ಹುಟ್ಟಿದ್ದು ತೊರೆಕೇರೆ…||
ಬೆಳೆದಿದ್ದು ಶಿವಮೊಗ್ಗೆ
ಮಾತುನಾಡದು ಮಯಸೂರು
ಸರ್ಜತಿ ಭೂಪ
ಇದ್ಯೆ ಕಲಿಯದು ಹಿರಿದುರುಗೊs

ದುರುಗ ದುರುಗಂಬದೊ ||
ಅದು ಎಂಥ ದುರುಗಾವೋ
ಇದೇ ವಸದ ಹಿರೆದುರುಗ
ಕಂಚಿನ ದುರುಗ
ಏಳೇ ಕಲ್ಲಿಗೆ ಮುಗುದೈಯಿತೊs

ಕಂಚಿನ ದುರುಗವು ||
ಕೇರೆಯ ದುರುಗವು
ಏಳೇ ಕಲ್ಲಿಗೆ ಮುಗದೆಯಿದೊ
ಸರ್ಜತಿ ಭೂಪ
ಏಳೇ ಕಲ್ಲಿಗೆ ಮುಗುದೈಯಿತೊs

ಮಾಳಿಗೆ ಮನೆ ಒಳಗೆ ||
ಮಾತನಾಡುವುನಾರೋ
ಮೆಚ್ಚಿದ ಮೊಳಲುಕೆರೆ ಹನುಮs.
ಸರ್ಜತಿ ಭೂಪ
ಮೆಚ್ಚಿದ ಮೊಳಲುಕೆರೆ ಹನುಮ
ಅಂಚಿನ ಮನೆ ಒಳಗೆ ||
ವಂಚ ಮಾಡುವನಾರೇ
ಮೆಚ್ಚಿದ ಮೊಳಲುಕೆರೆ ಹನುಮ
ಸರ್ಜತಿ ಭೂಪ
ಮೆಚ್ಚಿದ ಮೊಳಲುಕೆರೆ ಹನುಮs.

ಸಾವಿಡಿಗೆ ಚಂದುರಾಮ ||
ಕುಲದಲಿ ಬ್ಯಾಡರ ಉಡುಗ
ಅರಾರಿಗೆಲ್ಲಾ ಮದವೈರಿ
ಸರ್ಜತಿ ಭೂಪ
ಅರಾರಿಗೆಲ್ಲಾ ಮದವೈರಿs.

ಗುಂಡತ್ತಿ ಗುಂಡ ಇಳಿದು ||
ಗುಂಡನೂರು ಬಾಗಲು ಕಾದು
ಹೋಗದಿರು ಸಾಲು ತಿರುವ್ಯಾನೆ
ಸರ್ಜತಿ ಭೂಪ
ಹೋಗದಿರು ಸಾಲು ತಿರುನ್ಯಾನೊs.

ಕೊಣವತ್ತಿ ಕೊಣವಿಳಿದು ||
ಕೊಣನೂರು ಬಾಗಲು ಕಾದು
ಹೋಗದಿರು ಸಾಲು ತಿರುವ್ಯಾನೆ
ಸರ್ಜತಿ ಭೂಪ
ಹೋಗದಿರು ಸಾಲು ತಿರುವ್ಯಾನೆs.

ಹೋಗ ಇರು ಸಲ ತಿರುವಿ ||
ಬಡವರ ಬಗ್ಗರ ಕರೆಸಿ
ದಾನವಾದರೆ ಮಾಡ್ಯಾನಲ್ಲೋ.
ಸರ್ಜತಿ ಭೂಪ
ಧರ್ಮವಾದರೆ ಮಾಡ್ಯಾನಲ್ಲೊs.

ನಾಳೆಗೆಂಟವ ದಿವಸ ||
ದುರುಗದ ವೆಂಕಪರಾಯ
ದುರುಗಾದೊಳಾಗ ಮಸಲತ್ತು
ಗೋವಿಂದರಾಯ ವೆಂಕಪರಾಯ
ದುರುಗದೊಳಗ ಮಸಲತ್ತುs.

ಮಸಲತ್ತು ಮಾಡ್ಯಾರೋ ||
ಕಿಮ್ಮತ್ತು ಬೆದಿಕ್ಯಾರೋ
ಹೂವೇನಳ್ಳಿಗೆ ನಡೆದಾರೊ
ಗೋವಿಂದರಾಯ ವೆಂಕಪರಾಯ
ಹೂವೇನಳ್ಳಿಗೆ ನಡೆದಾರೊs.

ಹೂವೆನಳ್ಳಿಗೆ ||
ನಡೆದಾರೋ ಆವಾಗ
ಉರುಡು ಸಾವಿಡಿಗೆ ನಡಿದಾರೋ
ಗೋವಿಂದರಾಯ ವೆಂಕಪರಾಯ
ಕುಂತೇ ಮಸಲತ್ತು ಮಾಡ್ಯಾರಲ್ಲೋs.

ಕುಂತೇನ ಮಸಲತ್ತೋ ||
ಮಾಡ್ಯಾರೋ ಆವಾಗ
ಕಿಮ್ಮತ್ತಾದರೆ ಬೆದಿಕ್ಯಾರೋ
ಗೋವಿಂದರಾಯ ವೆಂಕಪರಾಯ
ಕಿಮ್ಮತ್ತಾದರೇ ಬೆದಿಕ್ಯಾರೋs.

ಮಸಲತ್ತು ಮಾಡ್ಯಾರೋ ||
ಕಿಮ್ಮತ್ತು ಬೆದಿಕ್ಯಾರೊ
ಮದಲೆ ಹನುಮಯ್ಯನ ಕರಿಸ್ಯಾರೊ
ಗೋವಿಂದರಾಯ ವೆಂಕಪರಾಯ
ಮದಲೆ ಹನುಮಯ್ಯನ ಕದಿಸ್ಯಾರೊs.

ಏನಲೆ ಎಲೇ ಹನುಮ ||
ಏನೋ ಮಾದಿಗರನುಮ
ನಿಂಗಮ ತಾಯಿನ ದಯೆಮಾಡು
ಮಾದಿಗರನುಮ
ನಿಂಗಮ ತಾಯಿನ ದಯೆ ಮಾಡುs.

ದಡಗ್ಗನೇದ್ದನೊ ||
ಊರು ಸಾವಿಡಿ ಬಿಟ್ಟಾನೋ
ಅರಮನೆಗಾದರೆ ನೆಡುದಾನೆ
ಮಾದಿಗರನುಮ
ಅರಮನೆಗಾದರೆ ನೆಡುದಾನೋs.

ಏನಮ್ಮ ಎಲೇ ತಾಯಿ ||
ಏನೇ ನಿಂಗಮ್ಮ ತಾಯಿ
ಊರು ಸಾವಿಡಿಗೆ ಬರಬೇಕು
ನಿಂಗಮ್ಮ ತಾಯಿ
ಊರು ಸಾವಿಡಿಗೆ ಬರಬೇಕುs.

ಏನಲೆ ಎಲೆ ಹನುಮ ||
ಏನೋ ಮಾದಿಗರ ಹನುಮ
ನಾನೊಂದು ಮಾತೊಂದ ಕೇಳತೀನಿ
ಮಾದಿಗರ ಹನುಮ
ಅಂಜು ಇಲ್ಲದೆ ಹೇಳಬೇಕುs.

ನಿನ್ನ ಆಣೆಯ ನಿನ್ನಾ ||
ಸೂರ್ಯ ಚಂದುರುನಾಣೆ
ನಿನ್ನ ಪಾದದಾಣೆ ಕಾಣೆನಮ್ಮ
ನಿಂಗಮ್ಮ ತಾಯಿ
ಕೋಪವಾದರೆ ಮಾಡಬ್ಯಾಡೋs.

ದಡಗ್ಗನೇದ್ದಳೋ ||
ಅರಮನೆ ಬಿಟ್ಟಾಳೊ
ಊರು ಸಾವಿಡಿಗೆ ನಡೆದಾಳೊ
ನಿಂಗಮ್ಮ ತಾಯಿ
ಊರು ಸಾವಿಡಿಗೆ ನಡೆದಾಳೊs.

ಅಣ್ಣ ವೆಂಕಪರಾಯ ||
ಭಾವ ಗೋವಿಂದುರಾಯ
ನನ್ನ ಕರೆಸಿದ ಬುಗವೇನು
ಗೋವಿಂದರಾಯ ವೆಂಕಪರಾಯ
ನನ್ನ ಕರೆಸಿದ ಬಗವೇನುs.

ಏನುವಿಲ್ಲವಮ್ಮ ||
ಎತ್ತವಿಲ್ಲವಮ್ಮ ನಿಂಗಮ್ಮ ತಂಗಿ
ಗೊಂಬೆ ಮಂಚಕ್ಕೆ ದಯೆಮಾಡು
ನಿಂಗಮ್ಮ ತಂಗಿ
ಕುಸಲೆ ಮಂಚಕ್ಕೆ ದಯೆ ಮಾಡುs.

ಗೊಂಬೆನೆ ಮಂಚಕ್ಕೆ ||
ದಯೆ ಮಾಡಿ ಇರುವೆನು
ಕುಸಲೆ ಮಂಚಕ್ಕೆ ದಯೆ ಮಾಡಿ ಇರುವೆನು
ಗೋವಿಂದರಾಯ ವೆಂಕಪರಾಯ
ನನ್ನ ಕರೆಸಿದ ಬಗೆ ಏನುs.

ಏನುವಿಲ್ಲವಮ್ಮ ||
ಎತ್ತವಿಲ್ಲಾವಮ್ಮ ನಿಂಗಮ್ಮ ತಾಯಿ
ಜುಟ್ಲು ಜನಿವಾರ ನಿಲುಸಮ್ಮ
ನಿಂಗಮ್ಮ ತಾಯಿ
ಮಾನ್ಯ ಅಭಿಮಾನ್ಯ ನಿನ್ನದಮ್ಮೊs.

ಜುಟ್ಲು ಜನಿವಾರ ನಿನ್ನದೋ ||
ಮಾನ್ಯ ಅಭಿಮಾನ್ಯ ನಿನ್ನದಮ್ಮೊ
ನಿಂಗಮ್ಮ ತಂಗಿ
ಮಾನ್ಯ ಅಭಿಮಾನ್ಯ ನಿನ್ನದಮ್ಮೊs.

ಬ್ರಾಹ್ಮಣರ ಕುಲದಲ್ಲಿ ||
ಬ್ಯಾಡನ ಬರುತಾನೆ
ಕುಲಕಾದರೆ ಅಪಕೀರ್ತಿ
ನಿಂಗಮ್ಮ ತಂಗಿ
ಬ್ಯಾಡರ ಕುಲಕೆ ಸಂಚು ಕೊಡಬೇಕುs.

ಅವನ ಉಪ್ಪುವ ತಿಂದು ||
ಅವನ ಸೊಪ್ಪುವ ತಿಂದು
ಅವನ ಮೇಲೆ ಎರಡು ಬಗೆದಲ್ಲೊ
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆs.

ಒಂಟೆ ಸಾಲೇ ಕೊಡತಿವಿ ||
ಆನೆ ಸಾಲು ಕೊಡತಿವಿ
ಎಮ್ಮೆ, ಆಕಳ ಸಾಲು ಕೊಡತಿವಿs
ನಿಂಗಮ ತಂಗಿ
ಬ್ಯಾಡನೊಳಸಂಚು ಕೊಡಬೇಕುs.

