ಪ್ರಮುಖ ಘಟನಾವಳಿಗಳು:

 • 1672: ಜಿಯೋವನ್ನು ಕ್ಯಾಸೆನಿ ಶನಿ ಗ್ರಹದ ಉಪ ಗ್ರಹವಾದ ರಿಯಾ ಅನ್ನು ಪತ್ತೆ ಮಾಡಿದರು.

 • 1880: ಯೂರೋಪಿನ ಎಡಿಸನ್ ಎಲೆಕ್ಟ್ರಿಕ್ ಲೈಟ್ ಸಂಸ್ಥೆಯನ್ನು ಥಾಮಸ್ ಎಡಿಸನ್ ಸ್ಥಾಪಿಸಿದರು.

 • 1902: ಭಾರತದ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ಕಿಸಾನ್ ದಿವಸ್ ಆಚರಿಸಲಾಗುತ್ತದೆ.

 • 1913: ಅಮೇರಿಕಾದ ಕಾಂಗ್ರಸ್ ಫೆಡರಲ್ ರಿಸರ್ವ್ ಆಕ್ಟ್ ಮತ್ತು ಫೆಡರಲ್ ರಿಸರ್ವ್ ವ್ಯವಸ್ಥೆಯನ್ನು ರಾಷ್ಟ್ರದ ಕೇಂದ್ರೀಯ ಬ್ಯಾಂಕ್ ಆಗಿ ಕಾರ್ಯನಿರ್ವಹಿಸಲು ಅನುಮೋದಿಸಿತು.

 • 1919: ಬ್ರಿಟನ್ ಭಾರತಕ್ಕೆ ನೂತನ ಸಂವಿಧಾನವನ್ನು ಸ್ಥಾಪಿಸಿತು.

 • 1919: ರೋಗಿಗಳನ್ನು ಸಾಗಿಸಲು ಆಂಬ್ಯುಲೆನ್ಸ್ ಆಗಿ ಬಳಸಲಾಗುವ ಹಡಗಿನ ವಿನ್ಯಾಸವನ್ನು ಮೊದಲ ಬಾರಿಗೆ ಆರಂಭಿಸಲಾಯಿತು.

 • 1947: ಜಾನ್ ಬಾರ್ದೀನ್ ಟ್ರಾನ್ಸಿಸ್ಟರ್ ಅನ್ನು ಕಂಡುಹಿಡಿದರು.

 • 1964: ಭಾರತಕ್ಕೆ ಚಂಡಮಾರುತ ಅಪ್ಪಳಿಸಿದ ಕಾರಣ 4850 ಜನ ಮೃತ ಪಟ್ಟರು.

 • 2000: ಕೋಲ್ಕತ್ತಾ ಎಂದು ಮರುನಾಮಕರಣ ಮಾಡಲು ಪಶ್ಚಿಮ ಬಂಗಾಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ನೀಡಿತು.

ಪ್ರಮುಖ ಜನನ/ಮರಣ:

 • 1889: ಭಾರತದ ಸರ್ವೋಚ್ಛ ನ್ಯಾಯಾಲಯದ ಮೂರನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮೆಹರ್ ಚಂದ್ ಮಹಾಜನ್ ಜನಿಸಿದರು.

 • 1902: ಭಾರತದ 5ನೇ ಪ್ರಧಾನ ಮಂತ್ರಿ ಚರಣ್ ಸಿಂಗ್ ಜನಿಸಿದರು.

 • 1926: ಭಾರತದ ಸನ್ಯಾಸಿ, ಸ್ವಾಮಿ ಶ್ರದ್ಧಾನಂದ ನಿಧನರಾದರು.

 • 1936: ಭಾರತದ ಕ್ರಿಕೆಟ್ ಆಟಗಾರ ಸೂರ್ಯವೀರ್ ಸಿಂಗ್ ಜನಿಸಿದರು.

 • 1943: ಫುಟ್ ಬಾಲ್ ಆಟಗಾರ ಇಂದರ್ ಸಿಂಗ್ ಜನಿಸಿದರು.

 • 1968: ಬಾಳಿವುಡ್ ನಟ ಅರ್ಬಾಸ್ ಖಾನ್ ಜನಿಸಿದರು.

 • 2004: ಭಾರತದ 9ನೇ ಪ್ರಧಾನ ಮಂತ್ರಿ ಪಿ.ವಿ.ನರಸಿಂಹ ರಾವ್ ನಿಧನರಾದರು.

 • 2010: ಕೇರಳಾದ 7ನೇ ಮುಖ್ಯಮಂತ್ರಿಯಾಗಿದ್ದ ಕೆ.ಕರುಣಾಕರನ್ ನಿಧನರಾದರು.

 • 2013: ಕನ್ನಡದ ಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪ ನಿಧನರಾದರು.