೫ನೆ ಅಂಕ ಪ್ರಾರಂಭ

ಭಗವಾನ್‌ದಾಸ್ : ಭೈರಣ್ಣ ನಾಳೆ ಶನಿವಾರ ಧರ್ಮಪೂರಿಯ ಶ್ರೀರಾಮ ದೇವಸ್ಥಾನಕ್ಕೆ ನಮ್ಮವರನ್ನೆಲ್ಲಾ ಕರೆದುಕೊಂಡು ಹೋಗೋಣ ಅವರೆಲ್ಲರಿಗೂ ಸ್ನಾನ ಮಡಿಮಾಡಿಕೊಂಡು ಸಿದ್ಧರಾಗಿರುವಂತೆ ಹೇಳುತ್ತೇನೆ. ಈ ದಿನ ಸಂಜೆ ಊರಿನಲೆಲ್ಲಾ ಸಾರಿ ಬಿಡು, ಮೊನ್ನೆ ತಾನೆ ಸರ್ಕಾರಕ್ಕೆ ಸೇರಿದ ದೇವಸ್ಥಾನಗಳಿಗೆಲ್ಲಾ ಹರಿಜನರು ಹೋಗಬಹುದೆಂದು ಸರ್ಕಾರದ ಕಾನೂನಾಗಿದೆ.

ಭೈರ : ಭಗವಾನ್ ಬಹಳ ಸಂತೋಷ. ನಾವೆಲ್ಲ ನಿಮ್ಮ ಮುಂದಾಳತ್ವದಲ್ಲಿ ಎಲ್ಲಿಗೆಂದರಲ್ಲಿಗೆ ಏನೆ ಕಷ್ಟ ಬರಲಿ ಎಲ್ಲರೂ ಸಿದ್ಧರಾಗಿ ನುಗ್ಗುತ್ತೆವೆ. ಹಿಂದಿನಿಂದಲೂ ನಿಮ್ಮಂಥಾ ಸ್ವಾರ್ಥಪರರಲ್ಲದ ಛಲಗಾರರಾದ ಮತಾಭಿಮಾನಿಗಳಾದ ಮುಖಂಡರು ನಮ್ಮೇಳಿಗೆಗಾಗಿ ದುಡಿಯದೆಯಿದ್ದುದ್ದಕ್ಕಾಗಿ ನಾವಿಷ್ಟು ಅಧೋಗತಿಗಿಳಿಯಬೇಕಾಯಿತು. ಕಷ್ಟಾಳುಗಳಾದ ಧೀರರಾದ ನಮಗೆ ಯಾವ ಕೆಲ್ಸ ತಾನೆ ಅಸಾಧ್ಯವಾದೀತು.

ಭಗವಾನ್ ದಾಸ್ : ಭೈರಣ್ಣ ನೀನು ಹೇಳಿದ ಮಾತು ನಿಜವಾದ ಮಾತು. ನೋಡು ಹಿಂದೆ ನಮ್ಮವರು ಎಂತಾ ಸಾಹಸದ ಕಾರ್ಯ ಸಾಧಿಸಿದ್ದಾರೆ. ಹಿಂದೆ ದಿಳ್ಳಿಯಲ್ಲಿ ಆಳುತ್ತಿದ್ದ ಬಾದಸಹ ಚಕ್ರವರ್ತಿಯು ನಮ್ಮ ದೇಶದ ದೊಡ್ಡದೊಡ್ಡ ಹಿಂದೂ ದೇವಸ್ಥಾನಗಳನ್ನೆಲ್ಲಾ ನಾಶಮಾಡಿ ವಿಗ್ರಹ ಮತ್ತು ಐಶ್ವರ್ಯಗಳನ್ನೆಲ್ಲಾ ತೆಗೆದುಕೊಂಡಿರಲು ಭಕ್ತ ರಾಮನುಜಚಾರ್ಯರ ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದ ಮೇಲುಕೋಟಿ ಚೆಲುವರಾಯಸ್ವಾಮಿಯ…. ರಾಮನುಜರು ಬಾದಶಹನಿಂದು ಚೆಲುವರಾಯಸ್ವಾಮಿ ವಿಗ್ರಹವನ್ನು ತೆಗೆದುಕೊಂಡು ಹಿಂದಿರುಗಿ ಬರುವಾಗ ಇದನ್ನು ತಿಳಿದ ಮುಸಲ್ಮಾನರು ಬಂದು ತಡೆದಾಗ ಅವರನ್ನು ಹಿಂದಕಟ್ಟಿ ವಿಗ್ರಹವನ್ನು ಸುಸೂತ್ರವಾಗಿ ಮೇಲ್ಕೋಟೆಗೆ ಹೊತ್ತುಕೊಂಡು ಬಂದು ದೇವಸ್ಥಾನದಲ್ಲಿ ಪ್ರತಿಷ್ಠೆ ಮಾಡಿಸಿದವರು ನಮ್ಮವರಲ್ಲವೇ? ಅದಕ್ಕೋಸ್ಕರ ತಾನೆ ರಾಮಾನುಜರು ವರ್ಷಕ್ಕೊಮ್ಮೆ ಜಾತ್ರಾಕಾಲದಲ್ಲಿ ಮೇಲ್ಕೋಟೆ ಮತ್ತು ಬೇಲೂರು ದೇವಸ್ಥಾನಗಳಿಗೆ ನಮ್ಮವರ ಪ್ರವೇಶಕ್ಕೆ ಏರ್ಪಾಟು ಮಾಡಿದ್ದು. ನಮ್ಮವರು ಅಂಥಾ ಸಾಹಸ ಕಾರ್ಯವನ್ನು ಸಾಧಿಸಿದ್ದರಿಂದಲ್ಲವೆ ದೇವಸ್ಥಾನಕ್ಕೆ ನಮ್ಮವರನ್ನು ಬಿಟ್ಟಿದ್ದು, ಧರ್ಮಬರಲೆಂದು ಬಿಟ್ಟರೇನು? ಇದಕ್ಕಾಗಿ ಇಡೀ ನಮ್ಮ ಭಾರತೀಯರೆಲ್ಲಾ ನಮಗೆ ಚಿರರುಣಿಗಳಾಗಿದ್ದರೂ ಸಾಲದು. ಇದಲ್ಲದೆ ಮತ್ತೊಂದು ಮಹಾತ್ಕಾರ್ಯವನ್ನು ನಮ್ಮವರು ಸಾಧಿಸಿದ್ದಾರೆ. ನೋಡು, ಮೈಸೂರು ಹಿಂದಿನ ಅರಮನೆಗೆ ಬೆಂಕಿಬಿದ್ದು ಬೇಯುತ್ತಿರುವಾಗ ಬೇರೆಯವರೆಲ್ಲ ಬಂದು ದೂರ ನಿಂತುಕೊಂಡು ಬಾಯಲ್ಲಿ ಮಾತ್ರ ಬೆಂಕಿ ಆರಿಸಿದರೆ ಹೊರತು ಯಾರು ಮುನ್ನುಗ್ಗಲಿಲ್ಲ. ಅಲ್ಲಿನ ಆದಿಕರ್ನಾಟಕ ಪುರಕ್ಕೆ ವಿಚಾರ ತಿಳಿದಕೂಡ್ಲೆ ಚೆನ್ನಾಗಿ ಕುಡಿದು ಹುರಿದುಂಬಿದ್ದ ಅವರೆಲ್ಲರೂ ಧೈರ್ಯದಿಂದ ನುಗ್ಗಿ ನುಗ್ಗಿ ಅಯ್ಯೊ ನಮ್ಮ ಸ್ವಾಮಿ ನಮ್ಮ ದೊಡ್ಡಬುದ್ಯೋರು ನಮ್ಮರಮನೆ ಬೆಂದು ಹೋಗುತಲ್ಲ ಎಂಬಭಿಮಾನದಿಂದ ಪ್ರಾಣದ ಆಸೆ ತೊರೆದು ಬೆಂಕಿ ಆರಿಸಿ ಅರಮನೆಯಲ್ಲಿದ್ದ ಐಶ್ವರ್ಯವನ್ನೆಲ್ಲ ಉಳಿಸಿಕೊಟ್ಟರು. ಇದಕ್ಕಾಗಿ ಇಡೀ ಭಾರತೀಯರು ಮೈಸೂರು ರಾಜಮನೆತನದವರು ಸೂರ್ಯ ಚಂದ್ರಾಣೆಯಾಗಿ ನಮಗೆ ಚಿರಋಣಿಗಳಾಗಿರಬೇಕು. ಆದರೆ ಅವೆಲ್ಲವೂ ಆಗಾಗ್ಗೆ ಮರೆತೇ ಹೋಗಿವೆ. ಧೈವಭಕ್ತಿ, ಸ್ವಾಮಿಭಕ್ತಿ, ದೇಶಭಕ್ತಿಸತ್ಯಸಂದತೆ ಧೀರತ್ವ ಕಷ್ಟಪಟ್ಟು ದುಡಿಯುವುದರಲ್ಲಿ ಯಾರಿಗೆ ತಾನೆ ಏನು ಕಡಿಮೆ. ಆದರೆ ಈ ಮತಭೇದ ಮಹಾಯಾತನೆ, ಬಡತನದ ಬೇಗೆ ಇವೆರಡೂ ನಮ್ಮ ಕಾರ್ಯ ಧೈರ್ಯವನ್ನೆಲ್ಲಾ ಕುಗ್ಗಿಸಿ ಮುಗ್ಧರನ್ನಾಗಿ ಮಾಡಿದೆ. ಇನ್ನು ಮುಂದೆ ನಮ್ಮವರು ವಿದ್ಯಾವಂತರಾದ ತರುಣರು ಸುಮ್ಮನಿರಲಾರರು ಸಾಲದ್ದಕ್ಕೆ ದೈವದಯೆ ಕಾಲಚಕ್ರವು ನಮ್ಮಕಡೆ ಬರುತ್ತಿವೆ.

ಭೈರ : ಭಗವಾನ್ ಏನೆಂದು ಡಂಗೂರ ಹೊಡೆಯಲಿ

ಭಗವಾನ್ ದಾಸ್ : ಸರ್ಕಾರಿ ದೇವಸ್ಥಾನಗಳಿಗೆಲ್ಲಾ ಹರಿಜನರು ಹೋಗಬಹುದು. ತಡೆದವರಿಗೆ ಜೈಲಂತೆ ಎಂದು ಸಾರು.

