೧. ಕಥನ ಕಾವ್ಯದ ಪದಕೋಶ

ಅಂಚಿನ ಮನೆ – ಮಂಗಳೂರು ಹಂಚುಗಳನ್ನು ಮೇಲ್ಛಾವಣಿಗೆ ಬಳಸಿ ಕಟ್ಟಿರುವ ಮನೆ.

ಅಂಜು – ಅಂಜಿಕೆ, ಹೆದರು.

ಅಪಕೀರ್ತಿ – ಕೆಟ್ಟ ಹೆಸರು.

ಅರಮನೆ – ರಾಜ ರಾಣಿ ವಾಸಿಸುವ ಮನೆ.

ಅರವಿಗಂಗಿ – ಅಪೂರ್ವ ನದಿ, ನೀರು.

ಅರಾರೆ ದಂಡು – ಬ್ರಾಹ್ಮಣರ, ವಿರೋಧಿಗಳ ದಂಡು.

ಅರಾರಿಗೆಲ್ಲಾ – ಬ್ರಾಹ್ಮಣರು, ವಿರೋಧಿಗಳು.

ಆಣೆ – ವ್ಯಕ್ತಿ ಅಥವಾ ವಸ್ತುವನ್ನು ಹೇಳಿ ಮಾಡುವ ಪ್ರಮಾಣ, ಆಜ್ಞೆ.

ಆತನೊಳಸಂಚು – ಸರ್ಜನ ಒಳಗಟ್ಟು, ವೈಯಕ್ತಿಕ ವಿಚಾರ, ಮೋಸದಿಂದ ಮರ್ಮವನ್ನು ತಿಳಿದು ಕೊಲ್ಲುವ ಸುಳಿವು.

ಆಯ್ತಿವಾರ – ಭಾನುವಾರ, ರವಿವಾರ.

ಆಳರಾಜ್ಯ – ಒಡೆತನದ, ಆಳುವ ತನ್ನ ಭೂಮಿ, ತನ್ನ ರಾಜ್ಯ, ಸಂಸ್ಥಾನ, ಅನುಭವಿಸುವ ಅಧಿಕಾರ, ತನ್ನ ಅಧೀನದಲ್ಲಿರುವ ಪ್ರಭುತ್ವ.

ಇಗ್ನವ್ – ವಿಘ್ನ, ಕಂಟ್ಟದ್ದು, ತೊಂದರೆ.

ಇಡಿಯಕ್ಕಿ – (ತೌರೂರು – ಗಂಡನ ಮನೆ) ಒಡಲಕ್ಕಿ, ಮುತ್ತೈದೆ.

ಇಡುಗ್ವಾಡಿಗೆ – ವ್ಯಾಪಕವಾಗಿರುವ ಉದ್ದವಾದ ಗೋಡೆ, ಬೃಹದಾಕಾರದ ಕೋಟೆ ಗೋಡೆ.

ಇದ್ಯೆ – ವಿದ್ಯೆ.

ಇರೆ ಗಾಯಿಗಳ – ಕೊಲೆಗಡುಕರು, ವಿರೋಧಿಗಳು.

ಉತ್ತುರವಲ್ಲ – ಸರಿಯಾದ ಪ್ರತಿಕ್ರಿಯೆಯಲ್ಲ, ತಪ್ಪು.

ಉಪ್ಪು – ಆಹಾರ ಪದಾರ್ಥಗಳನ್ನು ರುಚಿಗೊಳಿಸುವ ಒಂದು ಪದಾರ್ಥ, ಲವಣ, ಋಣ.

ಉಪಿನ ನೂಲಗ – ವಿಶೇಷವಾಗಿ ಹೆಣೆದ ನೂಲಿನ ಹಗ್ಗ.

ಉರುಡು ಸಾವಿಡಿ – ಊರಿನ ಸಾರ್ವಜನಿಕ ಸ್ಥಳ, ಪಂಚಾಯ್ತಿ ಮಾಡುವ ಜಾಗ.

ಉಸುನಕ್ಕು – ಹುಸಿನಕ್ಕು, ಸುಮ್ಮನೆ ನಗುವುದು.

ಉಳುಕಡ್ಲಿ – ಚೆನ್ನಾಗಿ ಬೆಳೆದ ಕಡ್ಲಿ (ನೋವು, ನರ ಹೊರಳು).

ಊರನೆ ಬಾಗಿಲು – ಗ್ರಾಮದ ಪ್ರವೇಶ ದ್ವಾರ, ಬುಡ್ಡೆಕಲ್ಲಿರುವ ಸ್ಥಳ.

ಊರ ಹೊರಗೆ – ಕಡೇ ಮನೆ.

ಊರು ಉಂಬಳಿ – ಭೂಮಿ ಅಥವಾ ಗ್ರಾಮವನ್ನು ಮಾನ್ಯವಾಗಿ ಕೊಡುವುದು.

ಊರುಬಾಗ್ಲು – ಗ್ರಾಮದ ಮುಖ್ಯ ಪ್ರವೇಶದ್ವಾರ.

