೬೧. ಸ್ವಾತಂತ್ರದ ಸವಿನೆನಪು

ಸ್ವತಂತ್ರ ಬಂದಿತು ಸ್ವರಾಜ್ಯ ಬಂದಿತು ನಾವೆಂತ ಧನ್ಯರು            ||ಪ||

ಪರಕೀಯವರ ತುರಂಗದಲಿ ವರುಷವ ಮುನ್ನೂರ ಕಳೆದು
ಹರುಷದಿಯಿಂದೆ ಬಂದೆಯ ಬಾ ಭಾರತಮಾತೆಯೆ ನೀಂ    ||೧||

ಪಡೆಯೆ ಸ್ವರಾಜ್ಯಕೆ ಮಡಿದಿರುವ ಕಡುಗಲಿ ಭಗತ್ ಸುಭಾಸರಿಗೆ
ಒಡನೆಯೆ ಲಜಪತ್ ಕಸ್ತೂರಿಬಾಯ್ ನಗುತಿಹರು ಸ್ವರ್ಗದಿ          ||೨||

ದಾದಾತಿಲಕರ್ ಗೋಖಲೆಯು ಮೋದದಿ ಚಿತ್ತನಿರಂಜನದಾಸ್
ಆದರದಿತ್ತಲೆ ನೋಡುತನಲಿವರು ಕರವೆತ್ತಿಹರಸಿಂ          ||೩||

ಹಠಯೋಗಿಶ್ವರ ಗಾಂಧಿಯು ತಾ ದಿಟಲೋಕಕೆ ಸಾರುವ ಮುನ್ನ
ಹಠಮಾಡಿದ ಸರಿಸಾಟಿಯಾಗದೆ ದಿಟಮಾಯ್ತು ಭಲೆ ಭಲೆ            ||೪||

 

೬೨. ಬಂದರು ಪೂರ್ಣಸ್ವತಂತ್ರ ಭಾಗ್ಯವೇನು?

ಬಂದರು ಪೂರ್ಣ ಸ್ವತಂತ್ರ ಭಾರತಕೆ
ಬಂದ ಭಾಗ್ಯವೇನು ಹರಿಜನಕೆ ಬಂದ ಭಾಗ್ಯವೇನು                     ||ಪ||
ಹಿಂದಿನಿಂದ ಬಲುಬೆಂದು ನೊಂದಿರುವ ಮಂದ ಭಾಗ್ಯಜನಕೆ           ||ಅ-ಪ||

ಕುಣಿದೆವು ಮೊದಲಿಂ ದಣಿದೆವು ಆ ದಿನ ಸ್ವತಂತ್ರ ಬಂದದಿನ
ಆ ದಿನ ಸ್ವರಾಜ್ಯ ಬಂದ ದಿನ
ಸ್ವತಂತ್ರ ಬಂದರು ಅತಂತ್ರವಾಯಿತು ಅಳಿಯಲಿಲ್ಲ ಭೇದ

 

