ಪ್ರಮುಖ ಘಟನಾವಳಿಗಳು:

 • 1800: ವಾಷಿಂಗ್ಟನ್ ಡಿ.ಸಿ. ಅಮೇರಿಕಾದ ಸಂಯುಕ್ತ ಸಂಸ್ಥಾನದ ರಾಜಧಾನಿಯಾಗಿ ಸ್ಥಾಪಿಸಲಾಯಿತು.

 • 1858: ಮೊದಲ ಕೆನೆಡಾದ ನಾಣ್ಯಗಳನ್ನು ವಿತರಿಸಲಾಯಿತು.

 • 1871: ಜೂಲ್ಸ್ ಜಾನ್ಸೆನ್ ಸೌರ ಕರೋನಾ ಸ್ಪೆಕ್ಟ್ರಮ್ಮಿನಲ್ಲಿ ಕಪ್ಪು ರೇಖೆಗಳನ್ನು ಕಂಡು ಹಿಡಿದರು.

 • 1911: ದೆಹೆಲಿಯು ಕಲ್ಕತ್ತಾವನ್ನು ಭಾರತದ ರಾಜಧಾನಿಯಾಗಿ ಬದಲಿಸಲಾಯಿತು.

 • 1911: ಬ್ರಿಟನ್ನಿನ ರಾಜ ಜಾರ್ಜ್-V ಮತ್ತು ಟೆಕ್ಕಿನ ಮೇರಿಯವರನ್ನು ಭಾರತದ ಚಕ್ರವರ್ತಿ ಮತ್ತು ಸಾಮ್ರಾಜ್ಞಿಯಾಗಿ ಘೋಷಣೆ ಮಾಡಲಾಯಿತು.

 • 1941: ಎರಡನೇ ವಿಶ್ವಯುದ್ಧದಲ್ಲಿ ಭಾರತವು ಜಪಾನಿನ ಮೇಲೆ ಯುದ್ಧ ಘೋಷಿಸಿತು.

 • 1946: “ಟೈಡ್” ಮಾರ್ಜಕವನ್ನು ಪರಿಚಯಿಸಲಾಯಿತು.

 • 1964: ಕೆನ್ಯಾ ಗಣರಾಜ್ಯವಾಯಿತು.

 • 1980: ಅಮೇರಿಕಾದ ಕೃತಿಸ್ವಾಮ್ಯ ಕಾನೂನು ಕಂಪ್ಯೂಟರ್ ಪ್ರೋಗ್ರಾಂಗಳನ್ನು ಸೇರಿಸಲು ತಿದ್ದುಪಡಿ ಮಾಡಲಾಯಿತು.

 • 1991: ರಷ್ಯಾದ ಒಕ್ಕೂಟವು ಯು.ಎಸ್.ಎಸ್.ಆರ್ ನಿಂದ ಸ್ವತಂತ್ರವಾಯಿತು.

ಪ್ರಮುಖ ಜನನ/ಮರಣ:

 • 1925: ಭಾರತದ ಕ್ರಿಕೆಟ್ ಆಟಗಾರ ದತ್ತು ಪಡ್ಕರ್ ಜನಿಸಿದರು

 • 1940: ಭಾರತದ ಕೃಷಿ ಮಂತ್ರಿಯಾಗಿದ್ದ ಶರದ್ ಪವಾರ್ ಜನಿಸಿದರು.

 • 1949: ಮಹಾರಾಷ್ಟ್ರದ 3ನೇ ಉಪ ಮುಖ್ಯಮಂತ್ರಿ ಆಗಿದ್ದ ಗೋಪಿನಾಥ್ ಮುಂಡೆ ಜನಿಸಿದರು.

 • 1950: ಭಾರತೀಯ ನಟ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಜನಿಸಿದರು.

 • 1954: ಭಾರತದ ಖ್ಯಾತ ಪೋಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಜನಿಸಿದರು.

 • 1964: ಕವಿ ಮತ್ತು ಚಿತ್ರಕಥೆಗಾರ ಮೈಥಿಲಿ ಶರಣ್ ಗುಪ್ತ ನಿಧನರಾದರು.

 • 1981: ಖ್ಯಾತ ಭಾರತದ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಜನಿಸಿದರು.

 • 2005: ಭಾರತದ ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರ ರಮಾನಂದ್ ಸಾಗರ್ ನಿಧನರಾದರು.

 • 2012: ಉತ್ತರಾಖಂಡದ ಮೊದಲ ಮುಖ್ಯಮಂತ್ರಿ ನಿತ್ಯಾನಂದ ಸ್ವಾಮಿ ನಿಧನರಾದರು.

 • 2015: ಭಾರತದ ರೈತ ಮತ್ತು ರಾಜಕಾರಣಿ ಶರದ್ ಅನಂತರಾವ್ ಜೋಷಿ ನಿಧನರಾದರು.