೪೬. ಕುಲದ ತೌರೂರು

ರಾಗ : ಸುರುಟ
ಅಟತಾಳ – (ಹಣವೆ ಹಣವೆಯೆಂಬಂತೆ)

ಕುಲವೆ ಕುಲವೇ ನಿಬಲಮಾಗಿ ಬಳಲಿಸಿರುವೆಯನ್ನ
ಕುಲಭೂತಂಗಳ ತೌರುನೆಲವೆ ಇಂಡಿಯವು        ||ಪ||

ಕುಲನಿಷ್ಠೆಯಿಂದೆಮ್ಮ | ಬಲವಗುಂದಿಸಿದೆ
ಬಲುಶ್ರೇಷ್ಠ ಜನ್ಮದ | ಬಾಳಗೆಡಿಸಿದೇ            ||೧||

ಊರೊಳಗಾದರೆಯನ್ನ | ದೂರ ಓಡೆನುವೆಶ
ಹರುಸಂತೆಯೊಳಿನ್ನು | ಸಾರಿಕೂಡುವೆಬಂದು    ||೨||

ತಿಳಿಯದಿರ್ದೊಡೆಯನ್ನ | ಬಲುಪ್ರೀತಿಮಾಡುವೆ
ತಿಳಿದ ಮುಹೂರ್ತದಿಂ | ಬಲುಖಾಡಿದೋರುವೆ ||೩||

ಹೊಸಬರುಬರೆಗೃಹ | ವಸತಿಗಲ್ಪಿಸುವೆನಾಂ
ಹೊಸಲಿಗೆ ಬರೆಶಿರವ | ಬಿಸಿಲುಗಾಯಿಸುವೆ       ||೪||

 

೪೭. ತಂದೆ ನಿಂದೆ

ಮತ ದ್ವೇಷಿಪುದು ಮಹಾ ಪತಿತಾ ಪತಿತಾ
ತಂದೆ ದೇವಗೆ ಎಲ್ಲ ಮಂದಿ ಮಕ್ಕಳು ನಾವು
ತಂದೆ ಸರ್ವರನುತಾನೊಂದೇ ಬಾವದಿ ಕಾಂಬ
ಪತಿತನಾಗನೆ ದೇವ | ಸುತನ ದ್ವೇಷಿಸುವವ
ಸುತ ದ್ವೇಷಗೈಯೆಗೋ ಪತಿದ್ವೇಷಮಾಗುವುದು
ಜಾತಿಗಳರಿದಿಹನೇಂ | ನೀತಿಯಲ್ಲದೆ ದೇವ
ಜಾತಿನೀತಿಗಳೊಂದೇ | ಪೂತ ನಿಹರಗೆಂದೂ
ಪ್ರೀತಿಸದಿರೆ ಸರ್ವಭ್ರಾತೃಗಳನು ಜಗದಿ
ಖಾಡಿ ಬಾರದೆ ಇಹುದೇಂ | ದಾತ್ರಿಪಾಲಗೆ ಬಹಳ
ಮತ ದ್ವೇಷಿಪುದು ಮಹಪತಿತವಲ್ಲವೆ ಜಗದಿ
ಕ್ಷಿತಿಯೊಳೆಲ್ಲರು ದೇವಸುತರಲ್ಲದಾರಿಹರು

 

೪೮. ಮನುಸ್ಮೃತಿ ಮಣ್ಣುಪಾಲು

ಎಂಥಾ ಸುಸಂಸ್ಕೃತಿಯಿದು ಏನು ಮಹಾಮನುಸ್ಮೃತಿ ||ಪ||
ಮಾನವರನೆ ಮಾನವರು ಮುಟ್ಟದಿಹ ಹೀನಧರ್ಮವದು ನಿಧಾನದಿ
ಯೋಚಿಸಿ            ||ಅ-ಪ||

ಅಂತ್ಯಜ ಶಿಶುವಿಗೆ ಹಾಲನಿತ್ತರೆ ರಕ್ತಕರೆವುದೆನಾ ಗೋವು
ಎಂಥಾ ಧರ್ಮ ದೈವಜ್ಞರೆ ಪೇಳಿರಿ
ಸಂತಸಮೆ ಅಂತ್ಯಜ ಹಿತೈಷಿಗಳೆ        ||೧||

