೧೧. ಕುಡಿತದ ಕೆಡಕು

ಅಯ್ಯೋ | ಬಿಡಿಬೇಗಮದ್ಯಪಾನೀಯವ |
ಇದು | ಕೆಡಿಸಿದೆಯಮ್ಮ ಜೀವನವ |
ಬಿಗಿಹಿಡಿಯಿರಿ ಕುಡಿಯದೆಮನವ       ||ಪ||

ಅಯ್ಯೋ | ನರಗಳಶಕ್ತಿಗುಂದಿಪುದು |
ನಮ್ಮ | ಶರೀರಕಾಂತಿಹಿಂಗಿಪುದು |
ಮತ್ತೆ | ಶರೀರಶಾಂತಿನಂದಿಪುದು       ||೧||

ಅಯ್ಯೋ | ಧೀರತನವಹಾರಿಪುದು
ಅತಿ | ಕ್ರೂರತ್ವ ಕೆಮ್ಮನೇರಿಪುದು |
ಸತ್ಯ | ದಾರಿಗೆ ದೂರಸಾರಿಪುದು        ||೨||

ಅಯ್ಯೋ | ಬಲುನಿದ್ರೆಬುದ್ದಿಯುಮಾಂದ್ಯ |
ಮಧ್ಯ | ಸೇವಿಪನೊಳುಬಾಂಧವ್ಯ |
ಕ್ಷಣ | ಸಲಿವುದುಮನಸಿಗೆ ದಿವ್ಯ         ||೩||

ಅಯ್ಯೋ | ಸಾಲಕ್ಕೆ ಶಿರಬಾಗಿವುದು |
ನಮ್ಮ | ಬಲವೆಲ್ಲವನು ಕುಗ್ಗಿಪುದು |
ಒಳ್ಳೆ | ಕೆಲಸಕೆಮನವನುಗ್ಗಿಸದು       ||೪||

ಅಯ್ಯೋ | ಮಾನವಹಾನಿ ಮಾಡುವುದು |
ಯಮ್ಮ | ಪ್ರಾಣಕಪಾಯನೀಡುವುದು |
ಬಲು | ಅಜ್ಞಾನಮದಕೆ ಬೀಡಹುದು   ||೫||

ಅಯ್ಯೋ | ದುಡಿದುದಹಾಳು ಮಾಡುವುದು |
ನಮ್ಮ | ಬಡತನಕೀಡುಮಾಡುವುದು |
ನಾವು | ನುಡಿದಂತೆ ನಡೆಯಗೊಡಿಸದು            ||೬||

ಅಯ್ಯೋ | ಚೋರತ್ವವನು ತೋರಿಪುದು |
ಕೆಟ್ಟ | ನಾರಿಯಸಂಗಸೇರಿಪುದು |
ನೆರೆ | ಹೀನಜರೆಂದು ತೋರಿಪುದು      ||೭||

ಅಯ್ಯೋ | ಹಿರಿಯರು ತೋರಿದ ದಾರಿ |
ಮದ್ಯ | ಮನೆಹಾಳು ಮಾಳ್ಪ ಹೆಮ್ಮಾರಿ
ಸದ್ಯ | ಬಿಡಿಸೆಂದು ಹರಿಭಜಿಸೀರಿ       ||೮||

 

೧೨. ಹರಿಜನಯಾತ್ರೆ (ಹರಿಹರಿ ಮಾಧವ ಗೋಪಾಲ ಕೃಷ್ಣ)

ರಾಗ-ಬಿಲಹರಿ-ಆದಿತಾಳ

ಶುಭದಿನಮಿದುಹರಿ | ಜನಕೆಲ್ಲಾಯಿಂದು        ||ಪ||
ವಿಭವದಕಾಲವು | ಯಮಗೆಲ್ಲಾಚಂದ            ||ಅ||