ಊರು ಸಾವಡಿ – ಊರಿನ ಚಾವಡಿ, ಗ್ರಾಮ ಪಂಚಾಯ್ತಿ ಕಟ್ಟೆ.

ಎತ್ತವಿಲ್ಲ – ಏನಕ್ಕೂ ಇಲ್ಲ, ಸುಮ್ಮನೆ ಯಾವ ಕಡೆ ಇಲ್ಲ.

ಐನ – ಆದರೂ, ಮುಖ್ಯವಾದ.

ಒಂಟೆ ಸಾಲು – ಮದುಭೂಮಿಯಲ್ಲಿ ವಾಸಿಸುವ ಒಂದು ಪ್ರಾಣಿ, ಒಂಟೆಗಳ ಸಮೂಹ.

ಕಂಚಿನ ದುರುಗವು – ತಾಮ್ರ, ತವರ ಸೇರಿ ಆದ ಮಿಶ್ರಲೋಹದ ಕೋಟೆ, ಇದೊಂದು ಉತ್ಪ್ರೇಕ್ಷೆ.

ಕಮಲನ – ತಾವರೆ ಹೂವು, ಅಥವಾ ಕಮಲ ಎಂಬ ಹೆಣ್ಣು.

ಕಮ್ಮರ – ಕಬ್ಬಿಣ ಕಾಯಿಸಿ ಉಪಕರಣಗಳನ್ನು ಮಾಡುವನು ಕಮ್ಮಾರ.

ಕಳಸ – ತೇರಿನ ಮೇಲಿರುವ ಶಿಖರ ಭಾಗ, ಕಳಶ.

ಕ್ವಾಟೆ – ಕೋಟೆ.

ಕಿಮ್ಮತ್ತಾದರೆ – ಬೆಲೆ, ಗೌರವವಾದರೆ ಮಹತ್ವ.

ಕಿಮ್ಮತ್ತು – ಬೆಲೆ, ಗೌರವ.

ಕುಡುಗೋಲು – ಕೈಯಿಂದ ಹಿಡಿದು ಕೊಯ್ಯುವಂಥ ಆಯುಧ (ಸೊಪ್ಪು ಹುಲ್ಲನ್ನು)

ಕುಸಲೆ ಮಂಚ – ನಾಜೂಕಾದ ಶಯನ ಮಂಚ.

ಕೇರಿಯ ದುರುಗವು – ಗೋಡೆ, ಮನೆ ಸಾಲುಗಳು, ಓಣಿ ಇರುವ ಪ್ರದೇಶ.

ಕೊಂಗಳಿನಾಯ್ಕ – ಕೆಂಗಪ್ಪನಾಯಕ, ಮಚ್ಚನುಮಂತ ಸರ್ಜಾ ಹನುಮಪ್ಪನಾಯಕನ ಸಹೋದರ ಸಂಬಂಧಿಗಳು.

ಕೊಟ್ಟೂರು – ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಒಂದು ಪ್ರಮುಖ ಪಟ್ಟಣ, ಕೊಟ್ಟೂರು ಬಸವೇಶ್ವರ ದೇವಾಲಯ ಮತ್ತು ಮಠವಿದೆ.

ಕೊಣನೂರು – ಹಾಸನ ಗಡಿಭಾಗದಲ್ಲಿರುವ ಗ್ರಾಮ. ರಾಮನಾಥಪುರದ ಸಮೀಪದಲ್ಲಿದೆ. ಕಣಿವೆ ಪ್ರದೇಶ, ದುರ್ಗಮ ಸ್ಥಳ.

ಕೊಣನೂರುಮತ್ತಿ – ಕಣಿವೆ ಇಲ್ಲವೆ ಪುಷ್ಕರಣಿ.

ಗಟಿಪಾರ್ಯಾರು – ಶೂರರು, ಬಲ್ಲವರು.

ಗಟಿಸಾರು – ಖಂಡಿತವಾಗಿ ಪ್ರಚಾರ ಅಥವಾ ತಿಳಿಸುವುದು ಸತ್ಯ ಸುದ್ದಿಸಾರುವುದು.

ಗಾಯನೆ – ಮಾಯ್ತಾಕೆ – ಚರ್ಮಕಿತ್ತು ದೇಹದಲ್ಲುಂಟಾಗುವ ಕಚ್ಚು, ನಂಜು.

ಗಾಳಿಗೆ ಗಂಟಾಗಿ – ವಾಯು, ಗಡ್ಡೆ ಬೆನ್ನು ಹತ್ತು ಗಾಳಿಯಂತೆ ವೇಗವಾಗಿ ಚಲಿಸುವ.

ಗುಂಡನೂರು – ಚಿಕ್ಕಮಗಳೂರು ಅಥವಾ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸ್ಥಳ.

ಗೊಂಬೆನೆ ಮಂಚ – ಬೊಂಬೆ, ವಿಗ್ರಹಗಳನ್ನು ಕೆತ್ತಿರುವ ಶೃಂಗಾರವಾದ ಮಂಚ.

