Categories
e-ದಿನ

ಡಿಸೆಂಬರ್-22

 

ಪ್ರಮುಖ ಘಟನಾವಳಿಗಳು:

1851: ಭಾರತದ ಮೊದಲ ಸರಕು ರೈಲನ್ನು ರೂರ್ಕಿಯಿಂದ ಕಾರ್ಯಾಚರಣೆ ಪ್ರಾರಂಭಿಸಲಾಯಿತು.

1882: ಥಾಮಸ್ ಆಲ್ವಾ ಎಡಿಸನ್ ಕ್ರಿಸ್ಮಸ್ ಮರಕ್ಕೆ ಅಳವಡಿಸಲು ಸಾಲು ದೀಪವನ್ನು ಸೃಷ್ಟಿಸಿದರು.

1885: ಇಟೋ ಹಿರೋಭೂಮಿ ಜಪಾನಿನ ಮೊದಲ ಪ್ರಧಾನಿಯಾಗಿ ಆಯ್ಕೆಯಾದರು.

1886: ಅಮೇರಿಕಾದ ಮೊದಲ ರಾಷ್ಟ್ರೀಯ ಅಕೌಂಟೆಂಟುಗಳ ಸಮಾಜವು ರೂಪುಗೊಂಡಿತು.

1910: ಅಮೇರಿಕಾದ ಅಂಚೆ ಉಳಿತಾಯ ಅಂಚೆ ಚೀಟಿಗಳು ವಿತರಿಸಲಾಯಿತು.

1921: ಶಾಂತಿನಿಕೇತನ ಕಾಲೇಜ್ ಎಂದು ಕರೆಯಲ್ಪಡುವ ಇಂದಿನ ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಾಯಿತು.

1937: ನ್ಯೂಯಾರ್ಕಿನ ಲಿಂಕನ್ ಸುರಂಗ ಸಂಚಾರಕ್ಕೆ ತೆರೆಯಲಾಯಿತು.

1943: ಬೇಸ್ ಬಾಲ್ ತಯಾರಕರು ಬೇಸ್ ಬಾಲಿನ ಕೋರಿಗಾಗಿ ಸಿಂಥೆಟಿಕ್ ರಬ್ಬರನ್ನು ಬಳಸಲು ಅನುಮತಿ ಪಡೆದರು.

1998: ಪೇಟೆಂಟ್ ಬಿಲ್ಲುಗಳು ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಿತು.

ಪ್ರಮುಖ ಜನನ/ಮರಣ:

1666: ಹತ್ತನೇ ಸಿಖ್ ಗುರು ಮತ್ತು ಖಾಲ್ಸಾ ಸಂಸ್ಥಾಪಕ ಗುರು ಗೋವಿಂದ ಸಿಂಗ್ ಜನಿಸಿದರು.

1853: ಭಾರತೀಯ ಅತೀಂದ್ರಿಯ ಮತ್ತು ತತ್ವಜ್ಞಾನಿ ಶಾರದಾ ದೇವಿ ಜನಿಸಿದರು.

1887: ಭಾರತದ ಖ್ಯಾತ ಗಣಿತತಜ್ಞ ಶ್ರೀನಿವಾಸ ರಾಮಾನುಜಂ ಜನಿಸಿದರು.

1919: ಖ್ಯಾತ ಸಂಗೀತ ನಿರ್ದೇಶಕ ಮತ್ತು ಕಾರ್ನಾಟಿಕ್ ಸಂಗೀತಗಾರ ವಿ.ದಕ್ಷಿಣಾಮೂರ್ತಿ ಜನಿಸಿದರು.

1928: ಮಾಜಿ ಟೆನ್ನಿಸ್ ಆಟಗಾರ ನರೇಶ್ ಕುಮಾರ್ ಜನಿಸಿದರು.

1929: ಭಾರತ-ಪಾಕಿಸ್ತಾನದ ಕ್ರಿಕೆಟ್ ಆಟಗಾರ ವಾಜೀರ್ ಮೊಹಮ್ಮದ್ ಜನಿಸಿದರು.

1947: ಭಾರತದ ಕ್ರಿಕೆಟ್ ಆಟಗಾರ ದಿಲಿಪ್ ದೊಶಿ ಜನಿಸಿದರು.

1958: ಬಂಗಾಳಿ ಭಾರತೀಯ ಕ್ರಾಂತಿಕಾರಿ ಮತ್ತು ಅಂತರರಾಷ್ಟ್ರೀಯತಾವಾದಿ ವಿದ್ವಾಂಸ ತಾರಕ್ ನಾಥ್ ದಾಸ್ ನಿಧನರಾದರು.

2011: ಮಾಜಿ ಕ್ರಿಕೆಟ್ ಆಟಗಾರ ವಸಂತ್ ರಜನೆ ನಿಧನರಾದರು.