ಆನೆ ಸಾಲು ನಮಗಂಟು ||
ಒಂಟೆ ಸಾಲು ನಮಗುಂಟು
ಎಮ್ಮೆ ಆಕಳು ಸಾಲು ನಮಗಂಟು
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆs.

ವಕ್ಕಳ ಗದ್ದೆ ಕೊಡತೀವಿ ||
ಜಾಗಿರಾಶಿ ಕೊಡತಿವಿ
ಬ್ಯಾಡನೊಳಸಂಚು ಕೊಡಬೇಕು
ನಿಂಗಮ್ಮ ತಾಯಿ
ಬ್ಯಾಡನೊಳಸಂಚು ಕೊಡಬೇಕುs.

ವಕ್ಕಳ ಗದ್ದೆ ನಮಗುಂಟು ||
ಜಾಗಿರ ಸಾಲು ನಮಗುಂಟು
ಆತನಿದ್ದರೆ ಎಲ್ಲವುಂಟು

ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆs.

ಸಣ್ಣಕ್ಕಿ ಸರ್ಜಾನ ||
ಅಗಲಿ ನಾನಿರುಲಾರೆ
ಕೂಡಿ ನಾನಿರುಲಾರೆ
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆs.

ಮುವತ್ತು ಮೂರಳ್ಳಿ ||
ಜಾಗೀರಿ ಕೊಡುತೀವಿ
ಆಳ ರಾಜ್ಯದ ಕೋಡುತೀವಿ
ನಿಂಗಮ್ಮ ತಂಗಿ
ಬ್ಯಾಡನೊಳಸಂಚು ಕೊಡಬೇಕುs.

ಮುವತ್ತು ಮೂರಳ್ಳಿ ||
ಜಾಗೀರು ನಮಗುಂಟು
ಆಳ ರಾಜ್ಯ ನಮಗುಂಟು
ಗೋವಿಂದರಾಯ ವೆಂಕಪರಾಯ
ಆತನೊಳಸಂಚು ಕೊಡಲಾರೆs.

ಬಡಿಗೇರನ ಕರಸಯ್ಯಾ ||
ಬಗಣಿ ಸೂಲಗಳನ್ನು ಕೆತ್ತಿಸಯ್ಯ
ಕ್ವಾಟೆ ಸುತ್ತಲ ನಿಲ್ಲಿಸಯ್ಯೊ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ನಿಲ್ಲಿಸಯ್ಯೊs.

ಕಮ್ಮಾರನ ಕರಸಯ್ಯಾ ||
ಶೂಲಗಳು ಕಡಿಸಯ್ಯಾ
ಕ್ವಾಟೇ ಸುತ್ತಲ ನಿಲಿಸಯ್ಯಾ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ನಿಲಿಸಯ್ಯೊs.

ನೆವ್ವರನ ಕರೆಸಯ್ಯ ||
ಶೂಲವಕ್ಕಳು ನುಡಿಸಯ್ಯ
ಕ್ವಾಟೇ ಸುತ್ತಲ ಬಿಗುಸಯ್ಯ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ಬಿಗುಸಯ್ಯೊs.

ತಳವಾರನು ಕರಸಯ್ಯ ||
ಶಾವುಲ್ಲು ತುರಿಸಯ್ಯ
ಕೋಟೆ ಸುತ್ತಲು ಒದುಸಯ್ಯ
ಗೋವಿಂದರಾಯ ವೆಂಕಪರಾಯ
ಹನುಮನ ದಿಕ್ಕಿಗೆ ಹೊದುಸಯ್ಯೊs.

ಮಾದಿಗರನ ಕರಿಸಯ್ಯ ||
ಬೇಲಿಯ ಕಡಿಸಯ್ಯ
ಬೇಲಿನಾದರೆ ಕಡಿಸಯ್ಯ
ಗೋವಿಂದರಾಯ ವೆಂಕಪರಾಯ
ಬೇಲಿನಾದರೆ ಕಡುಸಯ್ಯೊs.

ಹೂವನಳ್ಳಿ ಎಂಬುದು ||
ಏಳೇ ಬಜಾರವಾಯಿತೊ
ಏಳು ತರಾವು ಬಡುಸಯ್ಯ
ಗೋವಿಂದರಾಯ ವೆಂಕಪರಾಯ
ಏಳು ತರಾವು ಬಡುಸಯ್ಯೊs.

ಒಡ್ಡರುನಾ ಕರುಸಯ್ಯ ||
ಡಂಕಗಳ ಕಡಿಸಯ್ಯ
ಊರ ಬಾಗ್ಲಿಗೆ ನೆಡುಸಯ್ಯ
ಗೋವಿಂದರಾಯ ವೆಂಕಪರಾಯ
ಊರ ಬಾಗ್ಲಿಗೆ ನೆಡುಸಯ್ಯೊs.

ಮಾದಿಗರನು ಕರೆಸಯ್ಯ ||
ರಾಡುನ ಕಟ್ಟುಸಯ್ಯ
ಬಿಗವಾದರೆ ವೆಂಕಪರಾಯ
ಬಿಗವಾದರೆ ಜೋಡುಸಯ್ಯೊs.

ಊರ ದೇವೆತ ಸಾರು ||
ಗಟಿಸಾರು ಸಾರು ಸಯ್ಯೊ
ಗಟಿಪಾರ್ಯರು ನಿಲ್ಲಿಸಯ್ಯೊ
ಗೋವಿಂದರಾಯ ವೆಂಕಪರಾಯ
ಗಟಿಪಾರ್ಯರು ನಿಲ್ಲಿಸಯ್ಯೊs.

ತೊರೆಕೆರೆದೊಳಗಿರುವ ||
ಸರ್ಜತಿ ಭೂಪನಿಗೆ
ವಾಲೆನಾದರೆ ಬರುಸಯ್ಯ
ಗೋವಿಂದರಾಯ ವೆಂಕಪರಾಯ
ವಾಲೆನಾದರೆ ಬರುಸಯ್ಯs.

ಆಯ್ತಿವಾರ ಅಮಾಸೆ ಮಾಡಿ ||
ಸೋಮಾರ ಹಿರಿಯಕ್ಕಿ ಒಯ್ದು
ಮಂಗಳವಾರ ದುಳಾಲಗ್ಗಿಗೆ ಬರಬೇಕು
ಅನ್ನುತಲಾಗ
ವಾಲೆನಾದರೇ ಬರುಸಯ್ಯೊs.

ವಾಲೇನೆ ಬರುದಾರೋ ||
ವಾಲೇನೆ ಆಕ್ಯಾರೋ
ಮಾಗಿ ಸಪುನವು ಬಿದ್ದಿತಲ್ಲೊ
ಅನ್ನುತಲಾಗಿ ಮಾಗಿ ಸಪುನವು ಬಿದ್ದಿತಲ್ಲೊ.

ಎಂದಿಗಿಲ್ಲದ ಹೂವ್ವನಳ್ಳಿ ||
ಇಂದಿಗೆ ಸುಂಗರವಾಯ್ತೊ
ಮುತ್ತಿನ ಜಾಲವ ಬಿಗಿದಂತೆ ಬಿಗಿದಯ್ತೊ
ಅನ್ನುತಲಾಗ ಮಾಗಿದ ಸಪುನವು ಬಿದ್ದಿತಲ್ಲೊ.

ದಡಗ್ಗನೆದ್ದಾನೋ ||
ಉಸುನಕ್ಕು ನಕ್ಕಾನೆ, ಹಲ್ಲುನಾದರೆ ಕಡದಾನೊ
ಸರ್ಜತಿ ಭೂಪ
ಮೀಸೆನಾದರು ತಿರುವ್ಯಾನಲ್ಲೊ.

ದಡಗ್ಗನೆದ್ದಾನೋ ||
ಅರಿವಿ ಗಂಗಿಗೆ ನಡೆದಾನೊ
ಸರ್ಜತಿ ಭೂಪ
ಸ್ನಾನವಾದರೆ ಮಾಡೆನಲ್ಲೊ.

ಸ್ನಾನವ ಮಾಡನೇ ||
ಬಂಗಾರ ಗಿಂಡೀಲಿ
ಪನ್ನಿರಾದರೂ ಹಿಡಿದಾನೋ
ಸರ್ಜತಿ ಭೂಪ
ಅರಮನೆಗಾದರೇ ಬಂದಾನಲ್ಲೊ.

ಅರಮನೆಗೆ ಬಂದಾನೆ ||
ಕಾಯಿನ ಕರ್ಪೂರ ತಗುದಾನೊ
ಸರ್ಜತಿ ಭೂಪ
ಮನಿಸ್ವಾಮಿ ರಂಗಯ್ಯಗೆ ನಡೆದಾನೊ.

ಕಾಯಿನೆ ಒಡುದಾನೊ
ಕೈಯಿನೆ ಮುಗಿದಾನೆ
ವರುವುನಾದರೆ ಬೇಡುವನಲ್ಲೆ
ಮನಿಸ್ವಾಮಿ ರಂಗ
ಎಡಗಡೆ ಹೂವನ್ನು ಕೊಟ್ಟಿತಲ್ಲೊ.

ಎಡ್ಗಡೆ ಹೂವನ್ನು ಕೊಟ್ಟಿತಲ್ಲೊ ||
ಕೊಟ್ಟಿತು ಆವಾಗ
ಅರಮನೆಗಾದರೆ ಬಂದನಲ್ಲೊ
ಸರ್ಜತಿ ಭೂಪ
ಅರಮನೆಗಾದರೆ ಬಂದನಲ್ಲೊ.

ಅರಮನೆಗೆ ಬಂದಾನೆ ||
ಕಾಯಿನ ಕರ್ಪೂರ ಇಟ್ಟಾರಲ್ಲೊ
ಸರ್ಜತಿ ಭೂಪ
ಗರಡಿ ಮನೆಗನ್ನ ನಡೆದಾನೊ.

ಗರಡಿ ಮನೆಗೆ ಬಂದಾನಣ್ಣ ||
ಸಮಸಗತಿಯ ಮಾಡನಣ್ಣ
ಹಿಂದಕೆ ಇಂಗಣ್ಣ ಹೊಡೆದಾನೊs.
ಸರ್ಜತಿ ಭೂಪ
ಮುಂದಕೆ ಮುಂಗಣ್ಣು ಹೊಡೆದಾನೊs.

ಹಿಂದಕ್ಕೆ ಹಿಂಗಣ್ಣ ಹೊಡೆದ
ಮುಂದಕ್ಕೆ ಮುಂಗಣ್ಣ ಹೊಡೆದ
ಯಂಬತ್ತು ಮಣವ ಗುಂಡಿಗಾದರೆ ಕೆಡುದಾನೆ
ಸರ್ಜತಿ ಭೂಪ
ಯಂಭತ್ತು ಮಣ ಗುಂಡಿಗಾದರೆ ನಡೆದಾನುs.

ಯಂಭತ್ತು ಮಣವನ್ನು ||
ಗುಂಡಿಗೆ ನಡೆದಾನೊ
ಗುಂಡುನಾದರೆ ಎಳಲಿಲ್ಲ
ಸರ್ಜತಿ ಭೂಪ
ದುಃಖವಾದರೆ ಮಾಡ್ಯಾನಲ್ಲೊs.