(ಧರ್ಮಪುರಿಯಲ್ಲಿ ಭೈರಣ್ಣ ಸಾರುವುದು)

ಭೈರ : ಸರ್ಕಾರಕ್ಕೆ ಸೇರಿದ ದೇವಸ್ಥಾನಕೆಲ್ಲ ಹರಿಜನರು ನುಗ್ಬಹುದು. ತಡ್ದೋರಿಗೆ ಜೈಲಂತೆ.

ಬೋರೇಗೌಡ : ಶಿವಲಿಂಗಪ್ಪ ಡಂಗೂರ ಕೇಳಿದಿರಾ ರಾಮ. ರಾಮ ಹರಿಜನರು ದೇವಸ್ಥಾನಕ್ಕೆ ನುಗ್ಗೋದೆ ತಡ್ದೋರಿಗೆ ಜೈಲಂತೆ ಇದನ್ನು ಯಾರೂ ಕೇಳುವವರೆ ಇಲ್ಲವಲ್ಲಾ. ಸರ್ಕಾರದಿಂದ ಕಾನೂನಾಗಿದೆಯಂತೆ ಇದಕ್ಕಾಗಿಯೆ ಗಾಂಧಿ ಹುಟ್ಟಿದ್ದು. ಕಾಂಗ್ರೆಸ್ ಸಂಸ್ಥೆ ಕಟ್ಟಿದ್ದು. ಸ್ವರಾಜ್ಯ ಬಂದದ್ದು ಸ್ವಾತಂತ್ರ ಹೊಂದಿದ್ದು. ನಮಗೆ ಸ್ವಾತಂತ್ರ ಬಂದರೆ ನಮ್ಮ ಜೀತಗಾರರಾದ ಇವರಿಗೂ ಸ್ವಾತಂತ್ರ್ಯವಂತೆ ಸ್ವಾತಂತ್ರ. ಇದ್ಯಾವುದು ನಮಗೆ ಬೇಡ ಹಿಂದಿದ್ದ ಪರಂಗಿಯವರ ಆಳ್ಕೆ ಪುನಃ ಬಂದರೆ ಸಾಕು. ಜಾತಿ ಗೋತ್ರಗಳು ಕೆಡದೆ ಬಿಗಿಯಾಗಿರುವುದು ಬೇಕು. ಹಾಗಿಲ್ಲದಿದ್ದಲ್ಲಿ ಈ ಜಾತಿಗೆಟ್ಟ ಪ್ರಪಂಚದಲ್ಲಿ ಬಾಳುವುದೆ ಬೇಡ.

೧೭ ಹಾಡು :     ಪ್ರಪಂಪಚದ ಬಾಳೆ ಬೇಡ | ಅಂತ್ಯಜ ಜಗವಾಗಲಿ ಘಾಡ ||ಪ||
ಮನುಧರ್ಮವು ಮಹಾವೇದಾಗೀತೆಗಳ್ |
ಮಣ್ಣೂಡಿದ ಮೇಲಿರಬಾರದು ನಾವ್ ||ಅ||

ಬೇಡಸ್ವರಾಜ್ಯ ಬೇಡ ಸ್ವತಂತ್ರ
ಕೂಡಲೆ ಮುಗಿಯಲೀ ದರೆ ಬಾಳೆಮಗೆ ||೧||

ಆತ್ಮಪವಿತ್ರತೆ ಹೊಂದಿದ ಮೇಲೆ |
ಯೇತಕೆ ಸ್ವರ್ಗದ ಸೇರುವ ಬಯಕೆ ||೨||

(ಹರಿಜನ ಭಜನಾ ಮಂಡಲಿ ಕಾಂಗ್ರೆಸ್ ಪ್ರೆಸಿಡೆಂಟ್ ಸುರೇಶ್, ತಾರಾಜಿಯೊಡಗೂಡಿ ದೇವಾಲಯ ಪ್ರವೇಶ)

ಹಾಡು :            ರಘು ಪತಿ ರಾಘವ ರಾಜಾರಾಮ್ |
ಪತಿತ ಪಾವನ ಸೀತಾರಾಮ್ ||
ಯೀಶ್ವರ ಅಲ್ಲ ತೇರಾನಾಮ್ |
ಸಬುಕು ಸನ್ಮತಿ ದೇ ಭಗವಾನ್ ||

ಕಾಂಗ್ರೆಸ್ ಪ್ರೆಸಿಡೆಂಟ ಸುರೇಶ್ : ಯಲ್ಲರೂ ಚೆನ್ನಾಗಿ ರಾಮರಾಮ ಹಾಡಿಕೊಂಡು ಬರಬೇಕು. ಎಲ್ಲ ಕಷ್ಟಗಳೂ ಮೋಡದಂತೆ ಮಾಯವಾಗುವುವು. ಗುರುವಾಯೂರು ದೇವಸ್ಥಾನಕ್ಕೆ ಹರಿಜನ ಪ್ರವೇಶಕ್ಕಾಗಿ ಮಹಾತ್ಮಗಾಂಧಿಯವರು ಹೇಗೆ ೨೧ ದಿನಗಳು ಉಪವಾಸವಿದ್ದು ಸತ್ಯಾಗ್ರಹ ಹೂಡಿ ಜಯಶಾಲಿಯಾದರೂ ಈಗೇನು ಸತ್ಯಾಗ್ರಹ ನಡೆಸಬೇಕಾಗಿಲ್ಲ ಕಾನೂನು ಮಾಡಿದ್ದೇವೆ. ಯಾವ ಅಡ್ಡಿ ಆತಂಕಗಳು ಬರಲಾರವು. ಬಂದರೆ ಇದ್ದೇ ಇದೆ ರಕ್ಷಣೆಗೆ. ಬನ್ನಿ ಶಿಸ್ತಿನಿಂದ ಸಾಲುಸಾಲಾಗಿ ಹಾಡಿರಾಮನಾಮ.

ಧರ್ಮ : (ದೇವಸ್ಥಾನದ ಮುಂಭಾಗದಲ್ಲಿ) ನಮಸ್ಕಾರ ಸ್ವಾಮಿ ಪ್ರೆಸಿಡೆಂಟರೆ (ಮೆಲ್ಲಗೆ) ನಿಮ್ಮಿಂದ ಪ್ರಪಂಚ ಕುಲಗೆಟ್ಟಿತು ನಮ್ಮೂರು ಶ್ರೀರಾಮನನ್ನೂ ಕುಲಗೆಡಿಸುವುದಕ್ಕೆ ಬಂದಿದ್ದೀರಿ

ಕಾ.ಪ್ರೆ.ಸುರೇಶ್ : ಆ ಏನೆಂದಿರಿ ಬಹಳ ಸಂತೋಷ ಅಂದಿರಾ?

ಧರ್ಮ : ಹೌದು ಬಹಳ ಸಂತೋಷ ಅಂದೆವು. ಹೋಗಿ ಕಾಸಿಯಲ್ಲಿ ಮೊನ್ನೆ ರಕ್ತಕಾರಿ ಸಾವಿರ ಜನ ಸತ್ತರಂತೆ.

ಅರ್ಚಕ : ದಮಾಡಿ ಯಲ್ಲರು ಒಳಗಡೆ ಬನ್ನಿ. ಸರ್ಕಾರದ ಆಜ್ಞೆ ಶಿರಸವಹಿಸಬೇಕು. ತಾವು ದಯಮಾಡಿಸುತ್ತಾರೆಂದು ನಮಗೆ ಮೊದಲೆ ಗೊತ್ತಾಗಿ ಸಿದ್ಧಾವಾಗಿದ್ದೆವು. ಹಿಂದುಗಳ್ಯಾರು ಈ ದಿನ ದೇವಸ್ಥಾನಕ್ಕೆ ಬರಬ್ಯಾಡಿ. ಹರಿಜನ ಪ್ರವೇಶದಿಂದ ಅಶುದ್ಧವಾದ ದೇವಸ್ಥಾನ ಶ್ರೀರಾಮಮೂರ್ತಿ ಇವುಗಳನ್ನು ಅವರು ಹೊರಗೆ ಹೋದನಂತರ ಸಂಪೋಕ್ಷಣೆ ಮಾಡಿ ಶುದ್ದಿಹೊಂದಿದನಂತರ ನಾಳೆ ಬನ್ನಿರೆಂದು ತಿಳಿಸಿ ತಮ್ಮನ್ನೆ ಕಾಯುತ್ತಿದ್ದೆವು. ದಯಮಾಡಿಸಬೇಕು ಸ್ವಾಮಿ.

ಕಾ.ಪ್ರೆ.ಸುರೇಶ್ : ಧರ್ಮಗಳೆ ಬನ್ನಿ ಒಳಗಡೆ. ಅರ್ಚಕರೆ ಬಹಳ ಸಂತೋಷ. ನೀವೆಲ್ಲ ಕಾಲಕ್ಕನುಗುಣವಾಗಿ ಬುದ್ದಿಯು ಬದಲಾವಣೆಯಾಗುತ್ತೆಂಬ ಮಹಾತ್ಮಗಾಂಧಿಯವರ ಅಭಿಪ್ರಾಯದಂತೆ ಹರಿಜನರನ್ನು ದೇವಾಲಯ ಪ್ರವೇಶ ಮಾಡಿಸಿ ದೇವರ ದರ್ಶನ ಮಾಡಿಸಲು ಎಷ್ಟು ಕಾತುರ, ಸಂತೋಷದಿಂದ ನಡುಕಟ್ಟಿ ಕಾದಿದ್ದೀರಿ. ಬಹಳ ಸಂತೋಷ. ನಿಮ್ಮಂತವರಿಂದಲ್ಲವೇ ಹರಿಜನೋದ್ಧಾರ ಕಾರ್ಯ ನಡೆಯುವುದು. ಸ್ವರಾಜ್ಯ ಸ್ವಾತಂತ್ರ ಲಭಿಸಿದ್ದು. ಮಹಾತ್ಮಗಾಂಧಿಯವರ ಸತ್ವವನ್ನು ಕಾಂಗ್ರೆಸ್ಸಿನವರಾದ ನಮಗಿಂತ ನೀವೆ ಅಕ್ಷರಸ ಪಾಲಿಸುತ್ತಿದ್ದೀರಿ. ಶಹಬಾಸ್ ಎಲ್ಲರು ನಿಮ್ಮಂತಿದ್ದರೆ ಭಾರತವನ್ನು ಬಂಗಾರ ಮಾಡಬಹುದು. ಆಗಲಿ, ನಿಮ್ಮ ಭೂತದಯಾ ಭಾವವನ್ನು ನೋಡಿ ಬಹಳ ಸಂತೋಷ. ಎಲ್ಲಿ ಪೂಜೆ ಮಾಡಿ. ಮಂಗಳಾರತಿ ಮಾಡಿ. ತೀರ್ಥಪ್ರಸಾದ ಕೊಡಿ. ನಾನು ಬೇಗ ಹೊರಡಬೇಕು ಬೆಂಗಳೂರಿಗೆ.