ಗೊಲ್ಲಿಗಾರ್ಡು – ಗಲ್ಲುಶಿಕ್ಷೆ, ಕುತ್ತಿಗೆಗೆ ನೇಣು ಹಾಕಿ ಕೊಲ್ಲುವ ಸಾಧನ, ಒಂದು ಬಗೆಯ ಮರಣ ದಂಡನೆ.

ಗೋವಿಂದರಾಯ – ಸರ್ಜಪ್ಪನಾಯಕನನ್ನು ಕುತಂತ್ರದಿಂದ ಕೊಲ್ಲುವನು ಸೂಳೆನಿಂಗಿಯ ಸಹೋದರ

ಗೌಡ – ಗ್ರಾಮದ ಮುಖ್ಯಸ್ಥ.

ಚಂದುರಾಮ – ಚಂದ್ರ.

ಚಂದ್ರನ ದ್ಯಾವ – ಆಯುಧ, ಚಂದ್ರಾಯುಧ.

ಜಾಹಿಸಲು – ಜಹಗೀರು, ಉಂಬಳಿಯಾಗಿ, ದಾನವಾಗಿ ಕೊಟ್ಟದ್ದು, ದನ, ಎತ್ತು, ಕುರಿ ಇತರೆ.

ಜಾಗೀರು – ಉಂಬಳಿಯಾಗಿ ದೊರೆತ ಭೂಮಿ ಅಥವಾ ಊರು.

ಜುಟ್ಲು ಜನಿವಾರ – ತಲೆಗೂದಲು ಮತ್ತು ಯಜ್ಞೋಪವೀತ.

ತಳವಾರ – ಊರಿನ ಕಾವಲುಗಾರ, ತರೀಕೆರೆ ಪಾಳೆಯದಲ್ಲಿ ಗ್ರಾಮ ರಕ್ಷಕ, ನಾಡ ತಳವಾರ ಈಗಿನ ಸಬ್ ಇನ್ಸ್ ಪೆಕ್ಟರ್ ಇದ್ದಂತೆ.

ತಳವಾರ ತಿಪ್ಪಯ್ಯ – ತರೀಕೆರೆ ಅರಸರ ಕಾಲದ ಊರಿನ ಕಾವಲುಗಾರ, ಸ್ಥಳವಾರಸುದಾರ

ತೊರೆಕೇರೆ  – ತರೀಕೆರೆ.

ದಂಡುನಾ ಸವಿರ್ಯಾರೊ – ಸೈನಿಕರನ್ನು ಕೊಂದು ಹಾಕುವುದು, ಸೋಲಿಸುವುದು.

ದುರುಗ – ತರೀಕೆರೆ ದುರ್ಗ (ಬಸವಾಪಟ್ಟಣ, ಸಂತೆಬೆನ್ನೂರಿನಿಂದ ತರೀಕೆರೆಗೆ ಬಂದ ಪಾಳೆಯಗಾರರು ಕೋಟೆ ಕಟ್ಟಿದರು ಅದನ್ನು ದುರ್ಗ ಎಂದು ಕರೆದರು) ಬಹುತೇಕ ಜನ ದುರುಗ ಅಂದರೆ ಚಿತ್ರದುರ್ಗ ಎನ್ನುವುದುಂಟು, ಆದರೆ ಇಲ್ಲಿ ಹಾಗಲ್ಲ.

ದುಲಾಳಗ್ಗಿ – ರಣಭೂಮಿ, ವಿರೋಧಿಗಳಬ್ಬರದ ಆಡುವ ಆಟದ ಸ್ಥಳ, ಆಟದ ಮೈದಾನದಲ್ಲಿ ನಿಶ್ಚಿತ ರೇಖೆ.

ದುಃಖ – ಪಶ್ಚಾತ್ತಾಪ, ಕೊರಗು, ಅಳುವುದು, ರೋಧಿಸುವುದು, ಕಣ್ಣೀರಿಲ್ಲದೆ ಪಡುವ ಸಂಕಟ, ಮಾನಸಿಕಯಾತನೆ.

ದೊರೆಯೆ – ಪಾಳೆಯಗಾರ, ರಾಜ, ನಾಯಕ ತನ್ನ ಗಂಡ, ಪ್ರಿಯಕರ ಅಥವಾ ತನಗಿಂತ ಹಿರಿಯವನಾದವರಿಗೆ ಸಂಬೋಧಿಸುವ ಪದ.

ನಾಗರ ಆದ್ಯಾವ – ನಾಗರ ಬೆತ್ತ, ಕೊಡಲಿಯಾಕಾರದ ಆಯುಧ.

ನಾಳೆಗಂಟುವ ಒಂದುವಾರ – ನಾಳೆಗೆ ಬರುವಂತ ೮ ದಿನದಲ್ಲಿ ಅದೇವಾರ ಬರುತ್ತದೆ.

ನಿಂಗಮ್ಮ – ಸರ್ಜನ ಪ್ರೇಯಸಿ, ಸೂಳೆ, ಹಾರುವರ ಹೆಣ್ಣು, ವೆಂಕಪರಾಯನ ತಂಗಿ.

ನಿದ್ರೆನಗವದಿಯೆ – ನಿದ್ರೆಯನ್ನು ಕವಿಸಿದೆ, ನಿದ್ದೆ ಕವಿಯುವಂತೆ ಮಾಡಿದೆ.