ದುಃಖವೇ ಮಾಡ್ಯಾನೊ ||
ಶೋಕವೆ ಮಾಡ್ಯಾನೋ
ದುಃಖವಾದರೆ ಮಾಡನಲ್ಲೊ
ಸರ್ಜತಿ ಭೂಪ
ಶೋಕವಾದರೆ ಮಾಡ್ಯಾನಲ್ಲೋs.

ದುಃಖವು ಮಾಡ್ಯಾನೆ ||
ಶೋಕವು ಮಾಡ್ಯಾನೋ
ಅರಮನೆಗಾದರೆ ಬಂದನಲ್ಲೋ
ಸರ್ಜತಿ ಭೂಪ
ಅರಮನೆಗಾದರೆ ಬಂದನಲ್ಲೋs.

ಅರಮನೆಗೆ ಬಂದಾನೆ ||
ಹಾಲನೆ ಅನ್ನವು
ಮೆದ್ದನು ಅವಾಗ
ಉಳುಕಡ್ಲಿ ಮೆದ್ದೆನಲ್ಲೊ
ಸರ್ಜತಿ ಭೂಪ
ಹೊಳಿಗೆ ಬಿಳಿ ಎಲೆಯ ಮೆದ್ದನಲ್ಲೊs.

ಉಳುಡಿಕೆ ಬಿಳಿಯೆಲೆ ||
ಮೆದ್ದನು ಆವಾಗ
ದೇವರ ಕ್ವಾಣೆಗೆ ನೆಡದಾನೋ
ಸರ್ಜತಿ ಭೂಪ
ದೇವರ ಕ್ವಾಣೆಗೆ ನಡೆದಾನೋs.

ದಾವರ ಕ್ವಾಣೆಗೆ ನೆಡದಾನೋ ಆವಾಗ ||
ಸುದ್ದಿನ ಸುರಿಬಾಕು
ನಾಗರ ಅದ್ಯಾವ, ಚಂದ್ರನದ್ಯಾವ ತಗುದಾನೋs.
ಸರ್ಜತಿ ಭೂಪ
ಚಂದ್ರುದಾದ್ಯವು ತಗುದಾನೊs.
ತಳವಾರ ತಿಪ್ಪಯ್ಯ ||
ಕುದುರೆನೆ ಹಿಡಿಯಯ್ಯ
ಕುದುರೆ ಜೀನಾದರೆ ಬಿಗಿಸಯ್ಯ
ಅನ್ನುತಲಾಗ
ತಳವಾರ ತಿಪ್ಪಯ್ಯಗೆ ಹಳನಲ್ಲೊs.

ತಂದೆನೇ ಪಾದಕ್ಕೆ
ನಡೆದಾನೋ ಆವಾಗ
ತಂದೆ ಪಾದವ ಕೊಡಲಿಲ್ಲೊ
ರಂಗಪ್ಪ ತಂದೆ ಪಾದವ ಕೊಡಲಿಲ್ಲೊs.

ಮನ್ನೆ ರಾತ್ರಿಯ ಸಪುನ ||
ಕೊಟ್ಟೂರು ಬಸವಣ್ಣ ತೇರು
ಕಳಸವಾದರೆ ಮುರಿದಂಗಿತ್ತು
ಸರ್ಜತಿ ಭೂಪ
ಐನ ಇವತ್ತಿನ ಪಯಣವ ನಿಲಿಸಯ್ಯೊs.

ಮಾಗಿ ಕಾಲದ ಸಪುನ ||
ಮಗನಿಗೆ ಒಳ್ಳೇದು
ಪರಜನರಿಗೆ ಒಳ್ಳೇದಲ್ಲ
ರಂಗಪ್ಪ ತಂದೆ
ಇವತ್ತೆ ಪಯಣವ ಕೊಡಬೇಕುs.

ಇವತ್ತಿನ ಪಯಣವು ||
ಕೊಡದಿದ್ದರೆ ನೀನು
ಅರಾರೆ ದಂಡನ್ನು ನುಗ್ಗುತಾರೋ
ರಂಗಪ್ಪ ತಂದೆ
ಇವತ್ತೆ ಪಯಣವ ಕೊಡಬೇಕುs.

ನಿನ್ನೆ ರಾತ್ರಿಯ ಸಪುನ ||
ಹಟ್ಟಿ ತಿಪ್ಪಯ್ಯನ ತೇರು
ಕಳಸವಾದರೆ ಮುರಿದಂಗಿತ್ತು
ಸರ್ಜತಿ ಭೂಪ
ಇವತ್ತೀನ ಪಯಣವ ನಿಲಸಯ್ಯೊs.

ಮಾಗಿ ಕಾಲದ ಸಪುನ ||
ಮಗನಿಗೆ ಒಳ್ಳೇದು
ಪರಜನರಿಗೆ ಒಳ್ಳೇದಲ್ಲ
ರಂಗಪ್ಪ ತಂದೆ
ಇವತ್ತೆ ಪಯಣವ ಕೊಡಬೇಕುs.

ಇವತ್ತಿನ ಪಯಣವ ||
ಇವತ್ತಿನ ಪಯಣವ ಕೊಡದಿದ್ದರೆ ನೀನು
ಅರಾರು ದಂಡು ನುಗ್ಗತಾರೊ
ರಂಗಪ ತಂದೆ ಕೊಡಬೇಕುs.

ರಾತ್ರಿನ ಸಪುನವೊ ||
ಹೂವ್ವನಹಳ್ಳಿ ಊರಮುಂದೆ
ಕುದುರೆ ಕಾಲು ಮುರಿದಂಗಿತ್ತು
ನಿನ್ನ ಮದುವೆ ಆದಂಗಿತ್ತು
ಸರ್ಜತಿ ಭೂಪ
ಇವತ್ತಿನ ಪಯಣವ ನಿಲಿಸಯ್ಯs.

ಹುಟ್ಟಿದ್ದು ತೊರೆಕೆರೆ ||
ಬೆಳದಿದ್ದು ಶಿವಮೊಗ್ಗೇ
ಪ್ರಾಣ ಗೆಲ್ಲುವುದು ಹೂವನಹಳ್ಳಿ
ರಂಗಪ್ಪ ತಂದೆ
ಇವತ್ತಿನ ಪಯಣದ ಕೊಡಬೇಕುs.

ಇವತ್ತಿನ ಪಯಣವು ||
ಕೊಡದಿದ್ದರೆ ನೀನು ಆರಾರೆ ದಂಡನ್ನು ನುಗ್ಗತಾರೊ
ರಂಗಪ ತಂದೆ
ಇವತ್ತಿನ ಪಯಣವ ಕೊಡಬೇಕುs.

ತಂದೆನ ಪಾದಕ್ಕೆ ||
ಮುಗಿದಾನೋ ಆವಾಗ
ತಾಯಿ ಪಾದಕ್ಕೆ ನೆಡುದಾನೊ
ಸರ್ಜತಿ ಭೂಪ
ತಾಯಿ ಪಾದಕ್ಕೆ ನೆಡುದಾನೊs.

ತಾಯಿನೆ ನೀಲಮ್ಮ ||
ದುಃಖವ ಮಾಡ್ಯಾಳೋ
ಶೋಕವಾದರೆ ಮಾಡ್ಯಾಳಲ್ಲೊ
ನೀಲಮ್ಮ ತಾಯಿ
ಶೋಕವಾದರೆ ಮಾಡಳಲ್ಲೊs.

ಅವರ ಕೈ ಎಡವಾಗಿ ||
ನಿನ್ನ ಕೈ ಮೇಲಾಗಿ
ಆಡಿಬಾರಪ್ಪ ನನ್ನ ಮಗನೆ
ಸರ್ಜತಿ ಭೂಪ
ಆಡಿಬಾರಪ್ಪ ನನ್ನ ಮಗನೆs.

ಇಂದಿಗೆ ನೋಡಿದ ಮಕವೊ ||
ಮತ್ತೆಂದಿಗೆ ನೊಡ್ಯಾಲಿ
ಆಡಿಬಾರಪ್ಪ ನನ್ನ ಮಗನೇ
ಸರ್ಜತಿ ಭೂಪ
ಆಡಿಬಾರಪ್ಪ ನನ್ನ ಮಗನೆs.

ತಂದೆನೆ ಪಾದಕ್ಕೆ ||
ಮುಗಿದಾನೋ ಆವಾಗ
ತಾಯಿ ಪಾದಕ್ಕೆ ಮುಗುದಾನೊ
ಸರ್ಜತಿ ಭೂಪ
ಕುದುರೆ ಪಾದಕ್ಕೆ ನೆಡುದಾನೊ.

ಆರು ಗಾವುದ ನಲಿಯೇ ||
ಹಾರುವಂತ ಕುದುರೆ
ದುಃಖವಾದರೆ ಮಾಡುತೈತೋ
ಸರ್ಜನ ಕುದುರೆ
ಪಾದವಾದರೆ ಕೊಡಲಿಲ್ಲೋ ||

ಆರುಗಾವುದು ನಲಿಯೆ
ಹಾರುವಂತ ಕುದುರೆ
ದುಃಖವಾದರೆ ಮಾಡತೈತೊ
ಸರ್ಜನ ಕುದುರೆ
ಪಾದವಾದರೆ ಕೊಡಲಿಲ್ಲೊs.

ನೆತ್ತಿ ಮಾಗಳ ಸಿಟ್ಟು ||
ತುದಿಗಾಲಿಗೆ ಇಳಿದಯಿತೊ
ನೆಗ್ಗದೆ ತುದಿಗಾಲಿನಿ ಒದ್ದಾನಲ್ಲೊs
ಸರ್ಜನ ಕುದುರೆ
ಗಾಳೆ ಗಂಟಾಗಿ ಹೋಯೊತಲ್ಲೊs.

ಗಾಳಿನೆ ಗಂಟಾಗಿ ||
ಹೋಯಿತು ಆವಾಗ
ಮನೆ ಬಾಗಿಲಿಗೆ ಹೋಯಿತಲ್ಲೊs.
ಸರ್ಜನ ಕುದುರೆ
ಊರಬಾಗಿಲಿಗೆ ಬಂದಿತಲ್ಲೊs.

ಊರನೆ ಬಾಗಿಲಿಗೆ ||
ಬಂದಿತ್ತೊ ಆಗಾಗ
ಮುರಿಗೆ ಮುಂಡಾಸು ತೆಗಿತಲ್ಲೊs
ಅನ್ನುತುಲಾಗ
ದುಃಖವಾದರೆ ಮಾಡ್ಯನಲ್ಲೊs.

ಗುರು ಹಿರಿಯರ ಮಾತು ಮೀರಿ ||
ತಂದೆ ತಾಯಿಯ ಮಾತು ಮೀರಿ
ಎಂತಾ ಇಗ್ನವ ಒದಗಿತು
ಸರ್ಜತಿ ಭೂಪ
ದುಃಖವಾದರೆ ಮಾಡ್ಯನಲ್ಲೊs.

ದುಃಖವೆ ಮಾಡ್ಯಾನೆ ||
ಶೋಕವೆ ಮಾಡ್ಯಾನೆ
ಶೋಕವಾದರೆ ಮಾಡೆನಲ್ಲೊs
ಸರ್ಜತಿ ಭೂಪ
ಶೋಕವಾದರೆ ಮಾಡ್ಯಾನಲ್ಲೊs.