೬೩. ದಮ್ಮನಿಂಗಳದ ಹಿರಿಮೆ

ಡಿಂ ಡಿಂ ಬೇರಿಯ ಬಾರಿಸೋ ನೀಂ     ||ಪ||
ದಮ್ಮನಿಂಗಳದ ಹಿರಿಮೆ ಸಾರುವೇನಾಂ           ||ಅ-ಪ||

ಅಮೃತಲಿಂಗದೆಂಬೊದೆಲ್ಲಿಲ್ಲ ದೇವ್ರು
ದಮ್ಮನಿಂಗಳವೆಂಬೊದೆಲ್ಲಿಲ್ಲ ಊರು          ||೧||

ದಾನದಾತ ಮೊಗಣ್ಣಗೌಡರೂರು
ರಾಮಭಜನೆ ಸದಾ ನಡೇನಾ ನಮ್ಮೂರು         ||೨||

ಹಲಸಿನ ಹಣ್ಣಿಗೆ ಹೆಸರಾಂತ ಊರು
ತೆಂಗುಬಾಳೆ ಮಾವು ಇರೊ ಊರು     ||೩||

ಹೆಬ್ಬಳ್ಳ ಮೂರ್ನಡೆ ಬಳಸಿರೊ ಊರು
ದಿಬ್ಬದ ಮೇಲಿರೊ ಆರೋಗ್ಯ ಊರು            ||೪||

ಹೇಮಾವತಿ ನಾಲೆ ಎಡದಂಡೆಯೂರು
ರಾಜರಸ್ತೆ ಮಧ್ಯೆ ಹೋಗುವ ಊರು ||೫||

ಪದವೀಧರರು ತುಂಬಿರುವ ನಮ್ಮೂರು
ಕವಿಭೂಷಣ ಗೋವಿಂದಾಸರೂರು     ||೬||

ಅಮೇರಿಕಾವಾಸಿ ಭೋಜಪ್ಪನ ಊರು
ಗೋಮಟೇಶನ ಒತ್ತಿ ನಮ್ಮೂರು      ||೭||

ಚಂದದಿ ರಾಮೋತ್ಸವ ನಡೆವ ಊರು
ಸುಂದರ ಶ್ರೀರಾಮಗಂಬಿರೊ ಊರು ||೮||

ಪುಂಡರು ಷಂಡರು ಇಲ್ಲದ ಊರು
ಗಂಡುಭೂಮಿಯಿದು ಭಲೆ ನಮ್ಮೂರು           ||೯||

 

೬೪. ದಮ್ಮನಿಂಗಳ ರಾಮೋತ್ಸವ

ಬಂದೀತು ಬಂದೀತು ಚಂದರಾಮೋತ್ಸವ        ||ಪ||
ಎಂದಿಗೆ ಬಂದಿತೊ ಚಂದರಾಮೋತ್ಸವ            ||ಅ-ಪ||

ಚಂದಾವ ನೋಡುವ ನಂದಾದೋಲಾಡುವ
ಹಿಂದುಮುಂದೋಡಾಡುವ ಗೋವಿಂದಾಸರ ನೋಡುವ ||೧||

ಛತ್ರಿ ಹಿಂಭಾಗದಿ ಚಾಮರ ಮುಂಭಾಗದಿ
ಒತ್ತಿಯೊಳ್ ಕನ್ಯೆ ಮೂವರು ಹೊತ್ತು ಕಳಸ ಹೋಗುವಂತ           ||೨||

ಗರಿಗರಿನೆ ಸುತ್ತುವ ಹರಿಚಕ್ರಮಿದ್ದರು
ಹರಿಬೇಗ ಸಾಗದಿಂದ ಕಾರಣವಕಾಣಿಸು           ||೩||

ಭಜನೇಯ ಬಾಲರೆಲ್ಲ ನಿಜಭಕ್ತಿಯಿಂದ ಕೂಡಿ
ಭಜನೇಯ ಮಾಡುವಂತ ಬಾಲರತಿ ಲೀಲೆಯು ||೪||

 

೬೫. ಯಿನ್ಯಾಕೆ ಮಲಗಿರುವೆ ಬೆಳಗಾದರೊಂದೇ ದಿನ

ಅಮ್ಮ ಬೇಗೇಳಮ್ಮ ದಮ್ಮನಿಂಗಳದ ರಾಮೋತ್ಸವ      ||ಪ||

ಕರಿಯಾಕೆ ಬರುತಾನೆ ಕಿರಿಯ ತಮ್ಮಯ್ಯ ನಾಳೆನಾ
ಬಿರಬಿರನೆ ಕೆಲಸ ಪೂರೈಸಿ ತಂಗಿ ಬೆಳಗಾದರೊಂದೇ ದಿನ   ||೧||

ಬಿರಬಿರನೆ ಕೆಲಸ ಪೂರೈಸಿ ಕೆರೆಗೋಗಿ ಸೀರೆ ಮಡಿಮಾಡಿ ತಂಗಿ
ತಮ್ಮ ಬರುವ ದಾರಿಯನೆ ಕಾಯಬೇಕು ತಂಗಿ   ||೨||

ಹತ್ತಿರದ ಊರಲ್ಲ ಒತ್ತಿಲಿ ಹಳ್ಳಿಗಳಿಲ್ಲ ಹೆತ್ತವ್ವ ದಾರಿಯ ನೋಡುವಳು
ಹೆತ್ತವ್ವ ದಾರಿಯ ಇತ್ತಾಗೆ ನೋಡುವಳು ಹೊತ್ತಿಗೆ ಮುಂಚೆ ಊರಸೇರಬೇಕು ||೩||

ಅತ್ತಿಗೆ ಹಡೆದವಳೆ ಕುಟ್ಟಿಬೀಸೋರಿಲ್ಲ ಮತ್ತೆ ನಾದಿನಿ ಮೈಗಳ್ಳಿ
ಮತ್ತೆ ನಾದಿನಿ ಮೈಗಳ್ಳಿ ನಂಬಿದರೆ ಅತ್ತ ತೌರೂರು ಹಬ್ಬ ಹಿಗರಣ
||೪||