Categories
e-ದಿನ

ಡಿಸೆಂಬರ್-16

 

ಪ್ರಮುಖ ಘಟನಾವಳಿಗಳು:

1862: ನೇಪಾಳದ ರಾಜಸತ್ತೆಯು ಸಂವಿಧಾನವನ್ನು ಅಂಗೀಕರಿಸಿತು.

1897: ಆಂತರಿಕ ದಹನಕಾರಿ ಇಂಜಿನ್ ಹೊಂದಿರುವ ಮೊದಲ ಜಲಾಂತರ್ಗಾಮಿಯನ್ನು ಪ್ರದರ್ಶಿಸಲಾಯಿತು.

1903: ತಾಜ್ ಮಹಾಲ್ ಪ್ಯಾಲೆಸ್ ಮತ್ತು ಟವರ್ ಹೋಟೆಲ್ ಅತಿಥಿಗಳಿಗೆ ಮೊದಲ ಬಾರಿಗೆ ತೆರೆಯಲಾಯಿತು.

1920: ಚೀನಾದಲ್ಲಿ ಭೂಕಂಪದಿಂದ ಸುಮಾರು 1 ಲಕ್ಷಕ್ಕು ಹೆಚ್ಚು ಜನ ಮೃತ ಪಟ್ಟರು.

1945: ಯುದ್ಧ ಅಪರಾಧಗಳ ವಿಚಾರಣೆ ಎದುರಿಸುವ ಬದಲು ಜಪಾನಿನ ಎರಡು ಬಾರಿ ಪ್ರಧಾನ ಮಂತ್ರಿಯಾದ ಫುಮಿಮಾರೊ ಕ್ಯಾನೋಯ್ ಆತ್ಮಹತ್ಯೆ ಮಾಡಿಕೊಂಡರು.

1960: ಅಮೇರಿಕಾದ ನ್ಯೂಯಾರ್ಕಿನಲ್ಲಿ ಎರಡು ವಿಮಾನಗಳ ಘರ್ಷಣೆಯಿಂದಾಗಿ 136 ಜನರು ಸತ್ತರು.

1971: ಭಾರತ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿತು.

1971: ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಹುಟ್ಟಿತು.

1972: ಬಾಂಗ್ಲಾದೇಶದ ಸಂವಿಧಾನವು ಜಾರಿಗೆ ಬಂದಿತು.

1985: ದೇಶದ ಮೊದಲ ವೇಗದ ಬ್ರೀಡರ್ ಪರಮಾಣು ರಿಯಾಕ್ಟರ್ ಕಲ್ಪಕಂನಲ್ಲಿ ಕಾರ್ಯ ಆರಂಭಿಸಲಾಯಿತು.

ಪ್ರಮುಖ ಜನನ/ಮರಣ:

1933: ಪ್ರಸಿದ್ಧ ಭರತನಾಟ್ಯ ನೃತ್ಯಗಾರ, ನೃತ್ಯ ನಿರ್ದೇಶಕ ಮತ್ತು ಗುರು ಅಡಿಯಾರ್ ಕೆ.ಲಕ್ಷ್ಮಣ್ ಜನಿಸಿದರು.

1949: ಭಾರತೀಯ ಸಿನಿಮಾದ ಕಲಾ ನಿರ್ದೇಶಕ ಮತ್ತು ನಿರ್ಮಾಪಕ ತೊಟ್ಟ ತರಣಿ ಜನಿಸಿದರು.

1952: ಪ್ರತ್ಯೇಕ ರಾಜ್ಯ (ಆಂಧ್ರಪ್ರದೇಶ) ಬೇಕು ಎಂದು ಉಪವಾಸ ಸತ್ಯಾಗ್ರಹ ಮಾಡಿದ ಪೊಟ್ಟಿ ಶ್ರೀರಾಮುಲು ನಿಧನರಾದರು.

1957: ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನಿಸಿದರು.

1971: ಪರಮವೀರಚಕ್ರ ಪುರಸ್ಕೃತ ಮಾಜಿ ಸೈನ್ಯದ ಅಧಿಕಾರಿ ಅರುಣ್ ಖೆತ್ರಪಾಲ್ ನಿಧನರಾದರು.

1977: ಭಾರತದ ಖ್ಯಾತ ಹಾಕಿ ಆಟಗಾರ ರೂಪ್ ಸಿಂಗ್ ನಿಧನರಾದರು.

1986:ಭಾರತೀಯ ಹಿನ್ನೆಲೆ ಗಾಯಕಿ ಸೂಫಿ ಗೀತೆಗಳಿಗೆ ಪ್ರಖ್ಯಾತಿ ಪಡೆದ ಹರ್ಷದೀಪ್ ಕೌರ್ ಜನಿಸಿದರು.

1993: ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನಿಸ್ ದಾಖಲೆಯ ಪ್ರಕಾರ ವಿಶ್ವದ ಅತ್ಯಂತ ಚಿಕ್ಕ ಮಹಿಳೆ ಜ್ಯೋತಿ ಆಮ್ಗೆ ಜನಿಸಿದರು.