ನೀಲಮ್ಮ – ಸರ್ಜಾ ಹನುಮಪ್ಪನಾಯಕನ ತಾಯಿ, ರಂಗಮ್ಮ ಎಂಬ ತಾಯಿಯ ಪ್ರಸ್ತಾಪ ಬರುತ್ತದೆ.

ನುಚ್ಚು ನುಚ್ಚು – ಚೂರು ಚೂರು, ಛಿದ್ರ.

ನೂರಳ್ಳಿಗಧಿಕಾರ – ತನ್ನ ರಾಜ್ಯದ ವ್ಯಾಪ್ತಿಗಿರುವ ಕೆಲವು ಹಳ್ಳಿಗಳ ಪೈಕಿ ೧೦೦ನ್ನು ಹೆಸರಿಸಿದ್ದಾರೆ ಜನಪದರು.

ನೆಲನ ಮಾಳಿಗ್ಯಾಗ – ಕಣಜ ಅಥವಾ ನೆಲಮಾಳಿಗೆ, ಭೂಮಿಯ ಒಳಗೆ ಮನೆಯನ್ನು ಅಡಗಿರುವುದು ಹೆಚ್ಚು.

ನೆವ್ವರ – ನೇಕಾರ.

ಪಯಣವ – ಪ್ರಯಾಣ, ಹೊರ ಸಂಚಾರ.

ಪಾಪಜ್ಜಿ ಮ್ಯಾಕೆ – ಪಾದರಕ್ಷೆ, ಒಂದು ಜಾತಿಯ ಮುಳ್ಳಿರುವ ಕಳ್ಳಿಸಸ್ಯ, ಪಾಪೋಸು ದುಷ್ಟರು, ಗೊಂಬೆ.

ಪಾರಂಗಿ ದೊರೆಯೇ – ಬ್ರಿಟಿಷ್ ಅಧಿಕಾರಿ.

ಪೆನ್ನೀರಾದರೆ – ಸುಗಂಧ ಮುಕ್ತವಾದ ನೀರು (ಪನ್ನಿರು)

ಬಗವೇನು – ಉದ್ದೇಶ, ಏನು ವಿಧ, ಬಗ್ಗೆ, ರೀತಿ.

ಬಡಿಗೇರನ – ಬಗಣಿಸಾಲ – ಮರಗೆಲಸ ಮಾಡುವವನು, ಕಟ್ಟಿಗೆಯ ಸೂಲಗಳು.

ಬಸವನ ಕೋಟೆ – ಜಗಳೂರು ತಾಲೂಕಿನಲ್ಲಿರುವ ಕಿರು ಪಾಳೆಯ ಪಟ್ಟಿನ ಕೇಂದ್ರ ಸ್ಥಳ.

ಬಸವನ ಗೌಡ್ರೆ – ಗ್ರಾಮದ ಮುಖ್ಯಸ್ಥ.

ಬ್ಯಾಡರ – ಬೇಡರ ಸಮುದಾಯ, ನಾಯಕ, ವಾಲ್ಮೀಕಿ ಎಂದು.

ಭೂತ ಕನ್ನಡಿ – ವಸ್ತುವನ್ನು ಇದ್ದುದಕ್ಕಿಂತಲೂ ದೊಡ್ದದನ್ನಾಗಿ ಮಾಡಿ ತೋರಿಸುವ ಕನ್ನಡಿ.

ಮಕವೊ – ಮುಖ.

ಮದಲೆ ಹನುಮಪ್ಪ – ರಾಜನ ಅಪ್ಪಣೆಯಂತೆ ನಿತೋಗದ ಕೆಲಸ ವಿರ್ವಹಣೆ ಮಾಡುವವನು.

ಮದ ವೈರಿ – ಸೊಕ್ಕಿನ ವಿರೋಧಿ, ಎದುರಾಳಿ.

ಮದ್ದನು – ಉಣ್ಣುವುದು.

ಮಯಸೂರ – ಮೈಸೂರು.

ಮಾಸಲತ್ತು – ಉಪಾಯ, ಪಿತೂರಿ ಕುತಂತ್ರ.

ಮೇಲುದೌರುಗ ಕೋಟೆ – ಬೆಟ್ಟದ ಮೇಲೆ ನಿರ್ಮಿಸಿರುವ ಮನೆ ಮತ್ತು ಕಟ್ಟಡಗಳ ಪ್ರದೇಶ.

ಮನಿಸ್ವಾಮಿ ರಂಗಯ್ಯ – ತರೀಕೆರೆ ನಾಯಕ ಅರಸರ ಮನೆ ದೇವರು.

ಮಾಗಿ ಕಾಲದ ಸಪುನ – ವೃದ್ಧಾಪ್ಯದಲ್ಲಿ ಸಹಜವಾಗಿ ಬೀಳುವ ಕನಸುಗಳು, ಸಾವು, ದುರಂತ, ಹೀಗೆ ಮುದುಕರಿಗೆ ಸದಾ ಚಿಂತೆ ಎಂಬ ಮಾರ್ಮಿಕತೆ.