ನಾಗರ ಪಂಚಮಿಯಂದಂತ್ಯಜಗೂರೊಳು ಬರೆ
ನಾಗಸರ್ಪ ಕಚ್ಚುವುದೇನಯ್ಯೊ
ಭಗವಾನ್ ನೊಪ್ಪುವನೆ ಮಾನವತೆ ಇದೆ ಏನ್ ಯೋಚಿಸಿ
ಶುಭಕಾರ್ಯಕೆ ಹೋಗುವಾಗ ಹರಿಜನೆದುರು ಸಿಕ್ಕಿದರೆ
ಅಶುಭವೆಂದು ಹಿಂದಿರುಗುವುದೆಂತ ಹಿಂದುಧರ್ಮ
ಎಂಥಾ ಪಾಪಿಗಳು ಸಿಕ್ಕಿದರೆನುತ ನಿಂದಿಪುದಿದು ಹಿಂದುಪರಮಧರ್ಮ
ಅಂತ್ಯಜದರ್ಶನ ಮುಂಜಾನೆ ನೋಡಲು ಸಂಜೆತನಕ ಸರಿಯಲ್ಲೆಂದು
ಹಿಂದಿರುವರು ಶಪಿಸುತವರನು ||

ಬಾಲರು ಬಂದು ಹಿರಿಯ ಹರಿಜನನ ಏಕವಚನದಿ
ಬಾರೆಲ ಕರಿಯಕಾಳನೆಂದು ಕರೆವುದು ಯಾವ ಹಿಂದೂಧರ್ಮ

ಸವರ್ಣಕೇರಿಲಿ ಹರಿಜನವಾಸಿಸೆ ಸಹಿಸದೆ ಹೊಡೆದೋಡಿಪರು
ತುರುಕರ ಕ್ರೈಸ್ತರ ಕೇರಿಗೆ ಹೋದರೆ ಹರುಷದಿಂದೆ ಮುಂಬಂದು
ಅರರೆ ಒಬ್ಬ ನಮಗೆಲ್ಲಾ ಒಂದೆ ಎಂದಾದರದಿಂದಾಹ್ವಾನಿಪರು

 

೪೯. ಮತಾಂತರದ ಮಹಾದುಃಖ

ಭಾರತೇಯರ ನೀವು ತೊರೆದುಪೊಪಿರಾ
ಧೀರಹರಿಜನರ ನಿಮ್ಮವರ   ||ಪ||

ಚಂದದಿ ಭಾರತಬಂಧುಗಳನು ತೊರೆದು
ಪೊಂದಲು ಮತಾಂತರ ಇಂದೆಮಗೆ ಸಂಕಟ
ಬಂದಿಹುದು ಬಾಂದವರೆ     ||೧||

ವರಕಾಶಿರಾಮೇಶ್ವರ ಮಧುರಮಹಿಮೆಯ
ಪರಮವೇದದ ಸವಿಯ ವರಹಿಂದೂಧರ್ಮವ
ಮರೆವಪರಿಯೆಂತೂ           ||೨||

ತಿರುಮಣಿ ವಿಭೂತಿಯ ಹರಿಹರಸ್ಮರಣೆಯ
ಧುರಧೀರ ಚರಿತೆಯ ವರಗೌರಿಯುಗಾದಿಯ
ತೊರೆವಪರಿಯೆಂತು           ||೩||

ಭಾರತಬಾಧ್ಯತೆಗೆ ದೂರಮಾದೊಡಿನ್ನು
ಭಾರತಿಯೆಂಬಬಿನಾಮ ಸೂರೆಗೈದೊಡೀ
ಧಾರುಣನಮಗೇಕೆ             ||೪||

 

೫೦. ದೇವೋಲಿ ಮೀನಾಕ್ಷಿಪುರ ಹತ್ಯಾಕಾಂಡ

ಕಣ್ಣೀರ್ ಕರೆವ ಕಥೆಯಾಲಿಸಿ ಪೇಳುವೆ
ಸಾಧುಮೀನಾಕ್ಷಿಪುರ ದೇವೋಲಿ ಹತ್ಯಾಕಾಂಡವನು
ಅತ್ಯಚಾರ ಅನಾಚಾರ ವೃದ್ಧರಮಕ್ಕಳ ಬೆಂಕಿಯೊಳ್ ಬೆಯ್ಸಿಪುದ
ಗುಡಿಸಲು ಬಾಗಿಲು ಮುಚ್ಚಿ ಬೆಂಕಿಯ ಬೇಗೆಯಿಂ ಬೇಯ್ಯಿಪುದ
ರಕ್ತಕಾಲುವೆಯೊಳ್ ಬಿದ್ದು ಸತ್ತವರು ಲೆಕ್ಕವಿಲ್ಲ
ಇಂದಿರಾಜಿ ಬಂದು ನೋಡಿದರು ಏನು ಮಾಡಲಾಗಲಿಲ್ಲ ವಿಧಿವಿಧಾನವ
||