Categories
e-ದಿನ

ಡಿಸೆಂಬರ್-1

ಪ್ರಮುಖ ಘಟನಾವಳಿಗಳು:

1843: ಮೊದಲ ಸನದು ಪಡೆದ ಮ್ಯೂಚುವೆಲ್ ಜೀವಾ ವಿಮೆ ಸಂಸ್ಥೆಯು ಆರಂಭವಾಯಿತು.

1878: ಅಮೇರಿಕಾದ ಅಧ್ಯಕ್ಷರ ಮನೆಯಾದ “ವೈಟ್ ಹೌಸ್” ನಲ್ಲಿ ಮೊದಲ ದೂರವಾಣಿಯನ್ನು ಸ್ಥಾಪಿಸಲಾಯಿತು.

1891: ಬಾಸ್ಕೆಟ್ ಬಾಲ್ ಆಟವನ್ನು ಜೇಮ್ಸ್ ನೈಸ್ಮಿತ್ ಸೃಷ್ಟಿಸಿದರು.

1913: ಫೋರ್ಡ್ ಮೋಟಾರ್ ಸಂಸ್ಥೆಯು ಟಿ ಮಾಡೆಲ್ ಫೋರ್ಡ್ಗಳಿಗಾಗಿ ವಿಶ್ವದ ಮೊದಲ ಚಲಿಸುವ ಅಸೆಂಬ್ಲಿ ಲೈನ್ನನ್ನು ಸ್ಥಾಪಿಸಿದರು.

1921: ಅಮೇರಿಕಾದ ಅಂಚೆ ಕಛೇರಿ ಅಂಚೆಚೀಟಿಗಳ ಸಂಗ್ರಹಕ್ಕೆ ಸಂಬಂಧಿಸಿದ ಸಂಸ್ಥೆ ಸ್ಥಾಪಿಸಿತು.

1959: ಭೂಮಿಯ ಮೊದಲ ಬಣ್ಣದ ಛಾಯಾಚಿತ್ರವನ್ನು ಬಾಹ್ಯಾಕಾಶದಿಂದ ಸೆರೆಹಿಡಿಯಲಾಯಿತು.

1963: ಭಾರತದ ಸುಂದರವಾದ ಈಶಾನ್ಯ ಪರ್ವತ ರಾಜ್ಯವಾದ ನಾಗಾಲ್ಯಾಂಡ್ ರಾಜ್ಯವು ಅಸ್ತಿತ್ವಕ್ಕೆ ಬಂದಿತು.

2003: ಜನವರಿ 1 2004 ರ ಹೊತ್ತಿಗೆ ಭಾರತ ಮತ್ತು ಪಾಕಿಸ್ತಾನ ಏರ್ಲೈನ್ ಓವರ್ ಫ್ಲೈಟ್ ಮತ್ತು ಲ್ಯಾಂಡಿಗ್ ಹಕ್ಕುಗಳನ್ನು ಪುನಃಸ್ಥಾಪಿಸಲು ಒಪ್ಪಂದ ಮಾಡಲಾಯಿತು.

2010: ವಿಪ್ರೋ ಸಂಸ್ಥೆಯ ಅಧ್ಯಕ್ಷರಾದ ಅಜಿಮ್ ಪ್ರೇಮ್ಜಿ ಬಡವರಿಗೆ ಶಿಕ್ಷಣ ಕಾರ್ಯಕ್ರಮಗಳನ್ನು ಒದಗಿಸಲು ಸುಮಾರು 2 ಶತಕೋಟಿ ಡಾಲರ್ ಗಳನ್ನು ದೇಣಿಗೆ ನೀಡಿದರು.

2011: ಭಾರತದಾದ್ಯಂತ ಅಂಗಡಿಗಳು ದೊಡ್ಡ ಪೆಟ್ಟಿಗೆ ಚಿಲ್ಲರೆ ವ್ಯಾಪಾರಿಗಳನ್ನು ದೇಶಕ್ಕೆ ಅನುಮತಿ ನೀಡಲು ನೂತನ ನೀತಿಯನ್ನು ಪ್ರತಿಭಟಿಸಲು ಮುಷ್ಕರ ಮಾಡಲು ಅಂಗಡಿಗಳನ್ನು ಮುಚ್ಚಲಾಯಿತು.

ಪ್ರಮುಖ ಜನನ/ಮರಣ:

1924: ಭಾರತದ ಯೋಧ ಮತ್ತು ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಶೈತಾನ್ ಸಿಂಗ್ ಜನಿಸಿದರು.

1933: ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಲ್ ಜನಿಸಿದರು.

1950: ಭಾರತದ ಜೀವಶಾಸ್ತ್ರಜ್ಞ ಮಂಜು ಬನ್ಸಾಲ್ ಜನಿಸಿದರು.

1954: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಜನಿಸಿದರು.

1960: ಭಾರತದ ರಾಜಕೀಯ ವಿಜ್ಞಾನಿ ಶಿರಿನ್ ಎಂ ರೈ ಜನಿಸಿದರು.

1964: ತಳಿ ವಿಜ್ಞಾನಿ ಮತ್ತು ಜೀವಶಾಸ್ತ್ರಜ್ಞ ಜೆ,ಬಿ.ಎಸ್. ಹಲ್ದನೆ ನಿಧನರಾದರು.

1980: ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಖೈಫ್ ಜನಿಸಿದರು.

1980: ಬೆಂಗಳೂರಿನ ವಿಧಾನ ಸೌಧವನ್ನು ನಿರ್ಮಿಸಿದ ಮತ್ತು ಹಳೆಯ ಮೈಸೂರು ರಾಜ್ಯದಲ್ಲಿ ಮುಖ್ಯ ಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ ನಿಧನರಾದರು.

1990: ಜವರ್ಲಾಲ್ ನೆಹೆರು ಅವರ ತಂಗಿ ವಿಜಯ್ ಲಕ್ಷ್ಮಿ ಪಂಡಿತ್ ನಿಧನರಾದರು.

2008: ಖ್ಯಾತ ಸಂಗೀತ ಸಂಜೋಜಕರಾದ ಎ.ಆರ್.ರೆಹೆಮಾನ್ ಅವರೊಂದಿಗೆ ಕೆಲಸ ಮಾಡಿದ ಖ್ಯಾತ ಸೌಂಡ್ ಇಂಜಿನಿಯರ್ ಹೆಚ್. ಶ್ರೀಧರ್ ನಿಧನರಾದರು.