ದುಃಖವೇ ಮಾಡ್ಯಾನೆ ||
ಶೋಕವೆ ಮಾಡ್ಯಾನೆ
ಮುರಿಗೆ ಮುಂಡಾಸು ಸುತ್ತಾನಲ್ಲೊs
ಸರ್ಜತಿ ಭೂಪ
ಮುರಿಗೆ ಮುಂಡಾಸು ಸುತ್ತಾನಲ್ಲೊs.

ಮುರಿಗೆನೆ ಮುಂಡಾಸು ||
ಸುತ್ತ್ಯಾನು ಆವಾಗ
ಕುದುರೆನಾದರೆ ಒಡುದಾನೊs
ಸರ್ಜನ ಕುದುರೆ
ಹಿಂದಕ್ಕಾದರೆ ನಗೆಸಯಿತೊs.

ನೆತ್ತಿ ಮ್ಯಾಗಳ ಸಿಟ್ಟು ||
ತುದಿಗಾಲಿಗಿಳಿದಯಿತೋ
ನೆಗ್ಗದೆ ತುದಿಗಾಲಲಿ ಹೊದ್ದಾನಲ್ಲೊs
ಸರ್ಜನ ಕುದುರೆ
ಗಾಳಿ ಗಂಟಾಗಿ ಹೋಯಿತಲ್ಲೊs.

ಗಾಳಿನೆ ಗಂಟಾಗಿ ||
ಹೋಯಿತು ಆವಾಗ
ಬಸವನಕೋಟೆಗೆ ಹೊಡೆದಾನೋs
ಸರ್ಜತಿ ಭೂಪ
ಬಸವನಕೋಟೆಗೆ ಹೊಡೆದಾನೆs.

ಬಸವನಕೋಟೆಗೆ ||
ಹೊಡೆದಾನೊ ಆವಾಗ
ಕುದುರೆನಾದರೆ ನಿಲ್ಲಿಸ್ಯಾನೊs
ಸರ್ಜತಿ ಭೂಪ
ಕೋಟೆನಾದರೆ ಹತ್ತ್ಯಾನಲ್ಲೊs.

ಕೋಟೆಗೆ ಹತ್ತಾನೋ ||
ಉರುಳಿ ಮುಖವೇರಿ
ಉರುಳಿ ಮುಖವೇರಿ ಹತ್ತಾನಲ್ಲೊs
ಸರ್ಜತಿ ಭೂಪ
ಉಸುನಕ್ಕಾದರೆ ನಕ್ಕಾನಲ್ಲೊs.

ಎಂದಿಗಿಲ್ಲದ ಹೂವ್ವನಹಳ್ಳಿ ||
ಇಂದಿಗೆ ಸುಂಗಾರವಾಯ್ತೊ
ಮುತ್ತಿನ ಜಾಲರ ಬಿಗಿದಂಗೆ ಬಿಗದಾಯ್ತೊ
ಅನ್ನುತಲಾಗ
ಉಸುನಕ್ಕಾದರೆ ನಕ್ಕಾನಲ್ಲೊs.

ಉಸುನಕ್ಕು ನಕ್ಯಾನೆ ||
ಹಲ್ಲುನ ಕಡುದಾನೋ
ಮೀಸೆನಾದರೆ ತಿದ್ದ್ಯಾನಲ್ಲೋs
ಸರ್ಜತಿ ಭೂಪ
ಕೋಟೆನಾದರೆ ಇಳಿದಾನೆs.

ಕೋಟೆನೆ ಇಳಿದಾನೆ ||
ಕುದುರೆನೆ ಹತ್ತ್ಯಾನೋs
ಕುದುರೇನಾದರೂ ಹೊಡುದಾನೋs
ಸರ್ಜನ ಕುದುರೆ
ಹಿಂದಕ್ಕಾದರೆ ನಡುಸಯಿತೊs.

ನೆತ್ತಿ ಮ್ಯಾಗಳ ಸಿಟ್ಟು ||
ತುದಿಗಾಲಿಗಿಳಿದಯಿತೋs
ನೆಗ್ಗದೆ ತುದಿಗಾಲಲಿ ಹೊದ್ದಾನಲ್ಲೊ
ಸರ್ಜನ ಕುದುರೆ
ಗಾಳಿ ಗಂಟಾಗಿ ಹೋಯಿತಲ್ಲೋs.

ಗಾಳಿ ಗಂಟಾಗಿ ||
ಒಯಿತು ಆವಾಗ
ದುರುಗದ ಕೊಣವಿಗೆ ಹೊಡೆದಾನೊs
ಸರ್ಜನ ಕುದುರೆ
ದುರುಗದ ಕೊಣವಿಗೆ ಹೊಡೆದಾನೊs

ಸಾವಿರಳ್ಳಿಗೆ ಸರ್ಜನ ||
ನೂರಳ್ಳಿಗೆ ಅಧಿಕಾರ
ರಂಡಸಾವನ್ನು ಕೊಲ್ಲುತ್ತಾರೆ
ಅನ್ನುತಲಾಗ
ರಂಡಸಾವನ್ನು ಕೊಲ್ಲುತಾರೆs.

ಸಾವಿರಳ್ಳಿಗೆ ಸರ್ಜನ ||
ನೂರಳ್ಳಿಗೆ ಅಧಿಕಾರ
ರಂಡಸಾವನ್ನು ಕೊಲ್ಲುತಾರೆ
ಮನಿಸ್ವಾಮಿ ರಂಗ
ಆದಿಗಡ್ಡಾಗಿ ಬಂದಿತಲ್ಲೊs.

ಆದಿಗೆ ಅಡ್ಡವಾಗಿ ||
ಬಂದಿತೊ ಆವಾಗ ಕುಂಟ ಬಿದ್ದಂಗೆ ಬಿದ್ದಿತಲ್ಲೊ
ಮನಿಸ್ವಾಮಿ ರಂಗ
ಕುಂಟ ಬಿದ್ದಂಗೆ ಬಿದ್ದಿತಲ್ಲೊs.

ಸರ್ಪವ ನೋಡ್ಯಾನೆ ||
ಕುದುರೆ ಇಳಿದಾನೋs
ಸರ್ಪಗಾವುದ ಮುಗಿದಾನೊs
ಸರ್ಜತಿ ಭೂಪ
ಸರ್ಪಗಾದರೆ ಮುಗಿದಾನೆs.

ತೊರೆಕೆರೆದೊಳಗಿರುವ ||
ಮನೆಸ್ವಾಮಿ ಕೆರೆ ಹನುಮ
ಏಳೆಡೆ ಸರ್ಪಾವು
ಮಾಯದ ಸರ್ಪವೇ ಹಾದಿ ಬಿಡು ಎನಗೆs

ಒಂದು ಸಾರಿ ಕೇಳ್ಯಾನು ||
ಎರಡು ಸಾರಿ ಕೇಳ್ಯಾನು
ಸರ್ಪವ ಮ್ಯಾಲೆ ನಗೆಸ್ಯಾನೋ
ಸರ್ಜತಿ ಭೂಪ
ಹೂವ್ವನಹಳ್ಳಿಗೆ ವಡೆದಾನುs

ಹೂವ್ವೆನಹಳ್ಳಿಗೆ ||
ಒಡುದಾನು ಆವಾಗ
ಊರು ಬಾಗಿಲಿಗೆ ಒಡೆದಾನು
ಅನ್ನುತಲಾಗ
ಮಾದಿಗರ ಹನುಮ ತಡಿಶ್ಯಾನುs.

ಏನಲೇ ಎಲೇ ಹನುಮ ||
ಏನೋ ಮಾದಿಗರ ಹನುಮ
ನನ್ನ ತಡೆಯಂತು ಬಗೆಯನು
ಮಾದಿಗರ ಹನುಮ
ನನ್ನ ತಡೆಯಿಂದ ಬಗೆಯೇನುs.

ಊರು ನನ್ನದು ||
ಊರು ಉಂಬಳ ನನ್ನದು
ಆಳ ರಾಜ್ಯವ ನನ್ನದಲ್ಲೊ
ಮಾದಿಗರ ಹನುಮ
ನನ್ನ ತಡೆ ಎಂದ ಬಗೆಯೇನು ಎಂದs.

ಏನಲೇ ಎಲೇ ಹನುಮ ||
ಏನೋ ಮಾದಿಗರನುಮ
ನಾನೊಂದು ಮಾತಂದು ಕೇಳತಿನಿ
ಮಾದಿಗರನುಮ
ಅಂಜು ಇಲ್ಲದೆ ಹೇಳಬೇಕುs.

ನಿನ್ನ ಆಣೆಯ ನಿನ್ನ ||
ಸೂರ್ಯ ಚಂದುರಾನಾಣೆ
ನಿನ್ನ ಪಾದದಾಣೆ ಕಾಣೆನಯ್ಯ
ಸರ್ಜತಿ ದೊರೆಯ
ಕೋಪವಾದರೆ ಮಾಡಬ್ಯಾಡೊs.

ನಿನ್ನ ಆಣೆಯ ನಿನ್ನ ||
ಸೂರ್ಯ ಚಂದುರಾನಾಣೆ
ಮನಿಸ್ವಾಮಿ ರಂಗಯ್ಯನಾಣೆ ಕಾಣೆನಯ್ಯ
ಸರ್ಜತಿ ದೊರೆಯ
ಕೋಪವಾದರೆ ಮಾಡಬ್ಯಾಡೊs.

ನನ್ನ ಉತ್ತುರವಲ್ಲ ದೊರೆಯೆ ||
ನಿನ್ನ ಉತ್ತರವಲ್ಲ ದೊರೆಯೆ
ಗೌಡನ ಉತ್ತರವಾಯಿತು
ಸರ್ಜತಿ ದೊರೆಯೆ
ಉತ್ತುರುವಾದರೆ ತೊರತೀನಿs.

ಅವರ ಮುಕವು ಕೇಳಿನ ||
ಹೋದದ ಬೇಕೆಂದು
ಹಿಂದಕ್ಕಾದರೂ ಸರಿಸ್ಯಾನೊ
ಸರ್ಜತಿ ಭೂಪ
ಬೇಲಿನಾದರೆ ನಗಿಸ್ಯಾನೊs.

ಹಿಂದಕ್ಕೆ ಸರಿಸ್ಯಾನೋ ||
ಬೇಲಿಯ ನಗಿಸ್ಯಾನೊ
ಕುದುಕೆ ಕಾಲನ್ನು ಮುರಿದಿತ್ತಲ್ಲೊ
ಅನ್ನುತಲಾಗ
ದುಃಖವಾದರೆ ಮಾಡಾನಲ್ಲೊs.

ಗುರು ಹಿರಿಯರು ಮಾತು ಮೀರಿ ||
ತಂದೆ ತಾಯಿಯ ಮಾತು ಮೀರಿ
ಎಂತ ಇಗ್ನವ ಒದಗಿತು
ಅನ್ನುತಲಾಗ
ದುಃಖವಾದರೆ ಮಾಡ್ಯಾನಲ್ಲೊs.

ದುಃಖವೇ ಮಾಡ್ಯನೆ ||
ಸೀಕವ್ ಮಾಡ್ಯಾನೆ
ಇಡುಗ್ವಾಡಿಗೆ ಒಡೆದಾನೋ
ಸರ್ಜತಿ ಭೂಪ
ಇಡುಗ್ವಾಡಿಗೊಡುದಾನೋs.