ಮಾದಿಗರ ಹನುಮ – ರಾಜ ಹೇಳಿದ ಊರಿನ ಕೆಲಸ ಮಾಡುವವನು.

ಮಾನ್ಯ ಅಭಿಮಾನ್ಯ – ತನ್ನವರು ಎಂಬ ಅಭಿಮಾನ, ಗೌರವ.

ಮುತ್ತಿನ ಜಾಲವ – ತನ್ನ ವಿರೋಧಿಸುವ ಸೈನಿಕರು ಮೋಸದಿಂದ ಮುತ್ತಿಗೆ ಹಾಕಿರುವ ಹಿಂದಿನ ತಂತ್ರ, ಮೋಸ.

ಮುರಿಗೆ ಮುಂಡಾಸು – ಮಾಂಸದ ತುಂಡುಗಳು, ತಲೆಗೆ ಸುತ್ತಿಕೊಳ್ಳುವ ಬಟ್ಟೆ, ಮುಂಡಾಸು.

ಮೊಳಲುಕೆರೆ – (ಮಳಲಕೆರೆ), ದಾವಣಗೆರೆ ತಾಲೂಕಿನ ಒಂದು ಹಳ್ಳಿ.

ಯಂಭತ್ತು ಮಣ – ಮೂರುವರೆ ಕ್ವಿಂಟಾಲು – ಅಳತೆ ಮಾಡುವ ಒಂದು ಸಾಧನ.

ರಂಗಪ್ಪ – ಸರ್ಜಾ ಹನುಮಪ್ಪನಾಯಕನ ತಂದೆ. ತರೀಕೆರೆ ಪಾಳೆಯಗಾರ.

ರಂಡಸಾವು – ವಿಧವೆಯ ಸಾವಿನಂತೆ.

ರಗುತನ – ರಕ್ತ.

ರಾಠು – ಕಣ ಅಥವಾ ಊರಿನ ಸುತ್ತಾ ಕಳ್ಳಹಾದಿ, ಒಂದು ಕಡೆ ಬಾಗಿಲು ಮಾಡುವುದನ್ನು ರಾಠು ಎನ್ನುತ್ತಾರೆ.

ವಂಚ ಮಾಡುವ – ಮೋಸ ಮಾಡುವ, ವಂಚನೆ.

ವಕ್ಕಳ ಗದ್ದೆ – ಭತ್ತ ಬೆಳೆಯುವ ಕೃಷಿ ಭೂಮಿ.

ವಡಿಯಕ್ಕಿ – ಹೆಣ್ಣಿನ ಸೆರಗಿನಲ್ಲಿ ಕಟ್ಟುವ.

ವಡ್ಡರ ಪೆದ್ದಯ್ಯ – ಭೋವಿ, ಮನೆ ಕಟ್ಟುವವರು.

ವರುವು – ವರ, ಬೇಡಿದ್ದನ್ನು ಕೊಡುವ ವಸ್ತು, ವಿಷಯ ಇತರೆ.

ವಾಲೆನಾದರೆ – ಪತ್ರ, ಓಲೆ.

ವೆಂಕಪನಾಯಕ – ಸರ್ಜಪ್ಪನಾಯಕನ ವಿರೋಧಿ, ಸೂಳೆ ನಿಂಗಮ್ಮನ ಅಣ್ಣ, ಬ್ರಾಹ್ಮಣರ ಮುಖ್ಯಸ್ಥ.

ಶಾವುಲ್ಲು – ನವಣೆ ಹುಲ್ಲಿನಂತೆ ಇರುವ ಒಂದು ವಿಧದ ಹುಲ್ಲು.

ಶೂಲ – ಕಬ್ಬಿಣದಿಂದ ಮಾಡಿದ ಆಯುಧ, ವ್ಯಕ್ತಿ ಸಾವನ್ನು ತರುವ ಆಯುಧ. ಬೇಡರು ಆರಾಧಿಸುವ ಕೋಲಿನಾಥ ಆಯುಧ.

ಶೂಲ ಮಕ್ಕಳು – ಕಂದಕದಲ್ಲಿ ಕಬ್ಬಿಣ ಶೂಲವನ್ನು ನೆಟ್ಟಿರುವುದು, ಈ ಉದ್ದೇಶಕ್ಕೆ ಜಾಗಿರು ಬಿಟ್ಟ ಭೂಮಿ.

ಸಂಚು – ಮೋಸದ ಕೃತ್ಯ, ಹೊಂಚುಹಾಕುವ, ಕೃತ್ಯ ನಡೆಸುವ ರೂಪಿಸುವ ತಂತ್ರ.

ಸಣ್ಣಕ್ಕಿ – ಅಡ್ಡ ಹೆಸರು, ಮನೆತನದ ಹೆಸರು, ಭತ್ತದ ತಳಿಯಲ್ಲಿ ಸ್ಥಳೀಯವಾಗಿ ಫಸಲು ತೆಗೆದಂತ ಅಕ್ಕಿ

ಸಪುನ – ಸ್ವಪ್ನ, ಕನಸು, ಸರ್ಜಾನ ತಂದೆ ರಂಗಪ್ಪನಾಯಕನಿಗೆ ಬಿದ್ದ ಕನಸು, ಮಗನ ಒಳ್ಳೆಯದಕ್ಕೆ ಹೇಳಿದರೆ ಅವನು ಅಲಕ್ಷ್ಯೆ ಮಾಡುತ್ತಾನೆ.

