ಪ್ರಮುಖ ಘಟನಾವಳಿಗಳು:
1661: ಇಂಗ್ಲೆಂಡಿನಲ್ಲಿ ಕಾರ್ಪೊರೇಷನ್ ಕಾಯಿದೆ ಜಾರಿಗೆ ತರಲಾಯಿತು.
1780: ಹಾಲ್ಯಾಂಡಿನ ಮೇಲೆ ಬ್ರಿಟನ್ ಯುದ್ಧ ಘೋಷಿಸಿತು.
1790: ಅಮೇರಿಕಾದ ಮೊದಲ ಯಶಸ್ವಿ ಹತ್ತಿ ಗಿರಣಿಯಲ್ಲಿ ನೂಲನ್ನು ಮಾಡಲಾಯಿತು.
1850: ಹವಾಯಿಯಲ್ಲಿ ಅಂಚೆ ಕಛೇರಿಯನ್ನು ಸ್ಥಾಪಿಸಲಾಯಿತು.
1919: ಕೆನೆಡಾದ ರಾಷ್ಟ್ರೀಯ ರೈಲ್ವೆಯನ್ನು ಸ್ಥಾಪಿಸಲಾಯಿತು.
1938: ವ್ಲಾಡಿಮರ್ ಜ್ವೋರಿಕಿನ್ ಬಿಂಬದರ್ಶಕ ಟಿವಿ ವ್ಯವಸ್ಥೆಗೆ ಪೇಟೆಂಟ್ ಪಡೆದರು.
1942: ಎರಡನೇ ವಿಶ್ವಯುದ್ಧದಲ್ಲಿ ಜಪಾನಿ ವಾಯು ಪಡೆಗಳು ಭಾರತದ ಕಲ್ಕತ್ತಾ ಮೇಲೆ ಬಾಂಬು ದಾಳಿ ನಡೆಸಿದರು.
2010: ಚೀನಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಟೆಲಿಸ್ಕೋಪಿಕ್ ಶಸ್ತ್ರಾಸ್ತ್ರಗಳನ್ನು ಹೊಂದಿದ ಮೊದಲ ಗೋಲಾಕಾರದ ರೋಬೋಟ್ ಅನ್ನು ಅಭಿವೃದ್ಧಿ ಪಡಿಸಿರುವುದಾಗಿ ಘೋಷಿಸಿತು.
2012: ಗುಜರಾತಿನಲ್ಲಿ ಸತತ ಮೂರನೇ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಜಯಶಾಲಿಯಾದರು.
ಪ್ರಮುಖ ಜನನ/ಮರಣ:
1909: ಪತ್ರಕರ್ತ ಮತ್ತು ರಾಜಕಾರಣಿ ವಕ್ಕೋಂ ಮಜೀದ್ ಜನಿಸಿದರು.
1915: ಭಾರತದ ವರ್ಣಚಿತ್ರ ಕಲಾವಿದರು ಮತ್ತು ಸಂಯೋಜಕರು ಉಪೇಂದ್ರ ಕಿಶೋರ್ ರೇ ನಿಧನರಾದರು.
1940: ಖ್ಯಾತ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟು ಯಾಮಿನಿ ಕೃಷ್ಣಮೂರ್ತಿ ಜನಿಸಿದರು.
1945: ಭಾರತದ ವಕೀಲರು ಮತ್ತು ಲೇಖಕ ಶಿವಕಾಂತ್ ತಿವಾರಿ ಜನಿಸಿದರು.
1970: ಬಾಲಿವುಡ್ ಚಿತ್ರರಂಗದ ನಟ, ನಿರ್ಮಾಪಕ ಸೋಹೇಲ್ ಖಾನ್ ಜನಿಸಿದರು.
1976: ತಮಿಳು ಮತ್ತು ಮಲಯಾಳಂ ಚಿತ್ರರಂಗದ ನಟ ಮತ್ತು ಗಾಯಕ ಯುಗೇಂದ್ರನ್ ಜನಿಸಿದರು.
1977: ಹಿಂದಿ ಮತ್ತು ಮರಾಠಿ ಚಿತ್ರರಂಗದ ನಟಿ ಗೌರಿ ಕಾರ್ನಿಕ್ ಜನಿಸಿದರು.
1987: 2008ರಲ್ಲಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದ ಭಾರತದ ಮಾಡೆಲ್ ಮತ್ತು ನಟಿ ಪಾರ್ವತಿ ಒಮನಾಕುಟ್ಟನ್ ಜನಿಸಿದರು.
2009: ಮರಾಠಿ ಲೇಖಕ ಮತ್ತು ದಲಿತ ಕಾರ್ಯಕರ್ತ ಅರುಣ ಕೃಷ್ಣಾಜಿ ಕಾಂಬ್ಳಿ ನಿಧನರಾದರು.
2010: ಕಿರುತೆರೆ ಚಿತ್ರಗಳ ನಿರ್ದೇಶಕ ಬಾಬುಬಾಯಿ ಮಿಸ್ತ್ರಿ ನಿಧನರಾದರು.