ಇಡುನಗ್ವಾಡಿಗೆ ||
ಹೊಡೆನೋ ಆವಾಗ
ಹನುಮನಗಾದರೆ ನಡೆದಾನೊ
ಸರ್ಜತಿ ಭೂಪ
ಹನುಮನಗಾದರೆ ನಡೆದಾನೋs.

ಏನಲೇ ಎಲೇ ನಿಂಗಿ ||
ಏನೇ ಸೂಳೆಯ ನಿಂಗಿ
ಎಂಥ ಮಾಯವ ನಿದ್ರೆನಗವದಿಯೆ
ಸೂಳೆಯ ನಿಂಗಿ
ಎಂತ ಮಾಯ ನಿದ್ರೆನಗವದಿಯೆs.

ಒಂದು ಸಾರಿ ಎಬ್ಬಿಶ್ಯಾನು ||
ಎರಡು ಸಾರಿ ಎಬ್ಬಿಶ್ಯಾನು
ಮೂರೇ ಸಾರಿಗೆ ನೆಗ್ಗದು
ತುದಿಗಾಲಲ್ಲಿ ಒದ್ದನಲ್ಲೊ
ಅನ್ನುತಲಾಗ
ಏಳು ಬಾಗಲು ನುಚ್ಚು ನುಚ್ಚುs.

ಏನಲೇ ಎಲೇ ನಿಂಗಿ ||
ಏನೇ ಸೂಳೆಯ ನಿಂಗಿ
ಒಂದು ಕದ ಒದ್ದರೆ ಏಳೇಳು ಕದಗಳು
ನುಚ್ಚು ನುಚ್ಚಾದರೆ ಆದಾವಲ್ಲೆ
ಸೂಳೆಯ ನಿಂಗಿ
ನುಚ್ಚು ನುಚ್ಚಾದರೆ ಆದವಲ್ಲೆs.

ಉಸುನಕ್ಕು ನಕ್ಕಳೋ ||
ಬಂಗಾರ ಗಿಂಡೀಲಿ
ಪನ್ನೀರಾದರೆ ಹಿಡುದಾಳೊ
ಅನ್ನುತಲಾಗ
ಸರ್ಜಗಾದರೆ  ಕೊಟ್ಟಾಳಲ್ಲೊs.

ಏನಲೇ ಎಲೇ ನಿಂಗಿ ||
ಏನೇ ಸೂಳೆಯ ನಿಂಗಿ
ನಾನೊಂದು ಮಾತನ್ನು ಕೇಳತೀನಿ
ಸೂಳೆಯ ನಿಂಗಿ
ಅಂಜು ಇಲ್ಲದೆ ಹೇಳಬೇಕುs.

ನಿನ್ನ ಆಣೆಯ ನಿನ್ನ ||
ಸೂರ್ಯ ಚಂದುರುನಾಣೆ
ನಿನ್ನ ಪಾದದಾಣೆ ಕಾಣೆನಯ್ಯ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೋs.

ಊರು ದೇವತಿ ಸಾರು ||
ಗಟಿ ಸ್ಯಾರು ಸಾರ್ಯಾರೋ
ಗಟ್ಟಿ ಪ್ಯಾರರೋ ನಿಲ್ಲಿಸ್ಯಾರೋs
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೋs.

ಏನಲೇ ಎಲೇ ನಿಂಗಿ ||
ಏನೇ ಸೂಳೆಯ ನಿಂಗಿ
ಸಾರಿದ್ದರೇನಾಯ್ತು
ಬಯಾರಿ ಬಂದೆ ಕೊಡನೀರು
ಸೂಳೆಯ ನಿಂಗಿ
ಬಾಯಾರಿ ಬಂದೆ ಕೊಡನೀರುs.

ಮನ್ನೆ ಬಂದಿದ ಜ್ವರ ||
ಜ್ವರವದು ಬಿಟ್ಟಿಲ್ಲ
ಪನ್ನಿರಾದರೂ ತಂದು ಇಲ್ಲಿ
ಸರ್ಜತ ದೊರೆಯೆ
ಕೋಪವಾದರೆ ಮಾಡಬ್ಯಾಡs.

ಹಿರಿಯಕ್ಕನ ಮನೆಗೋಗಿ ||
ಪನ್ನಿರು ತರುತೀನಿ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೊs.

ಹಿರಿಯಕ್ಕನ ಮನೆಯಲ್ಲಿ ||
ಪನ್ನಿರು ಇಲ್ಲವಯ್ಯ
ಪನ್ನಿರಾದರೆ ಇಲ್ಲವಯ್ಯ
ಸರ್ಜತಿ ದೊರೆಯೆ
ಕೋಪಾವಾದರೆ ಮಾಡಬ್ಯಾಡೊs.

ಹಿರಿಯಕ್ಕನ ಮನೆಯನ್ನು ||
ಬಿಟ್ಟಾಳು ಆವಾಗ
ಅರಮನೆಗಾದರೂ ನಡೆದಾಳೊ
ನಿಂಗಮ್ಮ ತಾಯಿ
ಅರಮನೆಗಾದರು ನಡೆದಾಳೊ s.

ಅಣ್ಣನ ಮನೆಯೋಗಿ ||
ಆಕಳ ಹಾಲು ತರುತೀನಿ
ಆಕಳ ಹಾಲಾದರೂ ತರುತೀನಿ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೊ s.

ಹಾಲುನ ಕೊಟ್ಟಾಳೊ ||
ಹಾಲುನು ಕುಡುದಾನೊ
ಮೈಕೊಡವಿಲಾತಾದರೂ ಕೊಡವಿತಲ್ಲೊ
ಅನ್ನುತಲಾಗ
ಮೈಕೊಡವಿಲಾತಾದರೂ ಕೊಡವಿತಲ್ಲೊ s.

ಏನಲೇ ಎಲೇ ನಿಂಗಿ ||
ಏನೇ ಸೂಳೆಯ ನಿಂಗಿ
ಮೈಕೊಡವಿತಾದರೆ ಕುಡಿವಿತಲ್ಲೇ
ಅನ್ನುತಲಾಗ
ಮೈ ಕೊಡವಿತಾದರೆ ಕೊಡವಿಲ್ಲೆ s.

ಅಣ್ಣನ ಮನೆಯಲ್ಲಿ ||
ಆಕಳ ಹಾಲು ಕಾಸಿಲ್ಲ
ಹಾಲುನಾದರೆ ಕಾಸಿಲ್ಲ
ಸರ್ಜತ ದೊರೆಯೆ
ಕೋಪವಾದರೆ ಮಾಡಬ್ಯಾಡೊ s.

ಹಾಲುನ ಕುಡುದಾನೇ ||
ಗೊಂಬೆನೆ ಮಂಚಕ್ಕೆ
ಗೊಂಬೆ ಮಂಚಕ್ಕೆ ನಡೆದಾನೋ
ಸರ್ಜತಿ ಭೂಪ
ಕುಸಲೇ ಮಂಚಕ್ಕೆ ನಡೆದಾನೊ s.

ಗೊಂಬೆನೆ ಮಂಚಕ್ಕೆ ||
ನಡೆದಾನೋ ಆವಾಗ
ಕುಸಲೆ ಮಂಚಕ್ಕೆ ನಡೆದಾನೊ s
ಸರ್ಜತಿ ಭೂಪ
ಕುಸಲೆ ಮಂಚಕ್ಕೆ ನಡೆದಾನೋ s.

ಸೂಳೆಯ ನಿಂಗಿಯನ್ನು ||
ಸರ್ಜತಿ ಭೂಪನು
ಇಬ್ಬರೊಂದಾಗಿ ಮಲಿಗಾರು
ಅನ್ನುತಲಾಗ
ಎಚ್ಚರವಾದರೆ ಇಲ್ಲವಯ್ಯೊ s.

ಸಾವಿರಳ್ಳಿಗೆ ಸರ್ಜನ ||
ನೂರಳ್ಳಿಗೆ ಅಧಿಕಾರಿ
ರಂಡಸಾವನ್ನು ಕೊಲ್ಲುತಾರೆ
ಸೂಳೆಯ ನಿಂಗಿ
ದುಃಖವಾದರೆ ಮಾಡ್ಯಳಲ್ಲೊ s.

ದುಃಖವೇ ಮಾಡ್ಯಾಳೋ ||
ಶೋಕವು ಮಾಡ್ಯಾಳೊ
ಶೋಕವಾದರೂ ಮಾಡ್ಯಾಳಲ್ಲೊ
ಶೋಕವಾದರೆ ಮಾಡ್ಯಾಳಲ್ಲೊ s.

ಸುದ್ದಿನೆ ಸುರಿಬಾಕು ||
ನಾಗರ ಆದ್ಯವು
ಚಂದ್ರದದ್ಯಾವು ತಗದಳೊ
ಸೂಳೆಯ ನಿಂಗಿ
ಗರುಡಿ ಮನಿಗನ್ನ ನಡೆದಾಳೊ s.

ಏನ್ರಿ ಬಸವನ ಗೌಡ್ರೆ ||
ಸುದ್ದಿನೆ ಸುರಬಾಕು
ನಾಗರ ಆದ್ಯಾವು
ಚಂದ್ರದದ್ಯಾವು ತೊಂದೈದಿನಿ
ಬಸವನಗೌಡ್ರೆ
ನೆಲಮಾಳಿಗೆ ಹಾಕಬೇಕು s.

ಬಸವನ ಗೌಡನ ||
ಸೂಳೆಯ ನಿಂಗ್ಯನ್ನು
ಉಸುನಕ್ಕಾದರೆ ನಕ್ಕರಲ್ಲೊ
ಅನ್ನುತಲಾಗ
ಉಸುನಕ್ಕಾದರೆ ನಕ್ಕರಲ್ಲೊ s.

ಉಸುನಕ್ಕು ನೊಕ್ಕಾರೊ ||
ಸುದ್ದಿನೆ ಸುರಬಾಕು, ನಾಗರ ಆದ್ಯವು
ಚಂದ್ರುದಾದ್ಯವು ಹಾಕ್ಯರಲ್ಲೊ
ಬಸವನಗೌಡ
ನೆಲಮಾಳಿಗೆ ಹಾಕ್ಯರಲ್ಲೊ s.

ನೆಲನ ಮಾಳಿಗೆ ||
ಹಾಕ್ಯರೊ ಆವಾಗ
ಅರಮನೆಗಾದರೆ ನಡೆದಾಳೊ
ಸೂಳೆಯ ನಿಂಗಿ
ಅರಮನೆಗಾದರೆ ನಡೆದಾಳೊ s.

ಅಣ್ಣ ವೆಂಕಪರಾಯ ||
ಭಾವ ಗೋವಿಂದರಾಯ
ಎಚ್ಚರವಾದರೆ ಇಲ್ಲವಯ್ಯ
ಅನ್ನುತಲಾಗ
ಕಿಮ್ಮಲ್ಲಾದರೆ ಬರಬೇಕೊ s.

ಹತ್ತು ಸಾವಿರ ದಂಡು ||
ಹತ್ತು ಲಕ್ಸವ ದಂಡು
ಇರೆ ಗಾಯಿಗಳ ಹೊಡೆದಾರೊ
ಸರ್ಜನ ಮೇಲೆ
ಇರೆಗಾಗಿಗಳು ಒಡಿಸ್ಯಾರೊ s.

