ಶಿವ ನಿನ್ನ ಪಾದವ ನಂಬಿದೆ
ಎನ್ನ ಕಾಯುವ ಭಾರವು ನಿನ್ನದು ತಂದೆ
ನಾನೆಂಬೊ ಮಮಕಾರದಿಂದೆ
ನಾನಾ ಜನ್ಮಗಳೆಲ್ಲಾ ತಿರುಗಿ
ನಾ ಬಂದೆ ಎನಗಿನ್ನುದಾರಿಯು ತೋರದು
ಮುಂದೆ ಧೀನ ರಕ್ಷಕ ಎನ್ನ ಕರೆಯಯ್ಯ ಮುಂದೆ || ಶಿವ ||

ತನುಮನ ಧನವು ನಿನ್ನದಯ್ಯ ನಿನ್ನ
ದಾಸರ ಸೇವೆಯನೊದಗಿಸಿ
ಅನುದಿನ ನಿನ್ನ ಪಾದ ನೆನೆಯುವೆನಯ್ಯಾ
ಘನ ಮೋಕ್ಷಪದವಿಯ ನಾನೊಲ್ಲನಯ್ಯ || ಶಿವ ||

ಭಕುತರ ಭಂಟ ನೀನಂತೆ ಶಿವ ಭಕುತರ
ಭಂಟ ನೀನಂತೆ
ಮುನ್ನಾ ಜಾಣನ ಬಾಗಿಲ ಕಾಯ್ದುವನಂತೆ
ಲೋಚನ ನಿನ್ನ ಭಜಿಸಿದ ಉಪಮನ್ಯು
ಬಾಲ ಭಾವಕ ಮೆಚ್ಚಿ ಪೇರವಾಯದಿತ್ತೆ || ಶಿವ ||

ಸಿರದೊಳು ಗಂಗೆಯ ಧರಿಸಿ
ಗಿರಿಜಾಂಚಿಯ ವಾಮದ ಭಾಗದೊಳಗಿರಿಸಿ
ಪೊರೆಯುವ ಪರಮೇಶ ತರಣ
ವಿನಾಶ ಧರೆಯೊಳಗೆ ನಿಧಿ ಪರಮೇಶ || ಶಿವ ||