ಕಂಡೆನಾ ನಾನೊಂದು ಪಕ್ಷಿಯ ಧರೆಯೊಳು |
ಮಂಡಾಲ ತುವಿಯೊಳು, ತಿರುಗುವುದ |
ಇದ ಕಂಡಿತ ಹರಿಹರ ಧೀ ಬ್ರಹ್ಮದಿ
ಗಳೆಗೂ ತಿಳಿಯಲು (ಹಾತಿಯು) | ಹಸಿದಾವಾಗಿರು
ವುದು || ಕಂಡೆನು ||

ರೆಕ್ಕೆ ಪುಕ್ಕಲ್ಲಿದೆ ಕೊಕ್ಕು ಮೊದಲಿಲ್ಲದೆ ಲೆಕ್ಕದೊಳಗೆ
ತಾನು ತಿರುಗುವುದು | ಇದ ಕಂಡಿತ ಹರಿಹರ
ಧೀ ಬ್ರಹ್ಮಾಧಿಗಳಿಗೋ ತಿಳಿಯಲು (ಹಿಡಿಯಲು)
ಹಸವಳವಾಗಿರುವುದು …….. || ಕಂಡೆನು ||

ಕಣ್ಣು ಕವಿ ಇಲ್ಲದೆ ಬಣ್ಣ ಮೊದಲಿಲ್ಲದೆ
ಸಣ್ಣದೊಳಗೆ ಸಣ್ಣವಾಗಿರುವುದ ಕಣ್ಣಲ್ಲಿರ
ಈ ಜಗವ ತಿರುಗಿ ನೋಡಿಕೊಂಡು ತನ್ನ
ಸ್ಥಳಕೆ ತಾನು ಬರುತಿರುವುದ || ಕಂಡೆನು ||

ಇಪ್ಪತ್ತೈವಾರೊಳು ಬವ್ವಾದಿಂದಿರುತೀದೆ
ತಪ್ಪಾದೆ ಸಂಚಾರ ಮಾಡಿರುವುದಾ |
ಇಷ್ಟತ್ತೊಂದು ಮತ್ತು ಆರು ಎರಡರ ಸೊನ್ನೆ
ಲೆಕ್ಕದೊಳಗೆ ತಾನು ತಿರುಗುವುದಾ || ಕಂಡೆನು ||

ಎಲ್ಲಾರ ಮನೆಯೊಳು ವಾಸವಾಗಿರುತೀದೆ
ಬಲ್ಲವರಿಗೆ ನಿಜ ತೋರುವುದ ಅಲ್ಲಾ
ಹೌದು ಎಂಬ ಕುಲ್ಪಾ (ಉವ್ವಾ) ಮಾನವರಿಗೆ
ಉಲ್ಲಾಸ ಮಾರ್ಗದ ಬಿಡಿಸುವುದ || ಕಂಡೆನು ||

ಒಂಬತ್ತು ಬಾಗಿಲೊಳು ತುಂಬಿ ತುಳುಕುತಲಿದೆ
ಈ ಕಂಬಾದೊಳಗೆ ಮನೆ ಮಾಡಿರುವುದು
ಕೊಂಬು ಕನ್ನರ ಶ್ರೀ ಗುರುವಿನ ಪಾದಾವ
ನಂಬಿದವರಿಗೆ ನಿಜ ತೋರುವುದ || ಕಂಡೆನು ||