ಪ್ರಮುಖ ಘಟನಾವಳಿಗಳು:

 • 1783: ಲಂಡನ್ನಿನ ನ್ಯೂಗೇಟ್ ಜೈಲಿನಲ್ಲಿ ಮೊದಲ ಮರಣ ದಂಡನೆಯನ್ನು ಮಾಡಲಾಯಿತು.

 • 1868: ಲಂಡನ್ನಿನಲ್ಲಿ ಮೊದಲ ಸಂಚಾರಿ ದೀಪಗಳನ್ನು ರಸ್ತೆಯ ಮೇಲೆ ಅಳವಡಿಸಲಾಯಿತು.

 • 1879: ಥಾಮಸ್ ಎಡಿಸನ್ ಅವರು ಎಡಿಸನ್ ಓರ್ ಮಿಲ್ಲಿಂಗ್ ಸಂಸ್ಥೆಯನ್ನು ಆಯೋಜಿಸಿದರು.

 • 1884: ಲಿವಂಟ್ ರಿಚರ್ಡ್ಸನ್ ಬಾಲ್-ಬೇರಿಂಗ್ ಸ್ಕೇಟ್ಸ್ ಗೆ ಪೇಟೆಂಟ್ ಪಡೆದರು.

 • 1905: ಫ್ರೆಂಚ್ ರಾಷ್ಟ್ರೀಯ ಅಸ್ಸಂಬ್ಲಿ ಚರ್ಚು ಮತ್ತು ರಾಜ್ಯವನ್ನು ಪ್ರತ್ಯೇಕ ಮಾಡಲು ಮತ ಚಲಾಯಿಸಲಾಯಿತು.

 • 1907: ವಿಲ್ಮಿಂಗ್ಟನ್ ಅಂಚೆ ಕಛೇರಿಯಲ್ಲಿ ಮೊದಲ ಕ್ರಿಸ್ಟ್ ಮಸ್ ಮುದ್ರೆಯನ್ನು ಮಾರಾಟ ಮಾಡಲಾಯಿತು.

 • 1946: ಭಾರತದ ಸಂವಿಧಾನಿಕ ಅಸ್ಸೆಂಬ್ಲಿಯು ಭಾರತದ ಸಂವಿಧಾನವನ್ನು ಬರೆಯಲು ಮೊದಲ ಬಾರಿಗೆ ಭೇಟಿ ಮಾಡಿತು.

 • 1953: ಜೆನರಲ್ ಎಲೆಕ್ಟ್ರಿಕಲ್ ಸಂಸ್ಥೆಯು ಎಲ್ಲಾ ಕಮ್ಮ್ಯುನಿಸ್ಟ್ ನೌಕರರನ್ನು ತೆಗೆದು ಹಾಕುವುದಾಗಿ ಘೋಷಿಸಿತು.

 • 1992: ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನ ತಮ್ಮ ವಿಚ್ಛೇದನವನ್ನು ಘೋಷಿಸಿದರು.

 • 2004: ಸಲಿಂಗಕಾಮಿ ಮದುವೆ ಸಂವಿಧಾನಿಕ ಎಂದು ಕೆನಡಾದ ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿತು.

ಪ್ರಮುಖ ಜನನ/ಮರಣ:

 • 1870: ಭಾರತೀಯ ವೈದ್ಯ ಇದಾ ಎಸ್ ಸ್ಕುಡ್ಡರ್ ಜನಿಸಿದರು.

 • 1881: ಭೌದ್ಧ ಧರ್ಮದ ಮಹಾನ್ ವಿದ್ವಾಂಸ ಮತ್ತು ಬ್ರಹ್ಮ ಸಮಾಜದ ಬೋಧಕ ಅಘೋರನಾಥ್ ಗುಪ್ತ ನಿಧನರಾದರು.

 • 1918: ಮೂರು ಬಾರಿ ಕೇರಳಾದ ಮುಖ್ಯಮಂತ್ರಿ ಆಗಿದ್ದ ಇ.ಕೆ.ನಾಯರ್ ಜನಿಸಿದರು.

 • 1919: ಭಾರತದ ಗಾಯಕ ಮತ್ತು ಗೀತ ರಚನೆಕಾರ ವಿ.ದಕ್ಷಿಣಾಮೂರ್ತಿ ಜನಿಸಿದರು.

 • 1932: ಸಮೃದ್ಧ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ರೊಕೆಯಾ ಶೆಖಾವತ್ ಹುಸ್ಸೇನ್ ನಿಧನರಾದರು.

 • 1945: ಬಾಲಿವುಡ್ ನಟ, ರಾಜಕಾರಣಿ ಶತ್ರುಜ್ಞ ಸಿನ್ಹಾ ಜನಿಸಿದರು.

 • 1946: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಮತ್ತು ರಾಜೀವ್ ಗಾಂಧಿಯವರ ಪತ್ನಿ ಸೋನಿಯಾಗಾಂಧಿ ಅವರು ಜನಿಸಿದರು.

 • 1975: ಭಾರತದ ಖ್ಯಾತ ಮಾಡೆಲ್ ಮತ್ತು ನಟ ಡಿನೋ ಮೋರಿಯಾ ಜನಿಸಿದರು.

 • 1981: ಬಾಲಿವುಡ್ ನಟಿ ದಿಯಾ ಮಿರ್ಜಾ ಜನಿಸಿದರು.

 • 1997: ಬರಹಗಾರ, ಸಾಮಾಜಿಕ ಕಾರ್ಯಕರ್ತ, ಪರಿಸರವಾದಿ, ಯಕ್ಷಗಾನ ಕಲಾವಿದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೆ.ಶಿವರಾಮ ಕಾರಂತ ನಿಧನರಾದರು.