ಅರ್ಚಕ : ಸ್ವಾಮಿ ತಮ್ಮಮಾತು ಕೇಳಿ ಬಹಳ ಸಂತೋಷವಾಯಿತು. ಆದರೆ…. ನಾನು ಪೂಜೆ ಮಾಡಿ ಮಂಗಳಾರತಿ ಮಾತ್ರ ಬೆಳಗುತ್ತೇನೆ. ತೀರ್ಥ ಪ್ರಸಾದವನ್ನು ತಮಗೆ ಕೊಡುತ್ತೇನೆ. ತಮ್ಮ ಕೈಯಿಂದ ಅವರಿಗೆ ಕೊಡಿ. ಯಾಕೆಂದರೆ ಅವರ ಕೈಯ್ಯಿಗಿಯ್ಯಿ ನನಗೇನಾದರೂ ಸ್ಪರ್ಷವಾದರೆ ಶಾಸ್ತ್ರ ರೀತಿ ಅಂತ್ಯಜದರ್ಶನಂ ಪಾಪಂ ಸ್ಪಶರ್ನಾ ಅಗ್ನಪ್ರವೇಶಂ ಎಂದು. ಆದರೂ ಈ ದಿನದ ಕೆಲಸದಿಂದ ನನಗೇನೂ ಸ್ವರ್ಗಕ್ಕೆ ಬದಲು ನರಕ ಪ್ರಾಪ್ತಿಯೆ ಸರಿ.

ಕಾ.ಪ್ರೆ.ಸುರೇಶ್ : ಆಹಾ|| ಬೇಡಿ ಬೇಡಿ. ನೀವು ಹಾಗಾದರೆ ಪ್ರಪಂಚಕ್ಕೆ ಹಾನಿಯೊದಗೀತು. ನಿಮ್ಮಂತವರಿಂದಲೆ ಅಲ್ಲವೆ ಈ ಭಾರತ ಭೂಮಿಯಲ್ಲಿ ದಯೆ ಧರ್ಮ ದೇವರಿದ್ದು ಕಾಲಕಾಲಕ್ಕೆ ಮಳೆ ಬೆಳೆಗಳಾಗಿ ದೇಶವು ಸುಭಿಕ್ಷವಾಗಿರುವುದು. ತಮ್ಮಂಥ ಲೋಕ ಹಿತೈಷಿಗಳ ಅಗ್ನಿಗೆ ಆಹುತಿಯಾದರೆ. ಅಲ್ಲಿಗೆ ಮುಗಿಯಿತು ನಿಮ್ಮ ಭೂಲೋಕದ ಯಾತ್ರೆ. ನಾನೆ ತೀರ್ಥಪ್ರಸಾದ ಕೊಡುತ್ತೇನೆ.

ಅರ್ಚಕ : (ಪೂಜೆ ಮಾಡಿ ಕೈನಡುಗಿಸುತ್ತ, ಮಂಗಳಾರತಿ ಬೆಳಗುತ್ತ) ಸ್ವಾಮಿ ಅವರನ್ನು ಸ್ವಲ್ಪ ದೂರಕ್ಕೆ…

ಕಾ.ಪ್ರೆ.ಸುರೇಶ್ : ಆ! ಆ ಏನೆಂದೀರಿ ! ಇವರನೆಲ್ಲ ದೂರಕ್ಕೆ ಕಳುಹಿಸಿ ಎಂದಿರಾ?

ಅರ್ಚಕ : ಇಲ್ಲ ಸ್ವಾಮಿ. ಹಾಗೆಂದರಾದೀತೆ. ಸರ್ಕಾರಕ್ಕೆ ತಾವು ಬರೆದು ನನ್ನ ಅರ್ಚಕತನವನ್ನು ಕಿತ್ತು ಹಾಕುವಂತೆ ಮಾಡಿದರೆ! ಹಾಗಂದೇನೆ ಸ್ವಾಮಿ. ಅವರನ್ನು ಹತ್ತಿರಕ್ಕೆ ಕರೆಯಿರೆಂದೆನು.

ಕಾ.ಪ್ರೆ.ಸುರೇಶ್ : ಅರ್ಚಕರೆ ಇಲ್ಲಿ. ತೀರ್ಥಪ್ರಸಾದವನ್ನು ಕೊಡಿ. ನಾನೇ ಹಂಚುತ್ತೇನೆ.

ಅರ್ಚಕ : ಸ್ವಾಮಿ ದಯಮಾಡಿ ಮನಸ್ಸೀಗೇನು ಬೇಸರಪಟ್ಟುಕೊಳ್ಳಬೇಡಿ. ಯಾಕಂದರೆ ನಾವು ಬ್ರಾಹ್ಮಣರು. ಬ್ರಹ್ಮನ ಬಾಯಿಂದ… ನಾವು ಶ್ರೇಷ್ಟ… ಭೂದೇವತೆಗಳೆಂದು…

ಕಾ.ಪ್ರೆ.ಸುರೇಶ್ : ಗೊತ್ತು. ಅದೆಲ್ಲ ನನಗೆ ಗೊತ್ತಿದೆ. ಅದಕ್ಕೋಸ್ಕರವೆ ಇಲ್ಲಿ ಕೊಡಿರೆನ್ನುವುದು. (\|;ಟಿಞರಿ~=ರ್ರಿಸಾದ ಕೊಟ್ಟರು) ಇತ್ತ ತಿರುಗಿ… ಸುರೇಶ್, ತಾರಾಜಿ, ಹರಿಜನರ ಬಾಳಿನಲ್ಲಿ ಅಸ್ಪೃಶ್ಯತೆಯ ಪ್ರಭಾವದಿಂದ ಅಲೆಗಳಂತೆ ಎಷ್ಟು ಕಷ್ಟ ಪರಂಪರೆಗಳ ಹೆಜ್ಜೆ ಹೆಜ್ಜೆಗೂ ಒದಗುತ್ತವೆಂಬುದನ್ನು ನೋಡಿದಿರಾ. ಸ್ವಲ್ಪವೂ ಇವರಿಗೆ ಸಹೋದರ ಭಾವ ಭೂತದಯೆಯೆಂಬುದು ಇಲ್ಲವಲ್ಲಾ. ಹೀಗೆಯೇ ಭಾರತದಲ್ಲೆಲ್ಲ ಕೋಮುವಾರು ಭಾವನೆಗಳು ಹೆಚ್ಚುತ್ತಾ ಬಂದಲ್ಲಿ ಮುಕ್ಕಾಲು ಶತಮಾನದಿಂದ ಕಷ್ಟಪಟ್ಟು ಜೈಲಲ್ಲಿ ಕೊಳೆತು ಗುಂಡಿಗೆ ಬಾಯಿಗೆ ಎದೆಗೊಟ್ಟು ರಕ್ತ ಚೆಲ್ಲಿ ಪ್ರಭಲರಾದ ಪರಕೀಯರ ಮೇಲೆ ಹೋರಾಟ ನಡೆಸಿ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಬಗೆ ಹೇಗೆ. ನನಗಂತೂ ಅನುಮಾನ.

ಕಾ.ಪ್ರೆ.ಸು. : ಇಲ್ಲ. ಇಲ್ಲ. ಇನ್ನು ಮುಂದೆ ಜನತೆಯಲ್ಲಿ ದೇಶಾಭಿಮಾನ ಮೂಡಿಸಿ ಜನಜಾಗೃತಿ ಹೆಚ್ಚಿಸಿ ಈಗತಾನೆ ಗುಲಾಮತ್ವದಿಂದ ನಮ್ಮ ಭಾರತವು ಪಾರಾಗಿ ನಾವು ಸ್ವಾತಂತ್ರ್ಯರಾಗಿದ್ದೇವೆ. ನಾವು ಇನ್ನು ಮುಂದೆ ಇತರೆ ದೇಶಗಳಂತೆ ನಮ್ಮ ದೇಶವೂ ಯಾವಾಗಲೂ ಸ್ವಾತಂತ್ರ ರಾಜ್ಯವಾಗಿಯೆ ಉಳಿಯಬೇಕು. ಕೋಮುವಾರು ಭಾವನೆಯನ್ನು ಜನತೆಯಲ್ಲಿ ಅಳಿಸಿ ಒಗ್ಗಟ್ಟು ಶಿಸ್ತನ್ನು ಪಾಲಿಸಿಕೊಂಡು ಪ್ರತಿಯೊಬ್ಬ ಭಾರತೀಯನೂ ಭಾರತದ ಅಭ್ಯುದಯಕ್ಕೆ ಸತತ ದುಡಿಯಬೇಕೆಂಬ ಭಾವವು ಎಲ್ಲರಲ್ಲಿಯೂ ಮೊಳೆಯುತ್ತಿದೆ. ಮುದಿ ಹೆಗ್ಗಣಗಳೆಲ್ಲೊ ಅಪೂರ್ವ.