ಸರ್ಜಾನ (ಪ) – ಗಳಿಸುವ.

ಸಾಲಿ ತಿರುವ್ಯಾನೆ – ದಂಡನ್ನು ನುಗ್ಗಿಸುವುದು, ಶ್ರೇಣಿ ಶ್ರೇಣಿಯಾಗಿ ನಿರ್ಮಿಸಿರುವ.

ಸಾವಿಡಿ – ಚಾವಡಿ, ಪ್ರತಿ ಸಭೆ ಸಮಾರಂಭ, ಪಂಚಾಯ್ತಿಗಳು ನಡೆಯುವ ಸ್ಥಳ.

ಸಾವಿರಳ್ಳಿಗೆ ಸರಜಾನ – ತನ್ನ ರಾಜ್ಯದ ವ್ಯಾಪ್ತಿಯ ಎಲ್ಲ ಹಳ್ಳಿಗಳು ಮತ್ತು ಆತನು ಪ್ರಚಾರವಿರುವ ಎಲ್ಲಾ ಗ್ರಾಮಗಳು.

ಸಿರಿಗಂಧೆನುಶಕ್ಕೆ – ಶ್ರೀಗಂಧದ ಚಕ್ಕೆ.

ಸುಂಗರವಾಯ್ತೆ – ಶೃಂಗಾರ.

ಸುದ್ದಿನ ಸುರುಬಾಕು – ಸಾವಿನ ಸುದ್ದಿ, ಕೊಲ್ಲುವಂತ ಸುದ್ದಿ, ಹೇಳುವ ವಿಚಾರ, ದೇಹಕ್ಕೆ ಬಾಕು ಹಾರಿದಮ್ತೆ ಎಂಬ ಜನಪದರ ಚಿಂತನೆಯಿದೆ.

ಸೂಳೆಯ ನಿಂಗಿ – ಸರ್ಜಾನ ಸೂಳೆ.

ಸೊಪ್ಪು – ಎಲೆ, ತೊಪ್ಪಲು. ಉಂಡ ಮನೆಗೆ ಎರಡು ಬಗೆಯಬಾರದು ಎಂಬರ್ಥ ಬರುತ್ತದೆ.

ಹನುಮನದಿಕ್ಕು – ದಕ್ಷಿಣ.

ಹಿರಿಯಕ್ಕಿ – ದೊಡ್ಡ ಅಕ್ಕ ಅಥವಾ ಪಕ್ಷಿ, ಊಟ ಮಾಡಲು ಬಳಸುವ ಅನ್ನದ ಅಕ್ಕಿ.

ಹುರ್ಲುನಾದೆರೆ – ಕೊರಳಿಗೆ ಅಗ್ಗಕಟ್ಟಿ, ಉಸಿರುಕಟ್ಟಿ ಕೊಲ್ಲುವ ವಿಧಾನ.

ಹೂವೇನಹಳ್ಳಿ – ಸರ್ಜಾಪ್ಪನಾಯಕನಿಗೆ ಏನೆಲ್ಲಾ ಅನಿಷ್ಟಗಳಾದರೂ ಪ್ರಯಾಣ ಬೆಳಸದ ಸೂಳೆ ನಿಂಗಮ್ಮನ ವಾಸದ ಸ್ಥಳ.

 

೨. ಗ್ರಂಥ ಋಣ

ಗ್ರಂಥಗಳು

ಶ್ರೀನಿವಾಸ ನಾಯಕ ಬಿ.ಎಸ್. : ಚಿತ್ರದುರ್ಗದ ಕಾಮಗೇತಿ ಅರಸರು, ಚಿತ್ರದುರ್ಗ, ೧೯೮೪ ಚಿಕ್ಕಮಗಳೂರು ರಿಟ್ಟ್ರೆಕ್ಸ್ ಗ್ಯಾಸೆಟಿಯರ್

ಎಂ.ಎಸ್. ಪುಟ್ಟಣ್ಣ : ೧೯೯೮, ಚಿತ್ರದುರ್ಗದ ಪಾಳೆಯಗಾರರು, ಚಿತ್ರದುರ್ಗ

ಕೃಷ್ಣಶರ್ಮ ವಿರಚಿತ ಸರ್ಜಾ ಹನುಮೇಂದ್ರ ಯಶೋವಿಲಾಸ : (ಅಪ್ರಕಟಿತ) ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ., ಮೈಸೂರು

ಕೆ.ಎಸ್.ಶಿವಣ್ಣ (ಸಂ) : ೧೯೯೭, ಸಮಗ್ರ ಕರ್ನಾಟಕ ಚರಿತ್ರೆ ಸಂಪುಟ ಚರಿತ್ರೆ ಸಂಪುಟ-೩, ಕನ್ನಡ ವಿ.ವಿ., ಹಂಪಿ

