Categories
e-ದಿನ

ಡಿಸೆಂಬರ್-24

 

ಪ್ರಮುಖ ಘಟನಾವಳಿಗಳು:

1851: ವಾಷಿಂಗ್ಟನ್ನಿನಲ್ಲಿರುವ ಕಾಂಗ್ರೆಸ್ಸಿನ ಗ್ರಂಥಾಲಯದಲ್ಲಿದ್ದ 35000 ಸಂಪುಟಗಳು ಬೆಂಕಿ ಅನಾಹುತದಿಂದ ನಾಶವಾಯಿತು.

1894: ಮೊದಲ ವೈದ್ಯಕೀಯ ಸಮ್ಮೇಳನವನ್ನು ಕಲ್ಕತ್ತಾದಲ್ಲಿ ನಡೆಸಲಾಯಿತು.

1921: ರಬಿಂದ್ರನಾಥ್ ಟಾಗೋರ್ ಪಶ್ಚಿಮ ಬಂಗಾಲದಲ್ಲಿ ಶಾಂತಿನಿಕೇತನದಲ್ಲಿ “ವಿಶ್ವ ಭಾರತಿ”ಯನ್ನು ಸ್ಥಾಪಿಸಿದರು.

1948: ವಿಶ್ವದ ಮೊದಲ ಸೌರಶಕ್ತಿಯ ಮನೆಯನ್ನು ದೋವರಿನಲ್ಲಿ ನಿರ್ಮಿಸಲಾಯಿತು.

1968: ಅಪೋಲೋ 8ರ ಸಿಬ್ಬಂದಿ ಚಂದ್ರನ ಸುತ್ತ ಕಕ್ಷೆಗೆ ಪ್ರವೇಶಿಸಿದ ಮೊದಲ ಮಾನವರಾದರು.

1969: ತೈಲ ಕಂಪನಿಯಾದ ಫಿಲಿಪ್ಸ್ ಪೆಟ್ರೋಲಿಯಂ ಉತ್ತರ ಸಮುದ್ರದ ನಾರ್ವೇ ಸೆಕ್ಟರಿನಲ್ಲಿ ಮೊಟ್ಟ ಮೊದಲ ತೈಲ ಸಂಶೋಧನೆ ಮಾಡಿತು.

1973: ಕೊಲಂಬಿಯಾ ಜಿಲ್ಲೆಯ ಹೋಮ್ ರೂಲ್ ಕಾಯಿದೆಯನ್ನು ಅಂಗೀಕರಿಸಲಾಯಿತು. ಈ ಕಾಯಿದೆಯ ಪ್ರಕಾರ ವಾಷಿಂಗ್ಟನ್ ನಿವಾಸಿಗಳು ತಮ್ಮ ಸ್ಥಳೀಯ ಸರ್ಕಾರವನ್ನು ಆಯ್ಕೆ ಮಾಡಲು ಅವಕಾಶ ನೀಡಲಾಯಿತು.

1986: ಭಾರತದ ರಾಷ್ಟ್ರಪತಿಯವರ ಒಪ್ಪಿಗೆ ಪಡೆದು ಗ್ರಾಹಕರ ರಕ್ಷಣೆ ಕಾಯಿದೆಯನ್ನು ಜಾರಿಗೆ ತರಲಾಯಿತು.

1999: ಇಂಡಿಯನ್ ಏರ್ಲೈನ್ಸ್ ವಿಮಾನ ಸಂಖ್ಯೆ 814ನ್ನು ಕಟ್ಮಂಡು, ನೇಪಾಳ ಮತ್ತು ದೆಹೆಲಿಯ ನಡುವಿನ ವಾಯುಪ್ರದೇಶದಲ್ಲಿ ಅಪಹರಣ ಮಾಡಲಾಯಿತು.

2000: ವಿಶ್ವನಾಥನ್ ಆನಂದ್ ವಿಶ್ವ ಚೆಸ್ ಚಾಂಪಿಯನ್ ಶಿಪ್ಪಿನಲ್ಲಿ ಪ್ರಶಸ್ತಿಯನ್ನು ಪಡೆದ ಮೊದಲ ಏಷಿಯಾದ ವ್ಯಕ್ತಿ.

ಪ್ರಮುಖ ಜನನ/ಮರಣ:

1524: ಭಾರತದ ಪೋರ್ಚುಗೀಸ್ ಗವರ್ನರ್ ಆಗಿದ್ದ ವಾಸ್ಕೊಡ ಗಾಮಾ ನಿಧನರಾದರು.

1924: ಭಾರತದ ಅತ್ಯತ್ತಮ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದ ಮೊಹಮ್ಮದ್ ರಫಿ ಜನಿಸಿದರು.

1932: ಭಾರತೀಯ-ಇಂಗ್ಲಿಷ್ ಕ್ರಿಕೆಟ್ ಆಟಗಾರ ಕೋಲಿನ್ ಕೌಡ್ರೇ ಜನಿಸಿದರು.

1942: ಭಾರತೀಯ ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ಇಂದ್ರ ಬಾನಿಯಾ ಜನಿಸಿದರು.

1959: ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ ಜನಿಸಿದರು.

1986: ಭಾರತೀಯ ಫುಟ್ಬಾಲ್ ಆಟಗಾರ ಸುಬ್ರದಾ ಪಾಲ್ ಜನಿಸಿದರು.

1987: ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ನಟ, ನಿರ್ಮಾಪಕ ಎಂ.ಜಿ.ರಾಮಚಂದ್ರನ್ ನಿಧನರಾದರು.

1988: ಭಾರತೀಯ ಲೇಖಕ ಜಯೇಂದ್ರ ಕುಮಾರ್ ನಿಧನರಾದರು.

2005: ತೆಲುಗು ಮತ್ತು ತಮಿಳು ಚಿತ್ರರಂಗದ ನಟಿ, ನಿರ್ದೇಶಕಿ, ಸಂಗೀತ ನಿರ್ದೇಶಕಿ, ನಿರ್ಮಾಪಕಿ ಭಾನುಮತಿ ನಿಧನರಾದರು.