ಕಾ.ಪ್ರೆ. : ಇನ್ನು ಇಲ್ಲರು ರಾಮನಾಮ ಚೆನ್ನಾಗಿ ಹಾಡುತ್ತ ಶಿಸ್ತಿನಿಂದ ಸಾಲಾಗಿ ಹೋಗಬೇಕು.(ಎಲ್ಲರು ರಾಮನಾಮ ಹಾಡುತ್ತ ಕೇರಿಗೆ ಹೊರಡುವರು)

ಹಾಡು :            ಶ್ರೀರಾಮಾಜಯರಾಮ ಶ್ರೀರಾಮ ರಾಮ ರಾಮ ||
ಜನಕನು ನೀನೆ ಜನನಿಯೂ ನೀನೆ
ತನುಮನ ಬಾಂಧವ ರಾಮ ನೀನೆ ||೧||

ಸೃಜಿಪನು ನೀನೆ ಸಲಹುವ ನೀನೆ |
ಜಗದಲ ಯಾರಿಪ ನೀನೆ ರಾಮ ||೨||

ಕಾಲೇಜ್ ವ್ಯಾಸಂಗ

ಕೃಷ್ಣಮೂರ್ತಿ :HELLO congradulation Mr. Baghavandars. All your marriage Functions over. sorry, I had gon to madras for my fathers Annual ceromony. that.s why I could, not attend your marraige. I hape you Recieved my affer intime.

ಭಗವಾನ್ ದಾಸ್ :Thank you Mr. Murthy…. is very nice.

ಕೃಷ್ಣಮೂರ್ತಿ : ನಿನ್ನೆಗೆ ನಿಮ್ಮ ಲೀವ್ ಪೂರೈಸಿತಲ್ಲವೆ. ಈ ದಿನ ಏಕೆ ಲೇಟ್.

ಭಗವಾನ್‌ದಾಸ್ : ಹೌದು ನಾನು ಈ ದಿನ ಬೆಳಿಗ್ಗೆ ಊರಿನಿಂದ ಬಂದೆನು. ಸ್ವಲ್ಪ ಲೇಟಾಯಿತು. ಯಾಕೆ ನೀವೂ ಸಹ ಕಾಲೇಜಿನಿಂದ ಆಗಲೆ ಬರುತ್ತಿದ್ದೀರಿ.

ಕೃಷ್ಣಮೂರ್ತಿ : ಏನು ನಿಮಗೆ ಗೊತ್ತಿಲ್ಲವೆ.

ಭಗವಾನ್‌ದಾಸ್ : ಏನು ಸಮಾಚಾರ. ನನಗೆ ನಿಜವಾಗಿಯೂ ಗೊತ್ತಿಲ್ಲ.

ಕೃಷ್ಣಮೂರ್ತಿ : ನಿನ್ನ ರಾತ್ರಿ ಹತ್ತು ಗಂಟೆಯಲ್ಲಿ ಮಿಸ್ಟರ್ ರೆಡ್ಡಿಯವರು ಮೈಸೂರಿನಲ್ಲೆ ಮೃತಪಟ್ಟರೆಂದು ರೇಡಿಯೊದಲ್ಲಿ ಈಗ ಗೊತ್ತಾಯಿತು. ಶಾಲಾಕಾಲೇಜು, ಕೋರ್ಟ್ ಗಳಿಗೆಲ್ಲ ಲೀವ್ ಕೊಟ್ಟಿದ್ದಾರೆ.

ಭಗವಾನ್‌ದಾಸ್ : ಆ ಆ ರೆಡ್ಡಿಯವರು? ಯಾವ! ಕೆ.ಸಿ.

ಕೃಷ್ಣಮೂರ್ತಿ : ಅಲ್ಲ ಅಲ್ಲ. ನಮ್ಮ ಸಿ.ಆರ್.ರೆಡ್ಡಿ. ವೈಸ್ ಛಾನ್ ಸೆಲರ್

ಭಗವಾನ್‌ದಾಸ್ : ಹಾ (ನೆಲದ ಮೇಲೆ ಪ್ರಜ್ಞೆತಪ್ಪಿ ಬೀಳಲು ಕೂಡ್ಲೆ ಮೂರ್ತಿಯು ಕರವಸ್ತ್ರದಲ್ಲಿ ನೀರು ತಂದು ನೆತ್ತಿಗೆ ತಟ್ಟಿ ಸೆಕೆ ಬೀಸಲು ಸ್ವಲ್ಪ ಹೊತ್ತಿಗೆ ಎಚ್ಚರವಾದನು)

ಭಗವಾನ್‌ದಾಸ್

೧೮ ಹಾಡು : ವಿದ್ಯಾ ಗುರು ಹಾರಿದಾ ಹರಿಜನ ||ಪ||
ವಿದ್ಯಾಗಂಧವರಿಯದಿದ್ದೆಮಗೆ ನೀಂ
ವಿದ್ಯಾಕಂಗಳಿತ್ತ ಜ್ಞಾನವ ನೋಡಿಸಿದೆ
ವಿದ್ಯಾ ಹರಿಜನ ಕಣ್ಮಣೆ ನೀಂ ಜಗದಿ ||೧||

ಶಾಲೆಗಳ ಪೊಗಿಸದ ಕಾಲದಿ ಪೊಗಿಸಿ
ಮೇಲುಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿ |
ಏಳ್ಗೆಗೆಳೆದೆ ಹರಿಜನ ಮಾರ್ಗದರ್ಶನೆ ||

ಪರದೇಶಕೆ ಪೋಗಿ ನೆಲಸುತೆ
ಮರೆಯಾಗಿರದೆ ನೀನಲ್ಲಿಂ
ಮರಳಿ ಕಣ್ಮರೆಯಾದೆ ಹಾ ಕೊರಗಿಸಲೆಮ್ಮಾ ||

ಮಾತು : ವಿದ್ಯಾಗುರುದೇವಾ | ನಮ್ಮನ್ನು ಯಾವ ಶಾಲೆಗೂ ಸೇರಿಸಲೊಲ್ಲದ ಕಾಲದಲ್ಲಿ ನೀನು ವಿದ್ಯಾ ಇಲಾಖಾ ಉನ್ನತಾಧಿಕಾರಿಯಾಗಿ ಬಂದು ನಮಗಾಗಿ ದುಡಿದು ಅನುಕೂಲ ಕಲ್ಪಿಸಿ ಅಲ್ಪ ಕಾಲದಲ್ಲಿಯೆ ಕಾರಣಾಂತರದಿಂದ ಆಂಧ್ರದೇಶಕ್ಕೆ ಹೊರಟು ಹೋದೆ. ನೀನಿದ್ದ ಅಲ್ಪ ಕಾಲದಲ್ಲೆ ನೀನಿಟ್ಟ ಹರಿಜನ ವಿದ್ಯಾತರು ಬೆಳೆದು ಫಲಬರಿತವಾಗಿರುವಾಗ ಇದನ್ನು ನೋಡಿ ನಲಿಯುವ ಭಾಗ್ಯವಿಲ್ಲದೆ, ಹೋಯಿತಲ್ಲಾ ಎಂದು ನಮ್ಮ ಜನಾಂಗವೆ ಮರುಗುವುದರಲ್ಲಿತ್ತು. ಬಹಳ ವರ್ಷಗಳಿಂದ ಹೊರಗಿದ್ದ ನಿನ್ನನ್ನು ಕಟ್ಟಕಡೆಯಲ್ಲಿ ಈ ಮರವನ್ನು ನೋಡಿಸಿ ಆನಂದಪಡಿಸಿ, ಪರಲೋಕಕ್ಕೆ ಕರೆದೊಯ್ಯಲಿಕ್ಕಾಗಿಯೇ ಪರಮಾತ್ಮನು ಇಲ್ಲಿಗೆ ಮತ್ತೊಮ್ಮೆ ನಮ್ಮ ವಿಶ್ವವಿದ್ಯಾನಿಲಯ ಸ್ಥಾಪಪತಿಯಾಗಿ ಕೂಡಿಸಿ ಅಲ್ಪಕಾಲಾವಧಿಯಲ್ಲೆ ನಮ್ಮ ಕಣ್ಮರೆಯಾದೆಯಾ. ದೇವಾ ನಮ್ಮನ್ನೆಲ್ಲ ದುಃಖ ಸಾಗರದಲ್ಲಿ ಮುಳುಗಿಸಲು ಇವರನ್ನು ಅಂತ್ಯದಲ್ಲಿ ನಮ್ಮ ದೇಶಕೆ ಕರೆತಂದೆಯಾ. ಇನ್ನಾವದೇಕವೂ ಇವರಿಗಿರಲಿಲ್ಲವೆ. ಆಗಲಿ ಇದೆಲ್ಲವು ನಿನ್ನಿಚೆ!!!

ಮೂರ್ತಿ ನಾನೀಗಲೆ ಹೋಗಿ ಸಂಜೆ ಐದು ಗಂಟೆಗೆ ಕಂಡೋಲೆನ್ಸ್ ಮೀಟಿಂಗ್ ಏರ್ಪಡಿಸಬೇಕು. ಅಧ್ಯಕ್ಷತೆ ವಹಿಸಲು ಕಾಂಗ್ರೆಸ್ ಪ್ರೆಸಿಡೆಂಟರನ್ನು ಕರೆಯಬೇಕು. ತಾವು ದಯಮಾಡಿ