ಹರಿಜನಕೊರತೆಯ | ಪರಿಕಿಸಿಖ್ಯಾತ |
ಹರಿಜನಯಾತ್ರೆಯ | ಹೊರಟಮಹಾತ್ಮ|        ||೧||

ದ್ರವ್ಯಾಭರಣವಂ | ಬಹುಮುದದಿಂದ |
ಈವಸುಧೀರರಿಂ | ಶೇಖರಿಸಿದನು       ||೨||

ಈ ಮಹಾತ್ಮನ | ಕಾಣುತೆ ಜನರು |
ಪೂಮಾಲೆಗಳತಿ | ವೃಷ್ಟಿ ಕರೆದರು     ||೩||

ಶಾಂತಿಯ ದೇಶದಿ | ನೆಲೆಗೊಳಿಸೀಗ |
ಅಂತ್ಯಜ ಸೇವೆಗೆ | ನಿಂತಿಹ ಬೇಗ        ||೪||

ಜನಘನಸಂದಣಿ | ಜಯಜಯವೆನುತೆ |
ಗುಣನಿಧಿ ದಾತಗೆ | ಮುದಬೀರುತಿಹುದು        ||೫||

ಭಾವಿಸುತಂತ್ಯಜ | ನೋವನು ನೀಗಲು |
ಈ ವಿಧಸೇವೆಯ | ಗೈವಮಹಾತ್ಮಂ   ||೬||

ಹರಿಜನ ಕೊರತೆಯ | ಪರಿಹರಿಸಲು ಶ್ರೀ |
ಹರಿ ಕಳುಹಿರುವ ನೀ | ಧೀರನಧರೆಗೆ   ||೭||

 

೧೩. ಹರಿಜನ ಸೇವಾತಂಕ (ದೇವಾನೆ ಶ್ರೀದೇವ ಭುವನ)

ಅರಿಯಿರಿಯಿದನು | ಭಾರತ ವೀರರು|
ಹರಿಜನಸೇವೆಯ | ಗೆಯ್ಯುವುದ        ||ಪ||

ಧೀರರು ಶೂರರು | ಸಿರಿಯಿಂ ಮೆರೆವರು|
ಸೇರಿ ಶರೀರವ | ನೆರೆದಿಹುದ             ||ಅ||

ಹರಿಜನರೇಳ್ಗೆಗೆ | ಹಗಲಿರುಳೆನ್ನದೆ|
ಹರಿಜನ ಸೇವೆಯ | ಗೆಯ್ಯುವುದ||
ಪಿರಿದಹಕಷ್ಟಕೆ | ಗುರಿಯಾದರು ನೆರೆ|
ಧೈರ್ಯೋತ್ಸಾಹವ | ತೋರಿಪುದ     ||೧||

ಬಹುದಿನದಿಂದಲು | ಬಂದಾಚಾರವ|
ತವಕದಿತಿದ್ದಲು | ತಡವರಿಸಿ||
ಬಹು ಸಹನೆಗಳಿಂ | ಬೋಧಿಸಿ ಜನರಿಗೆ|
ಬಹು ಬಳಲಿರುವರು | ಬಹು ಜನರು ||೨||

ಪರಮ ಸ್ವರಾಜ್ಯಕೆ | ಕೊರಗುವ ನಿರುತವು|
ಸೆರೆಯಾಳುಗಳಾ | ಗಿದ್ದರಿವ||
ರೆರೆಯುತೆ ದೇಹವ | ತೊರೆಯತೆ ಸರ್ವವ|
ಹರಿಜನ ಸೇವೆಯ | ಗೈಯ್ಯುವುದು    ||೩||

ಕಲ್ಲು ಹೃದಯವನು | ಕರಗಿಸಲಿವರತಿ|
ಬಲ್ಲವರಾಗಿ | ರ್ದರುಬಹಳ||
ಸಲ್ಲದ ಮಾತನು | ಎಲ್ಲರು ಕೇಳ್ದರು|
ನಿಲ್ಲಿಸರೆಮ್ಮಯ | ಸೇವೆಯನು        ||೪||

ನಿಂದಿಸಿದವರನು | ವಂದಿಸಿ ಹಿತದೊಳು |
ಮಂದಮತಿಯರಿಗೆ | ಭೋದಿಸುತ ||
ಕುಂದದ ಸಿಂಧುರ | ದಂದದೊಳೆಲ್ಲರು |
ನಿಂದಂತ್ಯಜರನು | ಸೇವಿಪುದ            ||೫||

ಪರರುಪಕಾರವ | ಮಾಳ್ಪಮಾನವನಿ |
ಗೆರಗಲು ಕಾಯ್ದಿಹ | ಕಷ್ಟಗಳ ||
ಹರಿಗೋವಿಂದನೆ | ಪರಿಹರಿಸುತಲವ |
ನೆರವಿಗೈಯ್ಯುವುದು | ಅನವರತ       ||೬||

 

೧೪. ಭ್ರಾತೃಭೇದ (ಶಂಕರ ದೇಹಿಮೆ)

ಶ್ರೀಮಾನ್ ಯಂ. ಚನ್ನರಾಜೇ ಅರಸಿನವರ ಅಧ್ಯಕ್ಷತೆಯಲ್ಲಿ ನಡೆದ ಹೊಳೇ ನರಸೀಪುರದ ‘‘ಕ್ಯಾಟಲ್ ಷೋ’’ ಕಮಿಟಿಯಲ್ಲಿ ಪಠಿಸಿದೆ.

