ಗಂಡ-ಹಿಂಡ್ತಿ. ಅವ್ವಿ ಯಜಮಾನತನ್ಕಿ. ಸೊಸಿಗೆ ಹಾಕದ್ದು ಸಾಕಾಗುದಿಲ್ಲ. ನ್ಯಾಯಾಡತಾರೆ. ಮಗ ಏನಂದ? ಯೆಂತ ನ್ಯಾಯಾಡೆತ್ರಿ? ಕೇಳ್ದ. ನನ್ಗೆ ಯಜಮಾನತನ್ಕಿ ಬೇಡ ಹಿಂಡ್ತಿಗೆ ಕೊಡು ಅಂತು. ಹಿಂಡ್ತಿ ಯಜಮಾನತನ್ಕಿ ಮಾಡ್ತು. ಅತ್ತೆಗೆ ಕೂಳ ಹಾಕ್‌ದ್ದು ಯೆಯ್ಡ್ ತುತ್ತೂ ಸಾಕಾಗುದಿಲ್ಲ. “ತಮ್ಮ, ನನಗೆ ಅನ್ನಸಾಕಾಗುದಿಲ್ಲ, ಅವಿಕೂಡ್‌ ಬೇಡ್ಕಿ ಕೊಡತ್ರ?” ಕೇಳ್ತು.

‘ಯೆಯ್ಡ ಅನ್ನ ಬೇಕು’ ಅಂತದೆ ಅತ್ತೆ ಮೊಮ್ಮಕ್ಕಳ ಕೈಲಿ. ಸೊಸೆ ಉಂಡಿ ಕೈತೊಳುಕೋಗಿತ್ತು. “ನಿಮ್ಮವಿ” ಅಂತು. ಕೇಳ್ತು “ಏನೋ ಅಗ್ಯೆಲ್ಲ ಈಗಿಲ್ಲ ಗಂಡಬೇಕು ಅಂತದೆ” ಅಂತು ಸೊಸೆ.

ಉಂಡ, ಮೊಕ ತೊಳ್ದ ಮಗ. ಕವಳ ಹಾಕ್ದ. ‘ಅವಿ ಉಂಡಾಯ್ತೊ?’ ಕೇಳ್ದ. ಆಯ್ತು. ಅಟ್ಟಿ ಉಂಡ್ಕ ಬಂದಿತ್ತು. ‘ಗೋಣಬಟಾರದಲ್ಲಿ ಹೊಕ್ಕ’ ಅಂದ ಚೀಲ ಕಟ್ಕಂಡ ಹೊತ್ಕಂಡೆ ಹೋದ. ದೊಡ್ಡ ಎತ್ತಿನ ಬಯಲು. ಗಿಡಗಿಡ ಏನೇ ನಿಲ್ಲ. ಬಿಗಿದ ಹಾಕಿ ಬಂದು ಕಂಬ ಹುಗಿದಿ ಬಿಗಿದಿ ಬಂದ. ಅಲ್ಲಿ ಈಳಿ ಬಾಳಿ ಎಲ್ಲ ಚಿಮಡಿಹಣ್ಣು ಎಲ್ಲಾ ಬೆಳೆದ. ಹೋಯ್ತು ತಿಂದ್ಕತ ಉಳೀತು. ಕಾಲ್‌ ಬುಡ್ತಗೆ ಬಿತ್ತು. ಚೀಲ ತೆಗೆದು ಕಟ್ಟಿದ್ದ ಬೈಸಿರಿಗೆ ಯಾತ್ರಿಗೆ ಹೋಗ್ವರು ತಂಡಗಟ್ಲೆ ಬಂದ್ರು. ಅಜ್ಜವ್ವ ಹಣ್‌ ಕೊಡು, ಯಾತ್ರಿಗೆ ಹೋತನೆ ಅಂದ್ರು. ತಕಣಿ ಅಂತು. ತಿಂದ್ಕ ಹೋಗ್ತಾರೆ. “ಚಿನ್ನದಂತ ಅಜ್ಜಿ” ಹೇಳ್ತ ಹೋದ್ರು. ಬೆಳ್ಗಮುಂಚೆ ಅವ ಅವಿನೋಡ್ವ ಹೇಳಿ ಬಂದಿದ್ದ. ಚಿನ್ನದ ಕಂಬ, ಕಂಬ ಮಾತ್ರ ಕಿತ್ಕಹೋದ. ಅತ್ತೆ ಮನೆಗೆ ಹೋಯ್ತು. ಯೆಯ್ಡ ಕೆಮು ಹಣ್ಣು ಮುಟ್ಟಲಿಲ್ಲ.

ಮನೆಲಿ ನಿಲ್ಲಿಸಿದ. ಹಿಂಡ್ತಿಗೆ ಆಸ್ತಿಯಾಯ್ತು. “ನನ್ನೂ ಕರ್ಕಹೋಗಿರೆ ಚಿನ್ನದ ಕಂಬಾತಿತ್ತು ಕಂಡ್ತು. ಗಂಡನ ಕೈಲಿ ನಾನೂ ಬತ್ತಿದ್ದೆ. ಅಂತು ಹಿಂಡ್ತಿ ಅಲ್ಲೇ ಬಿಗಿದ ಹಾಕಿದ.

“ಅಜ್ಜವ್ವ, ಚಿಮ್ಮಡಗಿ ಕಾಯ್‌ ಕೊಡು” ಅಂದ್ರು. ಚಿಮ್ಮಡಗಿ ಕಾಯಿಲ್ಲ. ಸೊಮ್ನೆ ಮೊಕತಕಂಡ ಹೋಗಿ ಅಂತು ಸೊಸೆ.ಅವ್ರು ಏನಂತ ಹೋದ್ರು? “ಕತ್ತಿಗೊಡ್ನಾಗೆ ತಿಂಬೂದು. ನಮಗೆ ಕೊಡೂರೋ” ಕೇಳ್‌ದ್ರು ಹಿಂಡ್ತಿನ ಗಂಡ ನೋಡೂಕೆ ಹೋದ. ಕತ್ತೆಗೊಡ್ಡು ಮೇಯ್ಕಂತ ಅದೆ. ಅವ ಹೋದಲ್ಲಿ ಹೋತದೆ. ಕಲ್‌ ಗುಂಡ್ಗಲ್‌ ಹೊಡಿತ ಮನಿಗೆ ಹೋದ ‘ಕತ್ತಿಕೋಡೆ ಯಂತಾ ತಂದ್ಯೋ?” ಕೇಳ್ತದೆ ಕೇಳ್ತು ಅತ್ತೆ. “ಬಿಟ್‌ ಹಾಕ್‌ ಬಾ” ಅಂತು ಹೋಗುದಿಲ್ಲ. ಶಟ್ಟಿ ಹೊಡೂಕೆ ಹಾಕು ಅಂತು ತಾಯಿ. ಹಾಕ್ದ. ಇವಗೆ ಹಿಂಡ್ತಿಲ್ಲ, ತಾಯಿ ಬೇರೆ ಮದಿ ಮಾಡ್ತದೆ.

ಹೇಳಿದವರು:
ದಿ. ಮಹಾದೇವಿ ರಾಮ ಪಟಗಾರ,
ಹೆಗಡೆ ಊರು.