ಪ್ರಮುಖ ಘಟನಾವಳಿಗಳು:

 • 1593: ಕ್ರಾಂಕ್ಶಾಫ್ಟಿನ ಮೂಲಕ ನಡೆಯುವ ಗಾಳಿಯಂತ್ರಕ್ಕೆ ಹಾಲೆಂಡ್ ಪೇಟೆಂಟ್ ನೀಡಿತು.

 • 1654: ಟುಸ್ಕಾನಿಯಲ್ಲಿ ದಿನನಿತ್ಯದ ಉಷ್ಣತೆಯನ್ನು ದಾಖಲಿಸಲು ಹವಮಾನ ಕಛೇರಿಯನ್ನು ಸ್ಥಾಪಿಸಲಾಯಿತು.

 • 1791: ಅಮೇರಿಕಾದ ಮೊದಲ ಕಾನೂನು ಶಾಲೆಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು.

 • 1792: ಫಿಲಾಡೆಲ್ಫಿಯಾದಲ್ಲಿ ಮೊದಲ ಜೀವವಿಮಾ ಪಾಲಿಸಿಯನ್ನು ನೀಡಲಾಯಿತು.

 • 1854: ರಸ್ತೆ ಸ್ವಚ್ಛಗೊಳಿಸುವ ಯಂತ್ರವನ್ನು ಮೊದಲ ಬಾರಿಗೆ ಫಿಲಾಡೆಲ್ಫಿಯಾದಲ್ಲಿ ಬಳಸಲಾಯಿತು.

 • 1877: ಥಾಮಸ್ ಆಲ್ವಾ ಎಡಿಸನ್ ಧ್ವನಿ ಲೇಖನ ಯಂತ್ರಕ್ಕೆ ಪೇಟೆಂಟ್ ಪಡೆದರು.

 • 1939: ನೈಲಾನ್ ನೂಲುಗಳ ಮೊದಲ ವಾಣಿಜ್ಯ ತಯಾರಿಕೆ ಮಾಡಲಾಯಿತು.

ಪ್ರಮುಖ ಜನನ/ಮರಣ:

 • 1908: ಭಾರತದ ವಿದ್ವಾಂಸ ಆಧ್ಯಾತ್ಮಿಕ ಗುರು ಸ್ವಾಮಿ ರಂಗನಾಥನಂದ ಜನಿಸಿದರು.

 • 1917: ಭಾರತೀಯ-ಪಾಕಿಸ್ತಾನಿ ಭಾಷಾಶಾಸ್ತ್ರಜ್ಞ ಮತ್ತು ಉಪನ್ಯಾಸಕ ಶಾನ್-ಉಲ್-ಹಖ್ ಹಖ್ಖಿ ಜನಿಸಿದರು.

 • 1924: ಚಂಡೀಘಡದ ರಾಕ್ ಗಾರ್ಡನ್ ನಿರ್ಮಿಸಿದ ನೇಕ್ ಚಂದ್ ಜನಿಸಿದರು.

 • 1933: ಭಾರತದ ನಿರ್ದೇಶಕ ಮತ್ತು ಚಿತ್ರಕಥೆಗಾರ ಬಾಪು ಜನಿಸಿದರು.

 • 1950: ಸ್ವತಂತ್ರ ಭಾರತದ ಮೊದಲ ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಾಯ್ ಪಟೇಲ್ ನಿಧನರಾದರು.

 • 1971: ಮೊದಲ ಭಾರತೀಯ ವೃತ್ತಿಪರ ಗಾಲ್ಫ್ ಆಟಗಾರ ಜೀವ್ ಮಿಲ್ಕಾ ಸಿಂಗ್ ಜನಿಸಿದರು.

 • 1974: ಭಾರತೀಯ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ರಸೂಲನ್ ಬಾಯಿ ನಿಧನರಾದರು.

 • 1976: ಭಾರತೀಯ ಫುಟ್ಬಾಲ್ ಆಟಗಾರ ಮತ್ತು ನಿರ್ವಾಹಕ ಬೈಚುಂಗ್ ಭುಟಿಯಾ ಜನಿಸಿದರು.

 • 2013: ಖ್ಯಾತ ಗಾಯಕ ಸಂದೀಪ್ ಆಚಾರ್ಯ ನಿಧನರಾದರು.