೨೭.೧೦.೧೯೦೬ ತುಮಕೂರು ಜಿಲ್ಲೆಯ ಚಿಕ್ಕನಾಯ್ಕನಹಳ್ಳಿಯ ಮಾತಾಮಹರಾದ ಅಣ್ಣಾಸ್ವಾಮಿ ಅಯ್ಯಂಗಾರ್ಯರ ಮನೆಯಲ್ಲಿ ಜನನ. ತಂದೆ ಶಾಮೈಂಗಾರ್‌ ತಾಯಿ-ಲಕ್ಷ್ಮಮ್ಮ.
೧೯೨೭ ಬಿ. ಎ. ಪದವಿ ಪರೀಕ್ಷೆಯಲ್ಲಿ ಬಂಗಾರದ ಪದಕದೊಂದಿಗೆ ಉತ್ತೀರ್ಣ.
೧೯೨೯ ಎಂ. ಎ. ಸ್ನಾತಕೋತ್ತರ (ಕನ್ನಡ) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಕ್ಕಾಗಿ ಪ್ರಥಮ ವೈಸ್‌ಛಾನ್ಸಲರ್‌ ಎಚ್‌. ವಿ. ನಂಜುಂಡಯ್ಯ ಸುವರ್ಣ ಪದಕ.
– ಸಂಶೋಧನ ವೇತನ ಪಡೆದು ವೀರಶೈವ ಸಾಹಿತ್ಯದ ಆರಂಭ ಕಾಲ ಕುರಿತು ಸಂಶೋಧನ ಪ್ರಬಂಧ ಸಿದ್ಧಪಡಿಸಿ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದರು.
೧೯೩೦ ಮೈಸೂರಿನ ಓರಿಯಂಟಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ರೆಸಿಡೆಂಟ ಕನ್ನಡ ಪಂಡಿತರಾಗಿ ನೇಮಕ.
-ಎರಡು ಪ್ರಾಚೀನ ಗ್ರಂಥಗಳ ಸಂಪಾದನಾ ಕಾರ್ಯನಿರ್ವಹಣೆ.
-ಜೊತೆಗೆ ಮಹಾರಾಜಾ ಕಾಲೇಜಿನಲ್ಲಿ ಒಪ್ಪೊತ್ತಿನ ಕನ್ನಡ ಪಂಡಿತರಾಗಿ ನೇಮಕ.
೧೯೩೨ ಮಹಾರಾಜಾ ಕಾಲೇಜಿನಲ್ಲಿ ಪೂರ್ಣಕಾಲದ ಕನ್ನಡ ಪಂಡಿತರಾಗಿ ನೇಮಕ.
೧೯೩೯ ಮೈಸೂರಿನ ಯುವರಾಜಾ ಕಾಲೇಜಿಗೆ ಕನ್ನಡ ಅಧ್ಯಾಪಕರಾಗಿ ವರ್ಗಾವಣೆ.
೧೯೪೦ ಮೊದಲ ಮಗಳು ರಾಜಲಕ್ಷ್ಮಿ ಜನನ.
೧೯೪೧ ಮತ್ತೆ ಮಹಾರಾಜಾ ಕಾಲೇಜಿಗೆ ಮರು ವರ್ಗಾವಗಣೆ.
೧೯೪೫ ಉಪಪ್ರಾಧ್ಯಾಪಕರಾಗಿ ಬಡ್ತಿ ಹೊಂದಿ ಬೆಂಗಳೂರು ಸೆಂಟ್ರಲ್‌ ಕಾಲೇಜಿಗೆ ವರ್ಗ.
೧೯೪೮ ಮತ್ತೆ ಮೈಸೂರು ಮಹಾರಾಜಾ ಕಾಲೇಜಿಗೆ ಮರುವರ್ಗಾವಣೆ.
೧೯೫೪ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ನೇಮಕ.
೧೯೫೬ ಕನ್ನಡ ಪ್ರಾಧ್ಯಾಪಕರಾಗಿ ಬಡ್ತಿ ಪಡೆದು ಮಹಾರಾಜಾ ಕಾಲೇಜಿಗೆ ವರ್ಗ.
೧೯೫೯ ಪ್ರಬುದ್ಧ ಕರ್ನಾಟಕ ನಿಯತಕಾಲಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಣೆ.
೧೯೬೦ ಬೀದರಿನಲ್ಲಿ ನಡೆದ ೪೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ.
೩೧.೩.೧೯೬೨ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ.
೧೯೬೩ ಯು.ಜಿ.ಸಿ. ಸಂಶೋಧಕ ವಿದ್ವಾಂಸರಾಗಿ ಆಯ್ಕೆ.
೧೯೬೭ ಉಪಾಯನ ಅಭಿನಂದನ ಗ್ರಂಥ ಸಮರ್ಪಣೆ ಮತ್ತು ಸನ್ಮಾನ.
೧೯೬೮ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನ.
೧೯೬೯ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ ಪ್ರಧಾನ.
೭.೫.೧೯೭೧ ನಿಧನ.