ಕೃಷ್ಣಮೂರ್ತಿ : ಭಗವಾನ್ ನೀವು ಹೊರಡಿ ಬೇಗ. ನಾನು ಸಹ ಖಂಡಿತವಾಗಿ ಸಂಜೆ ಬರುತ್ತೇನೆ. (ಇತ್ತ) ಆಹಾ. ಇದಲ್ಲವೆ ನಿಜವಾದ ಕೃತಜ್ಞತೆ. ಇದಲ್ಲದೆ ತಮಗೆ ಸಹಾಯ ನೀಡಿದವರಿಗೆ ತೋರಿಸುವ ಪ್ರೇಮಾಧರ. ಭಾರತೀಯರು ಈ ಹರಿಜನರನ್ನು ಕಂಡರೆ ಎಷ್ಟು ನೀಚ ಭಾವನೆ ಕಾಣುತ್ತಿದ್ದರಲ್ಲಾ! ಇದಕ್ಕಾಗಿ ಹಿಂದು ಸಮಾಜವೆ ತಮ್ಮ ತಪ್ಪಿಗಾಗಿ ನಾಚಿ ತಲೆತಗ್ಗಿಸಬೇಕಾಗಿದೆ. ಸಿ.ಆರ್.ರೆಡ್ಡಿಯವರು ಅನ್ಯಾಮತೀಯರಾದರೂ ಹರಿಜನ ವಿದ್ಯಾರ್ಥಿ ವೃದ್ದಿಗಾಗಿ ಮನಸ್ಸಾಕ್ಷಿಯಾಗಿ ಸೇವೆ ಸಲ್ಲಿಸಿದುದ್ದರ ಸಲುವಾಗಿ ರೆಡ್ಡಿಯವರು ತೀರಿ ಹೋದರೆಂಬ ಗೋಳು ಕಿವಿಗೆ ಬಿದ್ದಾಕ್ಷಣ ಹರಿಜನ ಕೋಮಿಗೆ ಸೇರಿದರೂ, ಭಗವಾನ್ ದಾಸರು ಪ್ರಜ್ಞೆತಪ್ಪಿ ನೆಲದ ಮೇಲೆ ಬಿಟ್ಟರಲ್ಲಾ! ಆಹಾ. ಇದಲ್ಲವೆ ಹರಿಜನರ ನಿಜವಾದ ಸೇವಾಫಲ. ಹರಿಜನರು ನಿಜವಾದ ವಿಧೇಯತೆಯುಳ್ಳವರು. ನಿಜವಾದ ಕೃತಜ್ಞತೆಯುಳ್ಳವರೆಂದು ಎದ್ದು ಕಾಣುತ್ತಿದೆ. ನಾನು ಮೊದಮೊದಲು ಹರಿಜನರನ್ನು ಕಂಡರೆ ದ್ವೇಷಿಸುತ್ತಿದ್ದೆ. ಕಾಲೇಜಿಗೆ ಬಂದ ಮೇಲೆ ನನ್ನ ಅಜ್ಞಾನ ತೊಲಗಿ ದೊಡ್ಡ ಮನೋಭಾವವುಂಟಾಗಿ ಭಾರತದ ಅಭ್ಯುದಯ, ಭಾರತೀಯರೊಗ್ಗಟ್ಟು ಪಾರತಂತ್ರ ಪಾರಾಗುವುದು. ಹರಿಜನೋದ್ಧಾರ ಇವುಗಳ ಅರಿವು ನನಗುಂಟಾಯಿತು. ಈ ದಿನದ ದೃಶ್ಯ ನೋಡಿದಂದಿನಿಮದ ನನ್ನ ಜೀವಮಾನವನ್ನೆಲ್ಲ ಹರಿಜನರಿಗಾಗಿ ದಾರೆಯೆರೆದು ನನ್ನ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತೇನೆ.

ಹಾಡು :           ಹರಿಜನ ಸೇವೆಯಗೈಯ್ಯುತೆ ಸತತ | ಪರಮಾತ್ಮನಾ ಮೆಚ್ಚೆಸುವೆ
ಪರಮ ಕಾರ್ಯಮಿದಸಾಧಿಸಿ ಧೈರ್ಯದಿ | ಸಾರ್ಥಕಪಡಿಸುವೆಯ
ಹಿಂದಿನಿಂದ ಬಲು ಬೆಂದು ನೊಂದಿರುವ | ಮಂದಭಾಗ್ಯ ಜನಾಸ್ಪೃಶ್ಯತೆಯ
ನಿಂದುನಿವಾರಿಸಿ ಹಿಂದುಗಳೆಲ್ಲರು | ಚಂದದಿ ಮಾದರಿದೋರುವೆ ನಾಂ ||

ಭಗವಾನ್‌ದಾಸ್ : ನಾಳೆಯೆಲ್ಲರೂ ಈ ಊರಿನ ಮುಖ್ಯವಾದ ಹೋಟೆಲುಗಳಿಗೆ ಹೋಗಬೇಕು. ಮತ್ತು ಗರುಡಿಯ ಹುಡುಗರು ಸಹ ಸಿದ್ಧರಾಗಿರಬೇಖು. ಯಾವ ಘರ್ಷಣೆಯು ನಡೆಯಲಾರದೆಂಬ ಭಾವನೆ ನನಗಿದೆ. ಯಾಕಂದರೆ According to the time Thoughts also more ಎಂಬ ಮಹಾತ್ಮಗಾಂಧಿಯವರ ಅಭಿಪ್ರಾಯದಂತೆ ಹೀಗೀಗ ಕಾಲಕ್ಕನುಗುಣವಾಗಿ ಜನತೆಯ ಮನೋಭಾವವು ಬದಲಾವಣೆಯಾಗುತ್ತಿದೆ. ಅಲ್ಲದೆ ಈಗಿನ ಭಾರತ ರಾಜ್ಯಾಂಗ ರಚನೆಯಲ್ಲೂ ಭಾರತ ಸರ್ಕಾರದವರು ಮತ್ತು ಕಾಂಗ್ರೆಸ್ ಸಂಸ್ಥೆಯವರು ಅಸ್ಪೃಶ್ಯತೆಗೆಡೆಗೊಡದೆ ಉದಾರ ನೀತಿಯನ್ನು ಅನುಸರಿಸಿ ರಾಜ್ಯಾಂಗವನ್ನು ರಚಿಸಿದ್ರೆ. ಇದೆಲ್ಲಕ್ಕು ಮೇಲಾಗಿ ದೈವದಯೆ ನಮ್ಮ ಮೇಲೆ ಈಗೀಗ ಹೆಚ್ಚಾಗುತ್ತಿದೆ. ಆದ್ದರಿಂದ ಈ ದಿನ ಸಂಜೆ ಹರಿಜನರು ಎಲ್ಲಾ ಹೋಟೆಲು, ಕ್ಷೌರದಂಗಡಿ, ಬಟ್ಟೆ ಮಡಿ ಮಾಡುವ ಅಂಗಡಿಗೆಲ್ಲ ಹರಿಜನರು ಹೋಗಬಹುದೆಂದು ಟಾಂ ಟಾಂ ಹೊಡಿ

ಭೈರ : ಭಗವಾನ್ ಆಗಲಿ. ಆದರೆ ನಾವು ಈ ರೀತಿ ನಿಧಾನ ಮತ್ತು ಶಾಂತ ರೀತಿಯಲ್ಲೆ ಹೋದರೆ ನಮ್ಮ ಹಕ್ಕು ಬಾಧ್ಯತೆಗಳನ್ನು ಬೇಗ ಸಂಪಾದಿಸುವುದು ಹೇಗೆ

೨೦ ಹಾಡು : ಸಾಮಧಾನ ಸೌ ಭೇದದಿ ಸಾಧಿಸೆ ಬೇಕು ಯುಗಮೆರಡು ಸಾಧಿಸೆ |
ಕ್ರಾಂತಿ ಕಾರದೊಳಾವುದ ಸಾಧಿಸೆ ಸಾಕುದಿನಮೆರಡು ಸಾದಿಸೆ |
ಧೀರ ವೀರಶೂರತ್ವದಿ ನಮ್ಮವರಾರಿಗೆ ಹಿಂದಿಹರು |
ಹೋರಾಡುತೆ ಮಹಾಕಾರ್ಯವ ಸಾಧಿಸೆ ಬೇಕೆಮಗೆ ಮುಖಂಡಜನ |

ಭಗವಾನ್ ದಾಸ್ : ಭೈರಣ್ಣ ನೀನು ಹೇಳುವುದೇನೊ ನಿಜ. ಆದರೆ ನಾನು ಕಾಂಗ್ರೆಸ್ ಅನುಯಾಯಿಯಾದ್ದರಿಂದ ಕಾಂಗ್ರೆಸ್ ತತ್ವವಾದ ಅಹಿಂಸಾ ತತ್ವವನ್ನೆ ಅನುಸರಿಸಬೇಕು. ಮಹಾತ್ಮಗಾಂಧಿಯವವರೂ ಕೂಡ ಸತ್ಯ ಅಹಿಂಸೆಯಿವೆರೆಡರಿಂದಲೆ ಅಲ್ಲವೇ ಪ್ರಬಲರಾದ ಪರಕೀಯರನ್ನೋಡಿಸಿ ಸಂಪೂರ್ಣ ಸ್ವಾತಂತ್ರವನ್ನು ಸಂಪಾದಿಸಿಕೊಟ್ಟದ್ದು.

ಭೈರ : ಭಗವಾನ್, ನಾನು ಮಾತ್ರ ಇದನ್ನು ಒಪ್ಪಲಾರೆ. ಯಾಕೆಂದರೆ ಎಷ್ಟೊ ವರ್ಷಗಳಿಂದ ಹರಿಜನರ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕೆಂಬ ಅನೇಕ ಪ್ರಬಲಶಾಲಿಗಳು ಸಾಹಸಪಡಲಿಲ್ಲವೆ. ಸಾಧ್ಯವಾಯಿತೇನು. ಅದಿರಲಿ. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮಗಾಂಧಿಯವರೆ ಹರಿಜನ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಿ ಸಮಾಜದಲ್ಲಿ ನಮ್ಮವರಿಗೆ ಸಂಪೂರ್ಣ ಸ್ವಾತಂತ್ರ ಸಂಪಾದಿಸಿಕೊಡಬೇಕೆಂದು ಕಡೆಯವರೆಗೂ ದುಡಿದರಲ್ಲಾ. ನಮಗೆ ಸಂಪೂರ್ಣ ಸ್ವಾತಂತ್ರ ಈಗ ದೊರಕಿರುವುದೇನು.

೨೦ ಹಾಡು : ಬಂದರು ಪೂರ್ಣ ಸ್ವಾತಂತ್ರ ಭಾರತಕೆ ಬಂದ ಭಾಗ್ಯವೇನು ಹರಿಜನಕೆ ಹಿಂದಿನಿಂದ ಬಲು ಬೆಂದುನೊಂದಿರುವ ಮಂದಭಾಗ್ಯ ಜನಕೆ ಹರಿಜನಕೆ ದಣಿದರ ಮೊದಲಿಂ ಕುಣಿಕರು ಆ ದಿನ ಸ್ವತಂತ್ರ ಬಂದ ದಿನ ಆ ದಿನ ಸ್ವರಾಜ್ಯ ಬಂದದಿನ

ಭಗವಾನ್ ದಾಸ್ : ಭೈರಣ್ಣ ನಿನ್ನ ಮಾತು ನಿಜವಾದದ್ದು. ಬೇರೆ ಪಾರ್ಟಿಯ ನಮ್ಮ ಮುಖಂಡರು ನಮ್ಮ ವಿದ್ಯಾವಂತ ತರುಣರೂ ನಿನ್ನ ಅಭಿಪ್ರಾಯದಂತೆಯೆ ನಡೆಯಬೇಕೆಂದಿದ್ದಾರೆ. ಆದರೆ ನನ್ನ ತತ್ತ್ವವನ್ನು ನಾನು ಪರಿಪಾಲಿಸಲೇಬೇಕು. ಕಡೆಗೆ ಅದು ಫಲಕಾರಿಯಾಗಲಾರದೆಂದು ಕಂಡುಬಂದಲ್ಲಿ ನಿನ್ನ ಹಾದಿಹನ್ನೆ ಹಿಡಿಯೋಣ. ಈಗ ನಾನು ಹೇಳಿದಂತೆ ಢಂಗೂರ ಹೊಡಿ.

