ವಂದ್ ಚೋಟನೀಡ ಅವ ಬ್ರಾಹ್ಮಣಲ್ಲ; ಮಾಂಸಾಹಾರಿಯೇ. “ಹೆಸ್ರು ಬಟ್ಟ ಹೇಳಿ. ಆಗರ್ಬ ಶ್ರೀಮಂತ, ಭಯಂಕರ ಹೊಲ ಅದೆ. ದೊಡ್ಡ ಜಮೀನ್ದಾರ. ಹತ್ ವರ್ಸ ಜಮೀನ ಮಾಡ್ದ. ಹಂದಿ ಬಂದು ಪೂರಾ ಅವನ ಬೇಸಾಯ ತಿಂದಿ ಗಾಸೆ ಮಾಡು. ಹನ್ನಂದ್ ವರ್ಷ ಅವ ಪ್ರಯತ್ನ ಮಾಡ್ದ ಬೆಳಿ ಉಳಿಸ್ಕಳ್ಲಿಕ್ಕೆ ಯೇನ್ ಪ್ರಯತ್ನ ಮಾಡಬೇಕು. ಹೇಳಿ, ವಂದ್ ಜೋತಿಶಿ ಹತ್ಯ್ರ ಹೋಗಿ ಕೇಳ್ದ. ಅವ ಜ್ಯೋತಿಶಿರು. “ನಾನು ಮೂರು ಹಳ್ಳ ಮಂತ್ರಿಸಿ ಕೊಡ್ತೆನೆ. ಹಂದಿಯೆಲ್ಲಾ ನಾಸ ಮಾಡ್ತದೆ, ವಗೆ ಸಾವುದಂತಾ” ಕೊಟ್ಟ.
ತಕೊಂಡ್ ಬಂದು ಹೆಂಡ್ತಿ ಕೈಲಿ ಹೇಳ್ದ “ಹೀಗೆ ಮಾಡ್ಕಂಡ ಬಂದಿದ್ದೇನೆ ಪೀಕ ನಿಂತದೆ” ಹೇಳದ್ದ. ಹತ್ ವರ್ಶ ಜಮೀನ್ ಪೀಕ ಇಡಲಿಲ್ಲ. “ರಾತ್ರಿ ಹೋಗಿ ಹೊಲದಲ್ ಕುಂತಕಂಡ್ಕಾದ ಅವ. ವಂದ್ ಗಂಟೆ ರಾತ್ರಿಗೆ ನಾಕ ಹಂದಿ ಬಂತು ಗೆದ್ದೆ ತಿನ್ನುದಕ್ಕೆ. ಗವಾಗದಾ ಅಂದೆ ಬಂತು. ಕಂಡ. ಏನ್ ಮಾಡುದು ಹಳ್ಳಿತ್ತಲ್ಲ? ವಂದ ಹಳ್ ವಗ್ದ್ ಬಿಟ್ಟ ‘ನಾಲ್ಕೂ ಹಂದಿ ನಾಸಾಗ್ಲಿ” ಹೇಳಿ ವಂದ್ ಹಳ್ಳ ಹೊಡ್ದ. ನಾಕ ಹಂದಿ ಸತ್ತೇ ಬಿಡ್ತು.
ವಂದ ಹಳ್ಳ್ ಹಂದಿ ಮಾಂಸ ಮಾಡ್ವವರಿಗೆ ನನ್ಗೆ ಮಾಂಸ ಮಟನ್ ಮಾಡಿ ಹೇಳಿ ವಜ್ರದ ಹಳ್ಳ ಕೊಟ್ಟ.
ಅವರು ಮಟನ್ ಮಾಡಿ ತುಕಡಿ ಮಾಡಿ ಕೊಟ್ರು. ಮಾಂಸವನ್ನು ತಕೊಂಡ ಬಂದ ಮನಿಗೆ. ಹೆಂಡ್ತಿಕೈಲಿ “ಮಸಾಲಿ ಮಾಡಿ ಸಾರ ಮಾಡು” ಅಂದ. ಶಿಸ್ತ ಹಿಂಡ್ತಿ ಸಾರ್ ಮಾಡ್ತು. ಗಮಾಗಮಾ ಪರಿಮಳ ಆಯ್ತು. “ಬಾವಂದಿಕ್ಳು ಅವರ ಮನಿಲವರ ಕರಕಂಡ್ ಬರೂರೊಳ್ಗೆ ಊಟ ಮಾಡ್ಕಂಡ ಕರ್ಕಂಡ್ ಬರವ” ಹೇಳಿ ಅರ್ದ ತಿಂದ. ಶಣ್ಣ ಹೊಳಿ ಹಾದು ಹೋಗು ಹೊಳಿ ಅದೆ. ಅವನಿಗೆ ಅರ್ಜಂಟ ಗ್ಯಾಸ ಹತ್ತಿ ಬೈಲಕಡಿ ಆಗಹೋಯ್ತು. ಬಾವನ ಮನಿಗೆ ಹೋದ. ಕೊಳ್ಳದಾಟ ಹೋದ. ಮಟನ್ ಊಟ ತಯಾರ್ ಮಾಡ್ಸವೆ, ನೀ ಊಟ್ಕ ಬರಬೇಕು ಹೇಳ್ದ. “ತಾಮುಂದೆ ಹೋಗ್ತೆ ಬನ್ನಿ” ಹೇಳಿ ಕರ್ದಿ ಬಂದ. ಬಂದ ಕೊಳ್ಳದಾಟಿ ಈಚಿ ದಡ್ಕ್ ಬರೂಕೆ ಅಲ್ಲೇ ದಾಟಿ ಬಂದ, ಅವ್ನ ಸಂಡಾಸ್ನ ಮೇಲೇ ಕಾಲ್ ಬಿದ್ದು ಜಾರಿ ಬಿದ್ದ, “ಅವ್ ಯಾರು ಈ ಕೆಲ್ಸ ಮಾಡ್ದೋರು?” ಹೇಳಿ ವಿಚಾರ ಮಾಡ್ದ. “ಅವ್ ಸತ್ತೇ ಹೋಗ್ಲಿ” ಹೇಳಿ ಹಳ್ಳ ವಗ್ದ್ ಬಿಟ್ಟ, ಸತ್ ಬಿದ್ ಹೋದ, ಬಾವಂದಿರು ಇವ್ನ ಹೆಣವ ತಕಂಡ್ ಬಂದು ಸಂಚಕಾರ ಮಾಡಿ ಸುಟ್ಟರು. ಅಂತ್ಯಕರ್ಮ ಮಾಡಿತ್ರು.
ಹೇಳಿದವರು:
ಶೀದಿ ಹೊತ್ನಪ್ಪ ಸಂಕು ಪಟಗಾರ
ಮಾಸೂರು
Leave A Comment