ಇರೇನೆ ಗಾಗಿಗಳು ||
ವಡಿಸ್ಯಾರೊ ಆವಾಗ
ಎಚ್ಚರವಾದರೆ ಅಲ್ಲವಯ್ಯ
ಅನ್ನುತಲಾಗ
ಎಚ್ಚರವಾದರೆ ಇಲ್ಲವಯ್ಯೊ s.

ಏಳನೇ ಬಾಗಿಲಿಗೆ ||
ಮುಸಿಗೆನ್ನು ಹಾಕರೊ
ಇರೆ ಗಾಗಿಗಳೂ ಹೊಡೆದಾರೊ
ಸರ್ಜನ ಮೇಲೆ
ಇರೆಗಾಗಿಗಳು ಹೊಡೆದಾರೊ s.

ಇರೆನೆಗಾಗಿಗಳು ||
ವಡುದಾರೊ ಆವಾಗ
ಎಚ್ಚರವಾದರೆ ಇಲ್ಲವಯ್ಯ
ಅನ್ನುತಲಾಗ
ಎಚ್ಚರವಾದರೆ ಇಲ್ಲವಯ್ಯೊ

ಸಾವಿರಳ್ಳಿಗೆ ಸರ್ಜನ ||
ನೂರಳ್ಳಿಗಾಧಿಕಾರ
ರಂಡ ಸಾವನ್ನು ಕೊಲ್ಲುತಾರೆ
ಮನಿಸ್ವಾಮಿ ರಂಗ
ತೊಳನು ಚಪ್ಪರಿಸಿ ಎಬ್ಬಿಸ್ಯಾನೊ s.

ತೊಳಿನ ಚಪ್ಪರಿಸಿ ||
ಎಬ್ಬಿಸ್ಯಾನೋ ಆವಾಗ
ದಂಡುನಾದರೆ ನೋಡ್ಯಾನಲ್ಲೊ
ಸರ್ಜತಿ ಭೂಪ
ಉಸುನಕ್ಕಾದರೆ ನಕ್ಕನಲ್ಲೊ s.

ದಂಡುನ ನೋಡ್ಯಾನೋ ||
ಹುಸಿನಕ್ಕು ನಕ್ಕನೊ
ಹಲ್ಲುನಾದರೆ ಕಡುದಾನೋ
ಸರ್ಜತಿ ಭೂಪ
ಮೀಸೆನಾದರೆ ತಿದ್ದೆನಲ್ಲೊ s.

ಹುಸಿನಕ್ಕು ನಕ್ಕನೊ ||
ಹಲ್ಲುನಾ ಕಡುದಾನೋ
ಮೀಸೆನಾದರೆ ತಿದ್ದಾನಲ್ಲೋ
ಸರ್ಜತಿ ಭೂಪ
ಮೀಸೆನಾದರೆ ತಿದ್ದೆನಲ್ಲೊ s.

ಏನಲೇ ಎಲೆ ನಿಂಗಿ
ಏನೇ ಸೂಳೆಯ ನಿಂಗಿ
ಸುದ್ದಿನೆ ಸೂರಿ ಬಾಕು
ನಾಗರಾಧ್ಯವು ಚಂದುರಾದ್ಯವು ಕೊಡುಬಾರೆ
ಸೂಳೆಯನಿಂಗಿ
ಚಂದುರಾದ್ಯವು ಕೊಡುಬಾರೆ s.

ನಿನ್ನ ಆಣೆಯ ನಿನ್ನ ||
ಸೂರ್ಯ ಚಂದುರನಾಣೆ
ನಿನ್ನ ಪಾದದಾಣೆ ಕಾಣೆನಯ್ಯ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೊ s.

ಏನಲೇ ಎಲೆ ನಿಂಗಿ ||
ಏನೇ ಸೂಳೆಯ ನಿಂಗಿ
ಕುಡುಗೋಲಿದ್ದರೆ ಕೊಡು ಎಳೇ
ಸೂಳೆಯ ನಿಂಗಿ
ಕುಡುಗೋಲಿದ್ದರೆ ಕೊಡು ಎಳೇs

ನಿನ್ನ ಆಣೆಯ ನಿನ್ನ ||
ಸೂರ್ಯ ಚಂದುರನಾಣೆ
ಮನೆಸ್ವಾಮಿ ರಂಗಯ್ಯನಾಣೆ ಕಾಣೆನಯ್ಯ
ಸರ್ಜತಿ ದೊರೆಯ
ಕೋಪವಾದರೆ ಮಾಡಬ್ಯಾಡೊ s.

ಏನಲೇ ಎಲೆ ನಿಂಗಿ ||
ಏನೇ ಸೂಳೆಯ ನಿಂಗಿ
ಕುಡುಗೋಲಿದ್ದರೆ ಕೊಡು ಎಳೇ
ಸೂಳೆಯ ನಿಂಗಿ
ಕುಡುಗೋಲಿದ್ದರೆ ಕೊಡು ಎಳೇ s.

ಕೂಲಿನಾಲಿ ಹೋಗುವವಳಲ್ಲ ||
ಕಾಸಿಕಟಿಗೆ ಹೋಗುವಳಲ್ಲ
ಕುಡುಗೋಲಾದರೆ ಇಲ್ಲವಯ್ಯ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೊ s.

ಏನಲೇ ಎಲೆ ನಿಂಗಿ ||
ಏನೇ ಸೂಳೆಯ ನಿಂಗಿ
ಕುಡುಗೋಲಿದ್ದರೆ ಕೊಡು ಎಳೇ
ಸೂಳೆಯ ನಿಂಗಿ
ಕೆಬ್ಬಿಣದ ತುಂಡನ್ನು ಕೊಡು ಏಳೆ s.

ಕುಂಟೆ ಕೂರಿಗೆ ಹೊಡೆಯುವಳಲ್ಲ ||
ಮೊಡಿಕೆ ಮಂಡಿ ಒಡೆಯುವಳಲ್ಲ
ಕಬ್ಬಿಣದ ತುಂಡನ್ನು ಇಲ್ಲವಯ್ಯ
ಸರ್ಜತಿ ದೊರೆಯೆ
ಕೋಪವಾದರೆ ಮಾಡಬ್ಯಾಡೊ s.

ಗುರುಹಿರಿಯರ ಮಾತು ಮೀರಿ ||
ತಂದೆ ತಾಯಿಯ ಮಾತು ಮೀರಿ
ಎಂಥ ಇಗ್ನವ ಒದಗಿತು
ಸರ್ಜತಿ ಭೂಪ
ದುಃಖವಾದರೆ ಮಾಡ್ಯನಲ್ಲೊ s.

ದುಃಖವೇ ಮಾಡ್ಯನೋ ||
ಶೋಕವ ಮಾಡ್ಯನೋ
ಶೋಕವಾದರೆ ಮಾಡೆನಲ್ಲೊ
ಸರ್ಜತಿ ಭೂಪ
ಶೋಕವಾದರೆ ಮಾಡ್ಯನಲ್ಲೊ s.

ತಂದೆ ತಾಯಿಯ ನೆನಿಸ್ಯಾನೊ ||
ಬಂದು ಬಳಗವ ನೆನಿಸ್ಯಾನೊ
ಮಡದಿನಾದರೆ ನೆನೆಸ್ಯಾನೊ
ಸರ್ಜತ ಭೂಪ
ದುಃಖವಾದರೆ ಮಾಡ್ಯನಲ್ಲೊ s.

ನೆತ್ತಿಮ್ಯಾಗಳ ಸಿಟ್ಟು ||
ತುದಿಗಾಲಿಗೆ ಇಳಿದಯಿತೋ
ನೆಗ್ಗದೆ ತುದಿಗಾಲಲಿ ಒದ್ದಾನಲ್ಲೊ
ಸರ್ಜತಿ ಭೂಪ
ಬೆನ್ನಗೊಡೆನೆ ಒದ್ದೆನಲ್ಲೊ s.

ಬೆನ್ನಿಗೆ ಗೋಡಿಗೆ ||
ಒದ್ದನೋ ಆವಾಗ
ಸಾಲು ಹೆಣಗಳು ಬಿದ್ದವಲ್ಲೊ
ಅನ್ನುತಲಾಗ
ಸಾಲು ಹೆಣಗಳು ಬಿದ್ದವಲ್ಲೊ s.

ಇಡುನಾ ಗೋಡಿಗೆ ||
ನೆಗಿಸ್ಯಾನಾ ಆವಾಗ
ಕುದುರೆ ಪಾದಕ್ಕೆ ಮುಗುದಾನೋ
ಸರ್ಜತಿ ಭೂಪ
ಕುದುರೆ ಲಗಾಮು ಬಿಚ್ಚಾನಲ್ಲೊ s.

ಕುದುರೆಯ ಲಗಾಮು ||
ಬಿಚ್ಚಾನೋ ಆವಾಗ
ದಂಡುನಾದರೆ ಸವೆರಾನು
ಸರ್ಜತಿ ಭೂಪ
ಬೆಟ್ಟನಾದರೆ ಬೆದರಿತೊ s.

ಏನಲೇ ಎಲೆ ನಿಂಗಿ ||
ಏನೇ ಸೂಳೆಯ ನಿಂಗಿ
ಇಂತ ರಂಡ ಪತ್ರಬಾಳು ಬದುಕಬಾರದು
ಸೂಳೆಯ ನಿಂಗಿ
ಹುಲಿಯ ಗುಡಿಯನಾದರು ಬಿಡಬೇಕು s.

ಬಟ್ಟನ ಬಯಲಿಗೆ ||
ಹುಲಿಯನ್ನು ಬಿಟ್ಟಾರೊ
ಯುದ್ಧವಾದರೆ ಮಾಡುತೀನಿ
ಸೂಳೆಯ ನಿಂಗಿ
ಯುದ್ಧವಾದರೆ ಮಾಡುತೀನಿ s.

ಬಟ್ಟನ ಬಯಲಿಗೆ ||
ಹುಲಿಯನ್ನು ಬಿಟ್ಟಾರೊ
ಯುದ್ಧವಾದರೆ ಮಾಡ್ಸನಲ್ಲೊ
ಸರ್ಜತಿ ಭೂಪ
ಯುದ್ಧವಾದರೆ ಮಾಡ್ಯನಲ್ಲೊ s.

ಯುದ್ಧವೇ ಮಾಡ್ಯಾನೋ ||
ನಿಟ್ಟನು ನಿಲುವಿಗೆ
ನಿಟ್ಟನು ನಿಲುವಿಗೆ ಜಿಗದನು
ಸರ್ಜತಿ ಭೂಪ
ದಂಡುನಾದರೆ ಸವಿರಾನು

ದಂಡುನ ಸವಿರೇನು ||
ಮೀಸೆನಾದರೊ ತಿದ್ದಾನೊ
ಮೀಸೆನಾದರೊ ತಿದ್ದಾನಲ್ಲೊ
ಸರ್ಜತಿ ಭೂಪ
ಮೀಸೆನಾದರೂ ತಿದ್ದನಲ್ಲೊ s.

ಅಮ್ಮ ನಿಂಗಮ್ಮ ತಾಯಿ ||
ಜುಟ್ಲು ಜನಿವಾರ ನಿನ್ನದು
ಮಾನ್ಯ ಅಭಿಮಾನ್ಯ ನಿನ್ನದಮ್ಮ
ನಿಂಗಮ್ಮ ತಾಯಿ
ಜುಟ್ಲು ಜನಿವಾರ ನಿಲ್ಲಿಸಮ್ಮೊ s.