ಭೈರ : ಆಗಲಿ. ಈಗ ಡಂಗೂರ ಹೊಡೆಯಲು ಹೋಗುತ್ತೇನೆ.(ಡಂಗೂರ) ಹರಿಜನರು ಯೆಲ್ಲ ಹೋಟೆಲು ಕ್ಷೌರದಂಗಡಿ, ಬಟ್ಟೆಮಡಿಮಾಡುವ ಅಂಗಡಿಗೆ, ಹೋಗಬಹುದು. ತಡೆದೋರಿಗೆ ಜೈಲಂತೆ.

ಬೋರೆಗೌಡ : ಶಿವಲಿಂಗಪ್ಪ, ಡಂಗೂರ ಕೇಳಿದಿರಾ. ದೇವಸ್ಥಾನಕ್ಕೆ ನುಗ್ಗಿ ದೇವರುಗಳನ್ನೆ ಜಾತಿಗೆಡಿಸಿ ಲಕ್ಷಾಂತರ ಮಂದಿ ರಕ್ತಕಾರಿ ಸತ್ತು ಹೋದದ್ದಾಯಿತು. ಈಗ ಹೋಟೆಲು, ಕ್ಷೌರದಂಗಡಿ, ಮಡಿಮಾಡುವ ಅಂಗಡಿಗೆಲ್ಲ ನುಗ್ಗಿ ಮನುಷ್ಯರನ್ನೆಲ್ಲ ಜಾತಿಗೆಡಿಸುತ್ತಾರಂತೆ. ತಡೆದೋರಿಗೆ ಜೈಲಂತೆ. ಪ್ರಪಂಚದ ಗಿತ ಇನ್ಯಾತಕ್ಕೆ. ಹಾಳಾಗಲಿ ಬಿಡಿ ನಾವಿಬ್ಬರೂ ಜಾತಿಗೆಡದೆ ಯಿದ್ದರಾಯಿತು. ಮಿಕ್ಕವರೆಲ್ಲ ಜಾತಿಗೆಟ್ಟು ನರಕಕ್ಕೆ ಹೋಗಲಿ.

ಶಿವಲಿಂಗಪ್ಪ : ಅದೂ ನಿಜವೆ ಬಿಡಿ. ನಮಗೂ ನಿಮಗೂ ಯೇಣು. ನಾವಿಬ್ಬರು ಪರಿಶುದ್ಧವಾಗಿದ್ದರಾಯಿತು. ತಾನುಂಟೋ ಮೂರ್ಲೋಕ ಉಂಟೊ ಯೆಂಬಂತೆ.

 

೬ನೆ ಅಂಕ ಪ್ರಾರಂಭ

ಅರಳಯ್ಯನ ಮನೆ (ಆಯೊಮಾಯ)

ಹಾಡು :           ಶರಣ ಸಂದರ್ಶಿಸೆ ತ್ವರೆಯಿಂದ ತೆರಳಿ ಶಿವ ||ಪ||
ಚರಕಾಗ್ನಿ ಸೇವಿಸೆ ಪರಮ ಪಾವನ ಜನುಮ ||ಅ||

ಜಂಗಮ ಸಂಗವು ಮಂಗಳದಾಯಕ
ಅಂಗಲಿಂಗದ ಮರ್ಮ ಅರಿತ ಶಿವಶರಣಗೆ ||೧||

ಮಾತು : ಶಿವಶರಣ ನಾಳೆ ಮಧ್ಯಾಹ್ನ ೧೨ ಗಂಟೆಗೆ ಶಿವಶರಣರೆಲ್ಲ ಅನುಭವ ಮಂಟಪ ಸೇರಬೇಕೆಂದು ಸಮಾಚಾರ ಬಂದಿದೆ. ನಾವು ಮುಂಜಾನೆ ಎದ್ದು ಮನೆ ಮಠ ಸಾರಿಸಿ ಸ್ನಾನ ಮಾಡಿ ಮಡಿಯುಟ್ಟು ಗುರುಬಸವೇಶ್ವರ ಪಾದ ಪೂಜೆ ಮಾಡಲು ಪೂಜಾ ಸಾಮಾಗ್ರಿಗಳನ್ನು ಆತನಿಗೆ ಮಧ್ಯಾಹ್ನದ ಭೋಜನ ವೇಳೆಗೆ ಸರಿಯಾಗಿ ಪ್ರಸಾದವನ್ನು ಸಿದ್ಧಮಾಡಿಕೊಂಡು ಹೊರಡಬೇಕು.

ಅರಳಯ್ಯ : ಶಿವಶರಣೆ ಬಹಳ ಸಂತೋಷ. ನಾವು ಹೊರಡುವುದರೊಳಗಾಗಿ ಒಂದು ಜತೆ ಪಾದರಕ್ಷೆಗಳನ್ನು ಹೊಲಿದು ಪೇಟೆಗೆ ತೆಗೆದುಕೊಂಡು ಹೋಗಿ ಮಾರಿಬಂದ ದುಡ್ಡಿನಿಂದ ನಮಗೆ ಬೇಕಾದ ಸಾಮಾಗ್ರಿಗಳನ್ನೆಲ್ಲಾ ತೆಗೆದುಕೊಂಡು ಬರುತ್ತೇನೆ. ಆದ್ದರಿಂದ ನೀನು ಇಲ್ಲಿ ಬೇಗ ಬಾ. ನಾನು ಪಾದರಕ್ಷಗಳನ್ನು ಹೊಲಿಯುತ್ತೇನೆ. ನೀನು ಇದಕ್ಕೆ ಬೇಕಾಗುವ ದಾರವನ್ನು ಹೊಸಿದುಕೊಡು.

(ಪಾದರಕ್ಷೆಗಳನ್ನು ಹೊಲಿಯುತ್ತಾ ಇಬ್ಬರೂ ಹಾಡುವರು)

ಹಾಡು :           ಗುರುಬಸವೇಶ್ವರನಾ ವರಚರುಣವ ಪೂಜಿಸೆ ನಾವ್ ||ಪ||

ಪರಶಿವನನೊಲಿಸುವ ಪಾದನ ಮಿದು
ಹರುಷದಿಂದ ಸಂದರುಷನ ಹೊಂದಲು ||ಅ||

ಭಕ್ತಿ ಮಾರ್ಗಬೇಕು ಜೀವನ್ಮುಕ್ತಿ ದೊರೆಯಬೇಕು
ಅಂಗಲಿಂಗ ಪರಿಶುದ್ಧತೆ ಯಿಂದಲಿ
ಜಂಗಮಾರ್ಚನೆ ಸಂತತ ಬೇಕು ||೧||

ಮಾತು : ಶಿವಶರಣೆ ಪಾದರಕ್ಷೆಗಳು ಸಿದ್ಧವಾದವು ಇನ್ನು ಇವುಗಳನ್ನು ಪೇಟೆಗೆ ತೆಗೆದುಕೊಂಡು ಹೋಗಿ ಮಾರಿ ಈ ದಿನ ನಮಗೆ ಬೇಕಾದ ಸಾಮಾನುಗಳೆಲ್ಲವನ್ನು ತೆಗೆದುಕೊಂಡು ಬೇಗ ಬರುತ್ತೇನೆ. ಅಷ್ಟರೊಳಗಾಗಿ ಮಿಕ್ಕೆಲ್ಲದುದನ್ನು ಸಿದ್ದಮಾಡುತ್ತಿರು.

ನೀ : ಹಾಗಾದರೆ ನೀವು ಈಗ ಹೊರಡಿ ಅಂತು ತಡಮಾಡದೆ ಬೇಗ ಬರಬೇಕು.

ಅರಳಯ್ಯ : ಆಗಲಿ ಹಾಗೆಯೇ ಮಾಡುವೆನು.

ನೀ : ಓಹೋ ಅದೋ ಆಗಲೆ ಶಿವಶರಣ ಬಂದೆಬಿಟ್ಟರಲ್ಲಾ (ಹತ್ತಿರಬರುತ್ತಲೆ) ಓಹೋ ಏನು ಇಷ್ಟುಬೇಗ ಬಂದುಬಿಟ್ಟಿರಲ್ಲ.

ಅರಳಯ್ಯ : ಶಿವಶರಣೆ ಅನುಭವ ಮಂಟಪಕ್ಕೆ ಹೊರಡಲು ವೇಳೆಯಾಗುವುದೆಂದು ಬೇಗ ಬೇಗ ಸಾಮಾನುಗಳನ್ನೆಲ್ಲಾ ತೆಗೆದುಕೋಂಡು ಹಿಂದಿರುಗಿದೆನು. ಮಿಕ್ಕಿದ್ದೆಲ್ಲ ಸಿದ್ದವಾಯಿತು ತಾನೆ?

ನೀ : ಹೌದು ಪ್ರಸಾದ ಮಾತ್ರ ಸಿದ್ಧ ಮಾಡಬೇಕಾಗಿದೆ. ಎಲ್ಲಿ ನೀವು ತಂದಿರುವುದೆಲ್ಲವನ್ನು ಇಲ್ಲಿ ಕೊಡಿ.

ಅರಳಯ್ಯ : ಇದೋ ತೆಗೆದುಕೊ ಬೇಗ ಬೇಗ ಎಲ್ಲವನ್ನು ಸಿದ್ದಮಾಡು ವೇಳೆಯಾಯಿತು.

ನೀ : ಇನ್ನು ಎಲ್ಲವು ಸಿದ್ಧಮಾಡಿದೆನು ಈಗ ಹೊರಡಿ.

