೧೬. ಹರಿಜನರೊಳು ಜನ್ಮ ತಳೆಯಲೆಬಾರದು

ಹರಿಜನರೊಳು ಜನ್ಮ ತಳೆಯಲೆಬಾರದು
ತಳೆದರು ವಿದ್ಯೆ ಕಲಿಯಲೆಬಾರದು
ವಿದ್ಯೆ ಕಲಿಯೆ ಬುದ್ದಿ ಕಣ್ಣೊಂದು ತೆರವುದು
ವಿದ್ಯೆ ಕಲಿಯದಿರೆ ಗೋವಂದದಿ ಇರುವನು
ಮಾನಾಪಮಾನ ಮಾನವಗರಿವಾವುದು
ಜ್ಞಾನವಿಲ್ಲದ ಗೋವಿಗೆ ಸರಿಸಮರು
ಅಂತ್ಯಜನರು ಗೋವು ಸರಿಸಮನೆಂದ
ಅಂತಿಹ ಭಾರತೀಯರಯ್ಯಯ್ಯೋ
ವಿದ್ಯಾಸಾಗರ ಅಂಬೇಡ್ಕರರು ಹೋರಾಡಿ
ಕಣ್ಮರೆಯಾದ ಹೇ ಭಗವಾನ್

 

೧೭. ಹರಿಜನ ದೌರ್ಜನ್ಯಜ್ವಾಲೆ

ಹರಿಜನ ದೌರ್ಜನ್ಯ ಜ್ವಾಲೆ ಉರಿಯುತಿಹುದು ಗಗನಕೇರಿ             ||ಪ||
ಉರಿಯನಾರಿಸುವರಾರು ಭಾರತದೊಳಿಲ್ಲವಲ್ಲ ಅಯ್ಯಯ್ಯೊ      ||ಅ-ಪ||?

ಹಿಂದೂಧರ್ಮ ನಂಬಿಕೆಟ್ಟೊವೆಂಬರೀಗ ಹರಿಜನಂಗಳ್
ಮುಂದೆಮಾಣ್ಪುದೇನು ಎಂದು ಕಂಬನಿಗರೆಯುವರೆಲ್ಲ ||೧||

ಅಳಿಯದಸ್ಪೃಶೃತೆ ಕಳಂಕಕಳೆಯೆ ಸಾವಿರ ಶತಮಾನಂಗಳ್
ತೊಳೆಯಲಿದನು ಬೇಗಬನ್ನಿ ಬೌದ್ಧರಾಗುವ ನಾವೆಲ್ಲ   ||೨||

ಆವನೋವ ಸಹಿಪೆವು ಬಡತನದ ಬೇಗೆ ಸಹಿಪೆವು ನಾವ್
ದಹಿಪುದು ಕುಲಭೇದದ ನೋವು ಸಹಿಸಿಬೆಂದು ಗೋಳಿಡುವರು     
||೩||

ಹಿಂದಿನಿಂ ಕುಲಭೇದದುರಿಯೊಳ್ ಬೇಗುದಿಗೊಂಡು
ಇಂದು ಅನ್ಯಮತವ ಸೇರೆ ಹಂಬಲಿಪರು ಹಗಲಿರುಳು      ||೪||

ಬಾರೋ ಅಂತ್ಯಜ ಸಾರ್ವಭೌಮ ಭಾರತದೊಳೆ ಜನ್ಮತಳೆದು
ಬೆಂದಂತ್ಯಜನ ಬೌದ್ಧರಾಗಿ ಮಾಡೋ ಜೈ ಭೀಮ         ||೫||

 

೧೮. ಅತ್ತ ಪೋಗಿರತ್ತ ಪೋಗಿ

(ನನ್ನ ಕಲಿಯುಗದಮನು ಡಾ. ಅಂಬೇಡ್ಕರ್ ಜೀವನ ಚರಿತ್ರೆಯ ಮೊದಲ ಹಾಡು)

ಅತ್ತಪೋಗಿರತ್ತ ಪೋಗಿ ಹತ್ತಿರಕೆ ಬರಬೇಡಿರತ್ತ ಪೋಗಿರತ್ತತ್ತ ಸಾಗಿ           ||ಪ||

ಉತ್ತಮನು ನಾನಲ್ಲ ಅತ್ತಪೋಗಿ ಅತ್ತತ್ತಸಾಗಿ
ಹತ್ತಿರಕೆ ಬರಬೇಡಿ ರತ್ತಸಾಗಿ ಅತ್ತತ್ತಸಾಗಿ        ||೧||

ಹಿಂದುವಲ್ಲ ಹಿಂದುದೇಶವಲ್ಲ
ಮಂದಭಾಗ್ಯನು ನಿಂದೆಜಾತಿನಾನು ಭಾರತೀಯಳ್ಯಾರೊ   ||೨||?

ಅಂತ್ಯಜಂಗೀ ಚಿಂತೆ ಬಾಳು ಬೇಡ ಚಿಂತೆಬಾಳು
ಜೀವ ಅಂತ್ಯವಾಗುವತನಕ ಇಂತಾಗೋಳು       ||೩||

 

೧೯. ಭಾರತೀಯರೆ ತೊರೆವಿರಾ?

ಭಾರತೀಯರೆ ತೊರೆವಿರಾ ಈ
ಧೀರ ಹರಿಜನರ ನಮ್ಮವರ
ಉನ್ನತಿಗೆ ತನುವೆತ್ತ ಮಾನ್ಯರು ಮಹಾತ್ಮರ
… … ಬನ್ನಿರೆನೆ ಪುಣ್ಯಲೋಕದೊಳು

 

೨೦. ಗೌತಮ ಬುದ್ಧ

ರಾಜರಾಜಕುಮಾರ ನೀನಾಗುತೆ
ರಾಜ್ಯ ಭೋಗಂಗಳೆಲ್ಲ ನೀ ನೀಗುತೆ
ಮುದ್ದು ಮೋಹದ ಕಂದನಗಲುತೆ
ನಿದ್ರೆಯರ್ದಾಂಗಿಯನ್ನಗಲಿ ಪೋದೆಯ                        ||೧||

ಲೋಕದಲ್ಲಿ ಜೀವಿಪುದು ದುಃಖಮು
ದುಃಖಮೆಲ್ಲ ದುರಾಸೆಗೆ ಮೂಲಮು
ಬಿಟ್ಟರೆಲ್ಲ ದುರಾಸೆಗಳೆಲ್ಲವ
ಮೆಟ್ಟಂಲ್ಲಿಯೆ ಮುಕ್ತಿಗೆ ಸಾಧನ                               ||೨||