Categories
e-ದಿನ

ಡಿಸೆಂಬರ್-6

 

ಪ್ರಮುಖ ಘಟನಾವಳಿಗಳು:

1774: ಆಸ್ಟ್ರಿಯ ರಾಜ್ಯ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದ ಮೊದಲ ರಾಷ್ಟ್ರವಾಯಿತು.

1822: ಉಟ್ರೆಕ್ಟಿನಲ್ಲಿ ಪಶುವೈದ್ಯ ಶಾಲೆಯು ತೆರೆಯಲಾಯಿತು.

1876: ಅಮೇರಿಕಾದ ಮೊದಲ ಸ್ಮಶಾನದ ಕಾರ್ಯಾಚರಣೆ ಆರಂಭವಾಯಿತು.

1876: ಅನಾಹೆಮ್ ನಗರವನ್ನು ಎರಡನೇ ಬಾರಿಗೆ ಸಂಘಟಿಸಲಾಯಿತು.

1877: ಥಾಮಸ್ ಎಡಿಸನ್ ಮೊದಲ ಗ್ರಾಮಫೋನ್ ಅನ್ನು ಪ್ರದರ್ಶಿಸಿದರು.

1897: ಲೈಸೆನ್ಸ್ ಪಡೆದ ಟ್ಯಾಕ್ಸಿಕ್ಯಾಬುಗಳನ್ನು ನೀಡಲು ಲಂಡನ್ ವಿಶ್ವದ ಪ್ರಥಮ ನಗರವಾಗಿದೆ.

1966: ಬೆಲ್ಜಿಯಮ್ಮಿನಲ್ಲಿ ಪೋಲಿಯೋ ಲಸಿಕೆಯನ್ನು ಕಡ್ಡಾಯ ಮಾಡಲಾಯಿತು.

1992: 16ನೇ ಶತಮಾನದ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯಿತು.

2006: ನಾಸಾ ಸಂಸ್ಥೆಯು ಮಂಗಳ ಗ್ರಹದ ಎರಡು ಗಲ್ಲಿಗಳಲ್ಲಿ ನೀರು ಕಂಡು ಬಂದಿರುವುದಾಗಿ ಹೇಳಿಕೆ ನೀಡಿದರು.

ಪ್ರಮುಖ ಜನನ/ಮರಣ:

1853: ಭಾರತದ ಇತಿಹಾಸಕಾರ ಮತ್ತು ಪಂಡಿತ ಹರಪ್ರಸಾದ್ ಶಾಸ್ತ್ರಿ ಜನಿಸಿದರು.

1922: ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಗಾಯಕ ಪಂಡಿತ್ ವಿಶ್ವನಾಥರಾವ್ ರಿಂಗೆ ಜನಿಸಿದರು.

1932: ಲೇಖಕ, ಚಿತ್ರಕಥೆಗಾರ ಮತ್ತು ವಿಮರ್ಶಕ ಕಮಲೇಶ್ವರ್ ಜನಿಸಿದರು.

1935: ತಮಿಳು ಮತ್ತು ತೆಲುಗು ಚಿತ್ರರಂಗದ ನಾಯಕಿ ಸಾವಿತ್ರಿ ಕೊಮ್ಮಾರೆಡ್ಡಿ ಜನಿಸಿದರು.

1945: ಭಾರತೀಯ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಶೇಖರ್ ಕಪೂರ್ ಜನಿಸಿದರು.

1956: ಭಾರತದ ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್ ಅಂಬೇಡ್ಕರ್ ಅವರು ನಿಧನರಾದರು.

1985: ಭಾರತದ ಕ್ರಿಕೆಟ್ ಆಟಗಾರ ರುದ್ರ ಪ್ರತಾಪ್ ಸಿಂಗ್ ಜನಿಸಿದರು.

1988: ಭಾರತದ ಖ್ಯಾತ ಕ್ರಿಕೆಟ್ ಪಟು ರವೀಂದ್ರಸಿಂಗ್ ಜಡೇಜಾ ಜನಿಸಿದರು.

2002: ಉಪನದಿಗಳ ಶಕ್ತಿಯನ್ನು ಆಧರಿಸಿ ಅದನ್ನು ವರ್ಗೀಕರಿಸಲು 1952ರಲ್ಲಿ ಸ್ಟ್ರಾಹ್ಲರ್ ಸ್ಟ್ರೀಮ್ ಆರ್ಡರ್ ವ್ಯವಸ್ಥೆಯನ್ನು ಪ್ರಸ್ಥಾಪಿಸಿದ ಭೂವಿಜ್ಞಾನಿ ಅಲಾನ್ ನೀಡಲ್ ಸ್ಟ್ರಾಹ್ಲರ್ ನಿಧನರಾದರು.

2009: ಬಂಗಾಳಿ ಮತ್ತು ಹಿಂದಿ ಚಿತ್ರಗಳ ನಟಿ ಬೀನಾ ರೈ ನಿಧನರಾದರು.