ಅವರು ಹಾಡಿದ ಈ ಕಾವ್ಯ ಮತ್ತು ಅದಕ್ಕೆ ಪೂರಕವಾಗಿ ನಾನು ಬರೆದ ಸುದೀರ್ಘ ಪ್ರಸ್ತಾವನೆ ಸಾಕಷ್ಟು ಚರ್ಚೆಗೆ ಹಾಗೂ ಮರುವ್ಯಾಖ್ಯಾನಕ್ಕೆ ಒಳಗಾಗಿರುವುದು ನನಗೆ ಸಂತಸವನ್ನು ತಂದಿದೆ. ಮೈಸೂರು ವಿಶ್ವವಿದ್ಯಾನಿಲಯವು ಈ ಕಾವ್ಯವನ್ನು ಬಿ.ಎ ಬುಡಕಟ್ಟು ರಾಮಾಯಣವೊಂದು ಇಷ್ಟು ಜನಪ್ರಿಯತೆ ಪಡೆಯುತ್ತದೆ ಎಂದು ನಾನು ಎಣಿಸಿರಲಿಲ್ಲ. ತಿಮ್ಮಪ್ಪಗೊಂಡ. ಪದವಿಯಲ್ಲಿನ ಜಾನಪದ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿಸುವ ಮೂಲಕ ಈ ಕೃತಿಯ ಸಾರ್ಥಕತೆಯನ್ನು ಹೆಚ್ಚು ಮಾಡಿದೆ. ಡಾ.ಸಿ.ಎನ್.ರಾಮಚಂದ್ರನ್ ಅವರಂತಹ ವಿದ್ವಾಂಸರು ತಮ್ಮ ಮಹಾಕಾವ್ಯ ಪರಂಪರೆ ಚರ್ಚೆಗೆ ಈ ಕಾವ್ಯವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತಷ್ಟು ಅರ್ಥಪೂರ್ಣಗೊಳಿಸಿದ್ದಾರೆ. ಸಮಕಾಲೀನ ಸಂಸ್ಕೃತಿ ಚಿಂತಕರು ತಮ್ಮ ಚರ್ಚೆಗಳಲ್ಲಿ ಈ ಕಾವ್ಯವನ್ನು ಅಳವಡಿಸಿಕೊಳ್ಳುವ ಮೂಲಕ ಬುಡಕಟ್ಟು ಪ್ರಪಂಚದ ಚಿಂತನೆಗೆ ಮೆರಗು ನೀಡಿದ್ದಾರೆ. ಇವರೆಲ್ಲರಿಗೂ ನನ್ನ ವಂದನೆಗಳು. ಮರು ಮುದ್ರಣಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎ.ಮುರಿಗೆಪ್ಪನವರಿಗೂ ಹಾಗೂ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೂ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ.ಮೋಹನ ಕುಂಟಾರ್ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಅಂದವಾಗಿ ಪುಸ್ತಕ ವಿನ್ಯಾಸವನ್ನು ಮಾಡಿದ ಶ್ರೀ ಸುಜ್ಞಾನಮೂರ್ತಿ ಅವರಿಗೂ, ಡಿ.ಟಿ.ಪಿ. ಮಾಡಿದ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ ಅವರಿಗೂ ನೆನಕೆಗಳು.

ಹಿ.ಚಿ.ಬೋರಲಿಂಗಯ್ಯ