ವಡ್ಡರ ಪೆದ್ದಯ್ಯಗೆ ||
ಓಲೆನೆ ಬರೆದಾರೊ
ಓಲೆನಾದರು ಬರುದಾರೊ
ಗೋವಿಂದರಾಯ ವೆಂಕಪರಾಯ
ಓಲೆನಾದರೂ ಬರೆಸ್ಯಾರೋ s.

ವಡ್ಡರ ಪೆದ್ದಯ್ಯಗೆ ||
ವಾಲನೆ ಬರೆದಾರೊ
ವಾಲೆನಾದರು ಹಾಕರಲ್ಲೊ
ಗೋವಿಂದರಾಯ ವೆಂಕಪರಾಯ
ವಾಲೆನಾದರೆ ಹಾಕ್ಯರಲ್ಲೊ s.

ಇಂತೆಂಬ ಬ್ಯಾಡನ ||
ಕೊಲ್ಲುವುದು ಅಪರೂಪ
ವಾಲೆನಾದರು ಬರೆದಾನೊ
ವಡ್ಡರ ಪೆದ್ದಯ್ಯಗೆ
ವಾಲೆನಾದರು ಬರೆದಾನೊ s.

ಒಂದನ ದ್ಯಾವಣಿಗೆ ||
ಬ್ಯಾಟನ್ನು ಕೊಡಬೇಕು
ಹತ್ತು ಚೀಲ ಅಕ್ಕಿಯನ್ನು ಕೊಡಬೇಕು
ಗೋವಿಂದರಾಯ ವೆಂಕಪರಾಯ
ಒಂದು ಗಾಡಿಯೆಂಡನ್ನು ಕೊಡಬೇಕು s.

ಬ್ಯಾಟನೇ ಕೊಟ್ಟಾರೊ ||
ಅಕ್ಕಿನಾ ಕೊಟ್ಟಾರೋ
ಹೆಂಡನಾದರೆ ಕೊಟ್ಟಾರಲ್ಲೊ
ಗೋವಿಂದರಾಯ ವೆಂಕಪರಾಯ
ಯಾಂಡನಾದರೆ ಕೊಟ್ಯಾರಲ್ಲೊ s.

ಬ್ಯಾಟನ್ನು ಕೊಯ್ದಾರೊ ||
ಖಂಡವ ತಿಂದಾರೊ
ಯಂಡನಾದರೂ ಕುಡುದಾರೊ
ವಡ್ಡರ ದಂಡು
ಯಂಡನಾದರೂ ಕುಡುದಾರೊ s.

ಸೊನ್ನೆನೆ ಹಾರಲಿ ||
ಎಬ್ಬಿಸ್ಯಾರೋ ಆವಾಗ
ಗಾಡಿನಾದರೂ ಹೂಡ್ಯಾರಲ್ಲೊ
ವಡ್ಡರ ದೊಂಡೆ
ಎತ್ತಿನಾದರ ಹೂಡಿ ಎಳಿಸ್ಯಾರೊ s.

ಉದ್ದಿರಿ ನೂಲ ಹಗ್ಗಗಳು ||
ಬಿಗಿದರು ಆವಾಗ
ಇಡಿಬುಗಿದಾದರೆಗೊದಾರೊ
ವಡ್ಡರ ದೊಂಡೆ
ಇಡಿ ಬುಗಿದಾದರೆ ಬೋದಾರೊ s.

ಈರೆನೆಗಾಗಿಗಳು ||
ಒಡುದಾರೊ ಆವಾಗ
ಗಾಡೆನಾದರೆ ಒಡುದಾರೊ
ವಡ್ಡರ ದಂಡೇ
ಗಾಡಿನಾದರೆ ವಡುದಾರೊs.

ಸಾವಿರಳ್ಳಿಗೆ ಸರಜಾನ ||
ನೂರಳ್ಳಿಗೆ ಅಧಿಕಾರ
ರಂಡಸಾವನ್ನು ಕೊಲ್ಲುತಾರೆ
ಮನೆಸ್ವಾಮಿ ರಂಗ
ತೋಳನ ಸಪ್ಪರಿಸ ಎಬ್ಬಿಸ್ಯಾನೊ s.

ತೋಳಿನ ಸಪ್ಪರಿಸಿ ||
ಎಬ್ಬಿಸ್ಯಾನೋ ಆವಾಗ
ಎದ್ದವನಾದರೆ ಕುಂತವನಲ್ಲೊ
ಸರ್ಜತಿ ಭೂಪ
ದಂಡುನಾದರೆ ನೋಡಾನಲ್ಲೋ s.

ದಂಡುನಾ ನೋಡ್ಯಾನೊ ||
ಉಸುನಕ್ಕು ನಕ್ಕನೊ
ಹಲ್ಲನಾದರೆ ಕಡುದಾನೊ
ಸರ್ಜತಿ ಭೂಪ
ಮೀಸೆನಾದರೆ ತಿದ್ದೆನಲ್ಲೊ s.

ನಾಕೆನ ಕೋಣನಗಳ ||
ರಗುತನ ಕುಡಿದಾನು
ರಗುತಾನಾದರೆ ಕಿತ್ತಾನಲ್ಲೊ
ಸರ್ಜತಿ ಭೂಪ
ದಂಡುನಾದರೆ ಸವಿರೆನೊ s.

ದಂಡುನ ಸವಿರೆನು ||
ಸಾಲುನ ಹೆಣಗಳು
ಸಾಲು ಹೆಣಗಳು ಬಿದ್ದಾವಲ್ಲೊ
ಅನ್ನುತಲಾಗ
ಮುಸಿನಾದರೂ ಬಿದ್ದಾನಲ್ಲೊ s.

ಇಂತೆಂಬ ಹಳ್ಳಿಗೆ ||
ಕಳ್ಳನು ಬಂದನೇ
ಗೊಲ್ಲಿಗರ್ಡು ಕೊಡಬೇಕು
ಪಾರಂಗಿ ದೊರೆಯ
ವಾಲೆನಾದರೆ ಬರೆದಾನೊ s.

ಗಲ್ಲುಗಾರ್ಡದು ಇಲ್ಲವಯ್ಯ ||
ಕೊಟ್ಟಿನಾದರೆ ಮಾಡತಿನಿ
ವಾಲೆನಾದರೆ ಬರೆದಾನೊ
ಪಾರಂಗಿ ದೊರೆಯ
ವಾಲೆನಾದರೆ ಬರೆದಾನೊ s.

ಅಮ್ಮ ನಿಂಗಮ್ಮ ತಾಯಿ ||
ಜುಟ್ಲು ಜನಿವಾರ ನಿನ್ನದು
ಮಾನ್ಯ ಅಭಿಮಾನ್ಯ ನಿನ್ನದಮ್ಮ
ನಿಂಗಮ್ಮ ತಾಯಿ
ಜುಟ್ಲು ಜನಿವಾರ ನಿಲ್ಲಿಸಮ್ಮೊ ||

ಉಚ್ಚೇನೆ ಒಯ್ದಾಳೊ
ಜುಟ್ಲು ನಾ ಜನಿವಾರ
ಜುಟ್ಲು ಜನಿವಾರ ತೆಗಿಸ್ಯಾಳೊ
ಸೂಳೆಯ ನಿಂಗಿ
ಭೂತ ಕನ್ನಡಿ ಕೊಟ್ಟಾಳಲ್ಲೊ s.

ಉಸುನಕ್ಕು ನಕ್ಕಾಳೊ ||
ಭೂತ ಕನ್ನಡಿ ಕೊಟ್ಟಾಳಲ್ಲೊ
ಸೂಳೆಯ ನಿಂಗಿ
ಭೂತ ಕನ್ನಡಿ ಕೊಟ್ಟಾಳಲ್ಲೊ s.

ಏನಲೇ ಎಲೇ ನಿಂಗಿ
ಏನೇ ಸೂಳೆಯ ನಿಂಗಿ
ನಿನ್ನತುಪ್ಪದಾಗ ನೀನೆ ಬೆಂದೆ
ಸೂಳೆಯ ನಿಂಗಿ
ನಿನ್ನ ಬೆಣೆದಾಗ ನೀನೆ ಬೆಂದೆ s.

ಉಪ್ಪುನಿ ನೂಲಗ್ಗಗಳು ||
ತಗದನೋ ಆವಾಗ
ಮೇಲು ದುರುಗಕ್ಕೆ ನಡೆದಾನೊ
ಸರ್ಜತಿ ಭೂಪ
ಮೇಲು ದುರುಗಕ್ಕೆ ನಡೆದಾನೊ s.

ಮೇಲುನ ದುರುಗಕ್ಕೆ
ನಡೆದಾನೊ ಆವಾಗ
ದುಃಖವಾದರೆ ಮಾಡ್ಯನಲ್ಲೋ
ಸರ್ಜತಿ ಭೂಪ
ಶೋಕವಾದರೆ ಮಾಡ್ಯನಲ್ಲೋ.

ದುಃಖವ ಮಾಡ್ಯಾನೇ ||
ಶೋಕವ ಮಾಡ್ಯನೊ
ಹುಲ್ಲನಾದರೆ ಹಾಕ್ಯನಲ್ಲೊ
ಸರ್ಜತಿ ಭೂಪ
ಹುಲ್ಲುನಾದರೆ ಹಾಕ್ಯನಲ್ಲೊ s.

ಆ ಸುದ್ದಿ ಕೇಳ್ಯಾನೆ ||
ವೆಂಕಪರಾಯ
ಕುಂತೇ ಮಸಲತ್ತು ಮಾಡ್ಯಾರಲ್ಲೊ
ಗೋವಿಂದರಾಯ ವೆಂಕಪರಾಯ
ಕುಂತೇ ಮಸಲತ್ತು ಮಾಡ್ಯಾರಲ್ಲೊ s.

ಕುಂತೆ ಮಸಲತ್ತು ||
ಮಾಡ್ಯಾರೋ ಆವಾಗ
ಮದಲೆ ಹನುಮಯ್ಯನ ಕರಿಸ್ಯಾರೊ
ಗೋವಿಂದರಾಯ ವೆಂಕಪರಾಯ
ಮದಲೆ ಹನುಮಯ್ಯನ ಕರಿಸ್ಯಾರೊ s.

ಬಟ್ಟೆನ ಮೂಟೆನ್ನು ||
ಕೆಟ್ಟಿರೋ ಆವಾಗ
ಒಲೆನಾದರೂ ಬರೆಸ್ಯಾರೋ
ಗೋವಿಂದರಾಯ ವೆಂಕಪರಾಯ
ವಾಲೆನಾದರೂ ಬರಿಸ್ಯಾರೊ s.

ವಡಿಯಕ್ಕಿ ತಿಂದಿವಿ ||
ಇಡಿಯಕ್ಕಿದ್ದರೆ ಬರಬೇಕು
ಅನ್ನುತಲಾಗ
ವಾಲೆನಾದರು ಬರೆದಾರೋ s.

ಬಟ್ಟೆಯ ಮೂಟೆನ್ನು ||
ಹೊರಿಸ್ಯಾರೋ ಆವಾಗ
ವಾಲೆನಾದರೆ ಕೊಟ್ಟಾರಲ್ಲೊ
ಮಾದಿಗರ ಹನುಮ
ಪಯಣವಾದರೆ ಮಾಡೆನಲ್ಲೊ s.

