Categories
e-ದಿನ

ಡಿಸೆಂಬರ್-25

 

ಪ್ರಮುಖ ಘಟನಾವಳಿಗಳು:

2001: ಕ್ರೈಸ್ತ ಮತದ ಸಂಸ್ಥಾಪಕರಾದ ಏಸುಕ್ರಿಸ್ತರ ಜನುಮದಿನದಿವನ್ನು ಕ್ರಿಸ್ಮಸ್ ಆಗಿ ಆಚರಿಸಲಾಯಿತು.

1599: ಬ್ರೆಜಿಲ್ಲಿನ ನಟಾಲ್ ನಗರವನ್ನು ಕಂಡುಹಿಡಿಯಲಾಯಿತು.

1741: ಖಗೋಳಶಾಸ್ತ್ರಜ್ಞ ಆಂಡರ್ಸ್ ಸೆಲ್ಸಿಯಸ್ ಸೆಂಟಿಗ್ರೇಡ್ ತಾಪಮಾನದ ಪ್ರಮಾಣವನ್ನು ಪರಿಚಯಿಸಿದರು.

1809: ವೈದ್ಯ ಎಫ್ರೇಮ್ ಮೆಕ್ಡೋವೆಲ್ ಅಮೇರಿಕಾದಲ್ಲಿ ಮೊದಲ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದರು.

1818: ಮೊದಲ ಕ್ರಿಸ್ಮಸ್ ಕ್ಯಾರೆಲ್ (ಹಾಡು) ಹಾಡಲಾಯಿತು.

1848: ನ್ಯೂ ಹ್ಯಾವೆನ್ ರೈಲುರಸ್ತೆಯನ್ನು ತೆರೆಯಲಾಯಿತು.

1946: ತೈವಾನಿನಲ್ಲಿ ಸಂವಿಧಾನವನ್ನು ಅಳವಡಿಸಲಾಯಿತು.

1947: ತೈವಾನ್ ಮಾನವ ಹಕ್ಕುಗಳ ಕಾನೂನನ್ನು ಅಂಗೀಕರಿಸಿತು.

1947: ಚೀನಾದ ಗಣರಾಜ್ಯದ ಸಂವಿಧಾನವು ಜಾರಿಗೆ ಬಂದಿತು.

1959: ಸೋನಿ ಸಂಸ್ಥೆ ಟ್ರಾನ್ಸಿಸ್ಟರ್ ಟೀವಿ 8-301 ಅನ್ನು ಮಾರುಕಟ್ಟೆಗೆ ತಂದಿತು.

1983: ಕ್ರಿಸ್ಟಮಸ್ ಪರೇಡಿನ ಮೊದಲ ನೇರ ಪ್ರಸಾರವನ್ನು ಪ್ರದರ್ಶಿಸಲಾಯಿತು.

ಪ್ರಮುಖ ಜನನ/ಮರಣ:

1861: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪಂಡಿತ್ ಮದನಮೋಹನ ಮಾಳವಿಯಾ ಅವರು ಜನಿಸಿದರು.

1876: ಪಾಕಿಸ್ತಾನದ ಮೊದಲ ಗವರ್ನರ್ ಜೆನರಲ್ ಆಗಿದ್ದ ಮುಹಮ್ಮದ್ ಅಲಿ ಜಿನ್ನಾ ಅವರು ಜನಿಸಿದರು.

1919: ಭಾರತೀಯ ಸಂಗೀತ ಸಂಜೋಜಕ ಮತ್ತು ಸಂಗೀತ ನಿರ್ದೇಶಕ ನೌಶಾದ್ ಅಲಿ ಜನಿಸಿದರು.

1924: ಭಾರತದ 10ನೇ ಪ್ರಧಾನ ಮಂತ್ರಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಜನಿಸಿದರು.

1925: ಭಾರತೀಯ ವರ್ಣಚಿತ್ರಕಾರ, ಶಿಲ್ಪಿ ಮತ್ತು ವಾಸ್ತುಶಿಲ್ಪಿ ಸತೀಶ್ ಗುಜರಾಲ್ ಜನಿಸಿದರು.

1936: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಧರಂಸಿಂಗ್ ಜನಿಸಿದರು.

1936: ಭಾರತದ ಚಿತ್ರರಂಗದ ನಿರ್ದೇಶಕ ಮತ್ತು ನಿರ್ಮಾಪಕ ಇಸ್ಮಾಯಿಲ್ ಮರ್ಚೆಂಟ್ ಜನಿಸಿದರು.

1959: ಭಾರತದ ಕವಿ ಮತ್ತು ರಾಜಕಾರಣಿ ರಾಮದಾಸ್ ಅಟಾವಲೆ ಜನಿಸಿದರು.

1963: ಭಾರತದ ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ ಜನಿಸಿದರು.

1994: ಭಾರತದ 7ನೇ ರಾಷ್ಟ್ರಪತಿಯಾಗಿದ್ದ ಜೈಲ್ ಸಿಂಗ್ ನಿಧನರಾದರು.