| ಎನ್ನಯ್ಯ ಗುರುತಂದೆ ತನ್ನಂತೆ ಮಾಡಿದಾ || ಅನ್ಯರ ಆಸೆಯು ನಮಗೇಕೆ | ಅನ್ಯರ ಆಸೆಯು ನಮಗೇಕೆ | ತಂಗಮ್ಮಾ ಮತ್ತೊಬ್ಬರ ಆಸೆಯು ನಮಗೇಕೇ || ಅಷ್ಟಾ ವರ್ಣಾದ ಜೋಳ ಕುಟ್ಟಿ ಕೇರಿದೇನಮ್ಮ | ಬಹು ನಿಷ್ಟೆಯಿಂದಲಿ | ನೀನುಡದ ಮಾಡೆ ತಂಗಮ್ಮ ಸಾದು ಸಜ್ಜನರಿಗೆ ಎಡೆ ಮಾಡೆ || ಎನ್ನಯ್ಯ || ಒಂಬತ್ತು ತೂತಿನ ಕುಂಬಾರ ಗಡಿಗವ್ವಾ ಅಂಬಾರಿ ಕಾಯಿಸಿ ಹದ ಮಾಡೆ ತಂಗಮ್ಮ | ಲಿಂಗ ಜಂಗಮರಿಗೆ ಎಡೆ ಮಾಡೆ || ಎನ್ನಯ್ಯ || ಅಂತರಂಗದ ಪೇಟೆ ಸಂತೆಗೆ ಹೋದೆನವ್ವ ಚಿಂತೆಯಿಲ್ಲದೆ ಕೊಂಡೆ ನವ ರತ್ನವಾ || ಚಿಂತೆಯಿಲ್ಲದೇ ಕೊಂಡೆ || ನವರತ್ನ ತಂಗಮ್ಮಾ ಅಲ್ಲಿ | ಕಂಡೆನು ಕವತುಕುವಾ || ಎನ್ನಯ್ಯ ||

ಅತ್ತಿತ್ತ ನೋಡಿದೆ ಎಲ್ಲರ ಕೇಳಿದೆ ನನ್ನಲ್ಲೇ ಇತ್ತವ್ವ ಹೊಸ ಮುತ್ತು ತಂಗಮ್ಮ ನನ್ನಲ್ಲೇ ಇತ್ತವ್ವ ಹೊಸ ಮುತ್ತು ತಂಗಮ್ಮ ಗುರುವನ್ನು ಕೇಳಿ ತಿಳಿಕೊಂಡೆ ||