ಪಯಣವ ಮಾಡ್ಯಾನೆ ||
ದುಃಖವ ಮಾಡ್ಯನೊ
ಶೋಖವಾದರೆ ಮಾಡೆನಲ್ಲೊ
ಮಾದಿಗರ ಹನುಮ
ಶೋಕವಾದರೆ ಮಾಡೆನಲ್ಲೊ s.

ದುಃಖವ ಮಾಡ್ಯಾನೆ ||
ಶೋಕವ ಮಾಡ್ಯಾನೆ
ಪಯಣವಾದರೆ ಮಾಡೆನಲ್ಲೊ
ಮಾದಿಗರನುಮ
ಪಯಣವಾದರೆ ಮಾಡೆನಲ್ಲೆ s.

ನೆಲನ ಮಾಳಿಗ್ಯಾಗೆ ||
ಜೂಜನ್ನು ಕುಂತರೊ
ಲೆಕ್ಕಿ ಪಗಡ್ಯಾಟ ಜೂಜಿನ್ನಾದರೆ ಕುಂತಾರಲ್ಲೊ
ಕೆಂಗಳಿನಾಯ್ಕ ಮಚ್ಚನುಮಂತ
ಜೂಜೂನಾದರೆ ಕುಂತಾರಲ್ಲೊ s.

ಮಾದಿಗರ ಹನುಮಯ್ಯ ||
ಬಟ್ಟೆ ಮೂಟೆನ್ನಾದರು ಬಿಚ್ಚಾನಲ್ಲೊ
ಮಾದಿಗರನುಮ
ಸೀಟಿನಾದರೆ ವಗೆದಾನೊ s.

ಬಟ್ಟೆನ ಮೂಟೆನ್ನು ||
ಕೆಳಗನೆ ಆಕ್ಯಾನೊ
ಸೀಟಿನಾದರೆ ಒಗುದಾನೋ
ಮಾದಿಗರನುಮ
ಒಟಿನಾದರೆ ಬಿದ್ದಾನಲ್ಲೊ s.

ಕೆಂಗಳ್ಳಿನಾಯಕನು ||
ಮಹಾ ಬುದ್ಧಿವಮ್ತನು
ವಾಲಾನಾದರೆ ಮಚ್ಚನುಮಂತ
ಒಳಗೆನಾದರೂ ಬಂದಾರಲ್ಲೊ s.

ಅಣ್ಣನ ತಮ್ಮಗುಳು ||
ಕುದುರೆನೆ ಅತ್ತಾರೊ
ಒಟಿನಾದರೆ ಬಿದ್ದಾರಲ್ಲೊ
ಮಾದಿಗರ ಹನುಮ
ಒಟನಾದರೆ ಬಿದ್ದಾರಲ್ಲೊ.

ಏನಪ್ಪ ಎಲೆ ಹನುಮ ||
ಏನೋ ಮಾದಿಗರನುಮ
ನಿನ್ನೆನು ನಾನು ಮಾಡಲ್ಲಪ್ಪ
ಏನುತಲಾಗ
ಕೆಂಗಳಿನಾಯಕ ನನ್ನ ಕರೆದಾನೆ.

ಮನೆಗೆನ್ನು ಬಂದಾರೊ ||
ಸ್ನಾನವ ಮಾಡ್ಯಾರೊ
ಬಟ್ಟೆನಾದರೆ ಕೊಟ್ಟಾರಲ್ಲೊ
ಅನ್ನುತಲಾಗ
ಬಟ್ಟೆನಾದರೆ ಕೊಟ್ಟಾರಲ್ಲೊ s.

ಸೆರೆನೆ ಜೋಳನ್ನು ||
ಪಾಪಜ್ಜಿ ಮ್ಯಾಕೆ ಒಯ್ದರೊ
ಸಿಟ್ಟಿನಾದರೆ ಸೆಡುವಿತು
ಅನ್ನುತಲಾಗ
ಸಿಟ್ಟಿನಾದರೆ ಸೆಡುವಿತು s.

ಬ್ಯಾಟೆನ್ನು ಕೊಯ್ದರೆ ||
ಮೂರರ ದಿನವನ್ನು
ಮೂರ ದಿನವನ್ನು ಮಾಡ್ಯಾರಲ್ಲೊ
ಕೆಂಗಳ್ಳಿನಾಯಕ ಮಚ್ಚನುಮಂತ
ಪಯಣವಾದರೆ ಮಾಡ್ಯರಲ್ಲೊ s.

ಅಡವಿ ಅರಣ್ಯ ತಿರುಗ್ಯಾರೊ ||
ದುಃಖವ ಮಾಡ್ಯಾರೊ
ಶೋಕವಾದರೆ ಮಾಡ್ಯರಲ್ಲೊ
ಕೆಂಗಳಿನಾಯಕ ಮಚ್ಚನುಮಂತ
ದುಃಖವಾದರೆ ಮಾಡ್ಯಾರಲ್ಲೊ s.

ದುಃಖವ ಮಾಡ್ಯರೊ ||
ಶೋಕವ ಮಾಡ್ಯರೊ
ಕುದುರೆ ಪಾದಕ್ಕೆ ಮುಗುದಾರೊ
ಕೆಂಗಳಿನಾಯಕ ಮಚ್ಚನುಮಂತ
ಹಿಂದೊಂದಾರೆ ನಡೆದಾರೊ s.

ಮೇಲನ ದುರುಗಕ್ಕೆ ||
ಜೋಡುದು ಆಲದ ಮರಕ್ಕೆ
ಜೋಡದು ಆಲದ ಮರಕ್ಕೆ ಒರುಟಾವು
ಅನ್ನುತಲಾಗ
ದುಃಖವಾದರೆ ಮ್ಯಾಡರಲ್ಲೊ s.

ಕೆಂಗಳ್ಳಿನಾಯಕನು ||
ಮಹಾಬುದ್ಧಿವಂತನು
ಮ್ಯಾಕೆನಾದರೆ ನೊಡ್ಯಾರಲ್ಲೊ s.
ಅನ್ನುತಲಾಗ
ದುಃಖವಾದರೆ ಮ್ಯಾಡರಲ್ಲೋs.

ಕೆಂಗಳ್ಳಿನಾಯಕನು ||
ಮಹಾಬುದ್ಧಿವಂತನು
ಮ್ಯಾಕೆನಾದರೆ ನೊಡ್ಯಾನಲ್ಲೊ
ಅನ್ನುತಲಾಗ
ಅಣ್ಣನಾದರೆ ನೋಡ್ಯಾರಲ್ಲೊs.

ಅಣ್ಣನ ನೋಡ್ಯಾರೊ ||
ದುಃಖವ ಮಾಡ್ಯಾರೊ
ದುಃಖವಾದರೆ ಮಾಡ್ಯಾರಲ್ಲೊ
ಕೆಂಗಳ್ಳಿನಾಯಕ ಮೆಚ್ಚುನುಮಂತ
ದುಃಖವಾದರೆ ಮಾಡ್ಯರಲ್ಲೊ s.

ಕೆಂಗಳ್ಳಿನಾಯಕನು ||
ಮಹಾ ಬುದ್ಧಿವಂತನು
ಮರವನಾದರೂ ಹತ್ತ್ಯಾನಲ್ಲೊ
ಅನ್ನುತಲಾಗ
ತಮ್ಮನಾದರೂ ಹಿಡುದಾನೊ s.

ಹೂವ್ವನಹಳ್ಳಿ ಎಂಬುದು ||
ಎಟುಗಾವುದ್ದಲ್ಲು ಆಯಿತೆ
ನನ್ನಲಾದರೂ ಕರೆದಾರು
ಅನ್ನುತಲಾಗ
ದುಃಖವಾದರೆ ಮಾಡ್ಯರಲ್ಲೊ s.

ಹೂವ್ವನಹಳ್ಳಿ ಎಂಬುದು ||
ಎಟುಗಾವುದ್ದಲ್ಲು ಆಯಿತೆ
ಅಣ್ಣನಾದರೂ ಕರೆದಾರೊ
ಕೆಂಗಳ್ಳಿನಾಯಕ ಮಚ್ಚನುಮಂತ
ಅಣ್ಣನಾದರೆ ಕರೆದಾರೊ s.

ಗಾಯನೆ ಮಾಯ್ತಾಕೆ ||
ಕಮಲನ ಇರುತಾಕೆ
ಬರಲ್ಲಾಪ್ಪ ತಮ್ಮಗಳೇ
ಅನ್ನುತಲಾಗ
ದುಃಖವಾದರೆ ಮಾಡ್ಯಾನಲ್ಲೊ.

ಸಿರಿಗಂದೆನು ಶಕ್ಕೆಯನ್ನು ||
ಕಡಿರಪ್ಪ ತಮ್ಮಗಳೇ
ಸುಟ್ಟುನಾದರೆ ಹೋಗಿರಪ್ಪ
ಅನ್ನುತಲಾಗ
ತಮ್ಮನ ಕೂಟೆನ್ನ ಹೆಲನಲ್ಲೊ

ಸಿರಿಗಂಧನ ಶಕ್ಕೆನು s.
ಕಡದಾರು ಆವಾಗ ||
ಅಣ್ಣನಾದರೂ ಸುಟ್ಟಾರಲ್ಲೊ
ಕೆಂಗಳ್ಳಿನಾಯಕ ಮಚ್ಚನುಮಂತ
ಅಣ್ಣನಾದರೆ ಸುಟ್ಟಾರಲ್ಲೊ s.

ಅಣ್ಣನ ಸುಟ್ಟಾರೋ ||
ಪಯಣವಾದರೆ ಮಾಡ್ಯಾರಲ್ಲೋ
ಕೆಂಗಳ್ಳಿನಾಯಕ ಮಚ್ಚನುಮಂತ
ಪಯಣವಾದರೆ ಮಾಡ್ಯರಲ್ಲೊ
ಪೈಣವ ಮಾಡ್ಯರೆ.

ಇರಿನೆಗಾಗಿಗಳು ||
ಇರಿಗಾಗಿಗಳು ಒಡುದಾರೆ
ಕೆಂಗಳ್ಳಿನಾಯಕ ಮಚ್ಚನುಮಂತ
ಇರಿಗಾಗಿಗಳು ಒಡುದಾರೆ

ಹೂವ್ವನೆಹಳ್ಳಿಗೆ
ಊರೆನೆ ಬಾಗ್ಲಿಗೆ ||
ಊರ ಬಾಗ್ಲಿಗೆ ಬಂದರಲ್ಲೊ
ಕೆಂಗಳ್ಳಿನಾಯಕ ಮಚ್ಚನುಮಂತ
ದಂಡುನಾದರೆ ಸವಿರೈರು s.

ದಂಡುನಾ ಸವಿರ್ಯಾರೊ ||
ಯುದ್ಧವೇ ಮಾಡ್ಯರು
ಯುದ್ಧವಾದರೆ ಮಾಡರಲ್ಲೊ
ಕೆಂಗಳ್ಳಿನಾಯಕ ಮಚ್ಚನುಮಂತ
ಯುದ್ಧವಾದರೆ ಮಾಡ್ಯರಲ್ಲೊ s.

ಕೆಂಗಳ್ಳಿನಾಯಕನು ||
ಮಹಾ ಬುದ್ಧಿವಂತನು
ಯುದ್ಧವಾದರೆ ಬಿಟ್ಟನಲ್ಲೊ
ಅನ್ನುತಲಾಗ
ಪಯಣವಾದರೆ ಮಾಡ್ಯನಲ್ಲೊ s.