Categories
e-ದಿನ

ಡಿಸೆಂಬರ್-26

 

1854: ಮರದ ತಿರುಳಿನಿಂದ ತಯಾರಾದ ಪೇಪರನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

1862: ಅಮೇರಿಕಾದ ಆಂತರ್ಯುದ್ದ ವಾಲ್ನಟ್ ಬೆಟ್ಟಗಳ ಕದನ ಎಂದೇ ಕರೆಯಲ್ಪಟ್ಟ ಚಿಕಸಾವ್ ಬೇ ಯುದ್ದವು ಪ್ರಾರಂಭವಾಯಿತು.

1865: ಕಾಫಿ ಶೋಧಿಸುವ ಉಪಕರಣಕ್ಕೆ ಜೇಮ್ಸ್ ಹೆಚ್ ಮೇಸನ್ ಪೇಟೆಂಟ್ ಪಡೆದರು.

1898: ಮೇರಿ ಮತ್ತು ಪೈರೀ ಕ್ಯೂರಿ ರೇಡಿಯಂ ಅನ್ನು ಪತ್ತೆ ಮಾಡಲಾಯಿತು.

1953: ಕೊರಿಯಾದ ಎರಡು ವಿಭಾಗಗಳನ್ನು ಹಿಂತೆಗೆದುಕೊಳ್ಳುವಂತೆ ಅಮೇರಿಕಾ ಘೋಷಿಸಿತು.

1976: ನೇಪಾಳದಲ್ಲಿ ಕಮ್ಮ್ಯುನಿಸ್ಟ್ ಪಕ್ಷ ಸ್ಥಾಪನೆಯಾಯಿತು.

1986: ಭಾರತದಲ್ಲಿ ಗ್ರಾಹಕರ ಹಕ್ಕು ಕಾಯಿದೆಯನ್ನು ಅಂಗೀಕರಿಸಲಾಯಿತು.

1991: ಸೋವಿಯತ್ ದೇಶಗಳಸುಪ್ರೀಂ ಆಡಳಿತ ವ್ಯವಸ್ಥೆ ಸೋವಿಯತ್ ಒಕ್ಕೂಟವನ್ನು ಔಪಚಾರಿಕವಾಗಿ ಅಂತ್ಯಗೊಳಿಸಲಾಯಿತು.

2002: ಮೊದಲ ಅಬೀಜ ಮಾನವ ಮಗು ಜನಿಸಿತು.

2004: ಹಿಂದೂ ಮಹಾಸಾಗರದಲ್ಲಿ ಬೃಹತ್ ಭೂದೃಶ್ಯ ಭೂಕಂಪನದಿಂದ ಉಂಟಾದ ಬೃಹತ್ ಸುನಾಮಿ ಭಾರತ, ಶ್ರೀಲಂಕಾ ಮತ್ತು ಅಗ್ನೇಯ ಏಷಿಯಾದಲ್ಲಿ ಸುಮಾರು 3,00,000 ಜನರನ್ನು ಕೊಂದಿತು.

ಪ್ರಮುಖ ಜನನ/ಮರಣ:

1914: ಭಾರತೀಯ ಸಾಮಾಜಿಕ ಕಾರ್ಯಕರ್ತ ಕುಷ್ಟರೋಗಿಗಳಿಗ ಪುನರ್ವಸತಿ ಮತ್ತು ಅಧಿಕಾರಕ್ಕೆ ಹೋರಾಡಿದ ಬಾಬಾ ಅಮ್ಟೆ ಜನಿಸಿದರು.

1921: ಬಂಗಾಳದ ಮತ್ತು ಒರಿಸ್ಸಾದ ಗವರ್ನರ್ ಆಗಿದ್ದ ಸೈಯದ್ ನುರುಲ್ ಹಾಸನ್ ಜನಿಸಿದರು.

1973: ಭಾರತದ ಕ್ರಿಕೆಟ್ ಆಟಗಾರ ನಿಖಿಲ್ ಚೋಪ್ರಾ ಜನಿಸಿದರು.

1976: ಭಾರತದ ಸೇನೆಯ ಅಧಿಕಾರಿ ಮತ್ತು ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ವಿಜಯಂತ್ ಥಾಪರ್ ಜನಿಸಿದರು.

1981: ತೆಲುಗು ಚಿತ್ರರಂಗದ ಖ್ಯಾತ ನಟಿ ಸಾವಿತ್ರಿ ಕೊಮ್ಮಾರೆಡ್ಡಿ ನಿಧನರಾದರು.

1985: ಕನ್ನಡ ಚಲನಚಿತ್ರಗಳ ಖ್ಯಾತ ನಟ ಉದಯ್ ಕುಮಾರ್ ನಿಧನರಾದರು.

1989: ಭಾರತದ ವ್ಯಂಗ್ಯ ಚಿತ್ರಕಾರ ಕೆ.ಎಸ್.ಪಿಳ್ಳೈ ನಿಧನರಾದರು.

1999: ಭಾರತದ 9ನೇ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮ ನಿಧನರಾದರು.

2006: ಭಾರತೀಯ ಪಾಕಿಸ್ತಾನಿ ಕವಿ ಮುನಿರ್ ನಿಯಾಜಿ ನಿಧನರಾದರು.

2011: ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ನಿಧನರಾದರು.