Categories
e-ದಿನ

ಡಿಸೆಂಬರ್-3

 

ಪ್ರಮುಖ ಘಟನಾವಳಿಗಳು:

1586: ಸರ್ ಥಾಮಸ್ ಹೀರಿಯಾಟ್ ಅವರು ಕೊಲಂಬಿಯಾದಿಂದ ಇಂಗ್ಲಾಂಡಿಗೆ ಆಲೂಗಡ್ಡೆಯನ್ನು ಪರಿಚಯಿಸಿದರು.

1621: ಗೆಲಿಲಿಯೋ ದೂರದರ್ಶಕವನ್ನು ಕಂಡು ಹಿಡಿದರು.

1835: ರೋಡ್ ದ್ವೀಪದಲ್ಲಿ ಮ್ಯಾನುಫ್ಯಾಕ್ಚರ್ ಮ್ಯೂಚುಯಲ್ ಫೈಯರ್ ಇನ್ಶುರೆನ್ಸ್ ಸಂಸ್ಥೆಯು ಮೊದಲ ಅಗ್ನಿ ವಿಮಾ ಪಾಲಿಸಿಯನ್ನು ನೀಡಿತು.

1910: ಪ್ಯಾರಿಸ್ ಮೋಟಾರು ಪ್ರದರ್ಶನದಲ್ಲಿ ನಿಯಾನ್ ದೀಪವನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

1922: ಮೊದಲ ಯಶಸ್ವಿ ಟೆಕ್ನಿಕಲರ್ ಚಲನಚಿತ್ರವನ್ನು ನ್ಯೂಯಾರ್ಕಿನಲ್ಲಿ ಪ್ರದರ್ಶಿಸಲಾಯಿತು.

1948: ಅಮೇರಿಕಾದ ಸೇನೆಯಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಯನ್ನು ನೇಮಿಸಲಾಯಿತು.

1952: ಹವಾಯಿಯಲ್ಲಿ ಮೊದಲ ದೂರದರ್ಶನದ ಪ್ರಸಾರವನ್ನು ಮಾಡಲಾಯಿತು.

1967: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಮಾನವ ಹೃದಯದ ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು.

1971: ಭಾರತ-ಪಾಕಿಸ್ತಾನ ಯುದ್ಧವು ಬಾಂಗ್ಲಾದೇಶದ ಹೊಸ ದೇಶವನ್ನು ರೂಪಿಸಲು ಕೊನೆಗೊಂಡಿತು.

1984: ಭಾರತದ ಭೂಪಾಲಿನಲ್ಲಿ ಯೂನಿಯನ್ ಕಾರ್ಬೈಡ್ ಕೀಟನಾಶಕ ಘಟಕದಿಂದ ಮಿಥೈಲ್ ಐಸೋಸೈನೇಟ್ ಸೋರಿಕೆಯಿಂದ 3800 ಜನರು ಮೃತಪಟ್ಟು 1,50,000 ರಿಂದ 6,00,000 ಜನರು ಅಸ್ವಸ್ಥಗೊಂಡರು.

ಪ್ರಮುಖ ಜನನ/ಮರಣ:

1884: ಭಾರತದ ಮೊದಲ ರಾಷ್ಟ್ರಪತಿ ಆಗಿದ್ದ ರಾಜೇಂದ್ರ ಪ್ರಸಾದ್ ಜನಿಸಿದರು.

1894: ಭಾರತದ ವಕೀಲರು ಮತ್ತು ರಾಜಕಾರಣಿ ದೈವ ಜಿವರತ್ತಿನಮ್ ಜನಿಸಿದರು.

1928: ಬಾಂಗ್ಲಾದೇಶದ ಪ್ರಧಾನ ಮಂತ್ರಿ ಮುಹಮ್ಮದ್ ಹಬಿಬುರ್ ರೆಹೆಮಾನ್ ಜನಿಸಿದರು.

1937: ಭಾರತದ ವೈದ್ಯ ಮತ್ತು ಲೇಖಕ ಬಿನೋದ್ ಬಿಹಾರಿ ವರ್ಮಾ ಜನಿಸಿದರು.

1956: ಖ್ಯಾತ ಲೇಖಕ, ಕವಿ ಮತ್ತು ಚಿತ್ರಕಥೆಗಾರ ಮಾನಿಕ್ ಬಂಡೋಪಾಧ್ಯಾಯ ನಿಧನರಾದರು.

1971: ಹಿಂದಿ ಚಿತ್ರರಂಗದ ನಟ ಜಿಮ್ಮಿ ಶೇರ್ಗಿಲ್ ಜನಿಸಿದರು.

1979: ಭಾರತದ ಖ್ಯಾತ ಹಾಕಿ ಆಟಗಾರ ಮತ್ತು ತರಬೇತುದಾರ ಧ್ಯಾನ್ ಚಂದ್ ನಿಧನರಾದರು.

1979: ಹಿಂದಿ ಚಿತ್ರರಂಗದ ನಟಿ ಕೊನ್ಕೊನ್ ಸೆನ್ ಶರ್ಮ ಜನಿಸಿದರು.

1982: ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಜನಿಸಿದರು.

2011: ಬಾಲಿವುಡಿನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದೇವಾನಂದ್ ನಿಧನರಾದರು.