ಜಿ.ನಾಗಪ್ಪ, ಹೆಚ್.ರಾಮಚಂದ್ರಮೂರ್ತಿ (ಸಂ) : ದಾಗಿನಕಟ್ಟೆ ದಾತಾರ, ಶ್ರೀ ವಾಲ್ಮೀಕಿ ಹರಿಜನ ಗಿರಿಜನ ವಿದ್ಯಾಸಂಸ್ಥೆ (ರಿ), ಹೊನ್ನಾಳಿ

 

ಲೇಖನಗಳು

ಸರ್ಜಪ್ಪನಾಯಕನ ಕಥೆ : ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ೧೯೯೯, ಪ್ರಸಾರಾಂಗ, ಜಿ.ಶಂ.ಪ., ಮೈಸೂರು ವಿ.ವಿ. ಮೈಸೂರು, ಪು. ೩೩೮-೩೪೭

ಸರ್ಜಪ್ಪನಾಯಕನ ನಾಡಪದಗಳು : ಸಂ:ಎಲ್.ಗುಂಡಪ್ಪ, ಬೆಂಗಳೂರು, ೧೯೮೭, ಪು.೧೬-೧೭೫

ತರೀಕೆರೆ ರಂಗಪ್ಪನಾಯಕ : ಪಾಳೆಯಗಾರರ ಪದಗಳು, ಕರಾಕೃ(ಸಂ)ಪು. ೩೭-೬೧

ಸರ್ಜಪ್ಪನಾಯ್ಕನ ಪದ : ಹೊನ್ನ ಬಿತ್ತೇವು ಹೊಲಕೆಲ್ಲ, ಪು. ೩೦೩-೫ ಮತ್ತು ೬೨೬-೩೫

ಸರ್ಜಪ್ಪನಾಯ್ಕನ ಚೌಡಿಕೆ ಕಾವ್ಯಗಳು : ಮೈಸೂರು, ೧೯೭೪, ಪು.೧೭-೩೦ ಮತ್ತು ೨೦೫-೨೭೨

ತರಳಬಾಳು ಹುಣ್ಣಿಮೆ (ಸ್ಮರಣ ಸಂಚಿಕೆ) ೧೯೯೧ : ಸಂ: ಹೆಚ್.ಎಸ್. ರಾಜಶೇಖರ್, ಬಿ.ಎನ್. ಗೋವಿಂದರಾವ್, ತರಳಬಾಳು ಹುಣ್ಣಿಮೆ ಮಹೋತ್ಸವ ಸ್ವಾಗತ ಸಮಿತಿ, ತರೀಕೆರೆ, ಚಿಕ್ಕಮಗಳೂರು ಜಿಲ್ಲೆ ದಾಗಿನಕಟ್ಟೆ, ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ.

 