ಭಾರತ ಕುವರರೆ | ಸಾರಸ ಸುಗುಣರೆ|
ಸರಿಯೇಂ ನಿರುಕಿಸಿ             ||ಪ||

ಹಿಂದುದೇಶಕೆ ಯಿಂದು | ಬಂದವರಲ್ಲನಾವ್|
ಹಿಂದಿನಿಂದಲು ಹಿಂದು | ದೇಶವೆ ನೆಲೆಮನೆ       ||೧||

ಮತಭೇದ ನಿಮಗೆ | ಅತಿಬಾಧೆ ಯಮಗೆ|
ಹಿತವನು ಬಯಸದಿ | ಗತಿಗೇಡಿತ್ತಿರಿ    ||೨||

ಹಿಂದುವೆಯಲ್ಲದಾ | ಬಾಂಧವರನು ಬಲು|
ಚಂದದಿ ಕಾಂಬಿರಿ | ನಿಂದಿಪರೆಮ್ಮನು ||೩||

ಎಂದೇಕಭಾವದಿ | ಕಾಂಬುವಿರೆಮ್ಮನು|
ಅಂದೇ ಸ್ವತಂತ್ರವು | ಲಭಿಪುದು ನಿಮಗೆ          ||೪||

ಹಿಂದುಳಿದವರೆಂದು | ನಿಂದಿಸಿದಾಫಲ|
ಇಂದೊಂದಗಿತುಯಮ್ಮ | ಚಂದದರಾಜ್ಯಕೆ      ||೫||

ವರಮಹಾಗಾಂಧಿಯು | ವರಸ್ವಾರಾಜ್ಯಕೆ||
ಎರವಾಡಜೈಲೊಳು | ಕೊರಗಿದುದೇಂಹಿತ       ||೬||

ಹರಿಜನರನುತಾಂ | ಪೊರೆಯುವಮನವನು|
ನರಹರಿಗೋವಿಂದ | ಕರುಣಿಸಲಿವಗೆ   ||೭||


೧೫. ಕೀಳುಜನರಸೇವೆಯೇ ಜನಾಂಗದ ಸೇವೆ

(To serve the depressed classes in to serve the nation)
(ನ್ಯಾಯವೇನೋ ರಾಮಚಂದ್ರ)

ಹರಿಜನಾಂಗ | ಸೇವೆಗೈಯ್ಯೆ|
ವರಜನಾಂಗ | ಸೇವೆಯಲ್ತೆ   ||ಪ||

ಪರಮದೀಕಾ | ರ್ಯಕ್ಕೆ ಇಂದು|
ನೆರೆಶರೀರ | ತೆರೆವರ್ಮುದು ||ಅ||

ಹರಿಜನಾಂಗ ಸೇವೆಗೈಯ್ಯೆ |
ಹರಿಯಸೇವೆ | ಯಾಗದಿಹುದೆ||
ಪರ ಉಪಕೃತಿ | ಗಲ್ಲವೆಹರಿ|
ಕರುಣಿಸಿರ್ಪು | ದೀಶರೀರ     ||೧||

ದೇಶಸೇವೆ | ಗೈವುದುಘನ|
ಈಶಸೇವೆ | ಯೆನಿಸದಿಹುದೆ||
ಈಶಸೇವೆ | ಯಾಗಲೆಮ್ಮ|
ಕ್ಲೇಶನೀಗಿ | ದೊಡಲ್ಲವೇಂ            ||೨||

ನಡೆಯಲಾರ | ದಬಲನನ್ನು|
ಒದೆದು ಓಡೋ | ಖಳರಪಡೆಯು||
ನುಡಿದುಕಡೆಗಾ | ಅಬಲನಿಂದೆ|
ಕೆಡಕುಪೊಂದಿ | ಬಳಲದಿಹುದೆ          ||೩||

ಬೆರಳನೊಂದ ಕಡಿದನೋವಿಂ|
ನರನದೆಂತು | ಕೊರಗದಿಹನು||
ಕೊರಗುತಿರೆಯೀ | ಹರಿಜನಗಳು|
ವರಜನಾಂಗ | ಎಳ್ಗೆ ಬಹುದೇಂ         ||೪||

ಅರಿಯದಿಹನೇಂ | ಸತತ ಹರಿಯು
ಅಬಲಜನಪ | ಕ್ಷಾವಹಿಪುದ||
ಹರಿಯಸೃಷ್ಟಿ | ಪೊರೆಯಲಲವೆ|
ಪರಮಪದವಿ | ದೊರೆವುದೆ ಮಗೆ       ||೫||

ದೇಶಸೇವೆ | ಗೈಯ್ಯುತಿರ್ಪ|
ದಾಸವರಗಿಂ | ತಾರುಮಿಗಿಲು||
ಮೀಸಲಿಹಗೋ | ಕುಲೆತಿಲಕಪ್ರ|
ಕಾಶಿಶುತಿಲ್ಲಾ | ವೆನಭದೋಳ್        ||೬||