ಅರಳಯ್ಯ : ಹಾಗಾದರೆ ಹೊರಡು ಅನುಭವ ಮಂಟಪಕ್ಕೆ ಹೋಗೋಣ.

(ಇಬ್ಬರು ಹಾಡುತ್ತ ಹೋಗುವರು)

ಹರ ಮಹದೇವ ಶಿವ ಮಹದೇವ |
ಹರ ಮಹದೇವ ಶಿವ ಹರದೇವ |

ಅನುಭವ ಮಂಟಪ

ಇಬ್ಬರು ಅನುಭವ ಮಂಟಪಕ್ಕೆ ಪ್ರವೇಶ

ಅರಳಯ್ಯ : ಶರಣು ಗುರು ಬಸವೇಶ

ಬಸವೇಶ : ಶರಣೆಂದೆ ಶರಣು ಶಿವಶರಣ ಅರಳಯ್ಯ

(ಅರಳಯ್ಯ ಬೆಚ್ಚುವನು)

ನೀ : ಶರಣು ಗುರುದೇವ

ಬಸವೇಶ್ವರ : ಶರಣೆಂದೆ ತಾಯಿ ಶಿವಶರಣೆ

(ಅರಳಯ್ಯ, ನೀ, ಇಬ್ಬರು ಪಾದಪೂಜೆ ಮಾಡಿ ಪ್ರಸಾದ ನೈವೇದ್ಯ ಮಾಡುವುದು)

ಬಸವೇಶ್ವರ : ಅರಳಯ್ಯ ಈ ದಿನ ನನ್ನ ದರ್ಶನವನ್ನು ಅಪೇಕ್ಷೆ ಮಾಡಿ ಹೊರಗಡೆ ಕಾಯ್ದಿರುವ ಅಂತ್ಯಜರೆಲ್ಲರನ್ನು ಒಳಗಡೆ ಕರೆದುಕೊಂಡು ಬನ್ನಿ ಅವರೆಲ್ಲರಿಗೂ ಶಿವಮಂತ್ರೋಪದೇಶ ಮಾಡಿ ಲಿಂಗಧಾರಣೆ ಮಾಡಬೇಕೆಂದಿದ್ದೇನೆ.

ಅರಳಯ್ಯ : ಗುರುದೇವ ಬಹಳ ಸಂತೋಷ. ನಾನು ಈಗಲೇ ಹೋಗಿ ಅವರೆಲ್ಲರನ್ನು ಕರೆದುಕೊಂಡು ಬರುವೆನು. (ಹೊರಡುವನು)

ಅರಳಯ್ಯ : (ಬಹಳ ವ್ಯಸನದಿಂದ) ಶಿವಶರಣೆ ಈ ದಿನ ಅನುಭವ ಮಂಟಪದಲ್ಲಿ ನನಗೊದಗಿದ ಅಪಘಾತವನ್ನು ನೋಡಿದೆಯಾ?

ನೀ : ಶಿವಶರಣ ಮನೆಯಿಂದ ಹೊರಟಂದಿನಿಂದ ಇದುವರೆಗೂ ನಿಮ್ಮ ಸಂಗಡವೇ ಎಡೆಬಿಡದೆಯಿದ್ದೇನೆ. ನನಗೆ ಅರಿಯದಂತೆ ನಿಮಗೆ ಒದಗಿದ ಅಪಘಾತವೇನು ದಯಮಾಡಿ ಹೇಳುವಿರಾ?

ಅರಳಯ್ಯ : ನೋಡು, ನಾವಿಬ್ಬರೂ ಅನುಭವ ಮಂಟಪಕ್ಕೆ ಪ್ರವೇಶಿಸಿದ ಕೂಡಲೇ ಶರಣು ಗುರುಬಸವೇಶ್ವರ ಎಂದು ಒಂದು ಬಾರಿ ಅಂದದಕ್ಕೆ ಶರಣು ಶರಣೆಂದೆ ಅರಳಯ್ಯಾ ಎಂದು ಎರಡು ಬಾರಿ ಅಂದು ಬಿಟ್ಟರಲ್ಲ. ಒಂದು ಬಾರಿ ಹೆಚ್ಚಾಗಿ ನನ್ನನ್ನು ಶರಣೆಂದುದನ್ನು ನಾನು ಹೇಗೆ ಎಂದಿಗೆ ಹಿಂದಿರುಗಿಸಬೇಕೆಂಬ ಮಾರ್ಗವೇ ನನಗೆ ಎಷ್ಟು ಯೋಚಿಸಿದರೂ ಅರಿವಾಗದಲ್ಲಾ ಎಂಬ ಚಿಂತೆ ಕ್ಷಣ ಕ್ಷಣಕ್ಕೂ ಬಲವಾಗುತ್ತಿದೆಯಲ್ಲಾ! ಶಿವಶರಣೆ ಇದರಿಂದ ಪಾರಾಗುವ ಮಾರ್ಗವನ್ನೆನಾದರೂ ಹೇಳುವೆಯಾ?

ನೀ : ಶಿವಶರಣ ಗುರುಕಟಾಕ್ಷ ನಮ್ಮ ಮೇಲಿದ್ದಲ್ಲಿ ಇದೆಷ್ಟು ಮಾತ್ರದ್ದು ಇದಕ್ಕಿಷ್ಟು ಚಿಂತೆಯೆ? ನಿಧಾನವಾಗಿ ಆಲೋಚನೆ ಮಾಡೋಣ. ಈಗ ಗುರುದೇವನು ಹೇಳಿದ ವಾಖ್ಯವನ್ನು ಬೇಗ ಹೋಗಿ ಪಾಲಿಸಿ.

ಅರಳಯ್ಯ : ಆಗಲಿ ಈಗ ಎಲ್ಲವನ್ನು ಗುರುದೇವನ ಮೇಲೆ ಬಾರಹೊರಿಸಿ ಈಗ ಹೊರಡುವೆನು.

(ಬಸವೇಶ್ವರನು ಅನುಭವ ಮಂಟಪದಲ್ಲಿ ಅಂತ್ಯಜರೆಲ್ಲರಿಗೂ ಶಿವದೀಕ್ಷೆ ಕೊಡುವುದು)

ಬಸವೇಶ್ವರ : ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ |
ನಿಮ್ಮ ಪಾದಸಾಕ್ಷಿ ಎನ್ನ ಮನಸಾಕ್ಷಿ |
ದಯವಿಲ್ಲದ ಧರ್ಮವಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ |
ದಯವೇ ಧರ್ಮದ ಮೂಲವಯ್ಯ |
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ ||

ಮಾತು : ಎಲೈ ಸಹೋದರರೆ ಈಗ ನಿಮಗೆಲ್ಲಾ ಕೊಟ್ಟ ಲಿಂಗಧಾರಣೆ ಮಾಡಿದ ಆ ಘಳಿಗೆಯಿಂದಲೆ ನೀವೆಲ್ಲರು ಶಿವಶರಣರೆನಿಸಿಕೊಂಡಿರಿ. ಈಗ ಅಸ್ಪೃಶ್ಯತೆಯಿಂದ ತುಂಬಿರುವ ಈ ಹಿಂದು ಮಹಾಸಾಗರವನ್ನು ದಯೆಯೆಂಬ ಈ ದೋಣಿಯಲ್ಲಿ ನಮ್ಮೆಲ್ಲರನ್ನೂ ಕೂಡಿಸಿಕೊಂಡು ಆಚೆಯ ದಡಕೆ ಸೇರಿಸುತ್ತೇನೆ. ಬನ್ನಿರಿ ಈ ದೋಣಿಯಲ್ಲಿ ನೀವೆಲ್ಲರೂ ಕುಳಿತುಕೊಳ್ಳಿ.

ಹಾಡು :           ಕಡೆ ಹಾಯಿಪೆ ಹಿಂದುಸಾಗರದಿಂತ್ಯಜರನು ||ಪ||
ನಾವಿಕ ತೆರೆ ಮತನೋವನು ಮರೆಸುತ ||
ಭಕ್ತರಾಮಾನುಜಾಚಾರ್ಯರು

(ದಿಲ್ಲಿಯಿಂದ ರಾಮಾನುಜಾಚಾರ್ಯರು ಅಂತ್ಯಜರ ಮೇಲೆ ಚಲುವರಾಯ ಸ್ವಾಮಿ ವಿಗ್ರಹವನ್ನು ಹೊರಿಸಿಕೊಂಡು ಮೇಲುಕೋಟೆಗೆ ಬರುತ್ತಿರುವುದು)

