್. (ಯುರಾಲಜಿ), ಎಫ್.ಐ.ಸಿ.ಎಸ್. ಪದವಿಗಳನ್ನು ಪಡೆದವರು. ನಾಡಿನ ಮೂತ್ರಶಾಸ್ತ್ರ ವೈದ್ಯರಲ್ಲಿ ಹೆಸರು ಮಾಡಿರುವ ಡಾ. ಹೆಚ್.ಕೆ. ನಾಗರಾಜು ಅವರು ಪ್ರಸ್ತುತ ಬೆಂಗಳೂರು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಮೂತ್ರಕೋಶ ತಜ್ಞರು.
ವಿದ್ಯಾರ್ಥಿ ದೆಸೆಯಿಂದಲೂ ಹಳ್ಳಿಗಾಡಿನ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಬಗ್ಗೆ ಹಲವಾರು ಶಿಖರಗಳನ್ನು ಏರ್ಪಡಿಸುತ್ತಾ ಬಂದಿರುವ ಡಾ. ನಾಗರಾಜು ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸುವ ಯಂತ್ರಗಳನ್ನು ತಮ್ಮ ಧರ್ಮಾರ್ಥ ಸಂಸ್ಥೆಯಲ್ಲಿ ಸ್ಥಾಪಿಸಿ ಚಿಕಿತ್ಸೆ ನೀಡುವ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಮೂತ್ರಪಿಂಡಗಳಲ್ಲಿ ಕಲ್ಲು ಇರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ತಮ್ಮ ಸಂಸ್ಥೆಯ ಸಂಚಾಲ ಆಸ್ಪತ್ರೆಯನ್ನು ನಿಗಱತ ಅವಧಿಯಲ್ಲಿ ಕೊಂಡೊಯ್ದು ಶಿರಗಳನ್ನು ನಡೆಸಿ ಅಗತ್ಯ ಚಿಕಿತ್ಸೆಗಳನ್ನು ಡಾ. ನಾಗರಾಜ್ ಅವರು ನೀಡುತ್ತಿದ್ದಾರೆ. ತಮ್ಮ ವೃತ್ತಿ ಕೌಶಲ್ಯಕ್ಕಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ವಿವಿಧ ವೈದ್ಯಕೀಯ ಸಂಸ್ಥೆಗಳಿಂದ ಏಳು ಚಿನ್ನದ ಪದಕಗಳನ್ನು ಪಡೆದಿರುವ ಡಾ. ನಾಗರಾಜ್ ಅವರು ದೇಶವಿದೇಶಗಳ ಅನೇಕ ವೈದ್ಯಕೀಯ ಸಂಸ್ಥೆ ಹಾಗೂ ವೈದ್ಯಕೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ವೈದ್ಯಕೀಯ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಯುರಾಲಜಿ ಬಗ್ಗೆ ಹೆಚ್ಚಿನ ತರಬೇತಿಯನ್ನು ಪಡೆದಿರುವ, ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ನಡೆಸಿದ್ದು ಹಲವಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದವರು ಡಾ. ಹೆಚ್.ಕೆ. ನಾಗರಾಜ್ ಅವರು