ಸ್ಮರಣಸಂಚಿಕೆ ಮತ್ತು ಮಾಸಪತ್ರಿಕೆಗಳು

ವಾಲ್ಮೀಕಿ ಕಿರಣ, ವಾಲ್ಮೀಕಿ ಜ್ಯೋತಿ, ವಾಲ್ಮೀಕಿ ಬಂಧು

ವಾಲ್ಮೀಕಿ ವಾಣಿ, ವಾಲ್ಮೀಕಿ ಕರ್ನಾಟಕ್, ವಾಲ್ಮೀಕಿ ಸಂದೇಶ, ಏಕಲವ್ಯ

೩. ವಕ್ತೃಗಳು

ದಿ.ಗುಗ್ಗಪಾಪಯ್ಯ ೫೦ ನಾಯಕರು ಕೆ.ಬಿ.ಹಟ್ಟಿ, ಪೂಜಾರಹಳ್ಳಿ ಅಂಚೆ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ
ಪಾಲಮ್ಮ ೪೫ ನಾಯಕರು ಕೆ.ಬಿ.ಹಟ್ಟಿ, ಪೂಜಾರಹಳ್ಳಿ ಅಂಚೆ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ
ಗುಡ್ಡಯ್ಯ ೬೦ ನಾಯಕರು ಅಜ್ಜನ ಚಿನ್ನೋಬಹಳ್ಳಿ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ
ದಿ.ತೋಟದ ಪಾಲಮ್ಮ ೯೦ ನಾಯಕರು ಕೆ.ಬಿ.ಹಟ್ಟಿ, ಪೂಜಾರಹಳ್ಳಿ ಅಂಚೆ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ
ತೋಟದ ಚಿನ್ನಮ್ಮ ೭೦ ನಾಯಕರು ಕೆ.ಬಿ.ಹಟ್ಟಿ, ಪೂಜಾರಹಳ್ಳಿ ಅಂಚೆ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ
ಬೋರಮ್ಮ ೬೦ ನಾಯಕರು ಕೆ.ಬಿ.ಹಟ್ಟಿ, ಪೂಜಾರಹಳ್ಳಿ ಅಂಚೆ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ
ರಂಗಸ್ವಾಮಿನಾಯಕ ೫೦ ನಾಯಕರು ಲೋಕಾಯುಕ್ತ ಎಸ್.ಪಿ., ಕರ್ನಾಟಕ ಲೋಕಾಯುಕ್ತರ ಕಚೇರಿ ವಿಧಾನಸೌಧ, ಡಾ.ಬಿ.ಆರ್.ಅಂಬೇಡ್ಕರ್ ವೀದಿ, ಅರಮನೆ ರಸ್ತೆ, ಬೆಂಗಳೂರು ೦೧
ಪೂಜಾರಿ ಪಾಲಯ್ಯ ೭೦ ನಾಯಕರು ಚನ್ನಬಸಯ್ಯನಹಟ್ಟಿ, ಚಳ್ಳಿಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ
ಪೂಜಾರಿ ಸಣ್ಣ ಪಾಲಯ್ಯ ೬೦ ನಾಯಕರು ಚನ್ನಬಸಯ್ಯನಹಟ್ಟಿ, ಚಳ್ಳಿಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ
ತಿಪ್ಪನಾಯಕ ಎಸ್.ಬಿ. ೭೧ ನಾಯಕರು ಕಾಕನಕಟ್ಟೆ, ಜಗಳೂರು ತಾಲೂಕು, ದಾವಣಗೆರೆ ಜಿಲ್ಲೆ
ಗಾದಿರಮ್ಮ ೬೫ ನಾಯಕರು ಕಬ್ಬಳ ಕಾಶಿಪುರ ಕ್ಯಾಂಪ್,  ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ
ಗಂಗಪ್ಪ ೪೦ ನಾಯಕರು ಕಬ್ಬಳ ಕಾಶಿಪುರ ಕ್ಯಾಂಪ್,  ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ
ಟಿ.ಎಸ್.ಜಯದೇವ ೫೫ ನಾಯಕರು ಸೀಮೆ ರೈಸ್ ಮಿಲ್, ತ್ಯಾವಣಗಿ ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ
ಎನ್.ಪಿ.ಬೋಜರಾಜು ೫೫ ನಾಯಕರು ಜೆ.ಡಿ.ಎಸ್.ಮುಖಂಡರು, ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ
ಎನ್.ಸಿ.ನೀಲಪ್ಪ ೬೫ ನಾಯಕರು ನಿವೃತ್ತ ಶಿಕ್ಷಕರು, ಚನ್ನಗಿರಿ ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ
ಸುಮತೀಂದ್ರ ನಾಡಿಗ್ ೬೦ ಬ್ರಾಹ್ಮಣ ಸಂತೆಬೆನ್ನೂರು, ದಾವಣಗೆರೆ ಜಿಲ್ಲೆ ಪಾಳೆಯಗಾರರು ಬೊಮ್ಮಲಿಂಗನಹಳ್ಳಿ.
ನಂಜಪ್ಪನಾಯಕ ೫೫ ಪಾಳೆಯಗಾರರು ಮೊಳಕಾಲ್ಮೂರು ತಾಲೂಕು, ಚಿತ್ರದುರ್ಗ
ಕೇಶವಮೂರ್ತಿ

ತಂದೆ ಕಸ್ತೂರಿ ರಂಗಪ್ಪನಾಯಕ

೫೯ ಹೊಸದುರ್ಗ ದೊರೆಗಳಹಟ್ಟಿ, ರಾಮದುರ್ಗ, ಪಾಳೆಯಗಾರರು ಬೋಸೆದೇವರಹಟ್ಟಿ, ಚಿತ್ರದುರ್ಗ
ತಿಪ್ಪೆಸ್ವಾಮಿ ೫೦ ನಾಯಕರು ಶಿಕ್ಷಕರು, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ
ವೈ.ಎನ್.ತಿಮ್ಮರಾಜು

ತಂದೆ ನಾರಾಯಣಸ್ವಾಮಿ

೪೨ ಪಾಳೆಯಗಾರರು ಯರಗುಂಟೆ, ಕಣೆಕಲ್ ತಾಲೂಕು ಅನಂತಪುರ ಜಿಲ್ಲೆ, ಆಂಧ್ರ ಪ್ರದೇಶ (ಸಿಟಿಜನ್ ಟೈಲರ್, ನಾಯಕನಹಟ್ಟಿ)
ಹೆಚ್.ಎ.ವಿಶ್ವನಾಥ ೩೭ ಲಿಂಗಾಯತ ಬೋಸೆದೇವರಹಟ್ಟಿ, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ
ಕೊಂಡ್ಲಳ್ಳಿಹಟ್ಟಿ ಪಾಲಯ್ಯ ೭೦ ನಾಯಕರು ಕೋಲೆಮನಹಳ್ಳಿ, ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ
ಕೋಲಾಟದ ಓಬಯ್ಯ ೯೦ ನಾಯಕರು ಸಂಕ್ಲಾಪುರ, ಕೂಡ್ಲಿಗಿ ತಾಲೂಕು, ಬಳ್ಳಾರಿ
ತಿರುಕಪ್ಪ ೩೬ ನಾಯಕರು ಅಜ್ಜನ ಚಿನ್ನೋಬನಹಳ್ಳಿ, ಕೂಡ್ಲಿಗಿ ತಾಲೂಕು, ಬಳ್ಳಾರಿ