ರಾಮನುಜ ಹಾಡು : ನಡುದಾರಿಯಲ್ಲೆ ತಡೆಗಟ್ಟಿದವರನ್ನು ||ಪ||
ಬಿಡದಟ್ಟಿದಂತ್ಯಜರಿಂಗೇನಗೈಯಲಿ ||ಅ||

ವರುಷಕೊಮ್ಮೆಯೆ ಬೇಲೂರು ಮೇಲ್ಕೋಟೆಯೇನ್|
ಮೆರೆವ ದೇಗುಲಕಂತ್ಯಜರನು ಪೊಗಿಸುವೆ ||೧||

ಮಾತು : ಚಲುವರಾಮಸ್ವಾಮಿಯು ನನ್ನ ಸ್ವಪ್ನದಲ್ಲಿ ಅಪ್ಪಣೆಯಿತ್ತ ರೀತಿ ದಿಲ್ಲಿ ಬಾದಶಹನಿಂದ ವಿಗ್ರಹವನ್ನು ತೆಗೆದುಕೊಂಡು ಬರುವಾಗ ಮಧ್ಯೆ ದಾರಿಯಲ್ಲೇ ಇದನ್ನರಿತು ನನ್ನನ್ನು ತಡೆದು ತೊಂದರೆ ಪಡಿಸಿದ ಮುಸಲೀಂ ಬಂಧುಗಳೊಡೆನ ಧೈರ್ಯದಿಂದ ಹೋರಾಡಿ ಅವರನ್ನು ಹಿಂದಕಟ್ಟಿ ವಿಗ್ರಹವನ್ನು ಹೊತ್ತಕೊಂಡು ಬಂದು ಮೇಲ್ಕೋಟೆಗೆ ಸೇರುವಂತೆ ಈ ನನ್ನ ಅಂತ್ಯಜ ಬಾಂಧವರು ಅಸ್ಪೃಶ್ಯರೆಂದು ಬಹುಕಾಲದಿಂದಲೂ ಬಹಳ ಹೇಯವಾಗಿ ಕಾಣುತ್ತಿದ್ದ ಇವರು ಮಾಡಿದ ಈ ಮಹಾತ್ಕಾರ್ಯ ಅಖಂಡ ಭಾರತಕ್ಕೆ ಉಪಕಾರ ಮಾಡಿದಂತಾಯಿತಲ್ಲಾ ಇವರ ಮಹೋಪಕಾರ್ಯವನ್ನು ಸ್ಮರಿಸಿ ಇವರಿಗೆ ಪ್ರತ್ಯುಪಕಾರವನ್ನು ಮಾಡಲೇಬೇಕಲ್ಲವೆ. ಇದಕ್ಕಾಗಿ ಸಮಾಜ ಸುಧಾರಕರು ಮತ್ತು ಸನಾತನಿಗಳೊಡನೆ ಕಲೆತು ಮಾತನಾಡಿ ವರುಷಕ್ಕೊಮ್ಮೆ ಬೇಲೂರು ಮೇಲ್ಕೋಟೆ ದೇವಸ್ಥಾನಗಳಿಗೆ ಪ್ರವೇಶಿಸುವಂತೆ ಮಾಡಿ ಸೂರ್ಯ ಚಂದ್ರಾರ್ಕವಾಗಿ ಭಾರತೀಯರು ಇವರ ಮಹೋಪಕಾರವನ್ನು ಸ್ಮರಿಸಿಕೊಳ್ಳುವಂತೆ ಮಾಡಬೇಕು.

ಅಂತ್ಯಜ ಬಂಧುಗಳೆ ಇಲ್ಲಿ ಬನ್ನಿ ವಿಗ್ರಹ ಮೂರ್ತಿಯನ್ನು ಇಲ್ಲಿ ಕೊಡಿ ಇದನ್ನು ದೇವಸ್ಥಾನದೊಳಗಡೆ ಪೀಠದ ಮೇಲಿಡುತ್ತೇನೆ ನೀವೆಲ್ಲರೂ ಕಲ್ಯಾಣಿಗೆ ಹೋಗಿ ಸ್ನಾನಮಾಡಿ ಮಡಿಯುಟ್ಟು ಬೇಗಬನ್ನಿ.

ಅಂತ್ಯಜರು : ಆಗಲಿ ಹೋಗಿಬರುತ್ತೇವೆ ದ್ಯಾವ್ರೆ

ರಾಮಾನುಜ : ಬೇಗ ಬರಬೇಕು ತಡಮಾಡಬೇಡಿ ತಿಳಿಯಿತೊ (ಹೊರಡುವರು)

ಅಂತ್ಯಜರು : ಬುದ್ದಿ ನಾವೆಲ್ಲ ನೀರುಮೀದು ಮಡಿಯುಟ್ಟುಕೊಂಡು ಬಂದಿದ್ದೇವೆ.

ರಾಮಾನುಜ : ನೀವೆಲ್ಲರೂ ದೇವಸ್ಥಾನದ ಒಳಗಡೆ ಬನ್ನಿ

ಅಂತ್ಯಜರು : ದ್ಯಾವ್ರೆ ನಾವು ದೇವಸ್ಥಾನದ ಒಳಗಡೆ ಬಂದ್ರೆ ದೇವ್ರು ಸುಮ್ಮನಿದ್ದಾತೆ. ದೇವಸ್ಥಾನ ನಮ್ಮ ಮೇಲೆ ಬಿದ್ದರೆ ಆಮ್ಯಾಲೆ ನಮ್ಮ ಗತಿ. ಬ್ಯಾರೆ ಜಾತ್ಯೋರು ನಮ್ಮ ಸುಮ್ಮನೆ ಬಿಟ್ಟಾರೆ ನಮ್ಗೆ ಬ್ಯಾರೆ ದೇವ್ರು ನಮ್ಗೆ ಬ್ಯಾರೆ ಗುಡಿ ಬ್ಯಾರೆಕೇರಿ ಬ್ಯಾರೆ ಬಾವಿ ಬ್ಯಾರೆ ಶ್ಯಾಲೆ ಬ್ಯಾರೆ ಸ್ವರ್ಗ ಬ್ಯಾರೆ ನರಕ ಇರುವಾಗ ಈ ಗುಡಿಯೊಳಕೆ ಹೋಗಿ ಬಿಟ್ರೆ ಆಮ್ಯಾಲೆ

ರಾಮಾನುಜ : ನಿಮಗೆ ಯಾವ ಅಡ್ಡಿ ಆತಂಕಗಳಿಲ್ಲದಂತೆ ಮಾಡಿದ್ದೇನೆ. ನೀವು ದೈರ್ಯ ವಾಗಿ ಒಳಗೆ ಬನ್ನಿ (ಎಲ್ಲರು ಒಳಗೆ ಹೋಗುವರು) ನಿಮ್ಮೆಲ್ಲರಿಗೂ ತಿರುಮಣಿಯಿಟ್ಟು ಶಂಕುಚಕ್ರದ ಮುದ್ರೆಯೊತ್ತಿ ಅಷ್ಟಾಕ್ಷರಿ ಮಂತ್ರವನ್ನುಪದೇಶಿಸುತ್ತೇನೆ. ಇಲ್ಲಿ ಒಬ್ಬೊಬ್ಬರಾಗಿ ಬನ್ನಿ (ದೀಕ್ಷೆ ಕೊಡುತ್ತಿರುವುದು) ಅಡಿಯೇನ್ ಎನುತ್ತಿರುವುದು ಬಂಧುಗಳೆ ನನ್ನಿಂದ ಮತ್ತು ನಮ್ಮವರಿಂದ ಯಾರು ಈ ರೀತಿ ದೀಕ್ಷೆಯನ್ನು ಹೊಂದುತ್ತೀರೊ ಅಂತವರು ಇನ್ನು ಮುಂದೆ ಇತರ ಮತಿಯರು ಹೇಗೆ ತಮ್ಮ ತಮ್ಮ ಮತಗಳಲ್ಲಿ ವಿವಾಹ ಶುಭ ಮುಹೂರ್ತ ಶಾಸ್ತ್ರ ಸಂಬಂಧಗಳಲ್ಲಿ ಹೇಗೆ ಪೌರೋಹಿತ್ಯ ನಡೆಸುವರೋ ಹಾಗೆ ನೀವು ಸಹ ನಡೆಸಬಹುದು. ನೀವು ಇನ್ನು ಮುಂದೆ ಸೂರ್ಯಚಂದ್ರರಿರುವರೆಗೂ ಯಾರ ಅಡ್ಡಿ ಆತಂಕಗಳಿಲ್ಲದೆ ಬೇಲೂರು ಮೇಲ್ಕೋಟೆ ದೇವಸ್ಥಾನಗಳಿಗೆ ಪ್ರವೇಶ ಮಾಡಬಹುದೆಂದು ಆಶೀರ್ವಾದಿಸಿದ್ದೇನೆ.

ಅಂತ್ಯಜರು : ದ್ಯಾವ್ರೆ ಈ ದಿನದಿಂದ ನೀವೇ ನಮ್ಮ ಕುಲಗುರುಗಳು ಗುರುವೆ ನಮಗಿರುವ ಸಮಾಜದಿಂದಿರುವ ಬಂಧನವನ್ನು ತಪ್ಪಿಸಿ ಅಸ್ಪೃಶ್ಯತೆಯನ್ನು ನಿರ್ಮೂಲ ಮಾಡಿ ನಮ್ಮನ್ನು ನಿಜವಾದ ಭಾರತೀಯರೆನಿಸಿ ನಮ್ಮ ಹಕ್ಕುಬಾಧ್ಯತೆಗಳನ್ನು ನಮಗೆ ಗಳಿಸಿಕೊಟ್ಟು ನಮ್ಮನ್ನು ಉದ್ಧಾರ ಮಾಡಿ ಗುರುದೇವ.

ಹಾಡು :           ಗುರುವೆನಿಸುವೆ ನಾನಂತ್ಯಜರಿಗೆ ವರ ||ಪ||
ಗುರುವೆನಿಸುತೆ ವರದೀಕ್ಷೆಯ ನೀಯ್ದು
ದ್ಧರಿಸುವೆ ಮಿವರನು ಪರಿಪರಿ ತೆರತೆರದಲಿ ||ಅ||

ಹಿಂದುಳಿದವರೆಂದು ಹಿಂದೂ ಸಮಾಜವು |
ಹಿಂದೂಡಿದಿವರನು ಮುಂದೂಡಲನುದಿನ
ನಿಂದು ದುಡಿದು ಸಮಾಜ ಕಣ್ಬುಡಿಸುವೆ ||೧||

ಸಹೋದರರೇ ನೀವೆಲ್ಲರೂ ಇಲ್ಲಿ ಬಂದು ಈ ದೋಣಿಯಲ್ಲಿ ಕುಳಿತುಕೊಳ್ಳಿ ನಿಮ್ಮೆಲ್ಲರನ್ನು ಈ ದಯೆಯೆಂಬ ದೋಣಿಯಲ್ಲಿ ಅಸ್ಪೃಶ್ಯತೆಯಿಂದ ತುಂಬಿರುವ ಈ ಹಿಂದೂಮಹಾಸಾಗರವನ್ನು ದಾಟಿಸಿ ಆಚೆಯ ದಡವನ್ನು ಸೇರಿಸಿ ನಿಮಗೆ ನೆಮ್ಮದಿಯನ್ನುಂಟು ಮಾಡುವೆ.

ಹಾಡು :             ದಾಂಟಿಸುವೆನು ನಾನಂತ್ಯಜರ ನಾ ||ಪ||
ಹಿಂದೂ ಸಾಗರದಿಂದಾಚೆಗೆ ನಾ
ಸಮಾಜ ಬಂದನವಳಿಸಿ ಸುಧಾರಿಸೆ
ಸಮಾಜದ ನ್ಯಾಯವನಾ ತೋರಿಸೆ

ಸಮಾನತೆಯಗಳಿಸಿದರುದ್ದರಿಸೆ ||೧||

ಮುಕ್ತಾಯ