ಬುಡಕಟ್ಟು ಮಹಾಕಾವ್ಯಮಾಲೆಯನ್ನು ಮುಂದುವರಿಸಲು ಅನುವು ಮಾಡಿಕೊಡುವ ಮೂಲಕ ನಮ್ಮೆಲ್ಲರನ್ನು ಪ್ರೀತಿಯಿಂದ ಪ್ರೋಗೌರವಾನ್ವಿತ ಕುಲಪತಿ ಡಾ.ಎಂ.ಎಂ. ಕಲಬುರ್ಗಿ ಅವರಿಗೆ

ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಒಂದು ಅಸ್ತಿತ್ವವನ್ನು ತಂದುಕೊಟ್ಟು, ಈ ಕಾವ್ಯಮಾಲೆಯನ್ನು ಆರಂಭಿಸಲು ಕಾರಣರಾದ ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಗೌರವಾನ್ವಿತ ಡಾ. ಚಂದ್ರಶೇಖರ ಕಂಬಾರ ಅವರಿಗೆ

ಬುಡಕಟ್ಟು ಜನರ ಪ್ರೀತಿ ಮತ್ತು ಸ್ನೇಹಸಂಬಂಧಕ್ಕೆ ದಾರಿ ಮಾಡಿಕೊಟ್ಟ ಹಿರಿಯರಾದ ಶ್ರೀ ಹುಚ್ಚಪ್ಪ ಮಾಸ್ತರಿಗೆ

ವಿಭಾಗದ ಹಲವು ಸಾಧನೆಗಳಿಗೆ ಕಾರಣರಾಗಿ ಭ್ರಾತೃತ್ವ ಪ್ರೇಮವನ್ನು ಕಾಯ್ದುಕೊಂಡು ಬರುತ್ತಿರುವ ಸಹೋದ್ಯೋಗಿಗಳಾದ ಡಾ. ಕೆ.ಎಂ.ಮೈತ್ರಿ, ಡಾ. ಕೇಶವನ್ ಪ್ರಸಾದ್, ಶ್ರೀ ಚಲುವರಾಜು, ಶ್ರೀ ಗಂಗಾಧರ ದೈವಜ್ಞ, ಶ್ರೀ ಎ.ಎಸ್. ಪ್ರಭಾಕರ ಹಾಗೂ ಶಿವು, ಗಣೇಶ್, ಮಾರಪ್ಪ ಹನುಮಂತ, ನಿಂಗಪ್ಪ ಅವರಿಗೆ

ಸಂಶೋಧನ ವಿದ್ಯಾರ್ಥಿಗಳಾದ ಪಿ.ಸತೀಶ್, ವಿ.ಎಸ್.ಮಾರುತಿ ಮತ್ತು ಎಚ್. ನಿಂಗಪ್ಪ ಅವರಿಗೆ

ಪ್ರಸಾರಾಗಂದ ನಿರ್ದೇಶಕರೂ ಗೆಳೆಯರೂ ಆದ ಪ್ರೊ. ಎ.ವಿ.ನಾವಡ ಅವರಿಗೆ

ಕುಲಸಚಿವರೂ ಗೆಳೆಯರೂ ಆದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರಿಗೆ

ಆದಿವಾಸಿ ಕಲೆಯನ್ನು ಕರಗತ ಮಾಡಿಕೊಂಡು ಉತ್ತಮ ಮುಖಪುಟ ಹಾಗೂ ರೇಖಾಚಿತ್ರ ರಚಿಸಿಕೊಟ್ಟ ಕಲಾವಿದ ಕೆ.ಕೆ. ಮಕಾಳಿ ಅವರಿಗೆ

ಕಂಪ್ಯೂಟರ್ ಸಹಾಯ ಮಾಡಿದ ವಿಶ್ವವಿದ್ಯಾಲಯದ ಕಿರಿಯ ಗೆಳೆಯ ಎಸ್.ಕೆ. ವಿಜಯೇಂದ್ರ, ವಿ.ಆರ್. ಕಂಪ್ಯೂಟರ್ಸ್‌ನ ರಾಘವೇಂದ್ರ ಭಟ್ ಮತ್ತು ಪ್ರಸಾರಾಂಗದ ಶ್ರೀ ಕೆ.ಎಲ್. ರಾಜಶೇಖರ್ ಅವರಿಗೆ ಹಾಗೂ ವಿಶ್ವವಿದ್ಯಾಲಯದ ನನ್ನೆಲ್ಲ ಸಹೋದ್ಯೋಗಿಗಳಿಗೆ.

ಹಿ.ಚಿ.ಬೋರಲಿಂಗಯ್ಯ